ಜೀವನದಲ್ಲಿ ಯಾವುದು ಕಡಿಮೆಯಾದರೂ ನೆಮ್ಮದಿ ಇರುವುದು ಬಹಳ ಮುಖ್ಯ. ಅದರಲ್ಲೂ ಕುಟುಂಬದಲ್ಲಿ ನೆಮ್ಮದಿ ಎನ್ನುವುದು ಬಹಳ ಮುಖ್ಯ. ಕುಟುಂಬದ ಕಲ್ಪನೆ ಬರುವುದೇ ಗಂಡ ಹೆಂಡತಿ ಮಕ್ಕಳು ಎನ್ನುವುದರಿಂದ. ಮಕ್ಕಳಿಗೆ ಅಪ್ಪ ಅಮ್ಮ ಸಂತೋಷವಾಗಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಮತ್ತೊಂದಿಲ್ಲ ಹಾಗೆಯೇ ಹಿರಿಯ ತಂದೆ ತಾಯಿಗಳಿಗೂ ಕೂಡ ಮಗ ಸೊಸೆ ಅಥವಾ ಮಗಳು ಅಳಿಯ ಅನ್ಯೋನ್ಯವಾಗಿದ್ದರೆ ಅದಕ್ಕಿಂತ ನೆಮ್ಮದಿ ಬೇರೊಂದಿಲ್ಲ.
ಇವೆಲ್ಲವೂ ಬೆಲೆ ಕಟ್ಟಲಾಗದ ಆಸ್ತಿಗಳು ಎದೆಲ್ಲರ ಮೂಲ ಗಂಡ ಹೆಂಡತಿಯ ಬಾಂಧವ್ಯದಲ್ಲಿ ಅಡಗಿದೆ. ಹಾಗಾಗಿ ಎಲ್ಲ ಸಂಬಂಧಗಳಿಗಿಂತಲೂ ಬಹಳ ಶ್ರೇಷ್ಠವಾದ ವಿಶೇಷವಾದ ಅನುಬಂಧವಾದ ಗಂಡ ಹೆಂಡತಿಯ ಸಂಬಂಧದಲ್ಲಿ ಆಯ್ಕೆ ಅವಕಾಶಗಳು ಕೂಡ ಇರುತ್ತವೆ.
ಯಾಕೆಂದರೆ ನಾವು ಯಾರ ಮನೆಯಲ್ಲಿ ಹುಟ್ಟಬೇಕು ಅಥವಾ ಯಾರು ನಮಗೆ ಮಕ್ಕಳಾಗಿ ಬರಬೇಕು ಎನ್ನುವುದನ್ನು ನಾವು ನಿರ್ಧರಿಸಲು ಆಗುವುದಿಲ್ಲ. ಆದರೆ ಬದುಕಿನ ಪೂರ್ತಿ ಅರ್ಧಾಂಗಿಯಾಗಿ ಬರುವ ಸಂಗಾತಿಯನ್ನು ಆರಿಸಿಕೊಳ್ಳುವ ಆಯ್ಕೆ ನಮಗಿದೆ.
ಹಾಗಾಗಿ ಈ ಆಯ್ಕೆ ವಿಷಯದಲ್ಲಿ ಹೆಣ್ಣಾಗಲಿ ಗಂಡಾಗಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ. ಬರೀ ಬಾಹ್ಯ ಆಕರ್ಷಣೆಗಳಿಗೆ ಒಳಗಾಗಿ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಯಾಕೆಂದರೆ ಕೆಲವು ಹೆಣ್ಣು ಮಕ್ಕಳ ನೋಡಲು ಸುಂದರವಾಗಿ ಇಲ್ಲದೆ ಇದ್ದರೂ ಕೂಡ ಅವರಿಗೆ ಕುಟುಂಬವನ್ನು ಸರಿಯಾಗಿ ನಿರ್ವಹಿಸುವ, ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುವ, ಗಂಡನ ಮನೆಯವರಿಗೆ ಗೌರವ ಕೊಟ್ಟು ಸಂಸಾರವನ್ನು ಸಾಗಿಸುವ ಗುಣಗಳು ಇರುತ್ತವೆ.
ಹಾಗಾಗಿ ಮದುವೆ ಹಂತಕ್ಕೆ ಬಂದಾಗ ಹೆಣ್ಣು ಗಂಡನ್ನು ಆಲಿಸುವಾಗ ಗಂಡು ಹೆಣ್ಣು ಆರಿಸುವಾಗ ಬರಿ ಸೌಂದರ್ಯದ ವಿಚಾರ ನೋಡದೆ ಗುಣವನ್ನು ನೋಡಿ ಸಂಬಂಧ ಬೆಳೆಸಿಕೊಳ್ಳುವುದು ಬಹಳ ಉತ್ತಮ ಮತ್ತು ಈಗ ನಾವು ಹೇಳುವ ಈ ಲಕ್ಷಣಗಳು ಇರುವಂತ ಹೆಂಡತಿ ಸಿಕ್ಕರಂತೆ ನಿಮ್ಮ ಬದುಕು, ಸ್ವರ್ಗವಾಗುವುದರಲ್ಲಿ ಅನುಮಾನವೇ ಇಲ್ಲ.
