ನಮ್ಮ ಪೂಜಾ ವಿಧಿ ವಿಧಾನಗಳಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವುದು ಒಂದು ಪ್ರಧಾನವಾದ ಕಾರ್ಯ. ನೈವೇದ್ಯ ಅರ್ಪಿಸುವುದಕ್ಕೆ ನಾವು ತೆಂಗಿನಕಾಯಿ ಹೊಡೆಯುವುದನ್ನೇ ಹೆಚ್ಚು ರೂಢಿ ಮಾಡಿಕೊಂಡಿದ್ದೇವೆ. ಮನೆಗಳಲ್ಲಿ ಪೂಜೆ ಮಾಡುವಾಗ ಅಥವಾ ದೇವಸ್ಥಾನಕ್ಕೆ ದೇವರಿಗೆ ಪೂಜೆ ತೆಗೆದುಕೊಂಡು ಹೋಗುವಾಗ ಅಥವಾ ವಾಹನಗಳಿಗೆ ಪೂಜೆ ಮಾಡುವಾಗ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗುತ್ತೇವೆ.
ಈ ರೀತಿ ತೆಂಗಿನಕಾಯಿಯನ್ನು ಆರಿಸಿ ತೆಗೆದುಕೊಂಡು ಹೋದರು ಕೂಡ ನಮಗೆ ತಿಳಿಯದ ಹಾಗೆ ಒಂದು ಸಮಯದಲ್ಲಿ ಅದು ಕೆಟ್ಟು ಹೋಗಿರುತ್ತದೆ. ಆಗ ಜನರು ಬಹಳ ಗಾಬರಿಗೊಳ್ಳುತ್ತಾರೆ. ನಮಗೆ ಯಾವುದಾದರೂ ಕಷ್ಟ ಬರುವ ಸೂಚನೆಯೇ ಅಥವ ದೇವರು ನಮ್ಮ ಮೇಲೆ ಕೋಪಗೊಂಡಿದ್ದಾನೆಯೇ ಅಥವಾ ಇದು ಇನ್ಯಾವುದರದ್ದರೂ ಸೂಚನೆ ಇರಬಹುದಾ ಎಂದು ಚಿಂತೆಗೀಡಾಗುತ್ತಾರೆ. ಆದರೆ ಈ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ ಗೊತ್ತಾ? ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.
ಒಣಗಿದ ಹೂವುಗಳನ್ನು ಬಿಸಾಕುವ ಬದಲು ಅವುಗಳನ್ನೇ ಬಳಸಿಕೊಂಡು ಕೋನ್ ಶೇಪ್ ಸಾಂಬ್ರಾಣಿ ಮಾಡಿ.! ಬುದ್ದಿವಂತ ಮಹಿಳೆಯರಿಗಾಗಿ
ದೇವಸ್ಥಾನಕ್ಕೆ ನಾವು ತೆಂಗಿನಕಾಯಿ ತೆಗೆದುಕೊಂಡು ಹೋದಾಗ ದೇವರಿಗೆ ಅರ್ಪಿಸಲು ಒಡೆದ ಸಮಯದಲ್ಲಿ ಅದು ಕೆಟ್ಟು ಹೋಗಿದ್ದರೆ ಭಯಪಡುವ ಅವಶ್ಯಕತೆ ಇಲ್ಲ. ಬಹುತೇಕ ದೇವಾಲಯಗಳಲ್ಲಿ ಆ ಕಾಯಿಗಳನ್ನು ತೊಳೆದು ಅದನ್ನೇ ಭಗವಂತನಿಗೆ ಅರ್ಪಿಸುತ್ತಾರೆ ಯಾಕೆಂದರೆ ಅದು ತೆಂಗಿನಕಾಯಿಯಲ್ಲಿ ಇರುವ ದೋಷ ಹೊರೆತು ದೇವರನ್ನು ನಂಬಿ ಭಕ್ತಿಯಿಂದ ಕಾಣಿಕೆ ತಂದ ಭಕ್ತನ ದೋಷ ಇರುವುದಿಲ್ಲ ಎನ್ನುವುದನ್ನು ಭಕ್ತಿ ಹಾಗೂ ಭಗವಂತನ ಬಗ್ಗೆ ಅರಿತ ಅಲ್ಲಿರುವ ಅರ್ಚಕರು ಹೇಳುತ್ತಾರೆ.
ಹೀಗಾಗಿ ಇದೇ ಸತ್ಯ, ಈ ರೀತಿ ಆದಾಗ ಹೆದರುವ ಅವಶ್ಯಕತೆ ಇಲ್ಲ ಮನೆಗಳಲ್ಲಿ ಪೂಜೆ ಮಾಡುವಾಗ ಕೂಡ ಒಡೆದ ತೆಂಗಿನಕಾಯಿ ಕೆಟ್ಟು ಹೋಗಿದ್ದರೆ ಅದನ್ನೇ ಸ್ವಚ್ಛ ಮಾಡಿ ನಾವು ಮತ್ತೊಮ್ಮೆ ಕೈ ಕಾಲು ಮುಖ ತೊಳೆದುಕೊಂಡು ಭಗವಂತನಿಗೆ ಅರ್ಪಿಸಿದರೆ ಯಾವ ದೋಷವು ಬರುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಇದರಿಂದ ಕೆಟ್ಟದಾಗುತ್ತದೆ ಎಂದು ಭಯ ಬೀಳುವ ಅವಶ್ಯಕತೆ ಇಲ್ಲ, ಬದಲಾಗಿ ಯಾವುದೋ ಒಂದು ಕೆಟ್ಟ ದೃಷ್ಟಿ ಈ ಮೂಲಕ ನಿವಾರಣೆ ಆಯಿತು ಎಂದು ತಿಳಿದುಕೊಳ್ಳಬೇಕು.
ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೇ ಇರಲು ಇದೇ ಮುಖ್ಯವಾದ ಕಾರಣ.!
ದೊಡ್ಡ ಕಷ್ಟ ಚಿಕ್ಕರೂಪದದಲ್ಲಿ ಮುಗಿದುಕೊಂಡು ಹೋಯಿತು ಎಂದು ನೆಮ್ಮದಿ ಪಡಬೇಕು. ವಾಹನ ಪೂಜೆ ಮಾಡುವಾಗಲೂ ಕೂಡ ತೆಂಗಿನ ಕಾಯಿ ಒಡೆದಾಗ ಅದು ಕೆಟ್ಟು ಹೋಗಿದ್ದರೆ ಭಯ ಬೀಳುವ ಅವಶ್ಯಕತೆ ಇಲ್ಲ ವಾಹನಕ್ಕೆ ಬಂದಿದ್ದ ಯಾವುದೋ ಒಂದು ಸಮಸ್ಯೆ ಈ ರೂಪದಲ್ಲಿ ಕಳೆದು ಹೋಯಿತು ಎಂದು ಸಮಾಧಾನ ಪಟ್ಟುಕೊಳ್ಳಬೇಕು.
ಕೆಲವೊಮ್ಮೆ ತೆಂಗಿನಕಾಯಿ ಒಡೆದಾಗ ಅದರ ಒಳಗೆ ಹೂವು ಬಂದಿರುತ್ತದೆ. ಈ ರೀತಿ ಬಂದರೆ ಅದು ಶುಭ ಸೂಚಕ. ನವ ದಂಪತಿಗಳು ಪೂಜೆ ಮಾಡುವ ಈ ರೀತಿ ತೆಂಗಿನಕಾಯಿ ಒಡೆದಾಗ ಹೂವು ಕಂಡುಬಂದಿದ್ದರೆ ಶೀಘ್ರದಲ್ಲಿ ಅವರು ಸಂತಾನ ಪ್ರಾಪ್ತಿ ಪಡೆಯಲಿದ್ದಾರೆ ಎಂದು ಅರ್ಥ. ಆದರೆ ತೆಂಗಿನಕಾಯಿ ಒಡೆದಾಗ ಅದು ಸಮವಾಗಿ ಪಾಲಾದರೆ ನೀವು ಯಾವ ಕಾರ್ಯ ಸಿದ್ದಿಗಾಗಿ ಪ್ರಾರ್ಥನೆ ಮಾಡುತ್ತಿದ್ದೀರಿ ಅದು ನೆರವೇರುತ್ತದೆ ಎಂದು ಅರ್ಥ.
ಮನೆಗಳಲ್ಲಿ ತೆಂಗಿನಕಾಯಿ ಒಡೆದಾಗ ಅದು ಹೆಚ್ಚು ಒಡಕುಗಾಯಿ ಅಂದರೆ ತೊಟ್ಟಿಲುಗಾಯಿ ಆಗಿದರೆ ಆ ಮನೆಯಲ್ಲಿ ಶೀಘ್ರದಲ್ಲಿ ತೊಟ್ಟಿಲು ಕಟ್ಟುವ ಶುಭ ಸುದ್ದಿ ಕೇಳುತ್ತೇವೆ ಎಂದು ಅರ್ಥ. ಹಾಗಾಗಿ ಇನ್ನು ಮುಂದೆ ಬೇಗನೆ ಕಾಯಿ ಒಡೆದಾಗ ಅದು ಯಾವ ರೀತಿ ಇದ್ದರು ಗಾಬರಿಯಾಗದೆ ಪಾಸಿಟಿವ್ ಮೈಂಡ್ ಇಂದ ಇರಿ. ಮತ್ತು ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.