ಸಾಮಾನ್ಯವಾಗಿ ಎಲ್ಲ ಮನುಷ್ಯರಿಗೂ ಸಹ ತಾವು ಶ್ರೀಮಂತರಾಗಬೇಕು, ಹಣ ಸಂಪಾದನೆ ಮಾಡಿ ಇಟ್ಟುಕೊಳ್ಳಬೇಕು, ಸುಖಕರ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಇದ್ದಕ್ಕಿದ್ದಂತೆ ಕೆಲವು ಸಮಸ್ಯೆಗಳು ಎದುರಾಗಿ ತೀರ ಆರ್ಥಿಕ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದುಬಿಡುತ್ತದೆ. ಆ ಸ್ಥಿತಿಯನ್ನು ನಾವು ನಿರೀಕ್ಷೆ ಮಾಡಿಯೇ ಇರುವುದಿಲ್ಲ, ನಿಮಗೂ ಈ ರೀತಿ ಆಗಿದ್ದರೆ ನಿಮ್ಮ ಮನೆಯ ಮೇಲೆ ನ.ಕ.ರಾತ್ಮಕ ಶಕ್ತಿಯ ಕಣ್ಣು ಬಿದ್ದಿದೆ ಎಂದು ಅರ್ಥ.
ಹಾಗಾಗಿ ಅವುಗಳನ್ನು ದೂರ ಹೋಗಿಸಿ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಲು ಮತ್ತು ಧನ ಪ್ರವಾಹವೇ ಹರಿದ ಬರುವಂತೆ ಮಾಡಲು ಹೋಳಿ ಹುಣ್ಣಿಮೆ ದಿನದಂದು ಈ ಒಂದು ಸಣ್ಣ ಆಚರಣೆ ಮಾಡಿ ಸಾ.ಕು ನಂತರ ನಿಮ್ಮ ಮನೆ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಉಂಟಾಗುವ ಚಮತ್ಕಾರವನ್ನು ನೀವೇ ಕಂಡು ಆಶ್ಚರ್ಯ ಪಡುತ್ತೀರಿ.
ಮನೆಯ ಕಪಾಟು ಅಥವಾ ನೀವು ಹಣ ಇಡುವ ಸ್ಥಳವಾದ ಬೀರು ಇವುಗಳ ಮೇಲೆ ಸ್ವಲ್ಪ ಜಾಗ ಸಿಕ್ಕರು ಸಾಕು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಅದರ ಮೇಲೆ ತುಂಬಿಸುವುದು ನಮ್ಮ ಕೆಟ್ಟ ಅಭ್ಯಾಸ. ಯಾವುದೇ ಕಾರಣಕ್ಕೂ ಈ ರೀತಿ ಬೀರುವಿನ ಮೇಲೆ ಕಸದ ರೀತಿ ಎಲ್ಲವನ್ನೂ ತುಂಬಬಾರದು. ಹಣ ತುಂಬಿಸುವ ಜಾಗವಾದ ಲಕ್ಷ್ಮಿ ವಾಸಸ್ಥಾನವಾದ ಕಪಾಟು ಅಥವಾ ಬೀರು ಯಾವಾಗಲೂ ಶುದ್ಧವಾಗಿರಬೇಕು. ಅದರ ಮೇಲೆ ಧೂಳು ಕೂಡ ಕೂರದಂತೆ ಅಥವಾ ಯಾವುದೇ ನ.ಕ.ರಾತ್ಮಕ ಶಕ್ತಿ ಅಲ್ಲಿ ಸೇರದಂತೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿರಬೇಕು.
ಒಂದು ವೇಳೆ ಬೀರುವಿನ ಮೇಲೆ ಪ್ರತಿನಿತ್ಯ ಕಸ ತೆಗೆಯಲು ಅಥವಾ ಅದರ ಸ್ವಚ್ಛತೆ ನೋಡಿಕೊಳ್ಳಲು ಅನುಕೂಲ ಆಗುತ್ತಿಲ್ಲ ಎಂದರೆ ಅಂಥವರು ಈ ಒಂದು ಸಣ್ಣ ತಂತ್ರ ಮಾಡಿ ಸಾಕು. ಈ ಹೋಳಿ ಹುಣ್ಣಿಮೆ ದಿನದಂದು ತಂತ್ರ ಮಂತ್ರ ಶಕ್ತಿಗಳಿಗೆ ಹೆಚ್ಚು ಪವರ್ ಇರುತ್ತದೆ. ಹಾಗಾಗಿ ಈ ದಿನ ತಪ್ಪದೆ ಈ ಕೆಲಸ ಮಾಡಿ. 51 ಬೇವಿನ ಬೀಜಗಳನ್ನು ತಂದು ಒಂದು ಶುದ್ಧ ವಸ್ತುದಲ್ಲಿ ಕಟ್ಟಿ ಅದನ್ನು ನಿಮ್ಮ ಬೀರುವಿನ ಮೇಲೆ ಇಡಿ.
