ವಾಸ್ತು ಶಾಸ್ತ್ರದಲ್ಲಿ ಯಾವ ದಿಕ್ಕುಗಳನ್ನು ಕೂಡ ಕೆ’ಟ್ಟದು ಎಂದು ಹೇಳುವುದಿಲ್ಲ. ಆದರೆ ಪ್ರತಿ ದಿಕ್ಕಿಗೂ ಉಚ್ಚ ಸ್ಥಾನ ಮತ್ತು ನೀಚ ಸ್ಥಾನಗಳು ಇರುತ್ತವೆ. ಯಾವ ದಿಕ್ಕುಗಳಲ್ಲಿ ಏನಿರಬೇಕು ಏನಿರಬಾರದು ಎನ್ನುವುದನ್ನು ಹೇಳಲಾಗುತ್ತದೆ, ಅದಕ್ಕೆ ಅವರದೇ ಆದ ತರ್ಕ ಬದ್ಧ ಸಮಜಾಯಿಸಿ ಕೂಡ ಇರುವುದರಿಂದ ಅದರಲ್ಲಿರುವ ಕೆಲ ಅಂಶಗಳನ್ನು ಒಪ್ಪಲೇಬೇಕು.
ಈ ರೀತಿ ವಾಸ್ತುಶಾಸ್ತ್ರವನ್ನು ಅನುಸರಿಸುವುದು ಹಾಗೂ ವಾಸ್ತು ಶಾಸ್ತ್ರದ ಪ್ರಕಾರವಾಗಿ ವಾಸ್ತು ಬದಲಾಯಿಸಿಕೊಂಡವರು ಜೀವನದಲ್ಲಿ ಯಶಸ್ಸು ಹಾಗೂ ಮನೆಯಲ್ಲಿ ಶಾಂತಿ ಕಂಡ ಉದಾಹರಣೆ ಇರುವುದರಿಂದ ವಾಸ್ತು ಶಾಸ್ತ್ರದ ಕುರಿತಾಗಿ ತಿಳಿಸಿರುವ ಕೆಲ ಸೀಕ್ರೆಟ್ ಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ. ಈ ಅಂಕಣದಲ್ಲಿ ಬೆಡ್ರೂಮ್ ಹೇಗಿರಬೇಕು? ಬೆಡ್ ರೂಂನಲ್ಲಿ ಏನಿರಬೇಕು, ಏನಿರಬಾರದು ಎನ್ನುವುದರ ಬಗ್ಗೆ ಹೇಳುತ್ತಿದ್ದೇವೆ.
* ಮೊದಲಿಗೆ ಬೆಡ್ರೂಮ್ ನಲ್ಲಿ ಮಲಗುವ ಹಾಸಿಗೆಯ ಪಕ್ಕ ಚಪ್ಪಲಿಗಳನ್ನು ಬಿಡುವ ಅಭ್ಯಾಸ ಇದ್ದರೆ ಮೊದಲ ಅದನ್ನು ತಪ್ಪಿಸಿ, ಇದು ಬಹಳ ತಪ್ಪು. ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ಒಳ್ಳೆಯದಲ್ಲ ವಾಸ್ತು ಶಾಸ್ತ್ರದ ಪ್ರಕಾರ ಈ ವಿಚಾರವು ನಿಮಗೆ ನೆಗೆಟಿವಿಟಿಯನ್ನು ಹೆಚ್ಚು ಮಾಡುತ್ತದೆ. ಮನೆಯಲ್ಲಿ ಕಲಹವಾಗಲು ಕಾರಣವುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ.
* ಹಾಗೆ ಮಲಗುವ ಮಂಚದ ಕೆಳಗಡೆ ಯಾವುದೇ ರೀತಿಯ ಮನೆ ಕ್ಲೀನ್ ಮಾಡುವ ವಸ್ತುಗಳು ಇಡಬಾರದು. ಅಂದರೆ ಬಕೆಟ್ ಜಗ್ ಬೇಡದ ಬಟ್ಟೆಗಳು ಇನ್ನು ಇತ್ಯಾದಿ ವಸ್ತುಗಳು ಇರಬಾರದು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಮಂಚದ ಕೆಳಗಿರುವ ಜಾಗವನ್ನು ಯಾವುದಾದರೂ ವಸ್ತುಗಳನ್ನು ಇಟ್ಟುಕೊಳ್ಳಲು ಉಪಯೋಗಿಸುತ್ತೇವೆ.
ಆದಷ್ಟು ಆ ಜಾಗವನ್ನು ಖಾಲಿ ಬಿಟ್ಟರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ ಮತ್ತು ಯಾವಾಗಲೂ ಮಂಚ ಮೂರು ಕಡೆಯಿಂದ ಲಾಕ್ ಆಗಿರುವುದರ ಬದಲು ಸಾಧ್ಯವಾದಷ್ಟು ಮಂಚ ಮೂರು ಕಡೆ ಓಡಾಡುವುದಕ್ಕೆ ಜಾಗ ಇರುವ ರೀತಿ ಇಟ್ಟರೆ ಇನ್ನು ಉತ್ತಮ ಫಲಗಳು ಸಿಗುತ್ತವೆ ಎನ್ನುವುದನ್ನು ಸಹ ಹೇಳಲಾಗುತ್ತದೆ.
