ಒಂದು ಮನೆಗೆ ಆ ಮನೆಯಲ್ಲಿರುವ ಹೆಣ್ಣು ಮಕ್ಕಳೇ ಭೂಷಣ. ಹೆಣ್ಣಿಲ್ಲದ ಮನೆ ಮನೆಯಲ್ಲ ಎನ್ನಬಹುದು. ಒಂದು ಮನೆಯನ್ನು ದೇವಸ್ಥಾನವನ್ನಾಗಿಸುವುದು ಅಥವಾ ಆ ಮನೆಯನ್ನು ಸ್ಮಶಾನ ವಾಗಿಸುವುದು ಆ ಮನೆಯ ಹೆಣ್ಣು ಮಕ್ಕಳ ಮೇಲೆ ನಿರ್ಧಾರವಾಗಿರುತ್ತದೆ.
ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು. ಹಾಗೆ ಇಷ್ಟು ಶಕ್ತಿ ಇರುವ ಆಕೆ ಕೆಲವೊಮ್ಮೆ ತಗ್ಗಿ ಬಗ್ಗಿ ನಡೆಯುವುದರಿಂದ ಒಂದು ಸಮುದಾಯಕ್ಕೆ ಒಳ್ಳೆಯದಾಗುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಒಂದು ಮನೆಯ ಸುಖ ಸಂತೋಷಕ್ಕಾಗಿ ಏನು ಮಾಡಬಾರದು ಏನು ಮಾಡಬಹುದು ಎನ್ನುವುದರ ಕುರಿತು ಕೆಲವು ವಿಚಾರಗಳನ್ನು ಈ ಅಂಕಣದಲ್ಲಿ ಹೇಳುತ್ತಿದ್ದೇವೆ.
* ಮನೆಯವರಿಗೆ ಊಟ ಬಡಿಸಿ ಗೊಣಗಾಡುತ್ತಿರಬಾರದು, ಜೋರಾಗಿ ಮಾತನಾಡಬಾರದು ಈ ರೀತಿ ಮಾಡುವುದು ಯಾವುದೇ ಪಾಪಕ್ಕಿಂತ ಕಡಿಮೆ ಇಲ್ಲ. ಇಂತಹ ಹೆಣ್ಣು ಮಕ್ಕಳ ಮೇಲೆ ಯಾರಿಗೂ ಪ್ರೀತಿ ಹಾಗೂ ಗೌರವ ಬರುವುದಿಲ್ಲ.
* ಊಟ ಬಡಿಸುವುದಕ್ಕೂ ಒಂದು ನಿಯಮವಿದೆ ಉದಾಹರಣೆಗೆ, ಮೊದಲಿಗೆ ಉಪ್ಪು ಬಡಿಸಬೇಕು, ಊಟ ಬಡಿಸುವ ಮೊದಲು ನೀರು ಹತ್ತಿರ ಇಟ್ಟಿರಬೇಕು ಇಂತಹ ಸೂಕ್ಷ್ಮತೆಗಳನ್ನು ಪ್ರತಿನಿತ್ಯ ಹೇಳಿಸಿಕೊಳ್ಳಬಾರದು.
* ಹೆಣ್ಣು ಮಕ್ಕಳಿಗೆ ಮನೆಯ ಸೂಕ್ಷ್ಮತೆಗಳ ಬಗ್ಗೆ ಗಮನ ಇರಬೇಕು ಕೆಲವೊಂದು ಸಂಗತಿಗಳನ್ನು ಮನೆಯಲ್ಲಿ ಮಾಡಬಾರದು ಎಂದು ಹಿರಿಯರು ನಿಯಮ ಮಾಡಿರುತ್ತಾರೆ. ಆ ಮನೆಯ ಹಿರಿಯರು ಮಾಡಿರುವ ಅಥವಾ ಹೇಳಿಕೊಡುವ ಪ್ರಕಾರವಾಗಿ ಪಾಲಿಸಿಕೊಂಡು ಹೋಗಬೇಕು ಆಗ ಹಿರಿಯರಿಗೆ ಕೋಪ ಬರುವುದಿಲ್ಲ ಕಿರಿಯರು ಕೂಡ ನಿಮ್ಮನ್ನು ಆದರ್ಶವಾಗಿ ಕಾಣುತ್ತಾರೆ.
* ಮನೆಯ ಬಳಿ ಹೂವು ಮಾರುವವರು ಬಂದಾಗ ಬೇಡ ಎಂದು ಹೇಳಿ ಕಳುಹಿಸಬಾರದು ಅದರ ಬದಲು ನಾಳೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಕಳುಹಿಸಬೇಕು.
* ಮುಟ್ಟದ ಸಮಯದಲ್ಲಿ ದೇವರಕೋಣೆಯ ವಸ್ತುಗಳನ್ನು ಮುಟ್ಟಬಾರದು. ಪೂಜೆ ಮಾಡಬಾರದು ಹಾಗೆ ಯಾರಿಗೂ ಅರಿಶಿನ ಕುಂಕುಮ ಹೂವು ಕೊಡಬಾರದು.
* ಅಡುಗೆ ಮಾಡುವಾಗ ದೇವರ ಪೂಜೆ ಮಾಡುವಾಗ ಕೂದಲನ್ನು ಹರಡಿಕೊಳ್ಳಬಾರದು.
