ಪ್ರತಿಯೊಬ್ಬರೂ ಕೂಡ ತಮ್ಮ ಮನೆಯ ದೇವರ ಕೋಣೆಯಲ್ಲಿ ದೇವರ ಮುಂದೆ ದೀಪವನ್ನು ಹಚ್ಚಿ ಇಡುತ್ತಾರೆ. ಈ ದೀಪವನ್ನು ಲಕ್ಷ್ಮಿ ಸ್ವರೂಪ, ದೈವ ಸ್ವರೂಪ ಎಂದು ಕರೆಯಲಾಗುತ್ತದೆ. ದೀಪಕ್ಕೂ ಕೂಡ ನಾವು ದೇವರ ಸ್ಥಾನವನ್ನು ಕೊಟ್ಟಿದ್ದೇವೆ. ಹಾಗಾಗಿ ದೀಪ ಹಚ್ಚುವ ಪದ್ಧತಿ ಹಾಗೂ ಅದರ ಆಕರ ರೂಪಗಳ ಮೇಲು ಕೂಡ ಪೂಜೆಗೆ ಫಲಾನುಫಲನಗಳು ನಿರ್ಧಾರವಾಗುತ್ತವೆ.
ದೇವರಿಗೆ ದೀಪ ಹಚ್ಚುವ ಬಗ್ಗೆ ಕೂಡ ಅದರದ್ದೇ ಆದ ನಿಯಮಗಳಿವೆ. ದೀಪ ಹಚ್ಚುವಾಗ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಾಗಿ ನಾವು ಆ ದೋಷಗಳನ್ನು ಅನುಭವಿಸಬೇಕಾಗಿತ್ತದೆ. ಇದರಿಂದ ನಮಗೆ ಕಷ್ಟಗಳ ಹೊರೆ ಹೆಚ್ಚಾಗುತ್ತಿದೆ ಈ ರೀತಿ ಆಗಬಾರದು ಎಂದರೆ ದೀಪ ಹಚ್ಚಿದಾಗ ದೀಪದ ಮೇಲೆ ಗಮನ ಇರಬೇಕು ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ದೀಪದ ಬತ್ತಿ ಸುಟ್ಟು ಹೋಗಿ ದೀಪ ಕಪ್ಪಗಾಗಿ ಬಿಟ್ಟಿರುತ್ತದೆ.
ಈ ರೀತಿ ಆಗುವುದರಿಂದ ಅವರು ಬಹಳ ಭಯ ಭೀತರಾಗುತ್ತಾರೆ. ನಮಗೆ ಕೆಟ್ಟದಾಗುವ ಸೂಚನೆ ಇರಬಹುದಾ ಎಂದು ಚಿಂತೆ ಮಾಡುತ್ತಾರೆ. ಈ ವಿಷಯದ ಬಗ್ಗೆ ಹೇಳುವುದಾದರೆ ಯಾವಾಗಲಾದರೂ ಒಂದು ಸಾರಿ ಈ ರೀತಿ ಆಗುತ್ತಿದ್ದರೆ ಈದರ ಬಗ್ಗೆ ವಿಪರೀತವಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ಆ ದೀಪಗಳನ್ನು ಮತ್ತೆ ಸ್ವಚ್ಛ ಮಾಡಿಕೊಂಡು ಹೊಸ ಬತ್ತಿಹಾಕಿ ದೀಪವನ್ನು ಹಚ್ಚಿ, ಮನಸ್ಸಿನಲ್ಲಿ ದೇವರಿಗೆ ಪ್ರಾರ್ಥನೆ ಮಾಡಿದರೆ ಸಾಕು.
ಯಾವಾಗಲಾದರೂ ಒಂದು ಬಾರಿ ಈ ರೀತಿ ಆಗುತ್ತದೆ ಯಾವ ದೋಷವೂ ಉಂಟಾಗುವುದಿಲ್ಲ. ಆದರೆ ಪ್ರತಿನಿತ್ಯವೂ ಕೂಡ ಅಥವಾ ಪದೇ ಪದೇ ನಿಮ್ಮ ಮನೆಯಲ್ಲಿ ಈ ರೀತಿ ಆಗುತ್ತದೆ ಎಂದರೆ ನೀವು ಎಚ್ಚರಿಕೆಯಿಂದ ಇರಲೇಬೇಕು. ಈ ರೀತಿ ಆದಾಗ ನೀವು ಬಳಸುತ್ತಿದ್ದ ಹತ್ತಿಯನ್ನು ಬದಲಾಯಿಸಿ ಮೆಡಿಕಲ್ ಹತ್ತಿ ಅಥವಾ ಶುದ್ಧವಾದ ನಾಟಿ ಹತ್ತಿಯಿಂದ ನೀವೇ ಬತ್ತಿ ಮಾಡಿ, ದೀಪದ ಎಣ್ಣೆ ಸಮಸ್ಯೆಯಿಂದ ಕೂಡ ಈ ರೀತಿ ಆಗಬಹುದು ಬೇರೆ ಎಣ್ಣೆಯನ್ನು ಹಾಕಿ ಪ್ರಯತ್ನಿಸಿ.