* ಬೆಡ್ರೂಮಲ್ಲಿ ರಾಶಿ ಬಟ್ಟೆಗಳನ್ನು ಅಸ್ತವ್ಯಸ್ತವಾಗಿ ಗುಡ್ಡೆ ಹಾಕಿದ್ದರೆ ಅದೇ ರೀತಿ ನಿಮ್ಮ ಮನಸ್ಸಿಗೆ ಒತ್ತಡಗಳು ಹೆಚ್ಚಾಗುತ್ತದೆ. ಮನೆಯಲ್ಲಿ ಅಶಾಂತಿ ಮೂಡುತ್ತದೆ ಎಂದು ಸಹ ಹೇಳಲಾಗುತ್ತದೆ. ಯಾವಾಗಲೂ ಬೆಡ್ರೂಮ್ ಹಾಗೂ ಬೆಡ್ರೂಮ್ ನಲ್ಲಿರುವ ವಾರ್ಡ್ರೋಬ್ ಅಚ್ಚುಕಟ್ಟಾಗಿ ಕ್ಲೀನಾಗಿ ಇರಬೇಕು. ಬೆಡ್ರೂಮ್ ನಲ್ಲಿ ಸಿಕ್ಕಾಪಟ್ಟೆ ಬಟ್ಟೆಗಳನ್ನು ಗುಡ್ಡೆ ಹಾಕಿರಬಾರದು.
* ಮಲಗುವ ಮಂಚದ ಮೇಲೆ ಅಥವಾ ಹಾಸಿಗೆಯ ಪಕ್ಕದಲ್ಲಿ ಎಲೆಕ್ಟ್ರಿಕಲ್ ಗ್ಯಾಜೆಟ್ ಅಥವಾ ಚಾರ್ಜಿಂಗ್ ವೈರ್ ಗಳು ಈ ರೀತಿ ಎಲ್ಲವನ್ನು ಅಸ್ತವ್ಯಸ್ತವಾಗಿ ಸುತ್ತಿ ಹಾಕುವುದರಿಂದ ಅದೇ ರೀತಿ ನಿಮ್ಮ ಆಲೋಚನೆಗಳು ಗೋಜಲಾತ್ತವೆ ಎಂದು ಹೇಳಲಾಗುತ್ತದೆ. ಸಾಧ್ಯವಷ್ಟು ಮಲಗುವ ಪಕ್ಕದಲ್ಲಿ ಚಾರ್ಜಿಂಗ್ ಪಾಯಿಂಟ್ ಇರುವುದನ್ನು ತಪ್ಪಿಸಿ. ಇದ್ದರೂ ಅಲ್ಲಿ ಚಾರ್ಜಿಂಗ್ ಹಾಕಿ ಮಲಗುವ, ಚಾರ್ಜಿಂಗ್ ವೈರ್ ಗಳನ್ನು ಎರಡು ಮೂರು ಹಾಕಿ ಸುತ್ತಿಸಿ ಬಿಡುವ ಅಭ್ಯಾಸವನ್ನು ತಪ್ಪಿಸಿ.
* ಮಲಗುವ ಹಾಸಿಗೆ ಕೆಳಗೆ ಅಥವಾ ಹಾಸಿಗೆ ಪಕ್ಕದಲ್ಲಿಯೇ ತಮ್ಮ ಮಾತ್ರೆಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಅನೇಕರಿಗೆ ಇದೆ, ಅದನ್ನು ಮರೆಯುತ್ತಾರೆ ಎನ್ನುವ ಕಾರಣ ಕೂಡ ಇರಬಹುದು. ಆದರೆ ವಾಸ್ತುಶಾಸ್ತ್ರ ಹೇಳುವ ಪ್ರಕಾರ ಈ ರೀತಿ ಯಾವಾಗಲೂ ಹಾಸಿಗೆ ಪಕ್ಕ ಔಷಧಿಗಳನ್ನು ಇಡಬಾರದು. ಇದರಿಂದ ಕಾಯಿಲೆಗಳು ಉಲ್ಬಣವಾಗುತ್ತವೆ, ಹಾಸಿಗೆ ಹಿಡಿಯಬೇಕಾದ ಸ್ಥಿತಿಗೆ ನೀವು ಹೋಗುತ್ತೀರಿ. ಅದರ ಬದಲು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಮೆಡಿಸನ್ ಇಟ್ಟು ಅಲ್ಲಿಂದ ತಂದು ಮಾತ್ರೆ ತಿಂದು ಮಲಗಬೇಕು.