ಬಿಳಿ ಬಣ್ಣದ ಬಟ್ಟೆಗಳು ಒಗೆಯುತ್ತಾ ದಿನೇ ದಿನೇ ತನ್ನ ಕಲೆಯನ್ನು ಕಳೆದುಕೊಳ್ಳುತ್ತದೆ. ಅಂದರೆ ಬಟ್ಟೆಯಲ್ಲಿ ಒಂದು ರೀತಿಯ ಹೊಳಪು ಕಡಿಮೆಯಾಗುತ್ತಾ ಬರುತ್ತದೆ. ಇದರಿಂದಲೇ ಹೆಚ್ಚಿನ ಜನ ಬಿಳಿಯ ಬಟ್ಟೆಗಳನ್ನು ಧರಿಸುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಸುಲಭವಾದಂತಹ ವಿಧಾನವನ್ನು ಅನುಸರಿಸಿದರೆ ನೀವು ಬಿಳಿ ಬಣ್ಣದ ಬಟ್ಟೆಯನ್ನು ಧರಿಸದೆ ಹಾಗೆ ಇಟ್ಟಿದ್ದರೆ ಅದನ್ನು ಮತ್ತೆ ಪುನರ್ ಬಳಕೆ ಮಾಡಬಹುದು.
ಅಂದರೆ ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸುವುದರ ಮೂಲಕ ಬಿಳಿಯ ಬಟ್ಟೆಯ ಮೇಲೆ ಇರುವ ಎಲ್ಲಾ ಕಲೆಗಳನ್ನು ಸಹ ಸುಲಭವಾಗಿ ತೆಗೆದುಹಾಕಬಹುದು. ಹಾಗಾದಈ ಈ ದಿನ ಕೇವಲ 10 ರೂಪಾಯಿಗೆ ಸಿಗುವಂತಹ ಈ ಒಂದು ಪದಾರ್ಥವನ್ನು ಉಪಯೋಗಿಸಿ ಹೇಗೆ ಬಿಳಿ ಬಟ್ಟೆ ಮೇಲೆ ಆಗಿರುವಂತಹ ಕಲೆಗಳನ್ನು ಸುಲಭವಾಗಿ ತೆಗೆಯಬಹುದು ಆ ವಸ್ತು ಯಾವುದು ಅದನ್ನು ಯಾವ ವಿಧಾನ ಅನುಸರಿಸಿ ನಾವು ಬಟ್ಟೆಯನ್ನು ಮೊದಲಿನಂತೆ ಸ್ವಚ್ಛವಾಗಿ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!
ಈ ಬಟ್ಟೆಯನ್ನು ಸುಲಭವಾಗಿ ಶುಚಿ ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಯಾವುದು ಎಂದು ನೋಡುವುದಾದರೆ
* 2 ಚಮಚ ಬಟ್ಟೆ ಸೋಡಾ
* ಒಂದು ಚಮಚ ಡಿಟರ್ಜೆಂಟ್ ಪೌಡರ್
ಈ ಎರಡು ಪದಾರ್ಥ ಇದ್ದರೆ ಸಾಕು ನೀವು ನಿಮ್ಮ ಬಿಳಿಯ ಬಟ್ಟೆಯನ್ನು ಸುಲಭವಾಗಿ ಯಾವುದೇ ರೀತಿಯ ಕಷ್ಟಪಡದೆ ಸುಲಭವಾಗಿ ಸ್ವಚ್ಛ ಮಾಡಬಹುದು ಹಾಗಾದರೆ ಇವೆರಡನ್ನು ಉಪಯೋಗಿಸಿ ಹೇಗೆ ಸ್ವಚ್ಛ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.
ಮೊದಲು ಒಂದು ಅಗಲವಾಗಿರುವಂತಹ ಪ್ಲಾಸ್ಟಿಕ್ ಟಬ್ ತೆಗೆದುಕೊಳ್ಳ ಬೇಕು ಅದರ ಒಳಗೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಮೇಲೆ ಹೇಳಿದ ಪದಾರ್ಥಗಳನ್ನು ಹಾಕಿ ಅದನ್ನು ಒಂದು ಸ್ಟಿಕ್ ಸಹಾಯದಿಂದ ಕರಗಿಸಬೇಕು ಏಕೆಂದರೆ ಇವೆರಡು ಪದಾರ್ಥ ಮಿಶ್ರಣ ಆದ ತಕ್ಷಣ ಆ ನೀರು ಬಿಸಿಯಾಗಿ ಬದಲಾಗುತ್ತದೆ.