* ಹೆಣ್ಣು ಮಕ್ಕಳು ನಡೆಯುವಾಗ ಜೋರಾಗಿ ನಡೆಯುವುದು ಶಬ್ದ ಬರುವ ಚಪ್ಪಲಿಗಳನ್ನು ಹಾಕಿಕೊಂಡು ನಡೆಯುವುದು ಕಾಲನ್ನು ಎಳೆದುಕೊಂಡು ನಡೆಯುವುದು ಹೀಗೆಲ್ಲ ಮಾಡಿ ಎಲ್ಲರಿಗೂ ಕಿರಿಕಿರಿ ಮಾಡಬಾರದು. ಹೆಣ್ಣು ಮಕ್ಕಳು ನಾಜೂಕಾಗಿದ್ದಾಗ ಎಲ್ಲರೂ ಇಷ್ಟಪಡುತ್ತಾರೆ ಇಲ್ಲವಾದಲ್ಲಿ ಭೇಟಿ ಮಾಡುವ ಸಣ್ಣ ತಪ್ಪು ಮನೆಯಲ್ಲಿ ಅ’ಶಾಂ’ತಿಗೆ ಕಾರಣವಾಗುತ್ತದೆ.
* ಯಾರಾದರೂ ಇದ್ದಾಗಲೂ ಇಲ್ಲದೆ ಇದ್ದಾಗಲೂ ಕಾಲನ್ನು ಕೆಳಕ್ಕೆ ಬಿಟ್ಟು ಅಲುಗಾಡಿಸುತ್ತಾ ಕುಳಿತುಕೊಳ್ಳಬಾರದು. ಇದರಿಂದ ಮನೆಗೆ ದರಿದ್ರ ಬರುತ್ತದೆ.
* ಮನೆಯಲ್ಲಿ ಹಿರಿಯರು ಕೆಳಗೆ ಕುಳಿತಿದ್ದಾಗ ನೀವು ಮೇಲೆ ಕುಳಿತುಕೊಳ್ಳಬಾರದು ಅಥವಾ ನೆಂಟರು ಪರಿಚಯಸ್ತರು ಮನೆಗೆ ಬಂದಾಗ ಅವರೆದುರು ಹಿರಿಯರ ಸಮಕ್ಕೆ ಮನೆ ಹೆಣ್ಣು ಮಕ್ಕಳು ಕುಳಿತುಕೊಳ್ಳಬಾರದು. ಅವರ ಮಾತಿನ ಮಧ್ಯೆ ನಿಮ್ಮ ಅಭಿಪ್ರಾಯ ಕೇಳದೆ ಇದ್ದಾಗಲೂ ಮಾತನಾಡಬಾರದು.
* ಹೆಣ್ಣು ಮಕ್ಕಳಿಗೆ ಕುಂಕುಮ ಕೈ ಬಳೆ ಮುಡಿಗೆ ಹೂವು ಕಾಲ್ಗೆಜ್ಜೆ ಇವೆಲ್ಲವೂ ಲಕ್ಷಣ ಆದಷ್ಟು ಇವುಗಳನ್ನು ಹಾಕಿಕೊಳ್ಳಬೇಕು ಮತ್ತು ದೇವರ ಪೂಜೆ ಮಾಡುವಾಗ ಇವುಗಳು ಹಣೆ ಖಾಲಿ ಇಟ್ಟುಕೊಂಡು, ತಲೆ ಕೆದರಿಕೊಂಡು, ಕೈಗಳಲ್ಲಿ ಬಳೆ ಇಲ್ಲದೆ, ಕಾಲಲ್ಲಿ ಗೆಜ್ಜೆ ಇಲ್ಲದೆ, ಕಿವಿಯಲ್ಲಿ ಓಲೆ ಇಲ್ಲದೆ ಪೂಜೆ ಮಾಡಬಾರದು. ಈ ರೀತಿ ಪೂಜೆ ಮಾಡಿದರು ಅದು ದೇವರಿಗೆ ಸಲ್ಲುವುದಿಲ್ಲ ಎಂದು ಹೇಳಲಾಗುತ್ತದೆ ಅಲ್ಲದೆ ಮನೆಯಲ್ಲಿ ಹಿರಿಯರ ಕೋಪಕ್ಕೆ ಗುರಿಯಾಗುತ್ತೀರಿ.
* ಹೆಣ್ಣು ಮಕ್ಕಳು ಮನೆಯಲ್ಲಿ ಯಾವಾಗಲೂ ಖುಷಿ ಖುಷಿಯಾಗಿ ನಗು ನಗುತ್ತಾ ಮಾತನಾಡಿಕೊಂಡು ಇರಬೇಕು. ಸಣ್ಣ ಪುಟ್ಟ ವಿಚಾರಕ್ಕೂ ಮುನಿಸಿಕೊಳ್ಳುವುದು ಅಥವಾ ಗಲಾಟೆ ಮಾಡಿ ಎಲ್ಲರಿಗೂ ಬೇಜಾರು ಮಾಡುವುದು ಇವುಗಳನ್ನು ಮಾಡಬಾರದು. ಅದೇ ರೀತಿ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಕಣ್ಣೀರು ಹಾಕಿಸದೆ ಗೌರವ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ಆ ಮನೆಯ ಎಲ್ಲರದ್ದು ಆಗಿರುತ್ತದೆ. ಹೆಣ್ಣು ಮಕ್ಕಳು ಕ’ಣ್ಣೀ’ರಿ’ಟ್ಟ’ರೆ ಶಾ’ಪಕೊಟ್ಟರೆ ಆ ಮನೆ ನರಕವಾಗುತ್ತದೆ.