ಯಾವ ಹೆಣ್ಣು ಮಕ್ಕಳಿಗೆ ಹಿರಿಯರಿಗೆ ಗೌರವ ಕೊಡಲು ಗೊತ್ತಿರುತ್ತದೆಯೋ ಯಾವ ಹೆಣ್ಣು ಮಗಳು ಯಾವಾಗಲೂ ಪ್ರಾಮಾಣಿಕವಾಗಿರುತ್ತಾಳೋ ತನಗೆ ಕ’ಷ್ಟ ಎದುರಾಗುತ್ತದೆ ಎಂದು ಗೊತ್ತಿದ್ದರೆ ಕೂಡ ಮುಚ್ಚು ಮರೆ ಮಾಡದೆ ಸತ್ಯವನ್ನು ಹೇಳುತ್ತಾಳೆ ಆಕೆ ನಿಜವಾಗಿಯೂ ಗ್ರೇಟ್ ಈ ರೀತಿಯ ಹೆಣ್ಣು ಮಕ್ಕಳು ಸಂಗಾತಿಯಾಗಿ ಬಂದರೆ ಜನಪೂರ್ತಿ ನೆಮ್ಮದಿಯಾಗಿರಬಹುದು.
ಪ್ರತಿಯೊಬ್ಬರು ಮನೆಯಿಂದ ಎಲ್ಲೇ ದುಡಿಯಲು ಹೋದರು ಕೊನೆಗೆ ವಾಪಸ್ ಬರುವುದು ಮನೆಗೆ, ಆ ಮನೆಯಲ್ಲಿ ನೆಮ್ಮದಿ ಇರಬೇಕಾದದ್ದು ಬಹಳ ಮುಖ್ಯ. ಹಾಗಾಗಿ ಹೆಣ್ಣು ಮಕ್ಕಳು ಅಥವಾ ಮದುವೆಯಾದ ಗೃಹಿಣಿಯರು ಮನೆಯ ಶಾಂತಿ ಕಾಪಾಡಿಕೊಳ್ಳಿ, ಗಂಡನ ಕ’ಷ್ಟ ಸುಖ ಅರಿತು ಅವರ ಇಚ್ಛೆಯಂತೆ ಬದುಕಿ ಅವರ ಕನಸುಗಳಿಗೆ ಸಪೋರ್ಟ್ ಮಾಡಿ.
ಗಂಡನಿಗೆ ಗೌರವ ಕೊಡಿ, ಗಂಡ ಹಾಗೂ ಗಂಡನ ಮನೆಯವರನ್ನು ಅವಮಾನ ಮಾಡಿ ಮಾತನಾಡಬೇಡಿ, ನಿಮ್ಮ ತವರು ಮನೆಗೆ ಹೋಗಿ ಗಂಡನ ಮನೆಯ ಸಣ್ಣ ಪುಟ್ಟ ಘಟನೆಗಳನ್ನು ಬಣ್ಣ ಕಟ್ಟಿ ಹೇಳಬೇಡಿ. ಅವಶ್ಯಕತೆ ಇಲ್ಲದಿದ್ದರೂ ಕೂಡ ಗಂಡನಿಗೆ ದುಬಾರಿ ಒಡವೆಗಳು, ದುಬಾರಿ ಬಟ್ಟೆಗಳನ್ನು ಕೊಡಿಸಿ ಎಂದು ಹಿಂಸಿಸಬೇಡಿ.
ಗಂಡನ ಆರೋಗ್ಯದ ಬಗ್ಗೆ ಹೆಚ್ಚು ಮಹತ್ವ ಕೊಡಿ ಅವರ ಬೇಕು ಬೇಡಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಡೆದುಕೊಳ್ಳಿ. ನೀವು ಈ ರೀತಿ ಇದ್ದರೆ ಹೊರಗೆ ಅವರಿಗೆ ಏನೇ ಸಮಸ್ಯೆ ಇದ್ದರೂ ಎದುರಿಸಿ ಬರುತ್ತಾರೆ ಮತ್ತು ತಮಗೆ ಎಷ್ಟೇ ಹೊರೆ ಇದ್ದರೂ ಅದರಲ್ಲೂ ಕೂಡ ನಿಮ್ಮ ಕಾರಣದಿಂದಾಗಿ ನೆಮ್ಮದಿ ಕಾಣುತ್ತಾರೆ.