ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಇರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಾವು ನಮ್ಮ ಆರೋಗ್ಯ ವನ್ನು ಸರಿಪಡಿಸಿಕೊಳ್ಳಬಹುದು. ಆದರೆ ಹೆಚ್ಚಿನವರಿಗೆ ಇಂತಹ ಮಾಹಿತಿ ತಿಳಿದಿರುವುದಿಲ್ಲ. ಬದಲಿಗೆ ಸಣ್ಣಪುಟ್ಟ ಸಮಸ್ಯೆ ಉಂಟಾದರೂ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಆಸ್ಪತ್ರೆಗಳಿಗೆ ಹೋಗುತ್ತಾರೆ ಆದರೆ ಈ ರೀತಿ ಮಾಡುವುದು ತುಂಬಾ ಅಪಾಯಕಾರಿ ಎಂದು ಹೇಳಬಹುದು.
ಹೌದು ನಾವು ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿಕೊಂಡು ಹಾಗೂ ನಮ್ಮ ಸುತ್ತಮುತ್ತ ಇರುವಂತಹ ಕೆಲವೊಂದಷ್ಟು ಆಯುರ್ವೇದ ಔಷಧಿಗಳನ್ನು ಉಪಯೋ ಗಿಸಿಕೊಂಡು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಅದು ನಮಗೆ ಪರಿಣಾಮಕಾರಿ ಯಾಗಿ ಉತ್ತಮವಾದ ಕೆಲಸವನ್ನು ಮಾಡುತ್ತದೆ ಎಂದು ಹೇಳಬಹುದು.
12 ರಾಶಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ನೋಡಿ.!
ಹಾಗಾದರೆ ಈ ದಿನ ನಾವು ನಮ್ಮ ಸುತ್ತಮುತ್ತ ಸಿಗುವಂತಹ ಕೆಲ ವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿಕೊಂಡು ಹಾಗೂ ನಮ್ಮ ಅಡುಗೆ ಮನೆಯಲ್ಲಿ ಇರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿ ಯಾವ ಕೆಲವು ಮನೆಮದ್ದುಗಳನ್ನು ಮಾಡಿ ಸೇವನೆ ಮಾಡಿದರೆ ಯಾವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
* ದಾಸವಾಳದ 5 ಹೂವುಗಳನ್ನು ನುಣ್ಣಗೆ ಅರೆದು ಹಾಲಿನೊಂದಿಗೆ
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ವಾರದ ಕಾಲ ಸೇವಿಸಿದರೆ ಮುಟ್ಟು ನಿಲ್ಲುವ ಸಮಯದಲ್ಲಿ ಆಗುವ ಅತಿಯಾದ ರಕ್ತಸ್ರಾವ ನಿಲ್ಲುತ್ತದೆ.
* ಗುಲಾಬಿ ಹೂವಿನ ಎಸಳುಗಳನ್ನು ಒಂದು ಲೋಟ ಕಾದಾರಿದ ನೀರಿ ನಲ್ಲಿ ಒಂದು ದಿನವಿಡೀ ಇಟ್ಟು, ಆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಪದೇ ಪದೇ ಕಣ್ಣಿನ ಉರಿ ಕಾಡುತ್ತಿದ್ದರೆ ವಾರಕ್ಕೆರಡು ಬಾರಿ ಕುಡಿಯಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು.!
* ಪ್ರತಿದಿನ ಊಟ ಪ್ರಾರಂಭಿಸುವ ಮೊದಲು ಸ್ವಲ್ಪ ಹಸಿಶುಂಠಿಯ ಜೊತೆ ಉಪ್ಪನ್ನು ಸೇರಿಸಿ ತಿನ್ನುವುದರಿಂದ ಹೊಟ್ಟೆ ಉಬ್ಬರ, ಅಜೀರ್ಣದ ಸಮಸ್ಯೆಗಳು ಕಡಿಮೆ ಆಗುತ್ತದೆ. ಜೀರಿಗೆಯನ್ನು ಹಾಲಿನಲ್ಲಿ ಅರೆದು ವಾರಕ್ಕೆ ಒಮ್ಮೆತಲೆಗೆ ಹಚ್ಚುತ್ತಿದ್ದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
• ಟೊಮೇಟೊ ಹಣ್ಣಿನ ರಸಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಮೆಣಸಿನ ಕಾಳನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
* ಒಣಗಿದ ಬೆಟ್ಟದ ನೆಲ್ಲಿಕಾಯಿಯ ಜೊತೆಗೆ, ಒಂದು ಚಿಟಿಕೆ ಸಾಸಿವೆ ಪುಡಿಯನ್ನು ಸೇರಿಸಿ, ಸೇವಿಸಿದರೆ ಪ್ರಯಾಣದ ಸಮಯದಲ್ಲಿ ವಾಂತಿ ಆಗುವುದಿಲ್ಲ.
* ಅಜೀರ್ಣದಿಂದಾಗುವ ಹೊಟ್ಟೆನೋವು, ಭೇದಿ, ಹೊಟ್ಟೆ ಉಬ್ಬರ
ಮು೦ತಾದ ಉದರ ಸಂಬಂಧಿ ರೋಗಗಳಿಗೆ ದೊಡ್ಡ ಪತ್ರೆಯ
ಸೇವನೆಯೂ ಉತ್ತಮ ಔಷಧಿ.
ಭಾರತೀಯ ಆಹಾರ ಇಲಾಖೆ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ.!
* ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದ ರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.
* ಬೇಸಿಗೆಯಲ್ಲಿ ವಾರಕ್ಕೆ ಕನಿಷ್ಠ ಮೂರು ದಿನ ಗರಿಕೆ ಹುಲ್ಲಿನ ಜ್ಯೂಸ್ ಅನ್ನು ಕುಡಿದರೆ ಉಷ್ಣದ ಕಾರಣದಿಂದ ಆಗುವ ತಲೆನೋವು, ಚರ್ಮದ ಸಮಸ್ಯೆಗಳು ಮತ್ತು ಪಿತ್ತದ ತೊಂದರೆಗಳು ಕಡಿಮೆಯಾಗುತ್ತವೆ.
* ನಿತ್ಯವೂ ಕಪಾಲಭಾತಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದ ರಿಂದ ಕಫ, ನೆಗಡಿ, ಅಲರ್ಜಿಯ ಸಮಸ್ಯೆಗಳು ನಿವಾರಣೆಯಾಗಿ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
* ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ, ಅರ್ಧ ಚಮಚ ಪುಡಿಯನ್ನು ದಿನಕ್ಕೆ ಎರಡು ಬಾರಿ ಆಹಾರದ ನಂತರ ಮಜ್ಜಿಗೆಯಲ್ಲಿ ಸೇವಿಸುವುದರಿಂದ ಆಮಶಂಕೆ ಕಡಿಮೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.