ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಅದರಲ್ಲೂ ಹೆಚ್ಚಾಗಿ ಈಗಿನ ಕಾಲದಲ್ಲಿ ಕಂಪ್ಯೂಟರ್ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುವವರಿಗೆ ಒಂದೇ ಕಡೆ ಒತ್ತಡ ಬಿದ್ದು ಕುತ್ತಿಗೆ ಭಾಗದ ಡಿಸ್ಕ್ ಹಾಳಾಗಿ ಅದು ನರದ ಮೇಲೆ ಒತ್ತಡವಾಗಿ ಆ ಭಾಗದಲ್ಲಿ ನೋವು, ಕೈ ಸೆಳೆತ, ಜೋಮು ಹಿಡಿಯುವುದು ಇದೆಲ್ಲವೂ ಕೂಡ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.
ಆದರೆ ಇದನ್ನು ವಿಪರೀತ ನಿರ್ಲಕ್ಷ ಮಾಡಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲಿ ಬೆಳಗ್ಗೆ ಎದ್ದ ಕೂಡಲೇ ಈ ರೀತಿ ಕುತ್ತಿಗೆಯ ಭಾಗದಲ್ಲಿ ಒಂದು ಕಡೆ ನೋವು ಬರುತ್ತಿದೆ ಎಂದರೆ ಬಹಳ ಎಚ್ಚರಿಕೆಯಿಂದ ಇರಬೇಕು. ಮುಂದೆ ದೇಹದಲ್ಲಾಗುವ ದೊಡ್ಡ ಹಾನಿಯ ಮುನ್ಸೂಚನಯದು.
ಅದಲ್ಲದೆ ಈ ರೀತಿ ಕುತ್ತಿಗೆ ಭಾಗಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಹಲವರು ಎದುರುತ್ತಾರೆ ಯಾಕೆಂದರೆ ಕುತ್ತಿಗೆ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಕೊಂಡವರಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಪಾಶ್ವ ವಾಯುವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಈ ರೀತಿ ದೇಹಕ್ಕೆ ತೊಂದರೆ ಆಗಬಾರದು ಎಂದರೆ ಅಥವಾ ಈಗಾಗಲೇ ನೋವು ಕಾಣಿಸಿಕೊಂಡಿದ್ದರೆ ತಕ್ಷಣ ಕಡಿಮೆ ಆಗಲು ಈಗ ನಾವು ಹೇಳುವ ಈ ಸಣ್ಣ ವ್ಯಾಯಾಮವನ್ನು ಮಾಡಿ.
* ಕುತ್ತಿಗೆಯನ್ನು ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ಆಗಿ ಹತ್ತತ್ತು ಬಾರಿ ತಿರುಗಿಸಬೇಕು ಇದನ್ನು ಮೂರು ಸುತ್ತು ಮಾಡಬೇಕು.
* ಹಾಗೆ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಉಸಿರಾಡುತ್ತ ಉಸಿರು ಬಿಡುತ್ತಾ 10 ಬಾರಿ ಮೂರು ಸುತ್ತು ಮಾಡಬೇಕು.
* ಎರಡು ಕೈಗಳನ್ನು ಜಾಯಿಂಟ್ ಮಾಡಿ ಅದನ್ನು ತಲೆ ಹಿಂಬದಿಗೆ ಇಟ್ಟುಕೊಂಡು ಜೋರಾಗಿ ಉಸಿರು ತೆಗೆದುಕೊಳ್ಳುತ್ತಾ ಕೈಯಿಂದ ತಲೆ ಭಾಗವನ್ನು ಒತ್ತಬೇಕು. ಹಾಗೆಯೇ ಉಸಿರು ಬಿಡುತ್ತಾ ಕೈಯನ್ನು ಬಿಡಬೇಕು ಈ ರೀತಿ ಮಾಡುವುದು ಕೂಡ ಬಹಳ ಉತ್ತಮ ಪರಿಹಾರವನ್ನು ನೀಡುತ್ತದೆ.
* ಯಾವ ಕಡೆ ನೋವು ಬರುತ್ತಿದೆ ಆ ಭಾಗದಲ್ಲಿ ತಲೆಯನ್ನು ಕೈಯಿಂದ ಹಿಡಿದುಕೊಂಡು ಜೋರಾಗಿ ಉಸಿರು ತೆಗೆದುಕೊಳ್ಳುತ್ತಾ ಬಿಡಬೇಕು ಹೀಗೆ ಕೂಡ ಹತ್ತು ಬಾರಿ ಮಾಡಬೇಕು ಇದನ್ನು ವಿರುದ್ಧ ಕೈಗಳಿಂದ ಕೂಡ 10 ಬಾರಿ ಮಾಡಬೇಕು.
