ಮಹಿಳೆಯರಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಅದು ಅತಿಯಾದರೆ ಕೆಲವೊಂದಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಇದರ ಬಗ್ಗೆ ಬಹಳಷ್ಟು ಎಚ್ಚರಿಕೆಯನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಇಂತಿಷ್ಟು ಸಮಯದವರೆಗೆ ಅಂದರೆ ತಮ್ಮ ಮುಟ್ಟಿನ ಅವಧಿಯ ಒಂದು ವಾರದ ಮುಂಚಿತವಾಗಿ ಈ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ.
ಆದರೆ ಸದಾ ಕಾಲ ಬಿಳಿ ಮುಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ಅವರಲ್ಲಿ ಯಾವುದೋ ಒಂದು ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದೇ ಅರ್ಥ. ಆದ್ದರಿಂದ ಆ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣಗಳು ಏನು ಎಂದು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ಹಾಗಾದರೆ ಈ ದಿನ ಮಹಿಳೆಯರಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಬಿಳಿ ಮುಟ್ಟಿನ ಸಮಸ್ಯೆಗೆ ನಾವು ಹೇಗೆ ಕೆಲವು ಮನೆಮದ್ದುಗಳನ್ನು ಮಾಡಿ ಉಪಯೋಗ ಮಾಡುವುದರಿಂದ ಹಾಗೂ ಯಾವ ಕೆಲವು ಗಿಡಮೂಲಿಕೆಗಳನ್ನು ಹೇಗೆ ಉಪಯೋಗಿಸುವುದರ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
* ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ 2 ಚಮಚ ಕೊತ್ತಂಬರಿ ಬೀಜ ಹಾಕಿಟ್ಟು ಬೆಳಗ್ಗೆ ಸೋಸಿಕೊಂಡು ಆ ನೀರನ್ನು ಕುಡಿಯಿರಿ.
* ದಾಳಿಂಬೆ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದಾಳಿಂಬೆ ಜ್ಯೂಸ್ ಜಾಸ್ತಿ ಪ್ರಮಾಣದಲ್ಲಿ ಕುಡಿಯಿರಿ.
* ತುಳಸಿ ರಸವನ್ನು ತೆಗೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಂಡು ದಿನದಲ್ಲಿ ಎರಡು ಬಾರಿ ತೆಗೆದುಕೊಳ್ಳಿ.
* ಅನ್ನ ಬಸಿಯುವಾಗ ನಮಗೆ ತಿಳಿ ಸಿಗುತ್ತದೆ. ಅದನ್ನು ಬಿಳಿ ಮುಟ್ಟಿನ ಸಮಸ್ಯೆ ಇರುವವರು ಜಾಸ್ತಿ ಪ್ರಮಾಣದಲ್ಲಿ ಕುಡಿಯುತ್ತಾ ಬನ್ನಿ.
* ಪೇರಳೆ ಎಲೆಯನ್ನು ಚೆನ್ನಾಗಿ ಕುದಿಸಿಕೊಂಡು ಸೋಸಿಕೊಂಡು ತಣ್ಣ ಗಾದ ಮೇಲೆ ದಿನಕ್ಕೆ ಎರಡು ಬಾರಿ ಕುಡಿಯಿರಿ.
* ದಿನನಿತ್ಯ ಊಟದ ನಂತರ ಎರಡು ಬಾಳೆ ಹಣ್ಣುಗಳನ್ನು ಸೇವಿಸುವುದ ರಿಂದ ಕ್ರಮೇಣ ಅತಿಯಾದ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆ ಆಗುತ್ತದೆ. ಜೊತೆಗೆ ಇದು ನಾವು ತಿಂದಂತಹ ಆಹಾರವನ್ನು ಸರಿಯಾಗಿ ಜೀರ್ಣ ಮಾಡುತ್ತದೆ. ಇದರಿಂದ ಮಲಬದ್ಧತೆಯ ಸಮಸ್ಯೆಯೂ ನಿವಾರಣೆ ಯಾಗುತ್ತದೆ.
* ಮೆಂತ್ಯ ಕಾಳನ್ನು ಚೆನ್ನಾಗಿ ಕುದಿಸಿಕೊಂಡು ಆ ನೀರನ್ನು ಸೋಸಿ ಕೊಂಡು ಕುಡಿಯುವುದರಿಂದ ಬಿಳಿ ಮುಟ್ಟಿನ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಮೆಂತ್ಯ ಕಾಳು ಡಯಾಬಿಟೀಸ್ ಸಮಸ್ಯೆ ಇದ್ದವರಿಗೆ ಬಹಳ ಉತ್ತಮವಾದಂತಹ ಪದಾರ್ಥ ಎಂದು ಹೇಳಬಹುದು. ಇದರಿಂದ ಆ ಸಮಸ್ಯೆಯೂ ಸಹ ದೂರವಾಗುತ್ತದೆ.
* ನೆಲ್ಲಿಕಾಯಿಯಲ್ಲಿ ಇರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ಆದಷ್ಟು ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಿ.
* 3 ರಿಂದ 4 ಬೆಂಡೆಕಾಯಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಇದರಿಂದ ಬಿಳಿ ಮುಟ್ಟು ಸಮಸ್ಯೆ ದೂರವಾಗುತ್ತದೆ.
* ಬಿಳಿ ಮುಟ್ಟಿನ ಸಮಸ್ಯೆಗೆ ಮೊಸರು ಅತ್ಯುತ್ತಮ ಪರಿಹಾರ. ಆದ್ದರಿಂದ ದಿನ ನಿತ್ಯ ನಿಮ್ಮ ಆಹಾರದಲ್ಲಿ ಮೊಸರನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಹೆಚ್ಚಿನ ಜನ ಮೊಸರು ನಮ್ಮ ದೇಹಕ್ಕೆ ಉಷ್ಣತೆಯನ್ನು ಹೆಚ್ಚಿಸುವಂತಹ ಆಹಾರವೆಂದು ಹೇಳುತ್ತಾರೆ. ಆದರೆ ಅದು ತಪ್ಪು ನಮ್ಮ ಆಹಾರ ಪದ್ಧತಿಯಲ್ಲಿ ದಿನಕ್ಕೆ ಒಮ್ಮೆಯಾದರೂ ಮೊಸರನ್ನು ಅಥವಾ ಅದನ್ನು ಮಜ್ಜಿಗೆಯನ್ನು ಮಾಡಿ ಸೇವನೆ ಮಾಡುವುದು ತುಂಬಾ ಒಳ್ಳೆಯದು ಎಂದು ಆಯುರ್ವೇದ ಹಾಗೂ ವೈದ್ಯರು ತಿಳಿಸುತ್ತಾರೆ.