ನಮ್ಮ ಆರೋಗ್ಯವನ್ನು ಸುಧಾರಿಸಬಲ್ಲ ಕೆಲವೊಂದು ಉಪಯುಕ್ತ ಟಿಪ್ಸ್ ಗಳು ಇವು ತಪ್ಪದೆ ಇದನ್ನು ಪಾಲಿಸಿ.!

 

ಮನುಷ್ಯನ ದೇಹಕ್ಕೆ ಹತ್ತಾರು ಕಾಯಿಲೆಗಳು ಆವರಿಸುವುದು ಸರ್ವೇಸಾಮಾನ್ಯ. ಕೆಲವೊಂದು ಕಾಯಿಲೆಗಳು ಮಾರಣಾಂತಿಕವಾಗಿದ್ದು ಇವುಗಳಿಗಾಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲೇಬೇಕು. ಆದರೆ ಇನ್ನೂ ಕೆಲವೊಂದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ತೀವ್ರ ಗಂಭೀರವಾಗಿರದೆ ಇದ್ದರೂ ಕೂಡ ದೈಹಿಕವಾಗಿ ಆಯಾಸ, ನೋವು ಉಂಟುಮಾಡುತ್ತದೆ.

ಈ ರೀತಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಆದಾಗ ಹಿರಿಯರು ಮನೆಮದ್ದುಗಳನ್ನು ಮಾಡಿ ಅವುಗಳನ್ನು ಗುಣ ಮಾಡುತ್ತಿದ್ದರು. ಅದೇ ರೀತಿ ಈ ಅಂಕಣದಲ್ಲಿ ನಾವು ದಿನನಿತ್ಯವಾಗಿ ಕಾಡುವ ಕೆಲವೊಂದು ಆರೋಗ್ಯ ಸಮಸ್ಯೆಗೆ ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಮತ್ತು ಆರೋಗ್ಯ ವೃದ್ಧಿಯಾಗುವುದಕ್ಕೆ ಇರುವ ಟಿಪ್ಸ್ ಗಳ (Health tips) ಬಗ್ಗೆ ತಿಳಿಸುತ್ತಿದ್ದೇವೆ.

ಆಧಾರ್‌ಗೆ ಲಿಂಕ್‌ ಮಾಡಲಾದ ಮೊಬೈಲ್ ನಂಬರ್ ಕಳೆದೋಯ್ತಾ.? ಚಿಂತೆ ಬಿಡಿ ಹೊಸ ನಂಬರ್ ಸೇರಿಸಲು ಈ ರೀತಿ ಮಾಡಿ ಸಾಕು.!

● ನಿಮಗೆ ವಿಪರೀತವಾದ ತಲೆನೋವು ಬರುತ್ತಿದ್ದರೆ ಪ್ರತಿನಿತ್ಯ ಕೂಡ ತಲೆ ಸ್ನಾನ ಮಾಡಿ.
● ಪ್ರತಿದಿನವೂ ನೀವು ತಂಗಳು ಆಹಾರ ಸೇವನೆ ಮಾಡಿದರೆ ನಿಮಗೆ ಚರ್ಮರೋಗ ಬರುತ್ತದೆ
● ಊಟ, ವ್ಯಾಯಾಮ, ಸ್ನಾನ ಮತ್ತು ದುಡಿಮೆಯ ನಂತರ ತಕ್ಷಣ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು
● ಸಂಧಿವಾತದ ಸಮಸ್ಯೆ ಇದ್ದರೆ ಪ್ರತಿನಿತ್ಯವೂ ಕೂಡ ಎರಡು ದಳ ಬಿಲ್ವಪತ್ರೆ ಸೇವಿಸಿ.

● ನಿಮ್ಮ ವಯಸ್ಸಿಗೆ ಅನುಗುಣವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ಆರೋಗ್ಯ ವೃದ್ಧಿಸುತ್ತದೆ
● ಆರೋಗ್ಯವಂತರಾಗಿರುವವರು ತಣ್ಣೀರ ಸ್ನಾನ ಮಾಡುವುದೇ ಒಳ್ಳೆಯದು
● ನಿತ್ಯವೂ ಮಲಗುವಾಗ ಹದವಾದ ಬಿಸಿನೀರು ಸೇವನೆ ಮಾಡುವುದು ಒಳ್ಳೆಯದು
● ಅರಿಶಿನ ಜೊತೆ ಬೆಲ್ಲ ಸೇರಿಸಿದ ಬಿಸಿ ಹಾಲು ಸೇವನೆ ನೆಗಡಿ, ಕೆಮ್ಮು, ಶೀತದ ನಿವಾರಣೆ ಮಾಡುತ್ತದೆ.

● ಸ್ವಲ್ಪ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸಿದರೆ ಧ್ವನಿ ಚೆನ್ನಾಗಿರುತ್ತೆ, ಬಾಯಿ ರುಚಿ ಉತ್ತಮಗೊಳ್ಳುತ್ತದೆ
● ಎಳ್ಳೆಣ್ಣೆ ಅಭ್ಯಂಜನ ಸ್ನಾನ ದೇಹಕ್ಕೆ ಪುಷ್ಟಿ ಕಣ್ಣಿಗೆ ತಂಪು ಚರ್ಮಕ್ಕೆ ಕಂಪು
● ನೀರನ್ನು ಶುದ್ಧೀಕರಣಗೊಳಿಸಲು ಐದಾರು ತುಳಸಿ ಎಲೆ ಹಾಕಿಡಿ.
● ನೆಲ್ಲಿಕಾಯಿ ಸೇವಿಸಿದ ಎರಡು ಗಂಟೆವರೆಗೆ ಹಾಲು ಸೇವಿಸಬಾರದು.
● ಬಾಯಲ್ಲಿ ಹುಣ್ಣಾಗಿದ್ದಾಗ ಕೊಬ್ಬರಿ ಹಾಗೂ ಗಸಗಸೆಯನ್ನು ಮೆಲ್ಲಿದರೆ ಗುಣವಾಗುತ್ತದೆ.

