Sunday, May 28, 2023
HomePublic Vishyaಸಂಜೆ ಸಮಯದಲ್ಲಿ ತೆಂಗಿನ ಮರದಿಂದ ಪುಟ್ಟ ಮಗು ಒಂದು ಅಳುವ ಶಬ್ದ ಕೇಳುತ್ತಿತ್ತು.! ಏನೆಂದು ನೋಡಲು...

ಸಂಜೆ ಸಮಯದಲ್ಲಿ ತೆಂಗಿನ ಮರದಿಂದ ಪುಟ್ಟ ಮಗು ಒಂದು ಅಳುವ ಶಬ್ದ ಕೇಳುತ್ತಿತ್ತು.! ಏನೆಂದು ನೋಡಲು ಹೋದವ ಬೆಚ್ಚಿಬಿದ್ದ.

 

ಪ್ರತಿ ಮನುಷ್ಯನ ಜೀವನದಲ್ಲೂ ವಿಚಿತ್ರ ಘಟನೆಯು ಒಮ್ಮೆಯಾದರೂ ಅನುಭವಕ್ಕೆ ಬರುತ್ತದೆ. ಅಥವಾ ಹತ್ತಿರದವರಿಂದ ಸನ್ನಿವೇಶವು ವಿವರಿಸಲ್ಪಡುತ್ತದೆ. ‘ಹೀಗೂ ನಡೆಯುತ್ತದೆಯೇ?’ ಎಂದು ಅಚ್ಚರಿ ಪಡುವಂತಹ ಘಟನೆಗಳು ನಡೆದ ಸಾಕಷ್ಟು ಉದಾಹರಣೆಗಳಿವೆ. ಈ ರೀತಿಯಾದ ಘಟನೆಯೊಂದು ತಮಿಳುನಾಡಿನ ನಂದಗುಡಿ ಎಂಬ ಗ್ರಾಮದಲ್ಲಿ ನಡೆದಿದೆ. ರಮೇಶ್ ಮತ್ತು ಸುನಿತಾ ಎಂಬ ದಂಪತಿಗಳ ಮನೆಯಲ್ಲಿ ಈ ಘಟನೆಯು ನಡೆದಿದೆ.

ಸೂರ್ಯ ಮುಳುಗಿ ಕತ್ತಲು ಆವರಿಸುತ್ತಿದ್ದಂತಲೇ ಮನೆಯ ಹತ್ತಿರದಲ್ಲೇ ಇದ್ದ ತೆಂಗಿನ ಮರವೊಂದರಿಂದ ಪುಟ್ಟ ಕಂದಮ್ಮ ಅಳುವ ಸದ್ದು ಕೇಳುತ್ತಿತ್ತಂತೆ. ಈ ರೀತಿಯ ಶಬ್ದವು ಕೇಳಲು ಕಾರಣವೇನು ತಿಳಿದಿದೆಯೇ? ಸಂಪೂರ್ಣ ಬರಹವನ್ನು ಓದುವುದರ ಮೂಲಕ ತಿಳಿದುಕೊಳ್ಳಿ. ರಮೇಶ್ ಮತ್ತು ಸುನಿತಾ ದಂಪತಿಗಳು ನಂದಗುಡಿ ಗ್ರಾಮದಲ್ಲಿ ಕೃಷಿಯನ್ನು ನಂಬಿ ತೋಟ ಗದ್ದೆಗಳನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು.

ಊರಿನಿಂದ ಸ್ವಲ್ಪ ದೂರದಲ್ಲಿ ತೋಟಕ್ಕೆ ಸಮೀಪದಲ್ಲಿ ಇವರ ಮನೆ ಇತ್ತು. ಮನೆಯ ಸುತ್ತಮುತ್ತಲು ತೆಂಗಿನ ಮರ, ಅಡಿಕೆ ಮರ ಹಾಗೂ ಮಾವಿನ ಮರಗಳನ್ನು ಬೆಳೆಸಿದ್ದರು. ಸುನೀತಾ ತನ್ನ ಮನೆಯ ಕೆಲಸವನ್ನು ಮುಗಿಸಿ ತೋಟದಿಂದ ಹಸಿರು ಸೊಪ್ಪನ್ನು ಕಡಿದು ತರಲು ಅವಸರದಿಂದ ಹೆಜ್ಜೆ ಇಡುವ ಸಂದರ್ಭದಲ್ಲಿ ಒಂದು ದಿನ ತೆಂಗಿನ ಮರದಿಂದ ಮಗುವೊಂದು ಅಳುವ ಶಬ್ದವು ಕೇಳಿತಂತೆ. ಶಬ್ದವನ್ನು ಆಲಿಸುತ್ತಾ ಹತ್ತಿರಕ್ಕೆ ನಡೆದು ನೋಡಿದಾಗ ಮಗುವಾಗಲಿ ಅಥವಾ ಮಗುವನ್ನು ಹೊತ್ತು ಹೋಗುತ್ತಿರುವ ಯಾರೇ ಆಗಲಿ ಕಾಣಲಿಲ್ಲವಂತೆ.

ತನಗೆ ಕೇಳಿರುವ ಶಬ್ದವು ತನ್ನ ಭ್ರಮೆ ಆಗಿರಬಹುದು ಎಂದುಕೊಂಡು ಸುಮ್ಮನಾದಳಂತೆ. ಆದರೆ ಮರುದಿನವೂ ಇದೇ ಶಬ್ದವನ್ನು ಕೇಳಿ ತನ್ನ ಗಂಡನಿಗೂ ತಿಳಿಸಿದಳಂತೆ. ರಮೇಶ್ ಕೂಡ ಅನುಮಾನದಿಂದ ಮರದ ಸಮೀಪ ಯಾವುದಾದರು ಮಗುವನ್ನು ತಂದು ಬಿಟ್ಟು ಹೋಗಿದ್ದಾರೆಯೇ ಎಂದು ಪರಿಶೀಲಿಸಿದರಂತೆ. ಆದರೆ ಯಾವುದೇ ಪಾಪು ಕಾಣಿಸಲಿಲ್ಲವಂತೆ. ಪಕ್ಷಿ ಏನಾದರೂ ಈ ರೀತಿಯಾಗಿ ಕೂಗುತ್ತಿದೆಯೇ ಎಂದು ಕೆಳಗೆ ನಿಂತು ತೆಂಗಿನ ಮರದ ಹೆಣಕೆಯನ್ನೆಲ್ಲಾ ಸರಿಯಾಗಿ ನೋಡಿದರಂತೆ. ಆದರೆ ಶಬ್ದವು ಯಾವುದರಿಂದ ಬರುತ್ತಿದೆ ಎಂಬ ಸುಳಿವು ಸಿಗಲಿಲ್ಲವಂತೆ.

ಅತ್ತಿತ್ತ ಓಡಾಡುವ ಊರಿನ ಎರಡು ಮಂದಿಗೂ ಮಗು ಅಳುತ್ತಿರುವ ಶಬ್ದವು ರಮೇಶ್ ಅವರ ಮನೆಯ ತೆಂಗಿನ ಮರದ ಬದಿಯಿಂದ ಕೇಳಿಸಿತಂತೆ. ಮೊದಲ ಎರಡು ದಿನ ಕೇಳಿಸಿದಾಗ ರಮೇಶ್ ಹಾಗೂ ಸುನಿತಾ ಬೆಕ್ಕಿನ ಕೂಗಿರಬಹುದು ಎಂದುಕೊಂಡು ಸುಮ್ಮನಾಗಿದ್ದರಂತೆ. ಮೂರನೆಯ ದಿನವೂ ಮಗುವಿನ ಅಳು ಕೇಳಿಸಿದಾಗ ಮಾಟ ಮರೂಡಿ ಇರಬಹುದು ಎಂದುಕೊಂಡು ಮರಕ್ಕೆ ಹೋಮವನ್ನು ಮಾಡಿಸಿದರಂತೆ. ಆದರೂ ಕಾಟವೆಂಬಂತೆ ಸುಮಾರು ಐದು ದಿನಗಳ ಕಾಲ ಈ ಶಬ್ದವು ಕೇಳಿಬಂದಿದ್ದು ರಮೇಶ್ ಏನಿದೆ ಎಂದು ನೋಡಲೇಬೇಕೆಂದು ಬಣ್ಣ ತೊಟ್ಟು ಶಬ್ದ ಮತ್ತೊಮ್ಮೆ ಕೇಳುವವರೆಗೂ ಮರದ ಸಮೀಪವೆ ನಿಂತು ಕಾದರಂತೆ.

ಮಗುವಿನ ಅಳುವು ಕೇಳಿಸಿದ ನಂತರ ರಮೇಶ್ ಮರವನ್ನು ಹತ್ತಿ ರಹಸ್ಯವನ್ನು ತಿಳಿದು ಕೊಳ್ಳಲೇಬೇಕೆಂದು ನಿರ್ಧರಿಸಿದರಂತೆ. ನಂತರ ಮರವನ್ನು ಏರಿದಾಗ ರಮೇಶ್ ಅವರಿಗೆ ಅಚ್ಚರಿಯೊಂದು ಕಾದಿತ್ತು. ಕಾಯಿ ಕೀಳಲು ಬಂದಿರುವ ವ್ಯಕ್ತಿಯ ಮೊಬೈಲ್ ಮರೆತ ಮೇಲೆ ಇತ್ತು. ಆತನ ರಿಂಗ್ಟೋನ್ ಪುಟ್ಟ ಕಂದಮ್ಮನ ಅಳುವಿನ ಶಬ್ದವಾಗಿದ್ದು ಯಾರಾದರೂ ಕರೆ ಮಾಡಿದಾಗ ಮಾತ್ರ ಕೂಗುತ್ತಿತ್ತು. ಬೇರೆ ಯಾವುದೇ ಕಾರಣಕ್ಕೂ ಮೊಬೈಲ್ ಅನ್ನು ಬಳಸದೆ ಇಟ್ಟಿದ್ದಕ್ಕಾಗಿ ಮೊಬೈಲ್ ಚಾರ್ಜ್ ಕೂಡ ಐದು ದಿನಗಳ ಕಾಲ ಕಳೆಯದೆ ಉಳಿದಿತ್ತು. ಇವೆಲ್ಲವೂ ತಿಳಿದ ಬಳಿಕ ರಮೇಶ್ ಮತ್ತು ಸುನಿತಾ ದಂಪತಿಗಳ ಭಯ ಬೀತ ಮನಸ್ಸು ನಿರಾಳವಾಯಿತಂತೆ.