ದೇವರ ಮನೆ ಎನ್ನುವುದು ಮನೆಯಲ್ಲಿನ ಒಂದು ಪವಿತ್ರವಾದ ಭಾಗ ಮನುಷ್ಯನ ದೇಹಕ್ಕೆ ಹೃದಯ ಎಷ್ಟು ಮುಖ್ಯವೋ ಹಾಗೆ ಮನೆ ಎನ್ನುವುದಕ್ಕೆ ದೇವರ ಕೋಣೆಯು ಅಷ್ಟೇ ಮುಖ್ಯ. ನಮಗೆ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಮಡಿಯಾಗಿ ಹೋಗಬೇಕೆಂದು ಎನಿಸುವ ಮೊದಲ ಜಾಗ ಇದೇ, ಹಾಗೆಯೇ ದಿನಪೂರ್ತಿಯ ಜಂಜಾಟದಲ್ಲಿ ಎಷ್ಟೇ ನೋ’ವಾಗಿದ್ದರು ಮನೆಗೆ ಬಂದ ಮೇಲೆ ನಮ್ಮ ಕ’ಷ್ಟ ಸುಖಗಳನ್ನು ನೆಮ್ಮದಿಯಾಗಿ ಕುಳಿತು ಭಗವಂತನ ಬಳಿ ಹೇಳಿಕೊಳ್ಳುತ್ತಿದ್ದೇನೆ ಎನ್ನುವಂತಹ ಭಾವನೆಯನ್ನು ನಮಗೆ ಉಂಟು ಮಾಡುವಂತಹ ಸ್ಥಳ.
ಹಾಗಾಗಿ ದೇವರ ಕೊನೆಯು ಸ್ವರ್ಗಕ್ಕೆ ಸಮಾನ ಎಂದರೆ ತಪ್ಪಾಗಲಾರದು. ಯಾರಿಗೆ ಆಗಲಿ ದೇವರ ಮನೆಯನ್ನು ಹೊಕ್ಕಿದ ತಕ್ಷಣವೇ ಒಂದು ರೀತಿಯ ಸಮಾಧಾನ ಬರುತ್ತದೆ. ಆದರೆ ಇಂತಹ ದೇವರ ಕೋಣೆಯಲ್ಲಿ ಕೆಲವರು ಸಿಕ್ಕಸಿಕ್ಕ ವಸ್ತುಗಳನ್ನೆಲ್ಲ ಇಡುತ್ತಾರೆ.
ಈ ಸುದ್ದಿ ಓದಿ:- ಬುಧವಾರದ ಪಕ್ಷಿಗಳಿಗೆ ಮಿಸ್ ಮಾಡದೆ ಈ ಕಾಳು ತಿನ್ನಿಸಿ, ನೀವು ಅಂದುಕೊಂಡ ಕೆಲಸ 100% ವಾರದೊಳಗೆ ಆಗುತ್ತೆ.!
ಅದರಿಂದ ದೇವರ ಕೋಣೆಗೆ ಇರುವ ಪವಿತ್ರ ಹೋಗುವುದು ಮಾತ್ರವಲ್ಲದೆ ಅವರು ಇದೆಲ್ಲ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಲು ಆಗುವುದಿಲ್ಲ ಹಾಗಾದರೆ ಯಾವ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡುವುದು ತಪ್ಪು ಇದರಿಂದ ಎಂತಹ ಕಷ್ಟಗಳು ಎದುರಾಗುತ್ತವೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ ನಾವು ಈ ಲೇಖನದಲ್ಲಿ ಇದರ ಬಗ್ಗೆ ತಿಳಿಸುತ್ತಿದ್ದೇವೆ.
* ನಾವು ದೇವರಿಗೆ ಅಲಂಕಾರ ಮಾಡಿದ ಹೂವು ಚೆನ್ನಾಗಿದೆ ಎಂದು ಎರಡು ಮೂರು ದಿನಗಳವರೆಗೆ ಅದನ್ನು ಹಾಗೆಯೇ ಬಿಟ್ಟರೆ ದೋಷಗಳನ್ನು ಅನುಭವಿಸಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಮ್ಮ ಕೆಲಸಗಳಿಗೆ ವಿಘ್ನಗಳು ಎದುರಾಗುತ್ತವೆ ಮತ್ತು ಯಾವುದೇ ಕೆಲಸ ಮಾಡಲು ಹೊರಟರು ವಿಳಂಬಗಳು ಅಡೆತಡೆಗಳು ಆಗುತ್ತವೆ ಹೊರತು ಕೈಗೊಂಡ ಕಾರ್ಯ ಪೂರ್ತಿ ಆಗುವುದಿಲ್ಲ
* ದೇವರ ಕೋಣೆಯಲ್ಲಿ ನೀವೇನಾದರೂ ವಿಗ್ರಹಗಳನ್ನು ಇಟ್ಟುಕೊಂಡು ಪೂಜೆ ಮಾಡುತಿದ್ದರೆ ಈ ನಿಯಮದ ಬಗ್ಗೆ ತಿಳಿದಿರಿ. ನಿಮ್ಮ ಮನೆಯ ಹಿರಿಯರ ಹೆಬ್ಬೆರಳಿನ ಗಾತ್ರಕ್ಕಿಂತ ಹಿರಿಯ ವಿಗ್ರಹಗಳು ಇರಬಾರದು ಒಂದು ವೇಳೆ ಇದ್ದರೆ ಪ್ರತಿನಿತ್ಯ ಪೂಜೆ ಸಲ್ಲಬೇಕು ತಪ್ಪದೆ ನಿಯಮ ಬದ್ಧವಾಗಿ ನಡೆದುಕೊಂಡು ಧೂಪ ದೀಪ ನೈವೇದ್ಯಗಳನ್ನು ಅರ್ಪಿಸಿ ಆರಾಧಿಸಬೇಕು ಇಲ್ಲವಾದರೆ ನೀವು ಅನೇಕ ಗೃಹ ದೋಷಗಳನ್ನು, ವಾಸ್ತುದೋಷಗಳನ್ನು ಅನುಭವಿಸಬೇಕಾಗುತ್ತದೆ.
