ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಹೋಗುವಂತಹ ದಾರಿಯ ಸಮಸ್ಯೆಗಳಿಗೆ ಸಾಕಷ್ಟು ಜಗಳ ಆಗಿರುವುದನ್ನು ನಾವು ಕೇಳಿರಬಹುದು ಹಾಗೂ ಕೆಲವೊಮ್ಮೆ ನೋಡಿರಬಹುದು. ಯಾವುದೇ ಜಮೀನಾಗಲಿ ಅಥವಾ ಹೊಲ ಆಗಲಿ ಆ ರಸ್ತೆ ಅಥವಾ ದಾರಿ ಇಲ್ಲದೆ ಜಮೀನು ಇರುವುದಿಲ್ಲ.
ನಮ್ಮ ಭಾರತ ದೇಶದಲ್ಲಿರುವಂತಹ ಪ್ರತಿಯೊಂದು ಜಮೀನುಗಳಿಗೂ ತನ್ನದೇ ಆದ ಪ್ರತ್ಯೇಕವಾದ ದಾರಿಯ ವ್ಯವಸ್ಥೆ ಇದ್ದೇ ಇರುತ್ತದೆ. ಆದರೆ ಇದು ನಮಗೆ ಸಮರ್ಪಕವಾಗಿ ಗೊತ್ತಿ ಲ್ಲದೆ ಇರುವುದರ ಕಾರಣದಿಂದ ದಿನೇ ದಿನೇ ಜಮೀನಿನ ಮಾಲೀಕರ ಜೊತೆ ಹಾಗೂ ರಸ್ತೆ ಇರುವ ಜಮೀನಿನ ಮಾಲೀಕರ ಜೊತೆ ಹಾಗೂ ಅಕ್ಕ ಪಕ್ಕದ ಜನರೊಂದಿಗೆ ಜಗಳ ಆಡುವುದು ಸಹ ಉಂಟು.
ಆದರೆ ನಮ್ಮ ಜಮೀನಿನ ಮ್ಯಾಪ್ ನ ಪ್ರಕಾರ ಅಂದರೆ ಕಂದಾಯ ಇಲಾಖೆಯ ರೆವೆನ್ಯೂ ಡಿಪಾರ್ಟ್ಮೆಂಟ್ ಭೂಮಾಪನ ಮತ್ತು ಭೂ ದಾಖಲೆಗಳ ಮ್ಯಾಪ್ ನ ಪ್ರಕಾರ ನಮ್ಮ ಜಮೀನುಗಳಿಗೆ ರಸ್ತೆ ಅಥವಾ ಕಾಲುದಾರಿ ಎಲ್ಲಿ ಇದೆ ಎಂದು ತಿಳಿದುಕೊಳ್ಳಲು ನಾವು ಹೆಚ್ಚು ಶ್ರಮ ಪಡುವ ಅವಶ್ಯಕತೆ ಇಲ್ಲ.
ಬದಲಿಗೆ ಅದನ್ನು ನಾವೇ ನಮ್ಮ ಮನೆಯಲ್ಲಿ ಯೇ ಕುಳಿತು ನಮ್ಮ ಮೊಬೈಲ್ ಮೂಲಕ ನೋಡಬಹುದು. ದಿನೇ ದಿನೇ ತಂತ್ರಜ್ಞಾನ ಬೆಳೆದಂತೆ ಇಲಾಖೆಗಳು ಕೂಡ ಸಾಕಷ್ಟು ದಾಖಲೆಗಳು ಮತ್ತು ವಿವರಗಳನ್ನು ಡಿಜಿಟಲ್ ರೂಪದಲ್ಲಿ ಎಲ್ಲಾ ಸಾರ್ವಜನಿಕರಿಗೆ ಒದಗಿಸಿಕೊಡುತ್ತಾ ಇದೆ.
ಆದರೆ ಸಾಕಷ್ಟು ಜನರು ತಮ್ಮ ಜಮೀನುಗಳಿಗೆ ಯಾವ ಬದಿಯಿಂದ ರಸ್ತೆ ದಾರಿ ಇದೆ ಅಂತ ತಿಳಿದುಕೊಳ್ಳದೆ ಸುಮ್ಮನೆ ದಿನನಿತ್ಯ ಅವರಿವರ ಜೊತೆ ಜಗಳ ಆಡುವಂತಹ ಸನ್ನಿವೇಶವನ್ನು ನಾವು ಕಾಣಬಹುದು. ಇತ್ತೀಚಿನ ದಿನದಲ್ಲಿ ಪ್ರತಿಯೊಂದು ಆಸ್ತಿಗಳ ಬೆಲೆಯೂ ಕೂಡ ಹೆಚ್ಚಾಗು ತ್ತಿದ್ದು ಅದರ ಆಸೆ ಕೂಡ ಪ್ರತಿಯೊಬ್ಬರಲ್ಲಿಯೂ ಕೂಡ ಹೆಚ್ಚಾಗುತ್ತಲಿದೆ ಎಂದೇ ಹೇಳಬಹುದು.