ಆದ್ದರಿಂದ ಈ ನೀರನ್ನು ಯಾವುದೇ ಕಾರಣಕ್ಕೂ ಕೈ ಹಾಕಿ ಮುಟ್ಟಬೇಡಿ ಅದೇ ರೀತಿಯಾಗಿ ಈ ನೀರಿನಲ್ಲಿ ಬಟ್ಟೆಯನ್ನು ಒಂದು ಕಡೆಯಿಂದ ಮುಳುಗಿಸುತ್ತ ಒಂದು ಸ್ಟಿಕ್ ಸಹಾಯದಿಂದ ಅದರ ಒಳಗಡೆ ಹಾಕಿ ಹಾಗೆ ಒಂದು ಗಂಟೆಗಳ ತನಕ ಬಿಡಬೇಕು ಈ ರೀತಿ ಇಟ್ಟ ನಂತರ ಅದೇ ಸ್ಟಿಕ್ ಸಹಾಯದಿಂದ ಅದನ್ನು ಹಿಂದೆ ಮುಂದೆ ಮಾಡುತ್ತಾ 5 ರಿಂದ 10 ನಿಮಿಷ ಇದೇ ವಿಧಾನ ಅನುಸರಿಸಬೇಕು.
ಈ ಸುದ್ದಿ ಓದಿ:- ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡುವ ವಿಧಾನ.! ಬಟ್ಟೆ, ಬ್ಯಾಗ್ ಪರ್ಸ್ ಯಾವುದೇ ಜಿಪ್ ಇರಲಿ ರೆಡಿ ಆಗುತ್ತೆ.!
ಆನಂತರ ಆ ನೀರಿನಲ್ಲಿ ಕೊಳೆ ಇರುವ ಬಟ್ಟೆಯ ಅಂಶ ಬಿಡುತ್ತಾ ಹೋಗುತ್ತದೆ. ನಂತರ ಆ ಒಂದು ಬಟ್ಟೆಯನ್ನು ಇನ್ನೊಂದು ಪಾತ್ರೆಯಲ್ಲಿ ತಣ್ಣೀರನ್ನು ಹಾಕಿ ಅದರಲ್ಲಿ ಅದ್ದಿ ತೆಗೆಯಬೇಕು ಈ ರೀತಿ ಮಾಡುವುದರಿಂದ ನಿಮ್ಮ ಬಿಳಿಯ ಬಟ್ಟೆಯಲ್ಲಿರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಬರುತ್ತದೆ.
ಇದರಲ್ಲಿ ಇರುವಂತಹ ಎರಡು ಅಂಶವು ಬಿಳಿಯ ಬಟ್ಟೆಯ ಮೇಲೆ ಇರುವಂತಹ ಕೊಳೆಯನ್ನು ತೆಗೆಯುತ್ತದೆ. ಇದರಿಂದ ಯಾವುದೇ ರೀತಿಯ ಕಷ್ಟಪಡದೆ ಉಜ್ಜಿ ಕೊಳೆ ಹೋಗಿಸುವಂತಹ ಪರಿಸ್ಥಿತಿ ಇರುವುದಿಲ್ಲ. ಕೇವಲ ಒಂದು ಗಂಟೆ ಮೇಲೆ ಹೇಳಿದ ನೀರಿನಲ್ಲಿ ಬಿಟ್ಟರೆ ಸಾಕು ನಿಮ್ಮ ಬಟ್ಟೆಯಲ್ಲಿರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಹೋಗುತ್ತದೆ.
ಆದ್ದರಿಂದ ಮನೆಯಲ್ಲಿ ಇರುವಂತಹ ಮಹಿಳೆಯರು ಬಿಳಿ ಬಟ್ಟೆಯನ್ನು ಒಗೆಯುವಂತಹ ಸಂದರ್ಭದಲ್ಲಿ ಈ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯ ಇದು ಅವರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.