ಈ ಪರಿಹಾರಗಳಿಂದ ಸಮಸ್ಯೆ ಸರಿ ಹೋಗಲಿಲ್ಲ ಎಂದರೆ ಮನೆಯಲ್ಲಿ ನೆಗೆಟಿವ್ ಎನರ್ಜಿಗಳ ಸಂಚಾರ ಹೆಚ್ಚಾಗಿದೆ ಎಂದು ಅರ್ಥ. ಎಲ್ಲ ಸರಿ ಇದ್ದು ದೀಪ ಪದೇಪದೇ ಈ ರೀತಿ ಆಗುತ್ತಿದೆ ಎಂದರೆ ಅದು ಕುಟುಂಬದ ನೆಮ್ಮದಿ ಕುಟುಂಬದವರ ಆರೋಗ್ಯ ಹಣಕಾಸಿನ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದಕ್ಕೆ ಪರಿಹಾರ ಏನೆಂದರೆ ಪ್ರತಿದಿನ ಕೂಡ ನೀವು ಮನೆ ಒರೆಸುವಾಗ ಆ ನೀರಿಗೆ ಉಪ್ಪು, ಗೋಮೂತ್ರ, ಅರಿಶಿನ ಮತ್ತು ಪಚ್ಚ ಕರ್ಪೂರ ಹಾಕಿ ಮನೆ ಒರೆಸಬೇಕು ಆಗ ನೆಗಟಿವ್ ಎನರ್ಜಿಗಳು ಹೊರ ಹೋಗುತ್ತವೆ ಸಮಸ್ಯೆ ಪರಿಹಾರ ಆಗುತ್ತದೆ.
ಹೆಚ್ಚಾಗಿ ಕಾಮಾಕ್ಷಿ ದೀಪದಂತಹ ದೀಪಗಳಲ್ಲಿ ಈ ರೀತಿ ಬತ್ತಿ ಸುಟ್ಟು ಹೋಗಿ ದೀಪ ಕಪ್ಪಾಗುವ ಸಮಸ್ಯೆ ಆಗುತ್ತದೆ. ಇದರ ಬದಲಾಗಿ ನೀವು ದೀಪದ ಮಧ್ಯದಿಂದ ಬತ್ತಿ ಹಾಕಿ ಪೋಣಿಸುವ ದೀಪಗಳನ್ನು ಉಪಯೋಗಿಸಿದರೆ ಈ ಸಮಸ್ಯೆ ಕಡಿಮೆ. ಆದರೂ ಕೂಡ ನಿಮಗೆ ಕಾಮಾಕ್ಷಿ ದೀಪಗಳನ್ನೇ ಹಚ್ಚಬೇಕು ಎನ್ನುವ ಮನಸಿದ್ದರೆ ದೀಪ ಹಚ್ಚಿದಾಗ ಎಚ್ಚರಿಕೆಯಿಂದ ಇರಬೇಕು. ಇನ್ನೇನು ಬತ್ತಿ ಮುಗಿದಿದೆ ಎಂದಾಗ ದೇವರ ಮೇಲಿರುವ ಹೂವನ್ನು ತೆಗೆದುಕೊಂಡು ದೀಪವನ್ನು ತಣ್ಣಗೆ ಮಾಡಬಹುದು ಈ ರೀತಿ ಮಾಡುವುದರಿಂದ ದೋಷ ಉಂಟಾಗುತ್ತದೆ ಎಂದು ಹೆದರುವ ಅಗತ್ಯ ಇಲ್ಲ, ಯಾಕೆಂದರೆ ಹಿಂದಿನ ಕಾಲದಲ್ಲಿ ಹಿರಿಯರು ಇದೇ ರೀತಿ ಮಾಡುತ್ತಿದ್ದರು.