ಹೌದು ರಸ್ತೆ ಬದಿಯಲ್ಲಿ ಇರುವಂತಹ ಜಮೀನು ಗಳವರು ತಮ್ಮ ಹಿಂದಿನ ಜಮೀನುಗಳವರಿಗೂ ಕೂಡ ಓಡಾಡುವುದಕ್ಕೆ ಅವಕಾಶ ಇರುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಮೊದಲೇ ಹೇಳಿದಂತೆ ಪ್ರತಿಯೊಂದು ಆಸ್ತಿಯ ಬೆಲೆ ಹೆಚ್ಚಾಗುತ್ತಿದ್ದು ಅದರಲ್ಲಿ ಬೇರೆ ಯಾರು ಬರಬಾರದು ಇದು ನನಗೆ ಸೇರಿದ್ದು ಎನ್ನುವಂತಹ ಕೆಟ್ಟ ಆಲೋಚನೆಯನ್ನು ಇಟ್ಟುಕೊಂಡು.
ಅವರು ತಮ್ಮ ಹಿಂದಿನ ಜಮೀನಿನವರಿಗೆ ಯಾವುದೇ ರೀತಿಯಲ್ಲಿಯೂ ಕೂಡ ಅನುಕೂಲವಾಗುವಂತೆ ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಓಡಾಡುವುದಕ್ಕೂ ಕೂಡ ಅವರಿಗೆ ಅವಕಾಶ ಕೊಡುವುದಿಲ್ಲ. ಇದು ನನ್ನ ಜಾಗ ನಿನಗೆ ಇಲ್ಲಿ ಓಡಾಡುವುದಕ್ಕೆ ಹಕ್ಕು ಇಲ್ಲ ಎಂದು ಹೇಳುತ್ತಾರೆ.
ಆದರೆ ಕೆಲವೊಂದಷ್ಟು ಜನರು ಈ ರೀತಿಯಾಗಿ ಜೋರು ಮಾಡಿದರೆ ಅವರ ಬಾಯಿಗೆ ಹೆದರಿಕೊಂಡು ಸುಮ್ಮನಾಗುತ್ತಾರೆ. ಆದರೆ ಇನ್ನು ಮುಂದೆ ಈ ರೀತಿಯ ಪರಿಸ್ಥಿತಿ ಇರುವುದಿಲ್ಲ. ಬದಲಿಗೆ ಎಲ್ಲ ಜಮೀನಿನ ವರು ಕೂಡ ತಮ್ಮ ಜಮೀನಿಗೆ ಹೋಗುವಂತಹ ದಾರಿ ಎಷ್ಟಿದೆ ಹಾಗೂ ಯಾವ ದಾರಿಯಲ್ಲಿ ನೀವು ನಿಮ್ಮ ಜಮೀನಿಗೆ ಹೋಗಬೇಕು ಎನ್ನುವುದನ್ನು ನೀವೇ ನಿಮ್ಮ ಮೊಬೈಲ್ ಮೂಲಕ ನೋಡಿಕೊಳ್ಳಬಹುದು.
ಹೌದು ಈ ರೀತಿ ನೋಡಿಕೊಳ್ಳುವುದರಿಂದ ನೀವು ಬೇರೆಯವರ ಜೊತೆ ವಿನಾ ಕಾರಣ ಜಗಳ ಆಡುವಂತಹ ಪರಿಸ್ಥಿತಿ ಬರುವುದಿಲ್ಲ. ಭೂ ಮಾಪನ ಇಲಾಖೆಯು ಈ ಒಂದು ಮೂಲ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದ್ದು ಅಲ್ಲಿ ನೀವು ಚೆಕ್ ಮಾಡುವುದರ ಮೂಲಕ ಅಂದರೆ ಅಲ್ಲಿ ಕೇಳುವಂತಹ ನಿಮ್ಮ ಜಮೀನಿನ ಸಂಖ್ಯೆ ಹಾಗೂ ಕೆಲವೊಂದಷ್ಟು ದಾಖಲೆಗಳನ್ನು ಹಾಕುವುದರ ಮೂಲಕ ನಿಮ್ಮ ಜಮೀನಿಗೆ ಯಾವ ಮುಖಾಂತರ ರಸ್ತೆ ಇದೆ ಎನ್ನುವುದನ್ನು ಅಲ್ಲೇ ನೀವು ತಿಳಿದುಕೊಳ್ಳ ಬಹುದು.