ತಾಯ್ತನ ಎನ್ನುವುದು ಹೆಣ್ತನಕ್ಕೆ ಸಂಭ್ರ. ಒಂದು ಹೆಣ್ಣು ಜೀವನದಲ್ಲಿ ಏನೇ ಸಾಧಿಸಿದರು ಸಮಾಜದಲ್ಲಿ ಆಕೆಗೆ ಸಮಾನವಾದ ಸ್ಥಾನಮಾನ ಸಿಗುವುದು ಆಕೆ ತಾಯಿಯಾದ ಬಳಿಕವೇ. ಮಗು ಎನ್ನುವುದು ಆಕೆಯ ಭವಿಷ್ಯ, ತಾನಿನ್ನು ತಾಯಿಯಾಗುತ್ತಿದ್ದೇನೆ ಎನ್ನುವುದನ್ನು ತಿಳಿದಾಗಲಿಂದಲೇ ಆಕೆಗೆ ಮಗುವಿನ ಆಗಮದ ನಿರೀಕ್ಷೆ, ತುಡಿತ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿರುತ್ತದೆ.
ಹೆಣ್ಣೊಬ್ಬಳು ಮಗುವಿಗೆ ಜನ್ಮ ಕೊಡುವುದು ಆಕೆಗೆ ಮರುಜನ್ಮ ಎಂದು ಹೇಳುತ್ತಾರೆ ಯಾಕೆಂದರೆ, ಅದು ಅಷ್ಟು ಸಹಜವಾದ ಪ್ರಕ್ರಿಯೆಯಲ್ಲ. 9 ತಿಂಗಳವರೆಗೆ ಒಂದು ಜೀವವನ್ನು ಒಡಲಲ್ಲಿ ಇಟ್ಟುಕೊಂಡು ಅದನ್ನು ಈ ಪ್ರಪಂಚಕ್ಕೆ ಪರಿಚಯಿಸುವ ಸಮಯದಲ್ಲಿ ಉಂಟಾಗುವ ನೋ’ವು ಮಕ್ಕಳನ್ನು ಹಡೆದವರಿಗಷ್ಟೇ ಗೊತ್ತು.
ಈ ಕಾರಣಕ್ಕಾಗಿ ತಾಯಿಯೇ ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಮತ್ತು ತನ್ನ ಪ್ರಾಣ ಹೋಗುವಷ್ಟು ನೋ’ವಿದ್ದರೂ ತಾನೊಂದು ಜೀವಕ್ಕೆ ಜೀವ ಜೀವನ ಕೊಡಬೇಕು ಎಂದುಕೊಳ್ಳುತ್ತಾಳಲ್ಲ ಆ ತಾಯಿ ಧರ್ಮಕ್ಕೆ ಸಮಾನವಾದದ್ದು ಯಾವುದು ಇಲ್ಲ ಎನ್ನುವುದು. ಆದರೆ ಈಗಿನ ಕಾಲದಲ್ಲಿ ಸಹಜ ಹೇಳಿಕೆ ಕೇಸ್ ಗಳಿಗಿಂತ ಸಿಸೇರಿಯನ್ ಕೇಸ್ ಗಳು ಹೆಚ್ಚು.
ಹಿಂದೆ ಬಹಳ ಕಾಂಪ್ಲಿಕೇಟೆಡ್ ಆಗಿದ್ದಕ್ಕೆ ಮಾತ್ರ ಸಿಸೇರಿಯನ್ ಮಾಡಲಾಗುತ್ತಿತ್ತು ಆದರೆ ಈಗ ಅವರೇ ಕೇಳಿ ಸಿಜೇರಿಯನ್ ಮಾಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಪ್ರಕ್ರಿಯೆಯಾದರೂ ನ್ಯಾಚುರಲ್ ಆಗಿ ಆಗಬೇಕು ಎನ್ನುವುದು ಪ್ರಕೃತಿ ಧರ್ಮ, ಒಂದು ವೇಳೆ ನಿಮಗೂ ಕೂಡ ಈ ರೀತಿ ಸಹಜ ಹೆರಿಗೆ ಆಗಬೇಕು ಎಂದರೆ ನೀವು ಗರ್ಭಿಣಿಯಾಗಿದ್ದಾಗ ತಪ್ಪದೇ ಇವುಗಳನ್ನು ಮಾಡಿ…
* ಗರ್ಭಿಣಿಯಾಗಿದ್ದಾಗ ದೇಹದಲ್ಲಿ ಸಾಕಷ್ಟು ಹಾರ್ಮೋನ್ ವೇರಿಯೇಷನ್ ಆಗುತ್ತಿರುತ್ತದೆ ಆ ಬೈಪರೀತ್ಯಗಳನ್ನು ಸಂಭಾಳಿಸಿಕೊಂಡು ಸರಿಯಾದ ಸಮಯಕ್ಕೆ ಊಟ ಹಾಗೂ ನಿದ್ರೆಯನ್ನು ಮಾಡಬೇಕು.