ಯಾಕೆಂದರೆ ಯಾವುದೇ ದುಷ್ಟ ಶಕ್ತಿಯ ಕಣ್ಣು ಬಿದ್ದರೂ ಅಥವಾ ಅದು ಅಲ್ಲಿ ಸೇರಿದ್ದರೂ ಕೂಡ ಬೇವಿನ ಶಕ್ತಿಯ ಬೀಜಗಳಿಗೆ ಅದನ್ನು ಓಡಿಸುವ ಶಕ್ತಿ ಇದೆ. ಇದೇ ಕಾರಣಕ್ಕಾಗಿ ಯಾವುದೇ ನಕಾರಾತ್ಮಕ ಶಕ್ತಿ ಸೇರಿಕೊಂಡ ಮನುಷ್ಯರನ್ನು ಬೇವಿನ ಕಡ್ಡಿಯಿಂದ ಹೊಡೆದು ಬಿಡಿಸುತ್ತಾರೆ, ಬೇವಿನ ಮರ ಹಾಗೂ ಬೇವಿನ ಕಡ್ಡಿಯಲ್ಲಿ ಅಷ್ಟು ಶಕ್ತಿ ಇರುವುದರಿಂದ ಬೇವಿನ ಬೀಜಕ್ಕೂ ಸಹ ಆ ಶಕ್ತಿ ಇರುತ್ತದೆ ಆದ್ದರಿಂದ ಅದನ್ನು ಇಟ್ಟು ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ.
ಜೊತೆಗೆ ಮನೆಯಲ್ಲಿ ಅಶಾಂತಿ, ಸದಾ ಕಿರಿಕಿರಿ, ಜಗಳ ಈ ರೀತಿ ಆಗುತ್ತಿದ್ದರೆ ಅದಕ್ಕೂ ಕೂಡ ನಕಾರಾತ್ಮಕ ಶಕ್ತಿಗಳು ತುಂಬಿಕೊಂಡಿರುವುದೇ ಕಾರಣ ಆಗಿರುತ್ತದೆ. ಮನೆಯ ಮುಖ್ಯ ದ್ವಾರದ ಮೇಲಿನ ಜಾಗ ಯಾವಾಗಲೂ ಶುದ್ಧವಾಗಿರಬೇಕು ಅದನ್ನು ಸದಾ ಕ್ಲೀನ್ ಮಾಡುತ್ತಿರಬೇಕು ಆದರೆ ಅದು ಎಲ್ಲರಿಗೂ ಎಟಕುವಂತೆ ಇರುವುದಿಲ್ಲ. ಆದ್ದರಿಂದ ಅದನ್ನು ಹಾಗೆ ಬಿಡುತ್ತಾರೆ ಅದನ್ನು ಹಿರಿಯರ ಸ್ಥಾನ ಎಂದು ಹೇಳುತ್ತಾರೆ ಅಲ್ಲಿ ನಕಾರಾತ್ಮಕ ಶಕ್ತಿಗಳು ತುಂಬಿಕೊಂಡಾಗ ಹಿರಿಯರು ಇಲ್ಲದಂತಾಗಿ ಮನೆಯಲ್ಲಿ ಇಂತಹ ವಾತಾವರಣ ಏರ್ಪಡುತ್ತದೆ. ಆ ಜಾಗಕ್ಕೂ ಕೂಡ ನೀವು 51 ಬೇವಿನ ಬೀಜಗಳನ್ನು ಈ ಹುಣ್ಣಿಮೆ ದಿನದಿಂದು ಇಡುವುದರಿಂದ ಅಲ್ಲಿರುವ ನಕರಾತ್ಮಕ ಶಕ್ತಿ ಕೂಡ ಓಡಿ ಹೋಗಿ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ.