ದೇವರ ಮುಂದೆ ದೀಪ ಹಚ್ಚುವುದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಮಾಡುವುದರ ಒಂದು ಮುಖ್ಯ ಭಾಗ. ದೀಪ ಹಚ್ಚುವುದಕ್ಕೂ ಕೂಡ ಒಂದು ಪದ್ಧತಿ ಇದೆ. ದೇವರ ಮುಂದೆ ಹಚ್ಚುವ ದೀಪಗಳ ಸಂಖ್ಯೆಯಿಂದ ಹಿಡಿದು ಅವುಗಳ ಗಾತ್ರ, ದೇವರ ದೀಪಕ್ಕೆ ಹಾಕುವ ಬತ್ತಿ, ಬತ್ತಿಯ ಸಂಖ್ಯೆ, ಅದರ ರೂಪ, ಬಳಸುವ ಎಣ್ಣೆ, ದೀಪ ಹಚ್ಚುವ ಸಮಯ ಹಾಗೂ ದೀಪಗಳನ್ನು ಪೂಜೆ ಮಾಡುವ ವಿಧಾನ ಮತ್ತು ದೀಪಗಳಲ್ಲಿರುವ ವಿಧಗಳನ್ನು ಸೇರಿ ಪ್ರತಿಯೊಂದುಕ್ಕೂ ಕೂಡ ಒಂದು ಅರ್ಥವನ್ನು ಹಾಗೂ ಅದರದ್ದೇ ಆದ ಕಾರಣವನ್ನು ಶಾಸ್ತ್ರದಲ್ಲಿ ತಿಳಿಸಿದ್ದಾರೆ.
ನಮ್ಮ ಕುಟುಂಬದಲ್ಲೂ ಕೂಡ ಹಿರಿಯರು ಪಾಲನೆ ಮಾಡಿಕೊಂಡು ಬಂದಿರುವ ಪದ್ಧತಿಯ ಪ್ರಕಾರ ನಾವು ದೇವರ ಮನೆಗಳಲ್ಲಿ ದೀಪವನ್ನು ಹಚ್ಚುತ್ತೇವೆ. ಆದರೆ ಇದುವರೆಗೆ ಯಾವ ರೀತಿ ದೀಪ ಹಚ್ಚಿದರೆ ಮತ್ತು ಎಷ್ಟು ಬತ್ತಿ ಇರುವ ದೀಪವನ್ನು ಹಚ್ಚಿದರೆ ಏನು ಫಲ ಸಿಗುತ್ತದೆ ಎನ್ನುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಪೂಜೆ ಮಾಡುವ ಪ್ರತಿಯೊಬ್ಬರೂ ಕೂಡ ಈ ವಿಷಯದ ಬಗ್ಗೆ ತಿಳಿದುಕೊಂಡಿರಲೇಬೇಕು, ಅದಕ್ಕಾಗಿ ಈ ಅಂಕಣದಲ್ಲಿ ಅದರ ಬಗ್ಗೆ ವಿವರಣೆಯನ್ನು ಕೊಟ್ಟಿದ್ದೇವೆ ತಪ್ಪದೆ ಕೊನೆವರೆಗೂ ಓದಿ.
ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ನಿಮ್ಮ ಮನೆಯೇ ಸ್ವರ್ಗವಾಗುತ್ತದೆ.!
● ದೀಪದ ಬತ್ತಿ ತುಂಬಾ ಕೊಳೆಯಿಂದ ಕೂಡಿದ್ದರೆ ಮನೆಯವರಿಗೆ ಜ್ಞಾಪಕ ಶಕ್ತಿ ಕಡಿಮೆ ಆಗುತ್ತದೆ, ಇದರಿಂದ ಅವರು ವಿಪರೀತವಾಗಿ ಯೋಚನೆ ಮಾಡಿ ಅನಾರೋಗ್ಯಕ್ಕೀಡಾಗುತ್ತಾರೆ.
● ದೀಪದ ಬತ್ತಿಯು ಕಪ್ಪಾಗಿದ್ದರೆ ಕಷ್ಟಗಳು ಹೆಚ್ಚಾಗುತ್ತವೆ
● ದೀಪದ ಬತ್ತಿ ಎಷ್ಟು ಶುದ್ಧವಾಗಿರುತ್ತದೆ ಹಾಗೂ ಸ್ವಚ್ಛವಾಗಿರುತ್ತದೆ ಮತ್ತು ಬೆಳ್ಳಗಿರುತ್ತದೆ ಅಷ್ಟು ನಮ್ಮ ಜೀವನದಲ್ಲೂ ಎಲ್ಲಾ ಕಾರ್ಯಗಳು ಬಹಳ ಸರಳವಾಗಿ ನಡೆಯುತ್ತವೆ.
