ಮನುಷ್ಯನ ಜೀವನದಲ್ಲಿ ಆರೋಗ್ಯ ಎನ್ನುವುದು ಬಹಳ ಮುಖ್ಯ. ಆರೋಗ್ಯವೇ ಭಾಗ್ಯ ಎನ್ನುವ ಗಾದೆ ಮಾತು ಕೂಡ ಇದರ ಮಹತ್ವವನ್ನು ಸಾಗುತ್ತದೆ. ನಮ್ಮ ಜೀವನದಲ್ಲಿ ನಾವು ಆರೋಗ್ಯವನ್ನು ಎಷ್ಟು ಕಾಳಜಿ ಮಾಡುತ್ತೇವೆಯೇ ಅದರ ಭಾಗವಾಗಿ ಆರೋಗ್ಯ ಹದಗೆಟ್ಟಾಗ ಚಿಕಿತ್ಸೆಗೆ ತಗಲುವ ವೆಚ್ಚಗಳ ಬಗ್ಗೆ ಮುಂದಲೋಚನೆ ಇರಬೇಕು. ಜನಸಾಮಾನ್ಯರ ಅನುಕೂಲ ಮಾಡಿಕೊಡುವ ಸಲುವಾಗಿ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ.
ಅನಾರೋಗ್ಯದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಸರ್ಕಾರೇತರವಾಗಿ ಕೂಡ LIC ಯಂತಹ ಸಂಸ್ಥೆಗಳು ಜೀವಾ ವಿಮೆ ಪಾಲಿಸಿಗಳನ್ನು ತನ್ನ ಗ್ರಾಹಕರ ಹಿತದೃಷ್ಟಿಯಿಂದಲೇ ಜಾರಿಗೆ ತಂದಿದೆ. ಇತ್ತೀಚಿನ ದಿನಗಳಂತೂ ಹೆಲ್ತ್ ಇನ್ಸೂರೆನ್ಸ್ ಎನ್ನುವ ವಿಚಾರವು ಹೆಚ್ಚು ಪ್ರಚಲಿತದಲ್ಲಿದೆ.
ಪಿತ್ರಾಜಿತ ಆಸ್ತಿಯಲ್ಲಿ ಎರಡನೇ ಹೆಂಡತಿಯ ಮಕ್ಕಳಿಗೆ ಸಮಭಾಗ ಇದೆಯಾ.?
ಕೆಲವೊಮ್ಮೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಪೂರಕ ವಾತಾವರಣ ಇರಲಿಲ್ಲ ಅಥವಾ ಪರಿಕರ ವ್ಯವಸ್ಥೆ ಇರಲಿಲ್ಲ ಅಂದಾಗ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವಂತೆ ಹೇಳಲಾಗುತ್ತದೆ. ಈ ರೀತಿ ಖಾಸಗಿ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿ ಹಣಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಹಣದ ಬದಲಾಗಿ ವಿಮೆಗಳಂತ ಸೌಲಭ್ಯ ಹೊಂದಿರುವುದಾಗಿ ತಿಳಿಸಿದರು ಕೂಡ ಅನೇಕ ಬಾರಿ ಇದನ್ನು ನಿರ್ಲಕ್ಷಿಸಲಾಗುತ್ತದೆ ಎನ್ನುವ ದೂರು ಕೇಳಿ ಬರುತ್ತಿದೆ.
ಖಾಸಗಿ ಆಸ್ಪತ್ರೆಗಳ ಇಂತಹ ವರ್ತನೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಬಡವರ ಅಳಲು. ಇದನ್ನೆಲ್ಲಾ ಮನಗಂಡ ಸರ್ಕಾರ ಈ ನಿಟ್ಟಿನಲ್ಲಿ ಒಂದು ಕಠಿಣ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಿದೆ ಜೊತೆಗೆ ಆರೋಗ್ಯ ವಿಮೆಗಳ ಕಂತುಗಳು ಕೂಡ ದುಬಾರಿ ಆಗಿರುವುದರಿಂದ ಕಡುಬಡವರು ಪಡೆಯಲು ಸಾಧ್ಯವಾಗಬೇಕು ಎನ್ನುವ ಕಾರಣದಿಂದಾಗಿ ಅದರ ಇಳಿಕೆಗೆ ಚಿಂತನೆ ನಡೆಸುತ್ತಿದೆ.
1 ಬ್ಲೌಸ್ ಪೀಸ್ ಇದ್ರೆ ಸಾಕು ಒಂದೇ ಗಂಟೆಯಲ್ಲಿ ಡೋರ್ ಗೆ ಬೇಕಾದ ಕಲರ್ ಫುಲ್ ಹೂವಿನ ಹಾರ ನೀವೆ ರೆಡಿ ಮಾಡಬಹುದು.!
ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯವು ದೇಶದ ನಾಗರಿಕರಿಗೆ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮವಾದ ಶ್ರೇಷ್ಠ ಮಟ್ಟದಲ್ಲಿ ಸಿಗಬೇಕು ಆಗ ಮಾತ್ರ ದೇಶದ ನಾಗರಿಕರು ಉತ್ತಮ ಮಟ್ಟದ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾದ ಇನ್ಸೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಆಫ್ ಇಂಡಿಯಾ (IRDAI) ವೈದ್ಯಕೀಯ ವೆಚ್ಚಕ್ಕೆ ನಗದು ರಹಿತ ಪರಿಹಾರ ನೀಡಲು ಹಾಗೂ ವಿಮೆಯ ಹೂಡಿಕೆಯ ಮೊತ್ತವನ್ನು ಕೂಡ ಕಡಿಮೆ ಮಾಡಲು ಚಿಂತನೆ ನಡೆಸುತ್ತಿದೆ.
ವೈದ್ಯಕೀಯ ವೆಚ್ಚದ ಕ್ಲೈಮ್‌ಗಳಿಗಾಗಿ ನೂರಕ್ಕೆ ನೂರರಷ್ಟು ಅನುಕೂಲತೆ ಸಿಗುವಂತಾಗಿ ಚಿಕಿತ್ಸೆಯ ನಂತರ ಆಸ್ಪತ್ರೆ ಕೂಡ ವಿಮೆಯ ಪೂರ್ತಿ ಮೊತ್ತವನ್ನು ಪಡೆಯಲು ಸಾಧ್ಯವಾಗುವಂತಹ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸಲು ಸಿದ್ಧತೆ ನಡೆಸಿದೆ ಎನ್ನುವ ಸುದ್ದಿ ಇದೆ, ಇದು ಶೀಘ್ರದಲ್ಲೇ ಜಾರಿಗೆ ಬಂದರೆ ಇನ್ನುಮುಂದೆ ಚಿಕಿತ್ಸೆಗಾಗಿ 1ರೂ. ಕೂಡ ಖರ್ಚು ಮಾಡುವ ಅಗತ್ಯ ಇರುವುದಿಲ್ಲ.
ಗ್ಯಾಸ್ ಸ್ಟವ್ ಉರಿ ಸ್ಲೋ ಆಗಿದ್ರೆ ಈ ವಿಧಾನದಿಂದ ಬರ್ನರ್ ಕ್ಲೀನ್ ಮಾಡಿ.!
ದೇಶದ ಬಡ ಜನರು ಉಚಿತವಾಗಿ ಚಿಕಿತ್ಸಾ ಸೌಲಭ್ಯವನ್ನು ಪಡೆಯಬಹುದು (IRDAI 100 % Cashless Claim). ಹಾಗೆಯೇ ವಯಸ್ಸಾದವರಿಗೆ ಮತ್ತು ಕಡುಬಡವರಿಗೆ ಈ ವಿಮೆ ಪ್ರೀಮಿಯಂಗಳನ್ನು ಕೈಗೆಟುಕುವಂತೆ ಮಾಡುವ ಕೆಲಸವನ್ನು ಸಹ ಮಾಡಲಾಗುತ್ತಿದೆ. ಈಗ ವಿಮೆಗಳು ತುಂಬಾ ದುಬಾರಿಯಾಗಿದೆ. ಮತ್ತೊಂದೆಡೆ ವಿಮಾ ಕಂಪನಿಗಳು ಮೊತ್ತವನ್ನು ಕಡಿತಗೊಳಿಸಿದ ನಂತರ ವಿಮಾದಾರರಿಗೆ 10% ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕಡಿತಗೊಳಿಸುತ್ತವೆ.
ಸಮಸ್ಯೆಗಳಿಗೂ ಪರಿಹಾರವಾಗುವ ದೇಶದ ನಾಗರಿಕರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಲು IRDAI ಕಾರ್ಯಪ್ರವೃತ್ತವಾಗಿದೆ. ಇದು ಆದಷ್ಟು ಬೇಗ ಜಾರಿಯಾಗಲಿ ಉತ್ತಮವಾದ ಆರೋಗ್ಯ ಚಿಕಿತ್ಸೆಗಳು ದೇಶದಲ್ಲಿ ಇನ್ನಷ್ಟು ಅಗ್ಗವಾಗಿ ಸಿಗುವಂತಾಗಲಿ ಎಂದು ನಾವು ಕೂಡ ಅಶಿಸೋಣ.
ಪೂಜೆಗೆ ಇಡುವ ತೆಂಗಿನ ಕಾಯಿ ಕಣ್ಣು ಕಾಣಿಸಬಾರದು ಯಾಕೆ ಗೊತ್ತಾ.?