ಯಾವುದೇ ವಸ್ತುವಾದರೂ ಕೂಡ ಪ್ರತಿದಿನವೂ ಅದನ್ನು ಬಳಕೆ ಮಾಡುತ್ತಿದ್ದಂತೆ ಅದರ ಕಾರ್ಯ ದಕ್ಷತೆ ಕುಗ್ಗುತ್ತದೆ. ಇದನ್ನು ಸರಿಪಡಿಸಿಕೊಂಡು ಅದು ಮೊದಲನಂತೆ ಕೆಲಸ ಮಾಡಬೇಕು ಎನ್ನುವ ಇಚ್ಛೆ ಇದ್ದರೆ ಅದನ್ನು ಸರಿಯಾಗಿ ಮೇಂಟೇನ್ ಮಾಡಬೇಕು. ಇದಕ್ಕೆ ಒಳ್ಳೆಯ ಉದಾಹರಣೆಯಾಗಿ ನಾವು ಗ್ಯಾಸ್ ಸ್ಟವ್ ಕೊಡಬಹುದು. ಮನೆಗೆ ಹೊಸ ಗ್ಯಾಸ್ ಸ್ಟವ್ ಕೊಂಡು ಬಂದಾಗ ಪಳಪಳ ಎಂದು ಹೊಳೆಯುತ್ತಿರುತ್ತದೆ.
ಆದರೆ ಪ್ರತಿನಿತ್ಯವೂ ಕೂಡ ನಾವು ದಿನಕ್ಕೆ ಮೂರು ಬಾರಿ ಅದರಲ್ಲಿ ಅಡುಗೆ ಮಾಡುವುದು, ಮಧ್ಯೆ ಮಧ್ಯೆ ಕಾಫಿ ಚಹಾ ತಯಾರಿಸುವುದು, ಹಬ್ಬ ಹರಿದಿನಗಳಲ್ಲಿ ಅತಿ ಹೆಚ್ಚಾಗಿ ಅಡುಗೆ ಮಾಡಲು, ಮಸಾಲೆ ಪದಾರ್ಥ ಅಥವಾ ಜಿಡ್ಡಿನ ಪದಾರ್ಥಗಳನ್ನು ಮಾಡಲು ಇದೇ ಗ್ಯಾಸ್ ಸ್ಟವ್ ಗಳನ್ನು ಬಳಸುವುದು ಈ ರೀತಿಯೆಲ್ಲಾ ಮಾಡುವುದರಿಂದಾಗಿ ಗ್ಯಾಸ್ ಸ್ಟವ್ ಮೊದಲಿನ ಲುಕ್ ಕಳೆದುಕೊಂಡು ಹಾಳಾಗುತ್ತದೆ.
ಪೂಜೆಗೆ ಇಡುವ ತೆಂಗಿನ ಕಾಯಿ ಕಣ್ಣು ಕಾಣಿಸಬಾರದು ಯಾಕೆ ಗೊತ್ತಾ.?
ಗ್ಯಾಸ್ ಸ್ಟೌಗಳನ್ನು ಬೇಕಾದರೆ ಉಜ್ಜಿ ತೊಳೆದು ಅದು ಮತ್ತೆ ಹೊಳೆಯುವಂತೆ ಮಾಡಬಹುದು. ಆದರೆ ಬರ್ನರ್ ಗಳಲ್ಲಿ ಈ ಜಿಡ್ಡಿನ ಅಂಶ ಅಥವಾ ಕಸ ಸೇರಿಕೊಂಡರೆ ಮೊದಲಿನಂತೆ ವೇಗವಾಗಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಉರಿ ಸರಿಯಾಗಿ ಉರಿಯುವುದಿಲ್ಲ ಇಂತಹ ಸಮಯದಲ್ಲಿ ನಾವು ಬರ್ನರ್ ಗಳನ್ನು ಕೂಡ ಬಿಚ್ಚಿ ಕ್ಲೀನ್ ಮಾಡುತ್ತೇವೆ.
ಈ ರೀತಿ ಮಾಡಿದ ಮೇಲೆ ನಿಮ್ಮ ಗ್ಯಾಸ್ ಫ್ಲೇಮ್ ಸ್ಲೋ ಆಗಿದೆ ಎಂದರೆ ನೀವು ಕ್ಲೀನ್ ಮಾಡುತ್ತಿರುವ ವಿಧಾನದಲ್ಲಿ ಏನೋ ಮಿಸ್ ಮಾಡಿದ್ದೀರಾ ಎಂದು ಅರ್ಥ. ಅದನ್ನೇ ನಾವು ಇಂದು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ನೀವು ಗ್ಯಾಸ್ ಸ್ಟವ್ ಕ್ಲೀನ್ ಮಾಡಿ ಬರ್ನಲ್ ಕ್ಲೀನ್ ಮಾಡಿ ಎಲ್ಲಾ ಪ್ರಯತ್ನಗಳನ್ನು ಮಾಡಿದ ಮೇಲು ಮೊದಲಂತೆ ಉರಿ ಬರುತ್ತಿಲ್ಲ ಎಂದರೆ ಈ ರೀತಿಯಾಗಿ ಕ್ಲೀನ್ ಮಾಡಿ.