● ದೀಪದ ಬತ್ತಿ ಬಹಳ ಸಣ್ಣದಾಗಿದ್ದರೆ ಮನೆಯಲ್ಲಿ ವಿನಾಕಾರಣ ಜಗಳ ಉಂಟಾಗುತ್ತದೆ ಮತ್ತು ಮನೆಯಲ್ಲಿರುವ ಎಲ್ಲರೂ ಸದಾ ಕೋಪದಿಂದ ವರ್ತಿಸುತ್ತಾರೆ
● ದೀಪದ ಬತ್ತಿಯಲ್ಲಿ ಕೃತಕ ಬಣ್ಣಗಳು ಹೆಚ್ಚಾಗಿದ್ದರೆ ಅಗೋಚರ ರೋಗಗಳು ಕಾಡುತ್ತವೆ ಮತ್ತು ಚರ್ಮರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ
● ದೀಪದ ಬಗ್ಗೆ ಎಷ್ಟು ಗಟ್ಟಿಯಾಗಿರುತ್ತದೆ ಅಷ್ಟು ಒಳ್ಳೆಯದು, ದೀಪದ ಬತ್ತಿ ಬಹಳ ಗಟ್ಟಿಯಾಗಿದ್ದರೆ ಸಂಸಾರದಲ್ಲಿ ಒಗ್ಗಟ್ಟು ಕೂಡ ಅಷ್ಟೇ ಗಟ್ಟಿಯಾಗಿರುತ್ತದೆ.
● ದೀಪದ ಬತ್ತಿ ಎರಡಕ್ಕಿಂತ ಜಾಸ್ತಿ ಇದ್ದರೆ ದೇವರ ಅನುಗ್ರಹ, ಗುರುಗಳ ಅನುಗ್ರಹ ಸಿಗುತ್ತದೆ. ಕಷ್ಟಕಾಲದಲ್ಲಿ ಆಪ್ತರ ಸಹಾಯ ದೊರೆತು ಎಲ್ಲಾ ಕಾರ್ಯಗಳು ಕೂಡ ನಿರ್ವಿಘ್ನವಾಗಿ ಸಾಗುತ್ತವೆ.
● ಎರಡು ಬತ್ತಿಯಿಂದ ದೀಪ ಹಚ್ಚಿ ಪೂಜಿಸಿದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವೂ ನೆಲೆಸುತ್ತದೆ.
● ನಾಲ್ಕು ಬತ್ತಿ ದೀಪವನ್ನು ಹಚ್ಚಿದರೆ ಮನೆಯಲ್ಲಿನ ಎಲ್ಲರ ಆರೋಗ್ಯ ವೃದ್ಧಿಯಾಗುತ್ತದೆ, ಎಲ್ಲರೂ ಕ್ಷೇಮದಿಂದ ಇರುತ್ತಾರೆ. ವ್ಯಾಪಾರದ ವ್ಯವಹಾರಗಳ ಅಭಿವೃದ್ಧಿ ಕೂಡ ಚೆನ್ನಾಗಿ ಆಗುತ್ತದೆ ಹಾಗೂ ಮಕ್ಕಳು ವಿದ್ಯಾಭ್ಯಾಸದಲ್ಲಿ ಚುರುಕಾಗುತ್ತಾರೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
● ಆರು ಬತ್ತಿಯ ದೀಪ ಹಚ್ಚಿದರೆ ಮನೆಯಲ್ಲಿ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ, ಮನೆಯ ವಾತಾವರಣವೂ ಸಕರಾತ್ಮಕವಾಗಿ ಕೂಡಿರುತ್ತದೆ.
● ಎಂಟು ಬತ್ತಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆ ನಿವಾರಣೆ ಆಗುತ್ತದೆ, ಅಪಮೃತ್ಯು, ಅಕಾಲಿಕ ಮರಣದ ಭಯವಿದ್ದರೆ ದೂರವಾಗುತ್ತದೆ. ಈ ರೀತಿಯ ದೋಷಗಳಿದ್ದರೆ ಅವುಗಳು ಕೂಡ ಪರಿಹಾರ ಆಗುತ್ತವೆ
● ಹತ್ತು ಬತ್ತಿಯಿಂದ ದೀಪ ಹಚ್ಚಿದರೆ ಜಾತಕದ ದೋಷಗಳು ನಿವಾರಣೆ ಆಗುತ್ತದೆ. ಮನೆ ದೇವರ ಗುರುಗಳ ಆಶೀರ್ವಾದ ಸಿಗುತ್ತದೆ. ಎಲ್ಲಾ ಕಷ್ಟಗಳು ಕೂಡ ಸುಲಭವಾಗಿ ಪರಿಹಾರ ಆಗುತ್ತವೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಮಕ್ಕಳು ಪೋಷಕರ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ, ಸನ್ಮಾರ್ಗದಲ್ಲಿ ನಡೆದು ಕೀರ್ತಿಯನ್ನು ತರುತ್ತಾರೆ.