* ಕೆಲವರು ಪ್ರಗ್ನೆಂಟ್ ಆದ ತಕ್ಷಣ ಬೆಡ್ ರೆಸ್ಟ್ ಎಂದು ಕೊಳ್ಳುತ್ತಾರೆ ಇದು ತಪ್ಪು. ಸಹಜ ಹೆರಿಗೆ ಆಗಬೇಕು ಎಂದರೆ ನೀವು ಎಂದಿನಂತೆ ಮನೆ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ವೈದ್ಯರ ಇನ್ಸ್ಟ್ರಕ್ಷನ್ ತೆಗೆದುಕೊಂಡು ಲಘು ವ್ಯಾಯಾಮ ಮಾಡಬೇಕು, ವಾಕಿಂಗ್ ಮಾಡುವುದು ಕೂಡ ಉತ್ತಮ ಇದರ ನಡುವೆ ಆಗಾಗ ರೆಸ್ಟ್ ಕೂಡ ಅಗತ್ಯ.
* ಎತ್ತರ ಹಿಮ್ಮಡಿ ಇರುವ ಚಪ್ಪಲಿಗಳನ್ನು ಧರಿಸಬಾರದು
* ಆಹಾರದಲ್ಲಿ ಬಸಳೆ ಸೊಪ್ಪು, ಕಿತ್ತಳೆ ಹಣ್ಣು, ಬೆಲ್ಲ, ಇಂಗು ಇವುಗಳನ್ನು ಬಳಸುವುದು ಸಹಜ ಹೆರಿಗೆಗೆ ಉತ್ತಮ.
* ಗರ್ಭಿಣಿಯಾಗಿರುವಾಗ ಅತಿ ಹೆಚ್ಚು ಬಿಗಿಯಾದ ಉಡುಪುಗಳನ್ನು ಧರಿಸಬಾರದು ಹತ್ತಿಯ ಉಡುಪುಗಳನ್ನು ಮೃದುವಾದ ಸಡಿಲವಾದ ಉಡುಪುಗಳನ್ನು ಧರಿಸಬೇಕು.
* ಗರ್ಭಿಣಿಯರು ಬೆಳ್ಳಿ ತಟ್ಟೆಯಲಿ ಆಗಾಗ ಮೊಸರು ಸೇವಿಸಿದರೆ ಸಹಜ ಹೆರಿಗೆ ಆಗುತ್ತದೆ.
* ಮೈ ತೂಕ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು
* ಗರ್ಭಿಣಿಯಾದಾಗಲಿಂದ ಡಿಲೆವರಿ ಹಾಕುವವರೆಗೂ ಅತಿ ಉಷ್ಣದ ಆಹಾರ ಹಾಗೂ ಹಣ್ಣುಗಳನ್ನು ಸೇವಿಸಬಾರದು ಅದರಲ್ಲೂ ಯಾವುದೇ ಕಾರಣಕ್ಕೂ ಪೈನಾಪಲ್, ಹಲಸು, ಚಕ್ಕು ಹಣ್ಣು ಹಾಗೂ ಪಪ್ಪಾಯಿ ಹಣ್ಣನ್ನು ತಿನ್ನಲೇಬಾರದು.
* ಪೂರ್ತಿಯಾಗಿ ಹಣ್ಣಾಗದೇ ಇರುವಂತಹ ಹಣ್ಣುಗಳನ್ನು ಕೂಡ ಗರ್ಭಿಣಿಯರು ಸೇವಿಸಬಾರದು.
* ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಒಂದು ಚಮಚ ನೆಲ್ಲಿಕಾಯಿ ಪುಡಿ, ಒಂದು ಚಮಚ ಶುದ್ಧ ಹಸುವಿನ ತುಪ್ಪ ಸೇವಿಸಿ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು
* ಆದಷ್ಟು ಜಂಕ್ ಫುಡ್ ಗಳನ್ನು ಕಡಿಮೆ ಮಾಡಿ
* ಪೌಷ್ಟಿಕಾಂಶದಿಂದ ಕೂಡಿದ ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಬೇಕು ಮತ್ತು ದೇಹ ಕೇಳುವಷ್ಟು ಅಗತ್ಯವಾದ ನೀರನ್ನು ಕುಡಿಯಬೇಕು.