5396 ಗ್ರಾಮ ಪಂಚಾಯಿತಿ ಹೊಸ ಹುದ್ದೆಗಳು.

 

ಈ ದಿನ ನಾವು ಹೇಳುತ್ತಿರುವಂತಹ ಈ ಹುದ್ದೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಾಗಿದ್ದು. ಒಟ್ಟು 5396 ಹುದ್ದೆಗಳಿಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದರೆ ಈ ಒಂದು ಗ್ರಾಮ ಪಂಚಾಯಿತಿ ಹುದ್ದೆಯಲ್ಲಿ ಯಾವುದೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ ಹಾಗೂ ಈ ಹುದ್ದೆಯ ಹೆಸರುಗಳೇನು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಯಾವುದೆಲ್ಲ ದಾಖಲಾತಿಗಳನ್ನು ಹೊಂದಿರಬೇಕು.

ಒಟ್ಟಾರೆಯಾಗಿ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಹುದ್ದೆಗೆ ಪುರುಷರು ಮತ್ತು ಸ್ತ್ರೀಯರು ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು. ಈ ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ನೋಡುವುದಾದರೆ 24/02/2023 ಹಾಗೆಯೇ ಕೊನೆಯ ದಿನಾಂಕ ನೋಡುವುದಾದರೆ 27/03/2023.

ಹಾಗಾಗಿ ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ ಹಾಗೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಿಯಮಿತಿ ಸಡಿಲಿಕೆ ಇರುತ್ತದೆ. ಅದೇ ರೀತಿಯಾಗಿ ವಿಧವೆ ಅಭ್ಯರ್ಥಿಗೆ 10 ವರ್ಷ ಸಡಿಲಿಕೆ ಇರುತ್ತದೆ. ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ವಯಸ್ಸಿನ ಮಿತಿ ನೋಡುವುದಾದರೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 40 ವರ್ಷ ವಯಸ್ಸಿನ ಒಳಗಿನವರು ಈ ಒಂದು ಹುದ್ದೆಗೆ ಅರ್ಜಿಯನ್ನು ಹಾಕಬಹುದಾಗಿದೆ.

ವಯಸ್ಸಿನ ಮಿತಿ ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೆ ಗರಿಷ್ಠ 40 ವರ್ಷ ವಯಸ್ಸಿನ ಒಳಗಿನವರು. ಅದೇ ರೀತಿಯಾಗಿ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ 18 ವರ್ಷ ಹಾಗೆಯೇ ಗರಿಷ್ಠ 45 ವರ್ಷದವರೆಗೆ ಇರುತ್ತದೆ. ಒಂದು ಹುದ್ದೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಹೆಸರು ನೋಡುವುದಾದರೆ ಕಿರಿಯ ಸಹಾಯಕ ಹುದ್ದೆಯ 3099 ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು, ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ 2297 ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ.

ಶೈಕ್ಷಣಿಕ ವಿದ್ಯಾರ್ಹತೆ ಏನಾಗಿರಬೇಕು ಎಂದು ನೋಡುವುದಾದರೆ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನವಾಗಿರಬೇಕು. ಈ ಒಂದು ಹುದ್ದೆಗೆ ಅರ್ಜಿಯನ್ನು ಹಾಕುವುದಕ್ಕೆ ಸೆಕೆಂಡ್ ಪಿಯುಸಿಯಲ್ಲಿ ಉತ್ತೀರ್ಣರಾಗಿರುವವರು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಕಿರಿಯ ಸಹಾಯಕ ಹುದ್ದೆಗೆ ನೀವೇನಾದರೂ ಆಯ್ಕೆಯಾದರೆ ತಿಂಗಳ ವೇತನವು 19,900 ರಿಂದ 62,200 ರ ವರೆಗೆ ಇರುತ್ತದೆ. ಹಾಗೆಯೆ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಆಯ್ಕೆಯಾದರೆ ನಿಮಗೆ 21,700 ರಿಂದ 69,100 ರ ವರೆಗೆ ತಿಂಗಳ ವೇತನ ಬರುತ್ತದೆ.

ಈ ಒಂದು ಹುದ್ದೆಯ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ಮೊದಲನೇ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಯು ತ್ತದೆ ಹಾಗೆಯೇ ಎರಡನೇ ಹಂತದಲ್ಲಿ ಪ್ರಾಯೋಗಿಕ ಕೌಶಲ್ಯ ಪರೀಕ್ಷೆ ಹಾಗೆಯೆ ಮೂರನೇ ಹಂತದಲ್ಲಿ ಡಾಕ್ಯುಮೆಂಟ್ ಪರಿಶೀಲನೆ ನಡೆಸುವುದರ ಮೂಲಕ ನಿಮಗೆ ಈ ಒಂದು ಹುದ್ದೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಒಂದು ಹುದ್ದೆಗೆ ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment