ಸಾಲ ಎನ್ನುವುದು ಮನುಷ್ಯನ ಬಹಳ ದೊಡ್ಡ ಶತ್ರು ಆಗಿದೆ. ಯಾಕೆಂದರೆ ಮನುಷ್ಯನಿಗೆ ಸಾಲ ಇದ್ದಾಗ ಒಂದು ಚೂರು ಕೂಡ ನೆಮ್ಮದಿ ಇರುವುದಿಲ್ಲ ಆ ಸಾಲ ತೀರಿಸುವವರೆಗೂ ಕೂಡ ಬೇರೆಯವರ ಋಣ ನಮ್ಮ ಮೇಲೆ ಇದೆ ಎನ್ನುವ ಮಾನಸಿಕ ವೇದನೆ ಮತ್ತು ಸರಿಯಾದ ಸಮಯಕ್ಕೆ ಕೊಟ್ಟ ಮಾತಿನಂತೆ ಆ ಕಂತುಗಳನ್ನು ಅಥವಾ ಸಾಲವನ್ನು ಮರುಪಾವತಿಸಲು ಆಗದೆ ಇದ್ದರೆ ಅವಮಾನ ಇದರಿಂದಲೇ ಹತ್ತಿರದವರನ್ನು ಕಳೆದುಕೊಳ್ಳುತ್ತೇವೆ ಸಂಬಂಧಿಕರಲ್ಲಿ ನಿಷ್ಟೂರವಾಗುತ್ತದೆ.
ಇಷ್ಟೆಲ್ಲ ಕಷ್ಟ ಇಟ್ಟುಕೊಂಡು ಊಟ ಮಾಡಲು ಕುಳಿತರೆ ಊಟ ಸೇರುವುದಿಲ್ಲ ಇದರಿಂದ ಆರೋಗ್ಯ ಸಮಸ್ಯೆ ಬರುತ್ತದೆ ರಾತ್ರಿ ಹೊತ್ತು ನಿದ್ರೆ ಬರುವುದಿಲ್ಲ ಇದು ಇನ್ನಷ್ಟು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ ನಿಧಾನವಾಗಿ ಮನೆಯಲ್ಲಿ ಇದೇ ಕಾರಣಕ್ಕಾಗಿ ಜ’ಗ’ಳ ಆರಂಭ ಹಾಕಿ ಕಿರಿಕಿರಿ ಆಗುತ್ತದೆ.
ನಮ್ಮ ಸಮಸ್ಯೆಗಳಿಂದ ಮನೆ ಮಕ್ಕಳು ಕೂಡ ಚಿಕ್ಕ ವಯಸ್ಸಿನಿಂದಲೇ ಬಹಳ ಸಂ’ಕ’ಟ ಅನುಭವಿಸುವ ರೀತಿ ಕ’ಣ್ಣೀ’ರು ಹಾಕುವ ರೀತಿ ಆಗುತ್ತದೆ ಹಾಗಾಗಿ ಸಾಲ ಮಾಡುವ ಮುನ್ನವೇ ಎಚ್ಚರಿಕೆಯಿಂದ ಇರಬೇಕು. ಆದರೆ ಏನು ಮಾಡುವುದು ಕೆಲವೊಂದು ಪರಿಸ್ಥಿತಿಗಳು ನಮ್ಮನ್ನು ಬೇರೆಯವರ ಬಳಿ ಸಾಲಕ್ಕಾಗಿ ಕೈ ಚಾಚುವ ರೀತಿ ಮಾಡಿಬಿಡುತ್ತವೆ.
ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!
ಒಂದು ವೇಳೆ ನೀವು ಕೂಡ ಇದೇ ರೀತಿಯ ಸಮಸ್ಯೆಗಳಲ್ಲಿ ಸಿಲುಕಿ ಸಾಲದ ಸುಳಿಯಲ್ಲಿ ಮುಳುಗಿದ್ದರೆ ಆದಷ್ಟು ಬೇಗ ನಿಮಗೆ ಸಾಲ ತೀರಿಸುವ ದಾರಿ ಸಿಗಬೇಕು ನಿಮಗೆ ಅನಿರೀಕ್ಷಿತ ಲಾಭವಾಗಿ ನಿಮ್ಮ ಕಷ್ಟಗಳು ಕೊನೆಯಾಗಬೇಕು ದೇವರು ಯಾವುದಾದರೂ ರೂಪದಲ್ಲಿ ಬಂದು ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಬೇಕು ಎನ್ನುವ ಅಭಿಲಾಷೆ ಇದ್ದರೆ ನಾವು ಹೇಳುವ ವಿಧಾನದಲ್ಲಿ ಸರಳವಾಗಿ ಈ ಒಂದು ಪೂಜೆ ಮಾಡಿ ನೋಡಿ.
ತಾಯಿ ಮಹಾಲಕ್ಷ್ಮಿಯು ತಾಯಿ ಜಗನ್ಮಾತೆ ಆದಿಶಕ್ತಿಯು ಹಾಗೂ ತಾಯಿ ಸರಸ್ವತಿಯು ನಿಮ್ಮ ಮೇಲೆ ಕೃಪೆ ತೋರಿ ನಿಮಗೆ ಒಂದು ಒಳ್ಳೆಯ ದಾರಿಯನ್ನು ತೋರಿಸುತ್ತಾರೆ. ನೀವೇ ಆಶ್ಚರ್ಯ ಪಡುವ ರೀತಿಯಾಗಿ ನಿಮ್ಮ ಸಮಸ್ಯೆ ಕಳೆಯುತ್ತಾ ಬರುತ್ತದೆ ಈ ಆಚರಣೆಯನ್ನು ಮಂಗಳವಾರದ ದಿನಗಳಂದು ಮಾತ್ರ ಮಾಡಬೇಕು ಮತ್ತು ಮಂಗಳವಾರದ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಬೆಳಗ್ಗೆ 07:30ರ ಒಳಗಡೆ ನೀವು ಈ ಆಚರಣೆಯನ್ನು ಮಾಡಬೇಕು.
ಶ್ರದ್ಧಾ ಭಕ್ತಿಯಿಂದ ಬಹಳ ಮಡಿಯಿಂದ ಈ ಪೂಜೆ ಮಾಡಬೇಕು. ