ಇತ್ತೀಚಿಗೆ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನರಿಗೆ ಐದು ಗ್ಯಾರಂಟಿಯನ್ನು ಕೊಟ್ಟಿದ್ದಾರೆ ಹೌದು ಆ ಎಲ್ಲಾ ಗ್ಯಾರಂಟಿಯನ್ನು ಈಡೇರಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದು. ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ನಾವೇನಾದರೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ಜನರಿಗೆ 5 ಗ್ಯಾರಂಟಿಯನ್ನು ಕೊಡುತ್ತೇವೆ.
ಹಾಗೂ ಅದು ಅವರಿಗೆ ತುಂಬಾ ಅನುಕೂಲವಾಗಬೇಕು ಆ ರೀತಿಯಾದಂತಹ ಅವಕಾಶಗಳನ್ನು ಅಂದರೆ ಸೌಕರ್ಯವನ್ನು ಕೊಡುತ್ತೇವೆ ಎನ್ನುವಂತಹ ಗ್ಯಾರಂಟಿಯನ್ನು ಕೊಟ್ಟಿದ್ದರು. ಅದೇ ರೀತಿಯಾಗಿ ಅವರು ಕೊಟ್ಟಿದ್ದಂತಹ ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹೌದು ಅದರಂತೆ ಮೊಟ್ಟಮೊದಲನೆಯದಾಗಿ ಮಹಿಳೆಯರಿಗೆ ಕರ್ನಾಟ ಕದಾದ್ಯಂತ ಉಚಿತವಾಗಿ KSRTC ಬಸ್ ಗಳಲ್ಲಿ ಪ್ರಯಾಣಿಸ ಬಹುದು ಎನ್ನುವಂತಹ ಗ್ಯಾರಂಟಿಯನ್ನು ಹೇಳಿದ್ದರು. ಈಗಾಗಲೇ ಈ ಒಂದು ಯೋಜನೆ ಜಾರಿಯಲ್ಲಿ ಇದ್ದು ಇದರ ಪ್ರಯೋಜನವನ್ನು ಪ್ರತಿ ಯೊಬ್ಬ ಮಹಿಳೆಯರು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳ ಬಹುದು.
ಈ ಯೋಜನೆಯು ಮಹಿಳೆಯರಿಗೆ ತುಂಬಾ ಅನುಕೂಲವಾಗಿದ್ದು ಕೆಲಸಗಳಿಗೆ ಹೋಗುವಂತಹ ಮಹಿಳೆಯರಾಗಿರಬಹುದು ಕಂಪನಿಗಳಿಗೆ ಗಾರ್ಮೆಂಟ್ಸ್ ಗಳಿಗೆ ಹೀಗೆ ಇಂತಹ ಕಡೆ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಈ ಒಂದು ಯೋಜನೆ ತುಂಬಾ ಅನುಕೂಲವಾಗಿದೆ ಎಂದು ಹೇಳಬಹುದು. ಅದರಂತೆ ಮನೆಯಲ್ಲಿರುವ ಎಲ್ಲಾ ಸದಸ್ಯರಿಗೆ ತಲ 10 ಕೆಜಿ ಅಕ್ಕಿಯನ್ನು ಕೊಡುವುದಾಗಿಯೂ ಸಹ ಹೇಳಿದ್ದರು ಆದರೆ ಈ ಒಂದು ಯೋಜನೆಯನ್ನು ಜಾರಿಗೆ ತರುವಲ್ಲಿ ವಿಫಲವಾಗಿದ್ದು ಅಂದರೆ 5 ಕೆಜಿ ಅಕ್ಕಿಯ ಹಣವನ್ನು ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.
ದೇವರ ಪೂಜೆ ಮಾಡುವಾಗ ಅಪ್ಪಿ ತಪ್ಪಿಯು ಈ ತಪ್ಪು ಮಾಡಬೇಡಿ.!
