Home Useful Information ಮನೆಯ ಮುಖ್ಯ ದ್ವಾರದಲ್ಲಿ ವಸ್ತುಗಳು, ಚಿನ್ಹೆಗಳು, ಗಿಡಗಳು ಇದ್ದರೆ ನಿಮಗೆ ಅದೃಷ್ಟವೇ ಅದೃಷ್ಟ.!

ಮನೆಯ ಮುಖ್ಯ ದ್ವಾರದಲ್ಲಿ ವಸ್ತುಗಳು, ಚಿನ್ಹೆಗಳು, ಗಿಡಗಳು ಇದ್ದರೆ ನಿಮಗೆ ಅದೃಷ್ಟವೇ ಅದೃಷ್ಟ.!

0
ಮನೆಯ ಮುಖ್ಯ ದ್ವಾರದಲ್ಲಿ ವಸ್ತುಗಳು, ಚಿನ್ಹೆಗಳು, ಗಿಡಗಳು ಇದ್ದರೆ ನಿಮಗೆ ಅದೃಷ್ಟವೇ ಅದೃಷ್ಟ.!

 

ಮನೆಯ ಮುಖ್ಯದ್ವಾರದ ಹತ್ತಿರ ಇರಬೇಕಾದ ಮಂಗಳಕರ ವಸ್ತುಗಳು ಮನೆಗೆ ಮಂಗಳವನ್ನುಂಟು ಮಾಡುವ ಹಾಗೂ ಕೆಟ್ಟ ದೃಷ್ಟಿ ಮತ್ತು ದುಷ್ಟ ಶಕ್ತಿಗಳ ಪ್ರಭಾವ ತಡೆಯಲು ಇರಬೇಕಾದ ಮುಖ್ಯ ವಸ್ತುಗಳ ಬಗ್ಗೆ ತಿಳಿಯೋಣ ಬನ್ನಿ. ಮೊದಲಿಗೆ ಮುಖ್ಯ ದ್ವಾರದ ಹೊಸ್ತಿಲಿಗೆ ಅರಿಶಿಣವನ್ನು ಹಚ್ಚಿ ಕುಂಕು ಮ ಇಟ್ಟು ರಂಗೋಲಿ ಬಿಡುವುದು ತುಂಬಾ ವಿಶೇಷ ಮತ್ತು ವೈಜ್ಞಾನಿಕ ವಾಗಿಯೂ ಒಳ್ಳೆಯದು ಇದರಿಂದ ಆ ಮನೆಯಲ್ಲಿ ಯಾವುದೇ Negative Energy ಪ್ರವೇಶಿಸುವುದಿಲ್ಲ.

ಇದರ ಜೊತೆ ಮನೆಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಕೂಡ ಇದೆ ಆದ್ದರಿಂದ ಪ್ರತಿನಿತ್ಯ ಹೊಸ್ತಿಲನ್ನು ತೊಳೆದು ಅರಿಶಿನ ಕುಂಕುಮ ಇಟ್ಟು ಪೂಜಿಸುವುದು ತುಂಬಾ ಉತ್ತಮ. ಮನೆಯ ಬಾಗಿಲಿಗೆ ಮಾವಿನ ತಳಿರು, ತೋರಣ ಕಟ್ಟುವುದು, ಮನೆಗೆ ತುಂಬಾ ಮಂಗಳಕರ. ಪ್ರತಿನಿತ್ಯ ಕಟ್ಟುವುದಕ್ಕೆ ಸಾಧ್ಯವಾಗಲಿಲ್ಲ ಎಂದರು ಯಾವುದಾದರು ಹಬ್ಬ ಹರಿದಿನದ ಸಂದರ್ಭದಲ್ಲಿ ಮಾವಿನ ತಳಿರು ತೋರಣಗಳನ್ನು ಕಟ್ಟುವುದು ತುಂಬಾ ಶುಭಕರ ಎಂದು ಪರಿಗಣಿಸಲಾಗುತ್ತದೆ.

ಮನೆಯ ಮುಖ್ಯದ್ವಾರದ ಹತ್ತಿರ ಓಂ ಅಥವಾ ಸ್ವಸ್ತಿಕ ಚಿನ್ಹೆ ಇರುವುದು ಕೂಡ ಒಳ್ಳೆಯದು ಇಲ್ಲವೆಂದರೆ ಅರಿಶಿಣದಿಂದ ಬರೆಯುವುದು ಕೂಡ ಮಂಗಳಕರ. ಹೂವಿನ ಪಕಳೆಗಳನ್ನು ಹಾಕಿದ ಪಾಟ್ ಅನ್ನು ಮುಖ್ಯ ದ್ವಾರದ ಬಳಿ ಅಥವಾ ಮನೆ ದ್ವಾರದ ಬಳಿ ಇಡಿ, ನಿಮ್ಮ ಮನೆ ಮತ್ತು ಕುಟುಂಬದ ಸದಸ್ಯರನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುತ್ತದೆ.

