ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ವಾಟರ್ ಟ್ಯಾಂಕ್ ಇದ್ದೇ ಇರುತ್ತದೆ. ಆದರೆ ಅದನ್ನು ಸ್ವಲ್ಪ ದಿನಗಳಿಗೆ ಸ್ವಚ್ಛ ಮಾಡುವುದು ಕಷ್ಟ ಎಂದು ಹೇಳಬಹುದು. ಏಕೆoದರೆ ಟ್ಯಾಂಕ್ ಒಳಗಡೆ ಒಬ್ಬರನ್ನು ಬಿಟ್ಟು ಅವರ ಮೂಲಕ ಟ್ಯಾಂಕ್ ಅನ್ನು ಸ್ವಚ್ಛ ಮಾಡಿಸಬೇಕು. ಆದರೆ ಕೆಲವೊಂದು ಸಂದರ್ಭದಲ್ಲಿ ಕಷ್ಟ ಹೌದು ಕೆಲವೊಂದಷ್ಟು ಜನ ಟ್ಯಾಂಕ್ ಒಳಗಡೆ ಇಳಿದು ಸ್ವಚ್ಛ ಮಾಡುತ್ತಾರೆ ಆದರೆ ಹೆಚ್ಚಿನ ಜನ ಈ ರೀತಿ ಒಳಗಡೆ ಇಳಿದು ಸ್ವಚ್ಛ ಮಾಡುವುದಕ್ಕೆ ಭಯಪಡುತ್ತಾರೆ.
ಹಾಗಾಗಿ ಟ್ಯಾಂಕ್ ಅನ್ನು ಸ್ವಚ್ಛ ಮಾಡುವುದೇ ಒಂದು ಹರಸಾಹಸ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಇತ್ತೀಚಿನ ದಿನದಲ್ಲಿ ಈ ರೀತಿಯಾದಂತಹ ಟ್ಯಾಂಕ್ ಗಳನ್ನು ಸ್ವಚ್ಛ ಮಾಡುವುದಕ್ಕೆ ಎಂದೇ ಕೆಲವೊಂದಷ್ಟು ಜನ ಇರುತ್ತಾರೆ. ಹೌದು ಅವರನ್ನು ಕರೆಯಿಸಿ ಮನೆಯಲ್ಲಿರುವಂತಹ ಟ್ಯಾಂಕ್ ಅನ್ನು ಆರು ತಿಂಗಳಿಗೆ ಒಮ್ಮೆ ಅಥವ ವರ್ಷಕ್ಕೆ ಒಮ್ಮೆ ಸ್ವಚ್ಛ ಮಾಡಿಸಿಕೊಳ್ಳು ತ್ತಾರೆ. ಆದರೆ ಎಲ್ಲರೂ ಕೂಡ ಬೇರೆಯವರನ್ನು ಕರೆಸಿ ಸ್ವಚ್ಛ ಮಾಡಿಸುವುದಕ್ಕೂ ಕೂಡ ಇಷ್ಟಪಡುವುದಿಲ್ಲ.
ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು.! ಈ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ.!
ಹಾಗಾದರೆ ಅಂತಹ ಸಮಯದಲ್ಲಿ ಯಾವ ರೀತಿಯಾಗಿ ಸುಲಭವಾಗಿ ಟ್ಯಾಂಕ್ ಅನ್ನು ಸ್ವಚ್ಛ ಮಾಡಬಹುದು ಹಾಗೂ ಟ್ಯಾಂಕನ್ನು ಸ್ವಚ್ಛ ಮಾಡುವುದಕ್ಕೆ ಯಾವ ಕೆಲವು ವಸ್ತುಗಳನ್ನು ಉಪಯೋಗಿಸಿ ಅದನ್ನ ಸ್ವಚ್ಛ ಮಾಡುವುದು. ಹೇಗೆ ಕಡಿಮೆ ಖರ್ಚಿನಲ್ಲಿ ಯಾವುದೇ ರೀತಿಯ ಹಣಕಾಸು ಖರ್ಚು ಮಾಡದೆ ಮನೆಯಲ್ಲಿಯೇ ಇರುವಂತಹ ವಸ್ತುಗಳನ್ನು ಉಪಯೋಗಿಸಿ ಹೇಗೆ ನಮ್ಮ ಟ್ಯಾಂಕ್ ಅನ್ನು ಸ್ವಚ್ಛ ಮಾಡುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಮೊದಲನೆಯದಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ನಾವು ಮನೆಯಲ್ಲಿ ಉಪಯೋಗಿಸುವಂತಹ ಯಾವುದೇ ವಸ್ತುಗಳಾಗಿರಬಹುದು ನಾವು ಉಪಯೋಗಿಸುವಂತಹ ಪದಾರ್ಥಗಳಾಗಿರಬಹುದು ಅದನ್ನು ಇಂತಿಷ್ಟು ಸಮಯ ವರೆಗೆ ಮಾತ್ರ ಉಪಯೋಗಿಸಬೇಕು. ಆನಂತರ ಅದು ತನ್ನ ಒಳ್ಳೆಯ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ ತದನಂತರ ಅದನ್ನು ಉಪಯೋಗಿಸಿದರೆ ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಹುಟ್ಟಿದ ರಾಶಿ ಮತ್ತು ಅವರ ಲಕ್ಷಣಗಳು ಈ ರೀತಿಯಾಗಿ ಇರುತ್ತದೆ.! ನಿಮ್ಮ ರಾಶಿ ಗುಣಲಕ್ಷಣದ ಬಗ್ಗೆ ತಿಳಿದುಕೊಳ್ಳಿ.!
ಅದೇ ರೀತಿಯಾಗಿ ನಾವು ದಿನನಿತ್ಯ ಉಪಯೋಗಿಸುವಂತಹ ನೀರಿನ ಟ್ಯಾಂಕ್ ಅನ್ನು ಕೂಡ ಸ್ವಲ್ಪ ದಿನದ ತನಕ ಉಪಯೋಗಿಸಿ ಆನಂತರ ಅದನ್ನು ಸ್ವಚ್ಛ ಮಾಡಿ ಆನಂತರ ಅಲ್ಲಿಗೆ ನೀರನ್ನು ಹಾಕಿ ಉಪಯೋಗಿಸುವುದು ಒಳ್ಳೆಯದು ಇಲ್ಲವಾದರೆ ಅದು ಕೂಡ ನಮ್ಮ ಚರ್ಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಟ್ಯಾಂಕನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಹಾಗಾದರೆ ಯಾವ ಒಂದು ವಿಧಾನದ ಮೂಲಕ ನಮ್ಮ ಟ್ಯಾಂಕ್ ಅನ್ನು ಸ್ವಚ್ಛ ಮಾಡಬಹುದು ಎಂದು ನೋಡುವುದಾದರೆ. ಮೊದಲು ಒಂದು ವಾಟರ್ ಬಾಟಲ್ ತೆಗೆದುಕೊಂಡು ಅರ್ಧಕ್ಕೆ ಕತ್ತರಿಸಿ ಅದರ ಮುಂಭಾಗವನ್ನು ಸಣ್ಣ ಸಣ್ಣದಾಗಿ ಕತ್ತರಿಸಬೇಕು. ಆನಂತರ ಅದನ್ನು ಒಂದು ಕರೆಂಟ್ ವಯರ್ ಹಾಕುವಂತಹ ಪೈಪ್ ತೆಗೆದುಕೊಂಡು ಆ ಪೈಪ್ ತುದಿಯಲ್ಲಿ ಹಾಕಿ ಟೇಪ್ ಅನ್ನು ಸರಿಯಾಗಿ ಹಾಕಿ ಟೈಟ್ ಮಾಡಿಕೊಳ್ಳಬೇಕು.
ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!
ಆನಂತರ ಆ ಪೈಪಿನ ಮತ್ತೊಂದು ಭಾಗಕ್ಕೆ ಒಂದು ಪೈಪ್ ಅನ್ನು ಹಾಕಿ ಅದು ಕೂಡ ಗಾಳಿಒಳಗೆ ಹೋಗದಂತೆ ಟೈಟ್ ಆಗಿ ಹಾಕಬೇಕು. ಆನಂತರ ವಾಟರ್ ಬಾಟಲ್ ಹಾಕಿದಂತಹ ತುದಿ ಹಾಗೂ ಈ ಕಡೆ ತುದಿ ಎರಡನ್ನು ಸಮವಾಗಿ ಹಿಡಿದುಕೊಂಡು ಅದಕ್ಕೆ ನೀರನ್ನು ತುಂಬಬೇಕು ಆನಂತರ ಬಾಟಲ್ ಹಾಕಿರುವಂತಹ ತುದಿಯನ್ನು ಟ್ಯಾಂಕ್ ಒಳಗಡೆ ಹಾಕಿ ಒಂದು ಕಡೆಯಿಂದ ಎಲ್ಲವನ್ನು ಸ್ವಚ್ಛ ಮಾಡಿದರೆ ಇನ್ನೊಂದು ಪೈಪ್ ಕಡೆಯಿಂದ ಟ್ಯಾಂಕ್ ಒಳಗಡೆ ಇರುವಂತಹ ಕೊಳೆ ನೀರು ಹೊರ ಹೋಗುತ್ತದೆ. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಸುಲಭವಾಗಿ ಟ್ಯಾಂಕ್ ಸ್ವಚ್ಛ ಮಾಡಬಹುದು.