ಈ ದಿನ ನಾವು ಹೇಳಲು ಹೊರಟಿರುವಂತಹ ದೇವಸ್ಥಾನ ಬಹಳಷ್ಟು ಶಕ್ತಿಶಾಲಿಯಾಗಿರುವಂತಹ ದೇವಸ್ಥಾನವಾಗಿದೆ.ಹೌದು ಈ ದೇವಸ್ಥಾನಕ್ಕೆ ಯಾರು ಏನು ಕಷ್ಟ ಎಂದು ಹೋಗುತ್ತಾರೋ ಆ ಕಷ್ಟ ಸಂಪೂರ್ಣವಾಗಿ ದೂರು ಮಾಡುವಂತಹ ಶಕ್ತಿಯನ್ನು ಈ ದೇವಿ ಹೊಂದಿದ್ದಾಳೆ.
ಹಾಗಾದರೆ ಇಷ್ಟೆಲ್ಲಾ ಪವಾಡವನ್ನು ಸೃಷ್ಟಿಸುತ್ತಿರುವಂತಹ ಆ ದೇವಸ್ಥಾನದ ಹೆಸರೇನು? ಆ ದೇವಸ್ಥಾನದಲ್ಲಿ ನೆಲೆಸಿರುವಂತಹ ದೇವಿ ಯಾರು? ಈ ದೇವಸ್ಥಾನದ ಸಂಪೂರ್ಣವಾದ ವಿಳಾಸ ಏನು? ಎನ್ನುವುದರ ವಿಷಯ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ದೇವಸ್ಥಾನದ ವಿಳಾಸ :- ಈ ದೇವಸ್ಥಾನದಲ್ಲಿ ನೆಲೆಗೊಂಡಿರುವಂತಹ ದೇವಿ ಶ್ರೀ ಭದ್ರಕಾಳಿ ಶಕ್ತಿಶಾಲಿ ಭಕ್ತಿ ಪೀಠ. ಈ ದೇವಸ್ಥಾನ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಹೊಸಕೋಟೆ ತಾಲೂಕು, ಬೆಂಗಳೂರು ಕೋಲಾರ ಹೆದ್ದಾರಿಯ ತಾವರೆ ಕೆರೆ ಹತ್ತಿರ ಇರುವ ಕಾಳಪ್ಪನಹಳ್ಳಿ ಗ್ರಾಮ. ಬೆಂಗಳೂರಿನಿಂದ ಸರಿ ಸುಮಾರು 50 ಕಿಲೋಮೀಟರ್ ಸಮೀಪದಲ್ಲಿ ಈ ದೇವಸ್ಥಾನ ಇದೆ ಹಾಗೂ ಹೊಸಕೋಟೆಯಿಂದ ಸರಿ ಸುಮಾರು 16 ಕಿ.ಮೀ ಸಮೀಪದಲ್ಲಿ ಇದೆ.
ಈ ದೇವಸ್ಥಾನಕ್ಕೆ ಬರುವಂತಹ ಪ್ರತಿಯೊಬ್ಬರಿಗೂ ಕೂಡ ತಮ್ಮ ಕಷ್ಟಗಳನ್ನು ಈ ದೇವಿಯ ಮುಂದೆ ಹೇಳುತ್ತಾ ತಮ್ಮ ಕಷ್ಟಗಳನ್ನು ದೂರ ಮಾಡುವಂತೆ ಇಲ್ಲಿ ಹರಕೆಯನ್ನು ಹೊತ್ತು ಹೋಗುತ್ತಾರೆ. ತದನಂತರ ಅವರೆಲ್ಲ ಕಷ್ಟಗಳು ದೂರವಾದ ಮೇಲೆ ಈ ದೇವಸ್ಥಾನಕ್ಕೆ ಬಂದು ಹರಕೆಯನ್ನು ಒಪ್ಪಿಸುತ್ತಾರೆ. ಯಾರು ಏನೇ ಕಷ್ಟ ಎಂದು ಬಂದರು ಅವರೆಲ್ಲರ ಕಷ್ಟವನ್ನು ದೂರ ಮಾಡುತ್ತಾಳೆ ಈ ಭದ್ರಕಾಳಿ ತಾಯಿ. ಹೌದು, ಯಾರು ತಮ್ಮ ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಉಂಟಾಗುತ್ತಿರುತ್ತದೆಯೋ
ಮನೆಯಲ್ಲಿ ಸದಾ ಕಾಲ ನೆಮ್ಮದಿ ಇಲ್ಲದೆ ಇರುವುದು ಮನೆಯಲ್ಲಿ ಅಶಾಂತಿ, ದೃಷ್ಟಿ ದೋಷ, ಮಾಟ ಮಂತ್ರ, ವಾಮಾಚಾರ, ಆರ್ಥಿಕವಾಗಿ ಇನ್ಯಾವುದೇ ರೀತಿಯ ಸಮಸ್ಯೆ ಇದ್ದರೂ ಅವೆಲ್ಲವನ್ನು ಸಹ ನೀವು ದೂರ ಮಾಡಿಕೊಳ್ಳಬಹುದು. ಹೀಗೆ ಯಾವುದೇ ರೀತಿಯ ಕಷ್ಟದಿಂದ ಬಳಲುತ್ತಿದ್ದರು ಅಂಥವರು ಈ ದೇವಿಯ ದೇವಸ್ಥಾನಕ್ಕೆ ಹೋಗಿ ದೇವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ದೇವರ ದರ್ಶನ ಪಡೆದು ಬಂದರೆ ನಿಮಗೆ ಸ್ವಲ್ಪ ದಿನದಲ್ಲಿಯೇ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ.
