ವಿವಾಹ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎನ್ನುವುದನ್ನು ನಾವೆ ಲ್ಲರೂ ಕೇಳಿರುತ್ತೇವೆ. ವಿವಾಹ ಸ್ವರ್ಗದಲ್ಲಿ ನಿಶ್ಚಯವಾದರೂ ಸಹ ವಿವಾಹ ಸಮಯಕ್ಕೆ ಸರಿಯಾಗಿ ಆಗಬೇಕಾಗಿರುವುದು ಅಷ್ಟೇ ಮುಖ್ಯ. ಹಲವರ ವಿವಾಹ ಸಮಯಕ್ಕೆ ಸರಿಯಾಗಿ ಯಾವುದೇ ತೊಂದರೆ ತಾಪತ್ರಯಗಳಿಲ್ಲದೆ ಸರಾಗವಾಗಿ ಆಗುತ್ತದೆ.
ಅದೇ ರೀತಿ ಇನ್ನೂ ಕೆಲ ವೊಂದಷ್ಟು ಜನರ ವಿವಾಹಕ್ಕೆ ವಿಜ್ಞನಗಳ ಸಾಲೇ ಕಾದು ನಿಂತಿರುತ್ತದೆ. ಇನ್ನೇನು ಎಲ್ಲ ಸರಿ ಹೋಯಿತು ಸರಿ ಹೊಂದಿಕೊಳ್ಳಿತು ವಿವಾಹ ಆಗೆ ಹೋಯಿತು ಎನ್ನುವಷ್ಟರಲ್ಲಿ ಹೊಸ ತೊಂದರೆಗಳು ಎದುರಾಗುತ್ತದೆ. ಇವೆಲ್ಲದಕ್ಕೂ ಕೂಡ ಜಾತಕದಲ್ಲಿರುವಂತಹ ಗ್ರಹ ನಕ್ಷತ್ರಗಳು ಕಾರಣವಾಗಿರುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ. ಜಾತಕದಲ್ಲಿ ಗ್ರಹ ನಕ್ಷತ್ರಗಳು ಸರಿಯಾದ ಸ್ಥಿತಿಯಲ್ಲಿ ಇದ್ದು.
ಗಂಡು ಹೆಣ್ಣಿನ ಜಾತಕ ಹೊಂದಿಕೆಯಾದರೆ ಮದುವೆಗೆ ಯಾವುದೇ ವಿಘ್ನಗಳು ಎದುರಾಗುವುದಿಲ್ಲ. ಇಬ್ಬರ ಜಾತಕದಲ್ಲಿ ಒಬ್ಬರ ಗ್ರಹ ಸ್ಥಿತಿ ಚೆನ್ನಾಗಿಲ್ಲ ಎಂದರು ಕೂಡ ಮದುವೆಗೆ ಅಡಚಣೆಗಳು ಉಂಟಾಗುತ್ತದೆ. ಮುಖ್ಯವಾಗಿ ಗುರುಗ್ರಹದ ಸ್ಥಿತಿ ಚೆನ್ನಾಗಿದ್ದರೆ ಮದುವೆಯ ಯೋಗ ಇದೆ ಎಂದರ್ಥ ಗುರು ಬಲವಿದ್ದಾಗ ಮದುವೆ ಮಾಡಬೇಕು ಅಂತ ಶಾಸ್ತ್ರ ಹೇಳುತ್ತದೆ.
ನಮ್ಮ ಜೀವನ ಸಂಗಾತಿ ಸಿಗುವುದು ನಮ್ಮ ಅದೃಷ್ಟದ ಮೇಲೆ ಹಾಗೂ ಜಾತಕದ ಆಧಾರದ ಮೇಲೆ ಮತ್ತು ಹಿಂದಿನ ಜನ್ಮದಲ್ಲಿ ಮಾಡಿರುವಂತಹ ಪಾಪ ಪುಣ್ಯಗಳ ಆಧಾರದ ಮೇಲೆ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಪಾಪ ಪುಣ್ಯಗಳ ಆಧಾರದ ಮೇಲೆ ಹಾಗೂ ಜಾತಕದಲ್ಲಿ ಇರುವಂತಹ ದೋಷಗಳ ಆಧಾರದಿಂದ ಮದುವೆಯು ತಡವಾಗುತ್ತದೆ ಅಥವಾ ವೈದವ್ಯ ವಿದುರ ಯೋಗವು ಕೂಡ ಇರುತ್ತದೆ.
ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಗುರುಬಲ ಬಂದಾಗ ಮದುವೆ ಮಾಡಬೇಕು ಅಂತ ಶಾಸ್ತ್ರ ಹೇಳಿದೆ. ಜಾತಕದಲ್ಲಿ ಗುರು ಗ್ರಹವು ನೀಚ ಸ್ಥಿತಿಯಲ್ಲಿ ಇದ್ದರೆ ವಿವಾಹಕ್ಕೆ ತೊಂದರೆಗಳಾಗುತ್ತದೆ. ಅದೇ ಗುರು ಗ್ರಹದ ಸ್ಥಿತಿ ಉಚ್ಚನಾಗಿದ್ದರೆ ವಿವಾಹಕ್ಕೆ ಯಾವುದೇ ಅಡ ಚಣೆಗಳು ಉಂಟಾಗುವುದಿಲ್ಲ.
ಹಾಗಾದರೆ ಪುರುಷ ಮತ್ತು ಮಹಿಳೆಯ ರಿಗೆ ವಿವಾಹ ವಿಳಂಬ ಆಗುವುದಕ್ಕೆ ಪ್ರತ್ಯೇಕವಾದ ಕಾರಣ ಹಾಗೂ ಪರಿಹಾರಗಳು ಇದೆ ಅವು ಯಾವುದು ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಶನಿ ಮಂಗಳ ಅಥವಾ ರಾಹುವಿನಂತಹ ದೋಷ ಪೂರಿತ ಗ್ರಹಗಳು 7ನೇ ಮನೆಯ ಮೇಲೆ ಪ್ರಭಾವ ಬೀರಿದಾಗ ಮದುವೆ ತಡವಾಗಿ ಆಗ ಬಹುದು ಅಥವಾ ಮದುವೆ ಒಪ್ಪಿಗೆ ಯಾಗುವುದಕ್ಕೆ ಹಲವು ವಿಜ್ಞೆಗಳು ಬರಬಹುದು.
ಮನೆಯಲ್ಲಿ ಮದುವೆಯ ವಯಸ್ಸಿಗೆ ಬಂದಿರುವಂತಹ ಮಕ್ಕಳು ಇದ್ದರೆ ಅವರಿಗೆ ಮದುವೆ ಮಾಡುವುದೇ ಪೋಷಕರಿಗೆ ದೊಡ್ಡ ಜವಾಬ್ದಾರಿ. ಹೀಗಿರುವಾಗ ವಿವಾಹ ಸಂಬಂಧಗಳು ಬಂದರೂ ಮದುವೆ ಕೈಗೂಡದಿ ದ್ದಾಗ ಪೋಷಕರು ಚಿಂತೆಗೆ ಒಳಗಾಗುವುದು ಸಹಜ. ವಿವಾಹ ಯೋಗ ವನ್ನು ನೋಡುವುದಾದರೆ ಕುಂಡಲಿಯ 7ನೇ ಮನೆ ಅತ್ಯಂತ ಮುಖ್ಯ ವಾಗಿರುತ್ತದೆ.
ಏಳನೇ ಮನೆಯಲ್ಲಿ ಯಾವುದೇ ಗ್ರಹಗಳು ಇಲ್ಲದೆ ಸಂಪೂರ್ಣವಾಗಿ ಖಾಲಿ ಯಾಗಿದ್ದರೆ ಮದುವೆ ವಿಳಂಬವಾಗಬಹುದು. ಇದಲ್ಲದೆ ಕೊಂಡಲಿಯಲ್ಲಿ ವಿವಿಧ ಗ್ರಹ ದೋಷಗಳ ಉಪಸ್ಥಿತಿಗಳು ಮದುವೆಯನ್ನು ವಿಳಂಬಗೊಳಿಸುತ್ತದೆ. ಏಳನೇ ಮನೆಯ ಅಧಿಪತಿ ರಾಹು ಮತ್ತು ಕೇತುಗಳ ಪ್ರಭಾವದ ಅಡಿಯಲ್ಲಿ ಮದುವೆ ವಿಳಂಬವಾಗಬಹುದು.
ವಕ್ರೀ ಅಥವಾ ದುರ್ಬಲಗೊಂಡ ಗುರು ಮದುವೆಯನ್ನು ವಿಳಂಬ ಗೊಳಿಸುತ್ತದೆ. ದುರ್ಬಲ ಗುರು ಕೂಡ ವೈವಾಹಿಕ ಜೀವನದಲ್ಲಿ ಅಸಮಂಜಸತೆಯನ್ನು ಸೃಷ್ಟಿಸುತ್ತಾನೆ. ದುರ್ಬಲ ಶುಕ್ರ ಅಥವಾ ಶನಿ ಜನ್ಮ ಕುಂಡಲಿಯಲ್ಲಿ ವಿವಾಹ ವಿಳಂಬವಾಗಬಹುದು ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.