ದೇಹವು ಮೂಳೆ ಮಾಂಸಗಳ ತಡಿಕೆ ಅದರಲ್ಲಿ ಈ ದೇಹವನ್ನು ದಷ್ಟಪುಷ್ಟವಾಗಿ ಗಟ್ಟಿಯಾಗಿರುವಂತೆ ಆಕಾರ ಕೊಟ್ಟು ನೋಡಿಕೊಳ್ಳುತ್ತಿರುವುದು ಮೂಳೆಗಳು. ಮೂಳೆಗಳು ಇಲ್ಲವಾದರೆ ದೇಹ ಮಾಂಸಗಳ ಮುದ್ದೆಯಾಗಿ ಬಿಡುತ್ತದೆ. ಮೂಳೆಗಳು ಗಟ್ಟಿಯಾಗಿರುವುದರಿಂದ ಮನುಷ್ಯನಿಗೆ ಶಕ್ತಿ ಆದರೆ ಕ್ಯಾಲ್ಸಿಯಂ ಕೊರತೆ ಆದರೆ ಮೂಳೆಗಳಿಗೆ ಸಮಸ್ಯೆ ಆಗುತ್ತದೆ.
ಮೂಳೆಗಳಲ್ಲಿ ಸವೆತ ಅಥವಾ ಮೂಳೆಗಳು ದುರ್ಬಲವಾಗುವುದು ಇನ್ನಿತರ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಹಾಗಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಕ್ಯಾಲ್ಸಿಯಂ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಯಾವ ಆಹಾರ ಪದಾರ್ಥದಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ ಮತ್ತು ಕ್ಯಾಲ್ಸಿಯಂ ಕೊರತೆಗೆ ಮಾತ್ರೆಗಳನ್ನು ಸೇವಿಸುವುದರಿಂದ ಎಷ್ಟು ದುಷ್ಪರಿಣಾಮವಾಗುತ್ತದೆ ಎನ್ನುವುದರ ವಿವಿಧ ಹೀಗಿದೆ ನೋಡಿ.
ಕ್ಯಾಲ್ಸಿಯಂ ಕೊರತೆ ಉಂಟಾಗಿದೆ ಎನ್ನುವುದು ತೀರ ಇತ್ತೀಚಿಗೆ ಜನರು ಅನುಭವಿಸುತ್ತಿರುವ ಸಮಸ್ಯೆಯಾಗಿದೆ. ಯಾಕೆಂದರೆ ಈಗ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ತಪ್ಪಾದ ಆಹಾರ ಪದ್ಧತಿ, ಶಿಸ್ತಿಲ್ಲ ನಿದ್ದೆ, ಅನಾರೋಗ್ಯಕರ ಜೀವನ ಶೈಲಿ, ವ್ಯಾಯಾಮರಹಿತ ದಿನಗಳು ಇವುಗಳು ಇದರೊಂದಿಗೆ ಅತಿಯಾದ ಫಾಸ್ಟ್ ಫುಡ್ ಗಳ ಸೇವನೆ ಅವೈಜ್ಞಾನಿಕವಾಗಿ ತಯಾರಾದ ಆಹಾರ ಪದಾರ್ಥಗಳ ಸೇವನೆ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳ ಕೊರತೆಯನ್ನು ಉಂಟು ಮಾಡುತ್ತಿದೆ.
ಇದರಲ್ಲಿ ಕ್ಯಾಲ್ಸಿಯಂ ಕೊರತೆಯೂ ಕೂಡ ಒಂದು. ಅನೇಕರು ಕ್ಯಾಲ್ಸಿಯಂಗಾಗಿ ಮಾತ್ರೆಗಳನ್ನು ಸೇವಿಸುತ್ತಾರೆ ಆದರೆ ಇದು ದೇಹದ ಮೇಲೆ ಎಷ್ಟು ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತದೆ ಎನ್ನುವುದು ಅವರಿಗೆ ಆ ಸಮಯದಲ್ಲಿ ತಿಳಿದಿರುವುದಿಲ್ಲ. ನಿರಂತರವಾಗಿ ಮಾತ್ರೆಗಳ ಸೇವನೆಯಿಂದಾಗಿ ದೇಹ ದುರ್ಬಲವಾಗುತ್ತದೆ.