* ಹೆಬ್ಬೆರಳಿನ ಹಿಂಭಾಗದಲ್ಲಿ ಕೊನೆ ಭಾಗವನ್ನು ಯಾವುದಾದರೂ ಕಡ್ಡಿಯ ಸಹಾಯದಿಂದ ನಿಧಾನವಾಗಿ ಚೆನ್ನಾಗಿ ಕನಿಷ್ಠ 10 ನಿಮಿಷಗಳವರೆಗೆ ಉಜ್ಜಬೇಕು ಇದಕ್ಕೂ ಹಾಗೂ ಕುತ್ತಿಗೆಯ ನರಗಳಿಗೂ ಸಂಪರ್ಕ ಇರುವುದರಿಂದ ಅಲ್ಲಿ ಉಂಟಾಗಿರುವ ರಕ್ತದ ಬ್ಲಾಕೇಜ್ ಸರಿ ಹೋಗಲು ಇದು ಸಹಾಯಕವಾಗುತ್ತದೆ.
* ಇದೇ ಮಾದರಿಯಲ್ಲಿ ಪಾದದ ಹೆಬ್ಬೆರಳಿನ ಹಿಂಬದಿಯ ಕೊನೆಯಲ್ಲಿ ಕೂಡ ಹೀಗೆ ಉಜ್ಜಬೇಕು. ಈ ವಿಧಾನದಲ್ಲಿ ಕೂಡ ಉತ್ತಮ ಪರಿಣಾಮವನ್ನು ಕಾಣಬಹುದು.
* ಮೇರು ದಂಡ ಮುದ್ರೆಯನ್ನು ಮಾಡಬೇಕು. ಈ ಮುದ್ರೆ ಮಾಡುವುದು ಹೇಗೆಂದರೆ ಸುಖಾಸನದಲ್ಲಿ ಕುಳಿತುಕೊಂಡು ಎರಡು ಕೈಗಳನ್ನು ತಮ್ಸಪ್ ಹೇಳುವ ರೀತಿಯಲ್ಲಿ ಹಿಡಿದುಕೊಂಡು ಮಂಡಿಗಳ ಮೇಲೆ ಇಟ್ಟು ಧೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ನಿಧಾನವಾಗಿ ಉಸಿರು ಬಿಡಬೇಕು.
* ನೋವಿನ ಶಮನಕ್ಕೆ ಮನೆ ಮದ್ದು ಎಂದರೆ ಎಕ್ಕದ ಎಲೆ, ಹುಣಸೆ ಎಲೆ, ಹರಳೆಲೆ, ನುಗ್ಗೆ ಎಲೆ, ಬೇವಿನ ಎಲೆ, ಹೊಂಗೆ ಎಲೆ ಇವೆಲ್ಲವನ್ನೂ ಒಂದು ಹಿಡಿ ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ ಮತ್ತು 100 ಗ್ರಾಂ ನಷ್ಟು ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಸ್ವಲ್ಪ ಹರಳೆಣ್ಣೆ ಹಾಕಿ ಈ ಎರಡು ಪೇಸ್ಟ್ ಗಳನ್ನು ಹಾಕಿ ಫ್ರೈ ಮಾಡಿ ಇದರಿಂದ ನೋವಿರುವ ಭಾಗಕ್ಕೆ ಪಟ್ಟು ಹಾಕಿ ಮರುದಿನ ಬಿಸಿನೀರಿನಿಂದ ಸ್ನಾನ ಮಾಡಬೇಕು. ಕನಿಷ್ಠ 21 ದಿನಗಳು ಇದನ್ನು ಮಾಡಿದರೆ ಆ ಸಮಸ್ಯೆ ಮೊದಲು ಹಾಗೂ ಎರಡನೇ ಸ್ಟೇಜಿನಲ್ಲಿ ಇದ್ದರೆ ಗುಣವಾಗುತ್ತದೆ.
* ಇದೆಲ್ಲಾ ಆದರೂ ನೋವು ಕಡಿಮೆಯಾಗಲಿಲ್ಲ ಎಂದರೆ ಆಯುರ್ವೇದದಲ್ಲಿ ಪಂಚ ಕರ್ಮ ಚಿಕಿತ್ಸೆಗೆ ಒಳಗಾಗುವುದು ಒಳ್ಳೆಯದು. ಯೋಗಬಸ್ತಿ, ಕಾಲಬಸ್ತಿ, ಕರ್ಮಬಸ್ತಿ ಇನ್ನು ಮುಂತಾದ ಚಿಕಿತ್ಸೆಗಳಿವೆ. ಇವುಗಳನ್ನು ತೆಗೆದುಕೊಳ್ಳುವುದರಿಂದ ಕೂಡ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.