ಮನೆ ಕಟ್ಟಿಸಬೇಕು ಎನ್ನುವುದು ಜೀವನದ ಬಹಳ ದೊಡ್ಡ ಆಕಾಂಕ್ಷೆಗಳಲ್ಲಿ ಒಂದು ಮತ್ತು ಇದು ಸುಲಭಕ್ಕೆ ಸಿದ್ಧಿಯಾಗುವುದು ಕೂಡ ಅಲ್ಲ. ಇದಕ್ಕೆ ಹಣ ಒದಗಿಸುವುದರ ಜೊತೆಗೆ ಯೋಗ ಕೂಡ ಕೂಡಿ ಬರಬೇಕು. ಎಷ್ಟೋ ಬಾರಿ ಸೈಟ್ ಇದ್ದು ಕೈಯಲ್ಲಿ ಹಣ ಇದ್ದರೂ ಮನೆ ಕಟ್ಟಿಸುವುದಕ್ಕೆ ಆಗದೆ ಬಾಡಿಗೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಇರುತ್ತದೆ.
ಇನ್ನು ಕೆಲವರಿಗೆ ಸಾಲ ಸೋಲ ಮಾಡಿ ಮನೆ ಕೆಲಸಕ್ಕೆ ಕೈ ಹಾಕಿದರು ಅದು ಪೂರ್ತಿ ಆಗದೆ 108 ವಿಜ್ಞಗಳು ಎದುರಾಗುತ್ತಿರುತ್ತವೆ. ಈ ರೀತಿ ಯಾವುದೇ ಆಸ್ತಿ ಅಥವಾ ಭೂಮಿಗೆ ಖರೀದಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಅಥವಾ ಮನೆ ಆಸ್ತಿ ಸೈಟು ಈ ಕುರಿತಾಗಿ ಕೋರ್ಟು ಕಚೇರಿಗಳಲ್ಲಿ ವ್ಯಾಜ್ಯ ಇದ್ದರೆ ಇದೆಲ್ಲದರ ಪರಿಹಾರಕ್ಕಾಗಿ ನಾವು ಹೇಳುವ ಈ ವಿಧಾನದಲ್ಲಿ ಒಂದು ಪೂಜೆ ಮಾಡಿ ಸಾಕು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!
ಭೂವರಾಹ ಸ್ವಾಮಿಯು ಈ ರೀತಿ ಭೂಮಿಗೆ ಸಂಬಂಧಿಸಿದ ಯೋಗಗಳನ್ನು ಕೊಡುವ ದೇವರಾಗಿದ್ದಾರೆ ಮತ್ತು ವರಾಹ ಪುರಾಣದಲ್ಲಿ ಭೂಮಿಗೆ ಸಂಬಂಧಿಸಿದ ಯೋಗಗಳನ್ನು ಪಡೆದುಕೊಳ್ಳಲು ಪಾಲಿಸಬೇಕಾದ ವ್ರತಾಚರಣೆಗಳ ಬಗ್ಗೆ ತಿಳಿಸಲಾಗಿದೆ.
ಅದರಲ್ಲಿ ಹೇಳಿರುವ ಪ್ರಕಾರ ಭೂವರಾಹ ಸ್ವಾಮಿಯು ಕೂಡ ವಿಷ್ಣುವಿನ ಅವತಾರವೇ ಆಗಿದ್ದಾರೆ. ಹಾಗಾಗಿ ಸಂಪತ್ತಿಗೆ ಒಡತಿಯಾದ ತಾಯಿ ಮಹಾಲಕ್ಷ್ಮಿಯ ಪತಿಯಾದ ಮಹಾವಿಷ್ಣು ನಮಗೆ ಸ್ವಗೃಹ ಯೋಗಕ್ಕೆ ಅನುಗ್ರಹಿಸಬೇಕು. ಈತನನ್ನು ನಾರಾಯಣ, ತಿರುಪತಿ, ತಿಮ್ಮಪ್ಪ, ವೆಂಕಟೇಶ್ವರ ಯಾವ ನಾಮದಿಂದ ಕರೆದರೂ ನಡೆಯುತ್ತದೆ ಆದರೆ ಶನಿವಾರದ ಪೂಜೆಯು ಈ ರೀತಿ ದೋಷಗಳ ಪರಿಹಾರಕ್ಕಾಗಿ ಪೂಜಿಸುವುದಕ್ಕೆ ಸೂಕ್ತ ದಿನವಾಗಿದೆ.
ನೀವು ಯಾವ ರೀತಿಯಾಗಿ ಶನಿವಾರದಂದು ಈ ಪೂಜೆ ಮಾಡಬೇಕು ಎಂದರೆ ಶನಿವಾರದಂದು ಇದನ್ನು ಆರಂಭಿಸಿ 90 ದಿನಗಳವರೆಗೆ ಮಾಡಬೇಕು, 90 ದಿನಗಳು ಆಗುವವರೆಗೂ ಕೂಡ ಪ್ರತಿ ಶನಿವಾರದಂದು ಸಿಹಿ ತಿನಿಸು ಮಾಡಿ ದೇವರಿಗೆ ನೈವೇದ್ಯ ತೋರಿಸಿ ನಿಮ್ಮ ಮನೆಯ ಜನರು ಮಾತ್ರ ಆ ಸಿಹಿ ಪದಾರ್ಥವನ್ನು ಸೇವಿಸಬೇಕು.