ಈ ಸುದ್ದಿ ಓದಿ:-ವೃಷಭ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಮಾರ್ಚ್ ತಿಂಗಳಲ್ಲಿ ಸರ್ಪ್ರೈಸ್ ಕಾದಿದೆ ನಿಮಗೆ.!
* ಅದೇ ರೀತಿಯಾಗಿ ದೇವರ ಕೋಣೆಯಲ್ಲಿ ಇಟ್ಟಿರುವ ವಿಗ್ರಹಗಳಲ್ಲಿ ಆಗಲಿ ಫೋಟೋಗಳಲ್ಲಿ ಆಗಲಿ ಮುಖ ಭಾವವು ಶಾಂತ ಸ್ವರೂಪವಾಗಿರಬೇಕು. ಯಾವುದೇ ದೇವರ ಉಗ್ರಾವತಾರದ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಂಡು ಪೂಜಿಸಬಾರದು.
ಇದರಿಂದ ಮನೆಯ ಶಾಂತಿಯ ವಾತಾವರಣ ಹದಗೆಡುತ್ತದೆ ಮತ್ತು ಮನೆಯಲ್ಲಿ ಕೋ’ಪ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ನಿಮಗೆ ಆ ದೇವರು ಇಷ್ಟವಾಗಿದ್ದಲ್ಲಿ ನೀವು ತಪ್ಪದೆ ಆ ದೇವರ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ಸಮಯ ಕಳೆದು ಬರಬಹುದು ಹೊರತು ದೇವರ ಕೋಣೆಯಲ್ಲಿ ಇಡಬಾರದು. ಮನೆಗಳಲ್ಲಿ ಯಾವಾಗಲೂ ಶಾಂತರೂಪದ ದೇವತೆಗಳ ಫೋಟೋಗಳನ್ನು ಆರಾಧಿಸಬೇಕು.
ಈ ಸುದ್ದಿ ಓದಿ:-ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!
* ದೇವರ ಕೋಣೆಯಲ್ಲಿ ಶಂಖ ಇಡುವುದು ಶ್ರೇಷ್ಠ ಇದು ವಿಷ್ಣುವಿನ ಸ್ವರೂಪ ಎನ್ನಲಾಗಿದೆ. ಆದರೆ ದೇವರಕೋಣೆಯಲ್ಲಿ ಎರಡು ಶಂಖಗಳನ್ನು ಇಡಬಾರದು ಮತ್ತು ಪ್ರತಿದಿನದ ಪೂಜೆಗಾಗಿ ಒಂದೇ ಶಂಖವನ್ನು ಬಳಸಬೇಕು, ಹಾಗೆಯೇ ಇದರಲ್ಲಿ ದೈವಿಕ ಗುಣ ಇರುವುದರಿಂದ ಆಗಾಗ ಇದನ್ನು ಬದಲಾಯಿಸುವುದು ಕೂಡ ಒಳ್ಳೆಯದಲ್ಲ
* ದೇವರ ಕೋಣೆಯಲ್ಲಿ ಯಾವಾಗಲೂ ಪೂಜಾ ಸಾಮಗ್ರಿಗಳು ನಮ್ಮ ಹಿರಿಯರು ಬಳಸಿಕೊಂಡು ಬಂದಿದ್ದ ಪೂಜಾ ಸಾಮಗ್ರಿಗಳೇ ಆಗಿದ್ದರೆ ಬಹಳ ಒಳ್ಳೆಯದು. ಯಾಕೆಂದರೆ ಈ ಸಾಮಗ್ರಿಗಳಲ್ಲಿ ಈಗಾಗಲೇ ದೈವಿಕ ಗುಣ ಬಂದಿರುತ್ತದೆ ಹಾಗಾಗಿ ಎಷ್ಟೇ ಹಳೆಯದಾಗಿದ್ದರು ಇದನ್ನು ಸ್ವಚ್ಛ ಮಾಡಿ ಬಳಸಬೇಕು ಮತ್ತು ಆಗಾಗ ಇವುಗಳನ್ನು ಬದಲಾಯಿಸಲೂ ಬಾರದು ಎನ್ನುತ್ತದೆ ಶಾಸ್ತ್ರ.