ಹೌದು ಈ ದೇವಿ ನಿಮ್ಮ ಕಷ್ಟಗಳನ್ನು ಸಂಪೂರ್ಣ ವಾಗಿ ದೂರ ಮಾಡುತ್ತಾಳೆ. ಹಾಗೂ ಇಷ್ಟೆಲ್ಲ ಕಷ್ಟಗಳನ್ನು ದೂರ ಮಾಡಿಕೊಂಡ ಹಲವಾರು ಭಕ್ತಾದಿಗಳನ್ನು ನಾವು ಈ ದೇವಸ್ಥಾನದಲ್ಲಿ ಕಾಣಬಹುದು. ಬಹಳ ಹಿಂದಿನ ದಿನದಿಂದಲೂ ಈ ದೇವಸ್ಥಾನ ಎಲ್ಲಿ ಇದ್ದು ದಿನೇ ದಿನೇ ಕಳೆಯುತ್ತಾ ಈ ದೇವಸ್ಥಾನ ಬಹಳಷ್ಟು ಅಭಿವೃದ್ಧಿಯನ್ನು ಪಡೆದು ಕೊಳ್ಳುತ್ತಾ ಬಂದಿದೆ.
ಹಾಗೂ ಈ ದೇವಸ್ಥಾನದಲ್ಲಿ ಅಮಾವಾಸ್ಯೆ ಪೌರ್ಣಮಿಯ ದಿನದಂದು ಬಹಳ ವಿಶೇಷವಾದಂತಹ ಹೋಮಗಳನ್ನು ಮಾಡುವುದರ ಮೂಲಕ ಈ ದೇವಿಗೆ ಆರಾಧನೆಯನ್ನು ಮಾಡುತ್ತಾರೆ. ಜೊತೆಗೆ ವರ್ಷದಲ್ಲಿ ಒಮ್ಮೆ ಅಂದರೆ ಡಿಸೆಂಬರ್ ಸಮಯದಲ್ಲಿ ಈ ದೇವಿಯ ವಿಶೇಷವಾದ ಜಾತ್ರೆ ಯನ್ನು ಸಹ ನೆರವೇರಿಸಲಾಗುತ್ತದೆ.
ಆ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ ಎಂದು ಈ ದೇವಸ್ಥಾನದ ಮೂಲ ಅರ್ಚಕರು ತಿಳಿಸಿದ್ದಾರೆ. ಹೌದು ಬಹಳಷ್ಟು ಸಮಸ್ಯೆಯಿಂದ ಬಳಲುತ್ತಿರುವ ಭಕ್ತಾದಿಗಳು ಈ ದೇವಿಯ ದರ್ಶನ ಪಡೆದು ಅವರೆಲ್ಲರ ಕಷ್ಟಗಳನ್ನು ಸಹ ದೂರ ಮಾಡಿಕೊಂಡಿದ್ದಾರೆ ಹಾಗಾಗಿ ಯಾರೆಲ್ಲಾ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಅವರೆಲ್ಲರೂ ಕೂಡ ಈ ದೇವಸ್ಥಾನಕ್ಕೆ ಹೋಗಿ ಈ ದೇವಿಯ ದರ್ಶನ ಪಡೆಯುವುದರ ಮೂಲಕ ನಿಮ್ಮ ಎಲ್ಲ ಕಷ್ಟಗಳನ್ನು ಸಹ ದೂರ ಮಾಡಿಕೊಳ್ಳಬಹುದು.