ಈ ಸುದ್ದಿ ಓದಿ:-ತೂತಾದ ಬಟ್ಟೆಯನ್ನು ಕೇವಲ ಒಂದು ನಿಮಿಷದಲ್ಲಿ ಒಂದು ಚೂರು ವ್ಯತ್ಯಾಸ ಗೊತ್ತಾಗದಂತೆ ರಿಪೇರಿ ಮಾಡಬಹುದು ಹೇಗೆ ಅಂತ ನೋಡಿ.!
ಹೆಣ್ಣು ಮಕ್ಕಳು ತಿಂಗಳಿನ ಸಮಸ್ಯೆ ಬಂದಾಗ ಐದು ದಿನ ಈ ವ್ರತ ನಿಲ್ಲಿಸಿ ಮತ್ತೆ ದಿನಗಳನ್ನು ಲೆಕ್ಕ ಹಾಕಿಕೊಂಡು ಆರಂಭಿಸಬಹುದು. ಇದು ಸರಳ ಮತ್ತು ಅಷ್ಟೇ ಕಟ್ಟುನಿಟ್ಟಾಗಿ ಪಾಲಿಸಬೇಕಾದ ವ್ರತ ಆಗಿದೆ. ಇದರಲ್ಲಿ ಶ್ರದ್ಧೆ ಭಕ್ತಿ ನಂಬಿಕೆ ಬಹಳ ಮುಖ್ಯ. 90 ದಿನಗಳವರೆಗೆ ದಿನ ಬೆಳಗ್ಗೆ ಹಾಗೂ ಸಂಜೆ ಸಮಯದಂದು ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಇದೇ ಕಾರಣಕ್ಕಾಗಿ ಭಗವಂತನನ್ನು ಪ್ರಾರ್ಥಿಸಿ ಒಂದು ಮಂತ್ರವನ್ನು ಹೇಳಬೇಕು.
ಯಾವ ಮಂತ್ರ ಎನ್ನುವುದನ್ನು ಲೇಖನದ ಕೊನೆಯಲ್ಲಿ ತಿಳಿಸುತ್ತೇವೆ. ಈ ಮಂತ್ರವನ್ನು ಬೆಳಗ್ಗೆ 21 ಬಾರಿ ಹಾಗೂ ಸಂಜೆ 21 ಬಾರಿ ದೇವರ ಕೋಣೆಯಲ್ಲಿ ಕುಳಿತು ಅಥವಾ ದೇವರ ಧ್ಯಾನ ಮಾಡುತ್ತಾ ಒಂದು ನಿಶಬ್ದವಾದ ವಾತಾವರಣದಲ್ಲಿ ಕುಳಿತು ಹೇಳಬೇಕು. ಭಗವಂತನೇ ನಿಮ್ಮ ಬಳಿ ಬಂದು ನಿಮ್ಮ ಕಷ್ಟ ಕೇಳುತ್ತಿದ್ದಾರೆ ಎನ್ನುವ ರೀತಿ ಭಾವಿಸಿ ಹೇಳಬೇಕು ನಿಮ್ಮ ಕೋರಿಕೆ ಈಡೇರಿಸಿಕೊಳ್ಳಲು ಪ್ರಾರ್ಥಿಸಬೇಕು.
ಈ ಸುದ್ದಿ ಓದಿ:-ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!
90 ದಿನಗಳವರೆಗೆ ಯಾವುದೇ ರೀತಿಯ ಮದ್ಯ ಮಾಂಸ ಇತ್ಯಾದಿಗಳನ್ನು ಸೇವಿಸಬಾರದು ಮತ್ತು ಧೂಮಪಾನ ಗುಟ್ಕಾ ಸೇವನೆ ಇಂತಹ ಕೆಟ್ಟ ಚಟಗಳಿಂದ ದೂರ ಇರಬೇಕು ಮತ್ತು ಯಾವುದೇ ರೀತಿಯ ಮೋಹಕ್ಕೂ ಒಳಗಾಗದೆ ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಈ ವ್ರತ ಆಚರಣೆ ಮಾಡಬೇಕು ಇದು ಮುಗಿಯುವುದರ ಒಳಗೆ ನಿಮಗೆ ಶುಭ ಫಲ ಸಿಗುವುದು ಖಂಡಿತ.
21 ಬಾರಿ ಹೇಳಬೇಕಾದ ಮಂತ್ರ:-
ಸೂರ್ಯ ವೈಕುಂಠ ನಾಕೆಭ್ಯಃ ಪ್ರಿಯೋಯಂ ವೆಂಕಟಾಚಲಃ
ತಸ್ಮಿಸ್ ಹಿ ರಮತೆನಿತ್ಯಂ ಶ್ರೀನಿವಾಸಂ ಶ್ರಿಯಾ ಸಹ