ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಸೀಬು ಚೆನ್ನಾಗಿಲ್ಲ ಅಂತ ಅನಿಸುತ್ತದೆ ಕಳೆದ ಆರು ತಿಂಗಳಿನಿಂದಲೂ ಅವರು ಏನೇ ಮಾತನಾಡಿದರು ಕೂಡ ಯಾವುದೇ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದರು ಕೂಡ ಒಳ್ಳೆಯ ವಿಚಾರಗಳನ್ನು ಹಂಚಿಕೊಂಡರು ಕೂಡ ಅದರಿಂದ ಹೆಚ್ಚು ಕಾಂಟ್ರುವರ್ಸಿಗಳೆ ಆಗುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಉಮಾಪತಿ ಹಾಗೂ ಅರುಂಧತಿ ಎಂಬ ಮಹಿಳೆಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹಲವಾರು ಸಮಸ್ಯೆಗಳನ್ನು ಎದುರಿಸಿದರು ಇದರಿಂದ ಮೀಡಿಯಾದಿಂದಲೂ ಕೂಡ ಬ್ಯಾನ್ ಆದರೂ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಳೆದ ವಾರವಷ್ಟೇ youtube ವಾಹಿನಿ ಒಂದರಲ್ಲಿ ಇಂಟರ್ವ್ಯೂ ನಡೆಸಿದರು ಈ ಸಮಯದಲ್ಲಿ ಅಪ್ಪು ಅವರ ಬಗ್ಗೆ ಮಾತನಾಡಿದಂತಹ ಮಾತೊಂದು ಸಿಕ್ಕಾಪಟ್ಟೆ ಕಾಂಟ್ರವರ್ಸಿಯಾಗಿ ಅಪ್ಪು ಅಭಿಮಾನಿಗಳು ದರ್ಶನ್ ಮೇಲೆ ನಾವು ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಗಲಾಟೆ ಮಾಡಿದರು.
ಇದಾದ ಬೆನ್ನೆಲು ಮತ್ತೆ ನಾಲ್ಕೈದು ದಿನದ ಹಿಂದೆ ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಿಲ್ಲ ಬೇರೆಯವರ ಬಳಿ ಹೋಗಿ ಕಾಕಾ ಹಿಡಿಯುವ ಕೆಲಸ ಮಾಡುವುದಿಲ್ಲ ನನ್ನ ಟೆರಿಟರಿ ಹಾಗೂ ನನ್ನ ಬೌಂಡರಿ ಎಷ್ಟಿದೆ ಅಷ್ಟರ ಒಳಗೆ ಮಾತ್ರ ಸಿನಿಮಾ ಮಾಡುತ್ತೇನೆ ಅಂತ ಹೇಳಿದರು. ಈ ಮಾತು ಕೂಡ ಯಶ್ ಮತ್ತು ಕಿಚ್ಚ ಸುದೀಪ್ ಅವರಿಗೆ ಟಂಗ್ ಕೊಟ್ಟ ಮಾದರಿಯಲ್ಲಿ ಇದೆ ಎಂದು ಯಶ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ದರ್ಶನ್ ಅಭಿಮಾನಿಗಳಿಗೆ ತರಾಟೆಯನ್ನು ತೆಗೆದುಕೊಂಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಮೀಡಿಯಾದಿಂದ ಬ್ಯಾನ್ ಆದ ನಂತರ ದರ್ಶನವರು ಏನೇ ಮಾತನಾಡಿದರು ಕೂಡ ಸಿಕ್ಕಾಪಟ್ಟೆ ಕಾಂಟ್ರವರ್ಸಿ ಆಗುತ್ತಿದೆ. ಇದರಿಂದ ಬಹಳಷ್ಟು ಮನ ನೋಂದಂತಹ ದರ್ಶನ್ ಅವರೆ ಸ್ವತಃ ಇದೀಗ ನಾನು ಏನೇ ಮಾತನಾಡಿದರು ಕೂಡ ಕಾಂಟ್ರವರ್ಸಿಯಾಗುತ್ತದೆ ಹಾಗಾಗಿ ಏನು ಮಾತನಾಡಬೇಕು ಏನು ಮಾತನಾಡಬಾರದು ಎಂಬುದೇ ನನಗೆ ತಿಳಿಯುತ್ತಿಲ್ಲ. ಮೀಡಿಯಾ ಮುಂದೆ ಮಾತನಾಡುವುದಕ್ಕೆ ನಿಜಕ್ಕೂ ಭಯವಾಗುತ್ತಿದೆ ಎಂಬ ಹೇಳಿಕೆ ಒಂದನ್ನು ನೆನ್ನೆಯಷ್ಟೇ ನೀಡಿದ್ದಾರೆ.
