ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಘಟನೆಗೂ ಹಾಗೂ ಪ್ರತಿ ಯೊಂದು ವಿಚಾರದಲ್ಲಿಯೂ ಕೂಡ ಹಲವಾರು ವಿಷಯಗಳು ಅಡ ಗಿದ್ದು ಅವುಗಳು ನಮ್ಮ ಜೀವನದಲ್ಲಿ ಬರುವಂತಹ ಸನ್ನಿವೇಶಗಳಿಗೆ ಅಷ್ಟೇ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅಂದರೆ ನಮ್ಮ ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಘಟನೆಗಳು ಸಂಭವಿಸುತ್ತಿದ್ದರೆ ಅದು ನಮ್ಮ ಜೀವನದ ಏಳಿಗೆಯನ್ನು ಹೆಚ್ಚಿಸುತ್ತದೆ ಅಥವಾ ಅದು ನಮ್ಮ ಜೀವನದ ಒಳ್ಳೆಯ ಸಮಯವನ್ನು ಹಾಳು ಮಾಡುತ್ತದೆ ಅಂದರೆ ನಮ್ಮನ್ನು ನಷ್ಟಕ್ಕೆ ದೂಡುತ್ತದೆ ಎನ್ನುವಂತಹ ಸೂಚನೆಯನ್ನು ಅದು ತೋರುತ್ತದೆ.
ಹಾಗಾಗಿ ಯಾವ ಕೆಲವು ಲಕ್ಷಣಗಳು ನಮಗೆ ಕಾಣಿಸಿ ಕೊಂಡರೆ ಅದು ನಮಗೆ ಶುಭವಾಗುತ್ತದೆ ಹಾಗೂ ಯಾವ ಕೆಲವು ಸೂಚನೆಗಳು ನಮಗೆ. ನಷ್ಟವನ್ನು ಬರಿಸುತ್ತದೆ ಎನ್ನುವಂತಹ ಮಾಹಿತಿಯನ್ನು ತಿಳಿಯೋಣ. ನಮ್ಮ ಮನೆಯಲ್ಲಿ ನಮಗೆ ತಿಳಿದೋ ತಿಳಿಯದೆಯೋ ಕೆಲವೊಂದು ಲಕ್ಷಣಗಳು ಅಂದರೆ ಸೂಚನೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆದರೆ ಅದು ಯಾವ ಒಂದು ಕಾರಣಕ್ಕಾಗಿ ನಡೆಯುತ್ತಿದೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ.
ಬದಲಿಗೆ ಅದು ಸರ್ವೇಸಾಮಾನ್ಯ ಎಂದು ಸುಮ್ಮನಿರುತ್ತಾರೆ. ಆದರೆ ಆ ಸೂಚನೆಗಳು ನಮಗೆ ಕೆಲವೊಮ್ಮೆ ನಮ್ಮ ಜೀವನದ ಅದೃಷ್ಟವನ್ನೇ ಬದಲಾಯಿಸುತ್ತದೆ ಎಂದು ಹೇಳಿದರೆ ನೀವು ನಂಬಲೇಬೇಕು. ಹೌದು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಕೆಲವೊಂದು ಘಟನೆಗಳು ಸಂಭವಿಸಿದರೆ ಅದು ನಮಗೆ ಏಳಿಗೆಯನ್ನು ತಂದು ಕೊಡುತ್ತದೆ.