ಗರ್ಭಕೋಶ ತೆಗೆದ ನಂತರ ಮಹಿಳೆಯರಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತ.?
ನೀವು ಬಹಳ ಹುಷಾರಾಗಿ ಈ ರೀತಿ ಟ್ರೈ ಮಾಡಬೇಕು. ಒಂದು ವೇಳೆ ಈ ವಿಧಾನದಲ್ಲಿ ನಿಮಗೆ ಕ್ಲೀನ್ ಮಾಡಲು ಬರಲಿಲ್ಲ ಎಂದರೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಇದರ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಅವರ ಸಹಾಯ ತೆಗೆದು ಕೊಂಡು ಕ್ಲೀನ್ ಮಾಡುವುದು ಒಳ್ಳೆಯದು. ಯಾಕೆಂದರೆ ಇದು ಬಹಳ ಅ’ಪಾ’ಯದಿಂದ ಕೂಡಿದೆ. ಇದನ್ನು ಕ್ಲೀನ್ ಮಾಡುವುದು ಹೇಗೆಂದರೆ ಮೊದಲಿಗೆ ರೆಗ್ಯುಲೇಟರ್ ಆಫ್ ಮಾಡಬೇಕು.
ನಂತರ ರೆಗ್ಯುಲೇಟರ್ ಹಾಗೂ ಗ್ಯಾಸ್ ಸ್ಟವ್ ಗೆ ಕನೆಕ್ಷನ್ ಕೊಡುವ ಆ ಪೈಪ್ ಇರುವಲ್ಲಿ ಕಲೆಕ್ಷನ್ ಓಪನ್ ಮಾಡಿ ನೋಡಬೇಕು. ರೆಗ್ಯುಲೇಟರ್ ಪೈಪ್ ನಡುವೆ ಸಂಪರ್ಕಕ್ಕಾಗಿ ಇದ್ದ ಆ ಒಂದು ಕನೆಕ್ಷನ್ ನಲ್ಲಿ ನೆಟ್ ಗಳು ಇರುತ್ತವೆ ಇದರಲ್ಲಿ ಬಹಳ ಸಣ್ಣದಾಗಿ ಹೋಲ್ ಇರುತ್ತದೆ ಅದರೊಳಗೆ ಕಸ ಸೇರಿಕೊಂಡರೆ ಸಮರ್ಪಕವಾಗಿ ಇಂಧನದ ಫ್ಲೋ ಬರದ ಕಾರಣ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ.
ಇಂತಹದ್ದೇ ಕಿವಿ ನೋವಿರಲಿ, ಕಿವಿಯಲ್ಲಿ ಗುಂಯ್ ಶಬ್ಧವಿರಲಿ ಈ ಎಣ್ಣೆ ಎರಡು ಹನಿ ಹಾಕು.!
ಆಗ ನೀವು ಯಾವುದಾದರು ಸೂಜಿಯ ಸಹಾಯದಿಂದ ಆ ಹೋಲ್ ನಲ್ಲಿ ಸಿಕ್ಕಿರುವ ಕಸವನ್ನು ಕ್ಲೀನ್ ಮಾಡಿ ಒಂದು ಟೂತ್ ಬ್ರಷ್ ಸಹಾಯದಿಂದ ಮತ್ತೊಮ್ಮೆ ಕ್ಲೀನ್ ಮಾಡಿ ಕನೆಕ್ಷನ್ ಕೊಡಬೇಕು. ನೀವು ಈ ರೀತಿ ಮತ್ತೆ ಕನೆಕ್ಷನ್ ಕೊಡುವಾಗ ಎಲ್ಲೂ ಕೂಡ ಗ್ಯಾಸ್ ಲೀಕ್ ಆಗದಂತೆ ಎಚ್ಚರ ವಹಿಸಿ ಮತ್ತೊಮ್ಮೆ ಮಗದೊಮ್ಮೆ ಅದನ್ನು ಪರೀಕ್ಷಿಸಿಕೊಳ್ಳಬೇಕು. ಈ ರೀತಿ ಕ್ಲೀನ್ ಮಾಡಿ ನೋಡಿ ನಿಮ್ಮ ಗ್ಯಾಸ್ ಫ್ಲೇಮ್ ಉರಿ ತುಂಬಾ ಫಾಸ್ಟ್ ಆಗುತ್ತದೆ.