ಇದರಿಂದ ಹಾರ್ಟ್ ಅಟ್ಯಾಕ್, ಹಾರ್ಟ್ ಫೇಲ್ಯೂರ್ ಮುಂತಾದ ಹೃದಯ ಸಂಬಂಧಿತ ಕಾಯಿಲೆಗಳು ಸ್ಟ್ರೋಕ್ ಆಗುತ್ತದೆ. ಹಾಗಾಗಿ ನ್ಯಾಚುರಲ್ ಆಗಿಯೇ ಸಿಗುವ ಆಹಾರ ಪದಾರ್ಥಗಳಿಂದಾಗಿ ನಾವು ಕ್ಯಾಲ್ಸಿಯಂ ಪ್ರಮಾಣವನ್ನು ಸರಿದೂಗಿಸಿಕೊಳ್ಳಲು ನೋಡಬೇಕು. ಪ್ರತಿದಿನ ಹಾಲಿನ ಸೇವನೆ ಮಾಡುವುದರಿಂದ ದೇಹಕ್ಕೆ ಹೇರಳವಾಗಿ ಕ್ಯಾಲ್ಸಿಯಂ ಸಿಗುತ್ತದೆ.
ವಿಟಮಿನ್ ಸಿ ಹೇರಳವಾಗಿ ನಿಂಬೆಹಣ್ಣು ಕಿತ್ತಳೆ ಹಣ್ಣು ಮೂಸಂಬಿ ಇವುಗಳ ಸೇವನೆಯಿಂದಾಗಿ ದೇಹದಲ್ಲಿ ಕ್ಯಾಲ್ಸಿಯಂ ಉತ್ಪಾದನೆಗೆ ಅಥವಾ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಪಡೆದುಕೊಳ್ಳುವುದಕ್ಕೆ ಇದು ಸಹಾಯಕವಾಗುತ್ತದೆ. ಮೆಂತ್ಯ ಸೊಪ್ಪು ನುಗ್ಗೆ ಸೊಪ್ಪಿನಲ್ಲಿ ಕೂಡ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ರಾಮಫಲ, ಸೀತಾಫಲ, ಬ್ರೊಕೋಲಿ, ನುಗ್ಗೆಕಾಯಿ, ಬೀನ್ಸ್, ಸೋರೆಕಾಯಿ, ಬೂದುಗುಂಬಳಕಾಯಿ ಇವುಗಳಲ್ಲಿ ಕೂಡ ಕ್ಯಾಲ್ಸಿಯಂ ಪದಾರ್ಥ ಹೇರಳವಾಗಿ ಇರುತ್ತದೆ.
ಕಿಡ್ನಿ ಬೀನ್ಸ್ ಕಾಳು ಎಂದು ಹೇಳಲಾಗುವ ಧಾನ್ಯ, ಹುರುಳಿಕಾಳು, ಉದ್ದು ಇವುಗಳಲ್ಲಿ ಕೂಡ ಕ್ಯಾಲ್ಸಿಯಂ ಯಥೇಚ್ಛವಾಗಿರುತ್ತದೆ. ಹುರುಳಿಕಾಳನ್ನು ಮೊಳಕೆ ಕಟ್ಟಿಸಿ ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಎಲೆ ಅಡಿಕೆ ಜೊತೆ ಗೋಧಿ ಗಾತ್ರದಷ್ಟು ಸುಣ್ಣ ತಿನ್ನುವುದರಿಂದ ಕೂಡ ದೇಹಕ್ಕೆ ಕ್ಯಾಲ್ಸಿಯಂ ಸೇರುತ್ತದೆ. ಈ ಮೇಲೆ ತಿಳಿಸಿದ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆ ಬರುವುದೇ ಇಲ್ಲ.
ಈಗಾಗಲೇ ಗಂಭೀರವಾಗಿ ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಿದ್ದರೂ ತಪ್ಪದೆ ಈ ಮೇಲೆ ತಿಳಿಸಲಾದ ಎಲ್ಲಾ ಆಹಾರ ಪದಾರ್ಥಗಳನ್ನು ಮೂರು ತಿಂಗಳವರೆಗೆ ಪ್ರತಿನಿತ್ಯ ಆಹಾರದಲ್ಲಿ ಇವುಗಳು ಹೇರಳವಾಗಿ ಇರುವಂತೆ ನೋಡಿಕೊಂಡು ಸೇವಿಸಿ. ಆದರೆ ಒಂದೇ ಬಾರಿಗೆ ಎಲ್ಲವನ್ನು ತಿನ್ನುವುದು ಕೂಡ ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಏಕ ರೂಪದ ಆಹಾರ ಸೇವಿಸುತ್ತಿರುವವರು ಒಂದು ತಿಂಗಳವರೆಗೆ ಸೇವಿಸಿದರೆ ಸಾಕು ನಿಮ್ಮ ದೇಹ ಪ್ರಕೃತಿಯ ಜೀರ್ಣಶಕ್ತಿಯ ಆಧಾರದ ಮೇಲೆ ಇವುಗಳನ್ನು ಸೇವಿಸಿ ಆದಷ್ಟು ಇವೆಲ್ಲ ಆಹಾರ ಪದಾರ್ಥದಲ್ಲಿ ಇರುವಂತೆ ನೋಡಿಕೊಳ್ಳಿ .