ಹಾಗಾದರೆ ಈ ದಿನ ಯಾವ ಕೆಲವು ಸೂಚನೆಗಳು ನಮ್ಮ ಮನೆ ಯಲ್ಲಿ ಕಾಣಿಸಿಕೊಂಡರೆ ಅಥವಾ ಆ ಒಂದು ಘಟನೆಗಳು ನಡೆಯುತ್ತಿದ್ದರೆ ನಮಗೆ ಅದೃಷ್ಟವನ್ನು ತಂದುಕೊಡುತ್ತದೆ ಎನ್ನುವಂತಹ ಮಾಹಿತಿ ಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಲ್ಲಿ :- ಹಲ್ಲಿಯನ್ನು ನೋಡುವುದು ಒಳ್ಳೆಯ ಶಕುನವೆಂದು ಪರಿಗಣಿಸ ಲಾಗುತ್ತದೆ. ಹಲ್ಲಿ ತುಳಸಿ ಗಿಡದ ಸುತ್ತಲೂ ತಿರುಗುತ್ತಿದ್ದರೆ ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುತ್ತಾಳೆ ಎಂದು ಅರ್ಥಮಾಡಿಕೊಳ್ಳಿ. ಬದಲಿಗೆ ಮನೆಯಲ್ಲಿ ಹಲ್ಲಿಗಳು ಇದ್ದರೆ ಅದನ್ನು ಯಾವುದೇ ಕಾರಣಕ್ಕೂ ಮನೆಯಿಂದ ಆಚೆ ಹಾಕಬೇಡಿ ಅದರಲ್ಲೂ ಅದನ್ನು ಸಾಯಿಸಬೇಡಿ ಅದು ನಿಮಗೆ ಒಳ್ಳೆಯ ಶುಭ ಸೂಚಕವಾಗಿರುತ್ತದೆ.
ಕನಸು :- ನಿಮ್ಮ ಕನಸಿನಲ್ಲಿ ಗೂಬೆ, ಪೊರಕೆ, ಆನೆ ಮತ್ತು ಗುಲಾಬಿ ಹೂವು ಕಂಡರೆ ಇದು ಸಾಮಾನ್ಯ ಕನಸಲ್ಲ. ಇದು ತಾಯಿ ಲಕ್ಷ್ಮಿಯ ಆಗಮನದ ಸಂಕೇತವಾಗಿದೆ. ಹೌದು ಯಾವುದಾದರೂ ಒಂದು ಘಟನೆ ನಿಮ್ಮ ಕಣ್ಣ ಮುಂದೆ ಬಂದು ಅಲ್ಲಿ ಗೂಬೆಗಳು ಆನೆಗಳು, ಗುಲಾಬಿ ಹೂವು ಕಂಡರೆ ನಿಮಗೆ ಹಣಕಾಸಿನ ಅಭಿವೃದ್ಧಿಯಾಗುತ್ತದೆ ಎನ್ನುವುದು ಇದರ ಸೂಚನೆಯಾಗಿದೆ.
ಗುಬ್ಬಜ್ಜಿ ಮನೆಯಲ್ಲಿ ಗೂಡು ಕಟ್ಟುತ್ತದೆ :- ಗುಬ್ಬಚ್ಚಿ ಮನೆಯಲ್ಲಿ ಗೂಡು ಕಟ್ಟಿದರೆ ಅದನ್ನು ತೆಗೆದುಹಾಕುವವರೇ ಹೆಚ್ಚು ಆದರೆ ಇದನ್ನು ಮಾಡ ಬೇಡಿ. ನಿಮ್ಮ ಮನೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟದರೆ ಶುಭ ಶಕುನ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದು ತಾಯಿ ಲಕ್ಷ್ಮಿಯ ಆಗಮನದ ಮೊದಲ ಸಂಕೇತ.
ಪೊರಕೆ :- ಪ್ರತಿ ಮನೆಯಲ್ಲೂ ಪೊರಕೆ ಬಳಸುತ್ತಾರೆ. ಜ್ಯೋತಿಷ್ಯದಲ್ಲಿ ಪೊರಕೆಯನ್ನು ತಾಯಿ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಎಂದಿಗೂ ಕಾಲಿನಿಂದ ತುಳಿಯಬಾರದು. ಶಾಸ್ತ್ರಗಳ ಪ್ರಕಾರ ಪೊರಕೆ ನೋಡಿದರೆ ಅದು ಒಳ್ಳೆಯ ಸಂಕೇತ. ನಿಮ್ಮ ಮನೆಗೆ ಲಕ್ಷ್ಮಿ ಶೀಘ್ರದಲ್ಲೇ ಆಗಮಿಸುತ್ತಾಳೆ ಎಂದರ್ಥ.
ಹಣ ಪಡೆಯುವುದು :- ರಸ್ತೆಯಲ್ಲಿ ಎಲ್ಲಾದಾದರೂ ಹಣ ಸಿಕ್ಕರೆ ಅದು ತಾಯಿ ಲಕ್ಷ್ಮಿ ನಿಮ್ಮ ಮೇಲೆ ದಯೆ ತೋರುವ ಸಂಕೇತ.
https://youtu.be/A3QcaKtmrTM