ಅದರಂತೆ 5 ಕೆ.ಜಿ ಅಕ್ಕಿಯ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರ ವಾಗಿ ಹಾಕಲಾಗುತ್ತಿದೆ. ಅದರಂತೆ ಮೂರನೆಯದಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿರುವಂತಹ ಮುಖ್ಯ ಸದಸ್ಯ ಅಂದರೆ ಯಜಮಾನಿಗೆ ಪ್ರತಿ ತಿಂಗಳು 2000 ಹಣವನ್ನು ಕೊಡುವುದಾ ಗಿಯೂ ಸಹ ಕಾಂಗ್ರೆಸ್ ಸರ್ಕಾರ ಹೇಳಿದ್ದು.
ಅದರಂತೆಯೇ ಈ ಒಂದು ಯೋಜನೆಯು ಜಾರಿಗೆ ಬಂದಿದ್ದು ಇದರ ಒಂದು ಅರ್ಜಿ ಆಹ್ವಾನ ಸಹ ಪ್ರಾರಂಭವಾಗಿದೆ ಆದರೆ ಇದೀಗ ಈ ಒಂದು ಯೋಜನೆಯ ಪ್ರಯೋಜ ನವನ್ನು ಪಡೆದುಕೊಳ್ಳಬೇಕು ಎಂದರೆ ಕೆಲವೊಂದಷ್ಟು ರೂಲ್ಸ್ ಗಳನ್ನು ಹಾಕಿದ್ದಾರೆ ಹೌದು. ಈ ರೀತಿಯ ಅವಕಾಶ ಇರುವವರು ಈ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಹಾಗಾದರೆ ಈ ದಿನ ಯಾರಿಗೆ ಈ ಒಂದು ಯೋಜನೆ ಸಿಗುವುದಿಲ್ಲ, ಅಂದರೆ ಯಾವ ಶರತ್ತನ್ನು ಹಣಕಾಸು ಇಲಾಖೆ ಕಾಂಗ್ರೆಸ್ ಸರ್ಕಾರಕ್ಕೆ ಹೇಳಿತ್ತು ಎಂದು ಈ ಕೆಳಗೆ ತಿಳಿಯೋಣ.
* ಯಾರ ಬಳಿ ಕಾರ್ ಇರುತ್ತದೆಯೋ ಅವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಹೇಳಿತ್ತು.
* ಹಾಗೂ ಯಾರಿಗೆ 5 ಎಕರೆ ಜಮೀನಿಗಿಂತ ಹೆಚ್ಚು ಇರುತ್ತದೆಯೋ ಅವರು ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಹೇಳಿತ್ತು.
* ಹಾಗೂ ಯಾರೆಲ್ಲ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುತ್ತಾರೋ ಅವರಿಗೂ ಸಹ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಹೇಳಿತ್ತು.
* ಜೊತೆಗೆ ಯಾರೆಲ್ಲಾ ಸರ್ಕಾರಕ್ಕೆ ಇನ್ಕಮ್ ಟ್ಯಾಕ್ಸ್ ಅನ್ನು ಕಟ್ಟುತ್ತಿರು ತ್ತಾರೋ ಅವರು ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಾರದು ಎಂದು ಹೇಳಿತ್ತು.
* ಹಾಗೂ ಯಾರೆಲ್ಲಾ ಸರ್ಕಾರಿ ನೌಕರರಾಗಿರುತ್ತಾರೋ ಅವರು ಸಹ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಾರದು ಎಂದು ಶರತ್ತನ್ನು ಹಾಕಿತ್ತು.
• ಆದರೆ ಈ ಒಂದು ಮಾಹಿತಿಯನ್ನು ಯಾವುದೇ ಕಾರಣಕ್ಕೂ ಅಳವಡಿಸಿಕೊಂಡಿಲ್ಲ ಬದಲಿಗೆ ಪ್ರತಿಯೊಬ್ಬರಿಗೂ ಕೂಡ ಈ ಒಂದು ಯೋಜನೆಯ ಪ್ರಯೋಜನ ಸಿಗಬೇಕು, ಪ್ರತಿಯೊಬ್ಬ ಮಹಿಳೆಯರು ಕೂಡ ಪ್ರತಿ ತಿಂಗಳು 2000 ಹಣವನ್ನು ಪಡೆಯಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.