ನಿಮ್ಮ ಮನೆಗೆ ಇ-ಸ್ವತ್ತು ಮಾಡಿಸೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಸೂರ್ಯೋದಯಕ್ಕೂ ಮುಂಚೆ ವಾಕಿಂಗ್ ಮಾಡುವುದರಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ.
● ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಹಸಿ ಕೊತ್ತಂಬರಿ ಸೊಪ್ಪಿನ ರಸವನ್ನು ನಾಲ್ಕು ಹನಿಗಳಷ್ಟು ಹಾಕಿದರೆ ನಿಲ್ಲುತ್ತದೆ.
● ಕರಿಬೇವು ಬೆರೆಸಿದ ಮಜ್ಜಿಗೆ ವಾಂತಿ ಭೇದಿಗೆ ಔಷಧಿಯಾಗುತ್ತದೆ
● ಕಾಲಿನಲ್ಲಿ ಆಣಿಗಳಿದ್ದರೆ ಉತ್ರಾಣಿ ಎಲೆಯನ್ನು ಅರಿಶಿಣದಲ್ಲಿ ಅರೆದು ಲೇಪಿಸಬೇಕು.

● ವೀಳ್ಯದೆಲೆ ಅಡಿಕೆ ಸೇವಿಸುವುದರಿಂದ ಜಂತುಹುಳು ಭಾದೆ ನಿವಾರಣೆ ಆಗುತ್ತದೆ.
● ಸುವರ್ಣ ಗೆಡ್ಡೆಯ ನಿಯಮಿತ ಸೇವನೆ ಮೂಲವ್ಯಾಧಿಯನ್ನು ದೂರ ಮಾಡುತ್ತದೆ.
● ರಕ್ತ ಹೀನತೆಯು ನಿಧಾನವಾಗಿ ಮನುಷ್ಯನನ್ನು ಕೊಂದುಬಿಡುತ್ತದೆ ಹಾಗಾಗಿ ರಕ್ತಹೀನತೆ ಕಾಡದಂತೆ ನೋಡಿಕೊಳ್ಳಿ.
● ದಾಳಿಂಬೆ ಹಾಗೂ ಅಂಜೂರ ರಕ್ತಹೀನತೆಯನ್ನು ನಿವಾರಿಸುತ್ತದೆ.
● ಕಿತ್ತಳೆ ಹಣ್ಣಿನ ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ.
● ಊಟ ಮಾಡಿದ ತಕ್ಷಣವೇ ಕೆಲಸ ಹಾಗೂ ನಿದ್ರೆ ಎರಡನ್ನು ಮಾಡಬಾರದು.

● ಹಸಿವಾಗಿದ್ದಾಗ ಹಣ್ಣುಗಳ ಸೇವನೆ ಮತ್ತು ಊಟ ಆದ ನಂತರ ಕಬ್ಬಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
● ಹಸಿವಿದ್ದಾಗ ಹಣಸಿನ ಹಣ್ಣು ಹಾಗೂ ಊಟ ಆದ ಮೇಲೆ ಮಾವಿನಹಣ್ಣಿನ ಸೇವನೆ ಉತ್ತಮ
● ಒಂದು ನೆಲ್ಲಿಕಾಯಿ ಒಂದು ಕೆಜಿ ಸೇಬಿನ ಹಣ್ಣಿನಲ್ಲಿರುವಷ್ಟು ಪೋಷಕಾಂಶವನ್ನು ಹೊಂದಿರುತ್ತದೆ.

ಲೇಬರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್‌ನ್ಯೂಸ್..!‌ ನಿಮಗೆ ಫ್ರೀಯಾಗಿ ಸಿಗಲಿದೆ ಸೈಕಲ್‌ ಇದನ್ನ ಪಡೆಯೋದೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

● ನುಗ್ಗೆಕಾಯಿಯ ನಿಯಮಿತ ಸೇವನೆಯಿಂದ ರಕ್ತ ಹೀನತೆ ಗುಣವಾಗುತ್ತದೆ, ನರ ದೌರ್ಬಲ್ಯ ಕಡಿಮೆ ಆಗುತ್ತದೆ ಹಾಗೂ ಕಣ್ಣಿನ ಆರೋಗ್ಯಕ್ಕೂ ಇದು ಒಳ್ಳೆಯದು.
● ಜೀರಿಗೆ ಬೆಲ್ಲದ ಸೇವನೆ ತಲೆ ಸುತ್ತು ಕಡಿಮೆ ಮಾಡುತ್ತದೆ.
● ಬೆಳ್ಳುಳ್ಳಿ ಸೇವನೆ ಮಾಡುವುದರಿಂದ BP ಕಂಟ್ರೋಲ್ ನಲ್ಲಿ ಇರುತ್ತದೆ
● ಹಾಲು ಜೇನಿನ ಜೊತೆ ಏಲಕ್ಕಿ ಪುಡಿ ಹಾಕಿ ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.

Leave a Comment