ರೈತರಿಗೆ ಕೃಷಿ ಚಟುವಟಿಕೆಗೆ ನೀರು ಬಹಳ ಮುಖ್ಯ. ಮಳೆ ನೀರಿನ ಆಶ್ರಿತ ಕೃಷಿಗಿಂತ ನೀರಾವರಿ ಸೌಲಭ್ಯ ಹೊಂದಿರುವ ಕೃಷಿಗಳಲ್ಲಿ ಆಹಾರ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ರೈತನ ಆದಾಯವು ಹೆಚ್ಚಾಗಿ ಆತನ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಸಿಗುತ್ತದೆ ಮತ್ತು ಪರೋಕ್ಷವಾಗಿ ದೇಶದ ಅಭಿವೃದ್ಧಿಗೂ ಪೂರಕವಾಗುತ್ತದೆ ಎನ್ನುವ ಕಾರಣಕ್ಕಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರವು ಉಚಿತವಾಗಿ ಬೋರ್ವೆಲ್ ಕೊರೆಸಿಕೊಳ್ಳಲು ಅವಕಾಶ ನೀಡುತ್ತಿದೆ.
ಗಂಗಾ ಕಲ್ಯಾಣ ಎಂದು ಹೆಸರಿರುವ ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷವೂ ಅರ್ಜಿ ಆಹ್ವಾನಿಸಿ, ಅರ್ಹ ರೈತರಿಗೆ ಅವರ ಜಮೀನುಗಳಲ್ಲಿ ಉಚಿತವಾಗಿ ಬೋರ್ವೆಲ್ ಕೊರೆಸಿ ಪಂಪ್ಸೆಟ್ ಅಳವಡಿಸಿ ವಿದ್ಯದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಹೊಂದಲು ಅನುಕೂಲತೆ ಮಾಡಿಕೊಡಲಾಗುತ್ತಿದೆ.
ಸದ್ಯಕ್ಕೆ ಈಗ ಸಮಾಜ ಕಲ್ಯಾಣ ಇಲಾಖೆ ವಿವಿಧ ನಿಗಮಗಳ ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತ ಬೋರ್ವೆಲ್ ಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ರೈತನಿಗೆ ಏನೆಲ್ಲ ಮಾನದಂಡಗಳಿವೆ? ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಕೊನೆ ದಿನಾಂಕ ಯಾವುದು? ಎನ್ನುವುದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ರಾಜ್ಯದ ರೈತರಿಗೆಲ್ಲ ಅನುಕೂಲವಾಗುವ ಮಾಹಿತಿ ಇದಾಗಿದ್ದು ತಪ್ಪದೆ ಈ ಮಾಹಿತಿಯು ಹೆಚ್ಚಿನ ರೈತರಿಗೆ ತಲುಪುವಂತೆ ಶೇರ್ ಮಾಡಿ.
ಅರ್ಹತೆಗಳು:-
* ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
* ರೈತರು ಕನಿಷ್ಠ 1.20 ಎಕರೆಯಿಂದ ಗರಿಷ್ಠ 5 ಎಕರೆ ಒಳಗಡೆ ಕೃಷಿ ಭೂಮಿ ಹೊಂದಿರಬೇಕು.
* ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ 1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ ಮೀರಿರಬಾರದು
* ಅರ್ಜಿ ಸಲ್ಲಿಸುವ ರೈತನ ವಯಸ್ಸು 21 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
* ಈಗಾಗಲೇ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ
* ಸಮಾಜ ಕಲ್ಯಾಣ ಇಲಾಖೆಗೆ ಸೇರುವ ವಿವಿಧ ನಿಗಮಗಳಿಗೆ ವ್ಯಾಪ್ತಿಗೆ ಬರುವ ರೈತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಮತ್ತು ರೈತನ ಕುಟುಂಬವು ಈಗಾಗಲೇ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಪ್ರಯೋಜನ ಪಡೆದಿರಬಾರದು.
ಸಿಗುವ ಪ್ರಯೋಜನ:-
* ರೈತರ ಜಮೀನಿನಲ್ಲಿ ಅವರಿಗೆ ಬೇಕಾದ ಮತ್ತು ಅಗತ್ಯ ಇರುವ ಬೋರ್ವೆಲ್ ಕೊರೆಸಿ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಉಚಿತ ಸೌಲಭ್ಯವನ್ನು ಕೊಡಲಿದೆ. ಹಾಗೆಯೇ ಇದರಿಂದ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು ಮತ್ತು ಆಹಾರ ಕೊರತೆ ನೀಗಲಿದೆ. ರೈತನ ಮತ್ತು ದೇಶದ ಆದಾಯವು ಹೆಚ್ಚಾಗಲಿದೆ.
* ಈ ಯೋಜನೆಯಡಿಯಲ್ಲಿ 1.5 ಲಕ್ಷ ರೂಪಾಯಿ ಗಳಿಂದ 3.50 ಲಕ್ಷ ರೂಪಾಯಿಗಳ ವರೆಗೆ ರೈತರು ಸರ್ಕಾರದಿಂದ ಸಹಾಯಧನ ಪಡೆಯಬಹುದು.
ಬೇಕಾಗುವ ದಾಖಲೆಗಳು:-
* ಪರಿಶಿಷ್ಟಜಾತಿ/ಪಂಗಡಕ್ಕೆ ಸೇರಿದ ರೈತರು ಜಾತಿ ಪ್ರಮಾಣಪತ್ರ ಹೊಂದಿರಬೇಕು.* ಸಣ್ಣಹಿಳುವಳಿದಾರರ ಪ್ರಮಾಣಪತ್ರ
* ಇತ್ತೀಚಿನ ಪಹಣಿ
* ಆದಾಯ ಪ್ರಮಾಣ ಪತ್ರ
* ಕುಟುಂಬದ ಪಡಿತರ ಚೀಟಿ
* ಬ್ಯಾಂಕ್ ಪಾಸ್ ಬುಕ್
* ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನ:-
ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29 ನವೆಂಬರ್, 2023.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:–
* ಕಲ್ಯಾಣ ಮಿತ್ರ 24×7 ಸಹಾಯವಾಣಿ – 9482300400
* X ಖಾತೆ @SWDGok