ಈ ಹೇಳಿಕೆ ಕೇಳುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿದೆ. ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ನಟನು ಈ ರೀತಿ ದುಃಖದಿಂದ ಹೇಳುತ್ತಿರುವಂತಹ ಮಾತುಗಳನ್ನು ಕೇಳಿ ದರ್ಶನ್ ಅಭಿಮಾನಿಗಳು ಭಾವುಕರಾಗಿದ್ದಾರೆ. ಹೌದು 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿನ್ನೆ(ಆಗಸ್ಟ್ 15) ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ”ತಿರಂಗ ರಾಗಾ” ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಅದ್ಧೂರಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅಸಂಖ್ಯಾತ ಫ್ಯಾನ್ಸ್ ಜಮಾಯಿಸಿ ದರ್ಶನ್ ಹಾಗೂ ”ಕ್ರಾಂತಿ” ಚಿತ್ರಕ್ಕೆ ಜೈಕಾರ ಹಾಕಿದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಹಾಗೂ ಸಚಿವರಾದ ಆರ್. ಅಶೋಕ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ನಟ ದರ್ಶನ್ ಇತ್ತೀಚೆಗೆ ಪದೇ ಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಪುನೀತ್ ರಾಜ್‌ಕುಮಾರ್ ಸಾ.ವಿ.ನ ಬಗ್ಗೆ ದಾಸ ಮಾತನಾಡಿದ್ದು ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ದರ್ಶನ್ ಫ್ಯಾನ್ಸ್ ಹಾಗೂ ಅಪ್ಪು ಫ್ಯಾನ್ಸ್ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆದಿತ್ತು. ಹಾಗಾಗಿ ದರ್ಶನ್ ಈಗ ಏನೇ ಮಾತನಾಡುವುದಕ್ಕೂ ಹಿಂದು ಮುಂದು ನೋಡುವಂತಾಗಿದೆ. ಅದನ್ನು ಸ್ವತಃ ದರ್ಶನ್ ಕೂಡ ಒಪ್ಪಿಕೊಂಡಿದ್ದಾರೆ. “ನನ್ನಂಥ ಸಣ್ಣ ಕಲಾವಿರನ್ನು ಕಾಂಟ್ರವರ್ಸಿಯಲ್ಲಿ ಇರುವವರನ್ನು ಹರಸಿ ಬೆಳೆಸಿ. ವೇದಿಕೆ ಮುಂದೆ ಕೂಡ ನನ್ನ ಸೆಲೆಬ್ರೆಟಿಗಳು ”ಕ್ರಾಂತಿ’. ಪೋಸ್ಟರ್ ಹಿಡಿದುಕೊಂಡಿದ್ದೀರಾ ತುಂಬಾ ಥ್ಯಾಂಕ್ಸ್ ”ಕ್ರಾಂತಿ” ಚಿತ್ರಕ್ಕೆ ನಿಮ್ಮ ಬೆಂಬಲ ಜೀವನದಲ್ಲಿ ಯಾವತ್ತೂ ಮರೆಯೋದಿಲ್ಲ. ನೀವು ಕೊಡುತ್ತಿರುವ ಪ್ರೀತಿ ಪ್ರೋತ್ಸಾಸ ಬೆಂಬಲ ಯಾವಾಗಲೂ ಸಿನಿಮಾ ಮಾಡಲು ಹುಮ್ಮಸ್ಸು ಕೊಡುತ್ತದೆ. ಖಂಡಿತ ”ಕ್ರಾಂತಿ” ಸಿನಿಮಾ ಮೋಸ ಮಾಡಲ್ಲ ಎಂದು ಆಶ್ವಾಸನೆ ಕೊಡ್ತೀನಿ.
ನೀವು ಕಿರುಚೋಕೆ ಅರಚೋಕೆ ಕೂಗಾಡೋಕೆ ಎಲ್ಲಾ ಇದೆ, ಜೊತೆಗೆ ಸಣ್ಣ ನೀತಿಪಾಠ ಕೂಡ ಹೇಳಿದ್ದೀವಿ. ವಿದ್ಯೆ ಅಂದರೆ ಏನು, ಸರ್ಕಾರಿ ಶಾಲೆಗಳು ಏನಾಗುತ್ತಿದೆ ಅನ್ನುವುದರ ಬಗ್ಗೆ ಸಿನಿಮಾ, ಏನೋ ಎಕ್ಸ್ಟ್ರಾಡರಿನರಿಯಾಗಿ ಮಾಡಿದ್ದೀವಿ ಅಂತ ಅಲ್ಲ. ಇವತ್ತಿನ ಪರಿಸ್ಥಿತಿ ಇಟ್ಟುಕೊಂಡು ಮಾಡಿದ್ದೀವಿ. ನಿಮ್ಮ ಪ್ರೀತಿ ಪ್ರೋತ್ಸಾಹ ಕನ್ನಡ ಸಿನಿಮಾಗಳ ಮೇಲಿರಲಿ” ಎಂದು ದರ್ಶನ್ ಮನವಿ ಮಾಡಿದರು. ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಅನ್ನು ಆಳುತ್ತಿದ್ದಂತಹ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಇದ್ದಕ್ಕಿದ್ದ ಹಾಗೆ ನನಗೆ ಮಾತನಾಡುವುದಕ್ಕೆ ಭಯ ಆಗುತ್ತಿದೆ ಎಂಬ ಮಾತನ್ನು ಕೇಳಿದ ಮೇಲೆ ನಿಜಕ್ಕೂ ದರ್ಶನ ಅವರ ಪರಿಸ್ಥಿತಿ ಎಷ್ಟು ಅದಗೆಟ್ಟಿರಬಹುದು ಎಂದು ಅಭಿಮಾನಿಗಳು ನಿರಾಶೆ ಹೊಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಕ್ರಾಂತಿ ಸಿನಿಮಾಗೆ ನಿಮ್ಮ ಸಪೋರ್ಟ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಳಿ.