ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಪ್ರತಿಯೊಬ್ಬರೂ ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಬಹುದು. ಹೌದು ಕಾಂಗ್ರೆಸ್ ಪಕ್ಷ ಅಧಿಕಾರ ಕ್ಕೆ ಬಂದ ನಂತರ ನಾವು ಯಾವ ಐದು ಗ್ಯಾರಂಟಿಯನ್ನು ಕೊಡುತ್ತೇವೆ ಎಂದು ಹೇಳಿದ್ದರೋ ಅದರಲ್ಲಿ ಈಗ ನಾಲ್ಕು ಗ್ಯಾರಂಟಿಗಳು ಜಾರಿಗೆ ಬರುತ್ತಿದ್ದು ಅದರಲ್ಲೂ ಶಕ್ತಿ ಯೋಜನೆಯಡಿ ಅಂದರೆ ಕರ್ನಾಟಕದಾದ್ಯಂತ ಉಚಿತವಾಗಿ ಮಹಿಳೆಯರು ಪ್ರಯಾಣಿಸುವಂತಹ ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು.
ಅದರಂತೆ 5 ಕೆ.ಜಿ ಅಕ್ಕಿಯ ಹಣವು ಕೂಡ ಪ್ರತಿಯೊಬ್ಬರ ಖಾತೆಗೆ ಜಮಾ ಆಗುತ್ತಿದೆ ಇದರ ಜೊತೆಗೆ. 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದಂತಹ ಗ್ಯಾರಂಟಿ ಯು ಕೂಡ ಈಗ ಜಾರಿಗೆ ಬಂದಿದ್ದು. ಇದೇ ಆಗಸ್ಟ್ ತಿಂಗಳಿನಿಂದ 200 ಯೂನಿಟ್ ಒಳಗಡೆ ಉಪಯೋಗಿಸಿದಂತಹ ಪ್ರತಿಯೊಬ್ಬರಿಗೂ ಕೂಡ ಹಣ ಕಟ್ಟುವಂತಹ ಅವಶ್ಯಕತೆ ಇರುವುದಿಲ್ಲ.
ದೇವರ ಪೂಜೆ ಮಾಡುವಾಗ ಅಪ್ಪಿ ತಪ್ಪಿಯು ಈ ತಪ್ಪು ಮಾಡಬೇಡಿ.!
ಹೌದು ಉಚಿತವಾಗಿ ಅವರು ವಿದ್ಯುತ್ ಪಡೆಯಬಹುದಾಗಿದೆ ಹಾಗೂ ಇನ್ನು ನಾಲ್ಕನೆಯದಾಗಿ ಮನೆಯ ಮುಖ್ಯ ಸದಸ್ಯೆ ಅಂದರೆ ಯಜಮಾನಿಗೆ ಪ್ರತಿ ತಿಂಗಳು 2000 ಹಣ ಸಿಗುವಂತಹ ಗ್ಯಾರಂಟಿಯನ್ನು ಸಹ ಕಾಂಗ್ರೆಸ್ ಪಕ್ಷ ಹೇಳಿತ್ತು. ಅದೇ ರೀತಿಯಾಗಿ ಈ ಒಂದು ಯೋಜನೆಗೆ ಅರ್ಜಿ ಆಹ್ವಾನ ಈಗಾಗಲೇ ಪ್ರಾರಂಭವಾಗಿದ್ದು ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಯನ್ನು ಸಲ್ಲಿಕೆ ಮಾಡಿದ್ದಾರೆ.
ಹಾಗಾದರೆ ಈ ಒಂದು ಅರ್ಜಿ ಸಲ್ಲಿಕೆ ಎಲ್ಲಿ ನಡೆಯುತ್ತದೆ ಎಂದು ನೋಡುವುದಾದರೆ ಬೆಂಗಳೂರು 1, ಗ್ರಾಮ 1, ಕರ್ನಾಟಕ 1, ಸೇವಾ ಸಿಂಧು, ಈ ಕೇಂದ್ರಗಳಲ್ಲಿ ಹೋಗಿ ನೀವು ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಹಾಕಿರುವವರಿಗೆ ಅವರು ಯಾವುದೇ ರೀತಿಯ ಅರ್ಜಿ ನಮೂನೆಯನ್ನು ಕೊಟ್ಟಿಲ್ಲ ಎಂದರೆ ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿ ಆಗಿದೆಯಾ ಅಥವಾ ಆಗಿಲ್ಲವಾ ಎನ್ನುವಂತಹ ಅನುಮಾನ ಬರುವುದು ಪ್ರತಿಯೊಬ್ಬ ರಿಗೂ ಕೂಡ ಸಹಜ.
ಹಾಗಾದರೆ ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿದ್ದರೆ ಅದನ್ನು ಹೇಗೆ ನೀವು ನಿಮ್ಮ ಮೊಬೈಲ್ ನಲ್ಲಿಯೇ ಕಂಡು ಹಿಡಿಯು ವುದು ಅದನ್ನು ಹೇಗೆ ನೋಡುವುದು ಹಾಗೂ ಅದನ್ನು ನೋಡುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
* ನಿಮ್ಮ ಅರ್ಜಿ ಸ್ಥಿತಿ ಯಾವ ರೀತಿ ಇದೆ ಎಂದು ನೋಡುವುದಕ್ಕೆ ಕೇವಲ ನಿಮಗೆ ನಿಮ್ಮ ಒಂದು ರೇಷನ್ ಕಾರ್ಡ್ ನಂಬರ್ ಇದ್ದರೆ ಸಾಕು. ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿ ಆಗಿದೆಯ ಅಥವಾ ಆಗಿಲ್ಲವ ಎನ್ನುವ ಮಾಹಿತಿ ತಿಳಿಯುತ್ತದೆ.
* ಹಾಗೂ ಈ ಒಂದು ಅರ್ಜಿಯನ್ನು ಇಂತಿಷ್ಟೇ ಸಮಯದೊಳಗೆ ಸಲ್ಲಿಸ ಬೇಕು ಎನ್ನುವ ನಿಯಮ ಏನು ಇಲ್ಲ ಬದಲಿಗೆ ಯಾವಾಗ ಬೇಕಾದರೂ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
* ನೀವು ಯಾವಾಗ ಈ ಒಂದು ಅರ್ಜಿಯನ್ನು ಸಲ್ಲಿಸುತ್ತೀರಾ ಅದಾದ ಒಂದು ತಿಂಗಳಿಗೆ ನಿಮ್ಮ ಖಾತೆಗೆ 2000 ರೂಪಾಯಿ ಹಣ ಬಂದು ಸೇರುತ್ತದೆ.
* ಹಾಗೇನಾದರೂ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಿದ್ದರೆ ಅಲ್ಲಿ ಸರಿಯಾದ ಮಾಹಿತಿ ತೋರಿಸುತ್ತಿಲ್ಲ ಎಂದರೆ ಅದಕ್ಕೆ ಕಾರಣ ನೀವೇನಾ ದರೂ ಸದ್ಯದಲ್ಲಿ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿದ್ದರೆ ಆ ರೀತಿ ಬರುತ್ತದೆ ಆದ್ದರಿಂದ ಸ್ವಲ್ಪ ಸಮಯ ಕಾದು ನೋಡಿ ಆನಂತರ ನಿಮ್ಮ ಅರ್ಜಿ ಸರಿಯಾದ ಕ್ರಮದಲ್ಲಿ ಇರುತ್ತದೆ.