ಕೆಲವರಿಗೆ ರಾತ್ರಿ ಮಲಗಿ ಬೆಳಗ್ಗೆ ಏಳುವಾಗ ಕೈಗಳು ಸತ್ವ ಕಳೆದುಕೊಂಡಿರುತ್ತದೆ, ಸ್ವಲ್ಪ ಶೇಕ್ ಮಾಡಿ ನಂತರ ಆಕ್ಟೀವ್ ಮಾಡಬೇಕಾಗ ಪರಿಸ್ಥಿತಿ ಇರುತ್ತದೆ, ಇನ್ನು ಕೆಲವರಿಗೆ ರಾತ್ರಿ ಮಲಗಿರುವಾಗ ಕೈ ಜೋಮು ಹಿಡಿಯುತ್ತದೆ. ಕೈಯಲ್ಲಿ ಉರಿ ಚುಚ್ಚಿದ ಅನುಭವ, ಸ್ವಲ್ಪ ಕೆಲಸ ಮಾಡಿದರು ಕೈ ಜೋತು ಹೋಗುವುದು, ಒಮ್ಮೊಮ್ಮೆ ವಿಪರೀತವಾದ ನೋವು, ಕೈಗಳು ಊದಿಕೊಂಡಿರುವ ರೀತಿ ಅನಿಸುತ್ತಿರುತ್ತದೆ.
ಈ ರೀತಿ ಲಕ್ಷಣಗಳು ಹಗಲಿನಲ್ಲಿ ಕಾಣಿಸಿಕೊಂಡರು ಆಗುತ್ತಿರುತ್ತದೆ ರಾತ್ರಿ ಸಮಯ ಹೆಚ್ಚಿಗೆ ಆಗುತ್ತಿರುತ್ತದೆ. ಈ ರೀತಿ ಅನುಭವಗಳಾಗುತ್ತಿದ್ದರೆ ದಯವಿಟ್ಟು ನಿರ್ಲಕ್ಷಿಸಬೇಡಿ ಯಾಕೆಂದರೆ ಇದನ್ನು ಮೆಡಿಕಲ್ ಭಾಷೆಯಲ್ಲಿ Carpal tunnel sydrome ಎನ್ನುತ್ತಾರೆ ದೇಹದ ಕುತ್ತಿಗೆ ಭಾಗದಿಂದ ಪ್ರಧಾನವಾದ ನರವೊಂದು ಹಸ್ತಗಳವರೆಗೂ ಬಂದಿರುತ್ತದೆ.
ಅದು ಕಂಕಣದ ಜಾಗದಲ್ಲಿ ಕಾರ್ಪಲ್ ಟ್ಯೂನಲ್ ಒಳಗಡೆ ಇನ್ನು ಅನೇಕ ಸಣ್ಣ ಸಣ್ಣ ನರಗಳು ಮಾಂಸಖಂಡ ಸೇರಿ ಕೈ ಪೂರ್ತಿ ಸ್ಪ್ರೆಡ್ ಆಗಿರುತ್ತದೆ. ಇದರ ಒಳಗಡೆ ಊತವಾದಾಗ, ಈ ರೀತಿ ಕೈಗಳು ಊದಿಕೊಂಡ ರೀತಿ ಆಗುತ್ತದೆ. ಕಂಕಣದ ಭಾಗಕ್ಕೆ ಅತಿ ಹೆಚ್ಚಾದ ಒತ್ತಡ ಬೀಳುವುದರಿಂದ ಕೂಡ ಈ ಸಮಸ್ಯೆಗಳು ಆಗುತ್ತದೆ.
ಇದರೊಂದಿಗೆ ಅತಿ ಹೆಚ್ಚಾಗಿ ಕೆಲಸ ಮಾಡಿ ಆ ಭಾಗದಲ್ಲಿ ನರಗಳು ಅಥವಾ ಮಾಂಸಖಂಡ ಸವೆದಿರುವುದು, ಯಾವಾಗಲೋ ಈ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಅದು ಗೊತ್ತಾಗದೆ ಇರುವುದು, ಸಾಫ್ಟ್ವೇರ್ ಗಳಲ್ಲಿ ಕೆಲಸ ಮಾಡುವವರು ಮೌಸ್ ಬಳಸಲು ಕೈಗಳನ್ನು ಹೆಚ್ಚು ಬಳಸುವುದರಿಂದ ಅವರಲ್ಲೂ ಈ ಸಮಸ್ಯೆ ಇರುತ್ತದೆ. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, ಪುರುಷರಿಗಿಂತ ಮಹಿಳೆಯರು ಅತಿ ಹೆಚ್ಚಾಗಿ ಈ ಸಮಸ್ಯೆ ಅನುಭವಿಸುತ್ತಾರೆ.
ಗರ್ಭಿಣಿ ಹಾಗೂ ಬಾಣಂತಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿರುವುದರಿಂದ ಕೂಡ ಈ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಆರಂಭದಲ್ಲಿ ಗುರುತಿಸದೆ ನಿರ್ಲಕ್ಷಿಸಿದರೆ ನಿಧಾನವಾಗಿ ಇದು ಹಗಲಿನಲ್ಲಿ ಬಹಳ ನೋವು ಕೊಡಲು ಶುರುಮಾಡುತ್ತದೆ. ಹಾಗಾಗಿ ಆರಂಭದಲ್ಲಿ ಇದರ ಲಕ್ಷಣಗಳನ್ನು ಗುರುತಿಸಿ, ಚಿಕಿತ್ಸೆ ಪಡೆದುಕೊಂಡರೆ ದೊಡ್ಡ ಅ’ನಾ’ಹು’ತ ತಪ್ಪಿಸಬಹುದು.