ಕುದುರೆಗಳಿಗೆ ಬಳಸಿ ತೆಗೆದಿರುವಂತಹ ಲಾಳವನ್ನು ಮುಖ್ಯದ್ವಾರದ ಹತ್ತಿರ ಹಾಕುವುದು ತುಂಬಾ ಒಳ್ಳೆಯದು ಈ ರೀತಿ ಲಾಳವನ್ನು ಹಾಕುವುದರಿಂದ ಆ ಮನೆಯ ಮೇಲೆ ಯಾವುದೇ ರೀತಿಯ ದುಷ್ಟ ಶಕ್ತಿಗಳು ಕೂಡ ಪ್ರವೇಶಿಸುವುದಿಲ್ಲ ಹಾಗೂ ಮನೆಯಲ್ಲಿ ಯಾವುದೇ ನೆಗೆಟಿವ್ ಎನರ್ಜಿ ಇದ್ದರೂ ಕೂಡ ಅದು ದೂರವಾಗುತ್ತದೆ ಎನ್ನುವ ನಂಬಿಕೆ.

* ಮುಖ್ಯದ್ವಾರದ ಹತ್ತಿರ ಮರದಿಂದ ಅಥವಾ ಮಣ್ಣಿನಿಂದ ಮಾಡಿದ ಆನೆಯ ಮೂರ್ತಿಗಳನ್ನು ಇಡುವುದು ಅಥವಾ ಆನೆಯ ಕಣ್ಣಿನ ಚಿತ್ರ ವನ್ನು ಹಾಕುವುದು ಒಳ್ಳೆಯದು. ಆನೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ ಆದ್ದರಿಂದ ಆನೆಯ ಮೂರ್ತಿಗಳನ್ನು ಇಡುವುದು ಮನೆಗೆ ತುಂಬಾ ಶುಭಕರ.

ಮುಖ್ಯ ದ್ವಾರದ ಸಮೀಪದಲ್ಲಿ ಶೌಚಾಲಯಗಳು ಇರಬಾರದು. ಶೂ ಬ್ಯಾಕ್‌ಗಳು ಇರಬಾರದು ಇದು ಅನುಕೂಲಕರವಾದರೂ, ಇಂಥ ಹವ್ಯಾಸವನ್ನು ದೂರವಿಡಬೇಕು ಮನೆಯ ಮುಂದೆ ಬಿಳಿ ಎಕ್ಕದ ಗಿಡ, ದಾಳಿಂಬೆ ಗಿಡ ಇದ್ದರೆ ಮಂಗಳ ಕರ. ಎಕ್ಕದ ಗಿಡವನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ ಆದ್ದರಿಂದ ಬಿಳಿ ಎಕ್ಕಡದ ಗಿಡವನ್ನು ಎಲ್ಲರೂ ಕೂಡ ಪೂಜಿಸುತ್ತಾರೆ ಹಾಗೂ ಇದು ಗಣಪತಿಗೂ ತುಂಬಾ ಶ್ರೇಷ್ಠ.

* ಮನೆಯ ಮುಂದೆ ತುಳಸಿ ಕಟ್ಟೆ ಇರಬೇಕು ಪ್ರತಿದಿನ ಮುಂಜಾನೆ ಸ್ವಚ್ಚ ಮಾಡಿ ನಂತರ ತುಳಸಿಗೆ ನೀರು ಅರ್ಪಿಸಿ ಸ್ನಾನದ ನಂತರ ಪೂಜೆಯನ್ನು ಮಾಡಿದರೆ ಆ ಮನೆಯಲ್ಲಿ ನಕಾರಾತ್ಮಕತೆ ದೂರವಾಗಿ ಒಳ್ಳೆಯದಾಗುವುದು. ಹಾಗೆಯೇ ಮನೆಯಲ್ಲಿ ಪ್ರವೇಶಿಸುವ ಮುಂಚೆ ಕಾಲುಗಳನ್ನು ಸ್ವಚ್ಚ ವಾಗಿ ತೊಳೆದುಕೊಳ್ಳುವುದು ನಮ್ಮ ಹಿರಿಯರು ಹೇಳಿಕೊಟ್ಟಿರುವ ಒಳ್ಳೆಯ ಅಭ್ಯಾಸ‌

ಡೋರ್‌ ಮ್ಯಾಟ್‌ಗಳನ್ನು ಹಾಕಿಡಿ ಇದರಿಂದ ದುಷ್ಟ ಶಕ್ತಿಗಳು ಮತ್ತು ಕೊಳೆ ಮನೆ ಪ್ರವೇಶಿಸುವುದಿಲ್ಲ ಜನರು ಕಾಲು ತೊಳೆದು ಒಳಗೆ ಬರುವಾಗ ತಮ್ಮ ಕಾಲುಗಳನ್ನು ಈ ಡೋರ್‌ಮ್ಯಾಟ್‌ ನಲ್ಲಿ ಸ್ವಚ್ಛಗೊಳಿಸಿ ಬರಲು ಹೇಳಿ ಮುಖ್ಯದ್ವಾರದ ಹತ್ತಿರ ಸಂಜೆ ವೇಳೆ ಒಂದು ದೀಪವನ್ನು ಹಚ್ಚಿಟ್ಟರೆ ಒಳ್ಳೆಯದು.

LEAVE A REPLY

Please enter your comment!
Please enter your name here