ಹೈಪೋಥೆರಡಿಸಂ ಸಮಸ್ಯೆ ಇರುವವರು, ಸಕ್ಕರೆ ಕಾಯಿಲೆ ಇರುವವರು. ದೇಹದ ತೂಕ ಹೆಚ್ಚಾಗಿ ಒಬೆಸಿಟಿ ಸಮಸ್ಯೆ ಎದುರಿಸುತ್ತಿರುವವರ ನರಗಳು ಮೊದಲೇ ದುರ್ಬಲವಾಗಿರುವುದರಿಂದ ಕೂಡ ಸುಲಭವಾಗಿ ಈ ಸಮಸ್ಯೆಗೆ ತುತ್ತಾಗುತ್ತಾರೆ.
ಇವರೆಲ್ಲರೂ ಈ ಲಕ್ಷಣ ಬಗ್ಗೆ ಗಮನ ಕೊಟ್ಟು ಸಮಸ್ಯೆ ಬಂದಾಗ ಕೂಡಲೇ ಆಸ್ಪತ್ರೆಗೆ ಹೋಗಬೇಕು ಮೊದಲಿಗೆ ಇದು ಕಾರ್ಪೆಲ್ ಟೂನರ್ಸ್ ಸಿಂಡ್ರಮ್ ಎನ್ನುವುದನ್ನು ಹಲವು ಪರೀಕ್ಷೆಗಳ ಮೂಲಕ ವೈದ್ಯರು ಕಂಡುಹಿಡಿಯುತ್ತಾರೆ. ನರ್ವ್ ಕಂಡಕ್ಷನ್ ಸ್ಟಡಿ, ಅಲ್ಟ್ರಾ ಸೌಂಡಾಗ್ರಾಫಿ, MRI, ಎಲೆಕ್ಟ್ರೋ ಮಯೋಗ್ರಫಿ, ಈ ಎಲ್ಲಾ ಟೆಸ್ಟ್ ಗಳ ಮೂಲಕವೂ ಕೂಡ ನಮಗಾಗಿರುವ ಸಮಸ್ಯೆ carpet tunnel compression ನಿಂದ ಆಗಿದೆಯೇ ಎಂದು ದೃಢವಾಗಿ ತಿಳಿದುಕೊಳ್ಳಬಹುದು.
ಸಮಸ್ಯೆ ಗೊತ್ತಾದ ಮೇಲೆ ಅದರಿಂದ ಹೊರಬರುವ ದಾರಿಯು ಇರುತ್ತದೆ. ಹಾಗಾಗಿ ಆರಂಭದಲ್ಲಿ ಪತ್ತೆ ಹಚ್ಚಿದರೆ ಗಾಬರಿಯಾಗುವ ಅವಶ್ಯಕತೆ ಇಲ್ಲ ಮನೆಯಲ್ಲಿ ಮಾಡುವ ಸಣ್ಣಪುಟ್ಟ ಎಕ್ಸಸೈಜ್ ಗಳ ಮೂಲಕ ಇದನ್ನು ಗುಣಪಡಿಸಿಕೊಳ್ಳಬಹುದು. ಹೆಚ್ಚಾದ ನೋವಿದ್ದಾಗ ಐಸ್ ಕ್ಯೂಬ್ ಇಟ್ಟು ನೋವು ಗುಣಪಡಿಸಿಕೊಳ್ಳಬಹುದು.
ಮೂರು ಬಾರಿ ಬಿಸಿಯಾದ ನೀರಿನಿಂದ ಅಥವಾ ವಸ್ತುವಿನಿಂದ ಮಸಾಜ್ ಕೊಟ್ಟು ಒಂದು ಬಾರಿ ಐಸ್ ಇಂದ ಪ್ರೆಸ್ ಮಾಡಿ ನೋವು ಕಡಿಮೆ ಮಾಡಿಕೊಳ್ಳಬಹುದು. ಈ ಸಮಸ್ಯೆ ಇದೆ ಎಂದು ಗೊತ್ತಾದ ಮೇಲೆ ಮೊದಲಿನಂತೆ ಹೆಚ್ಚು ಪ್ರೆಶರ್ ಹಾಕಿ ಕೆಲಸ ಮಾಡುವುದನ್ನು ನಿಲ್ಲಿಸಿ.
ಒಂದು ವೇಳೆ ಇವುಗಳಿಂದ ಗುಣವಾಗದಿದ್ದರೆ ಆಯುರ್ವೇದದ ಮೂಲಕ ಪ್ರಕೃತಿ ಚಿಕಿತ್ಸೆ, ಆಯುರ್ವೇದ ಮೆಡಿಸನ್, ನ್ಯಾಚುರೋಪಥಿ, ಅಲ್ಟ್ರಾ ಸೌಂಡ್ ಥೆರಪಿ ಇವುಗಳ ಸರಳ ಚಿಕಿತ್ಸೆಯಿಂದ ಕೂಡ ಇದನ್ನು ಸರಿಪಡಿಸಲು ಚಿಕಿತ್ಸೆಗಳು ಇವೆ. ಹಾಗಾಗಿ ತಪ್ಪದೆ ಒಳ್ಳೆಯ ಫಿಜಿಯೋಥೆರಪಿಸ್ಟ್ ಭೇಟಿಯಾಗಿ.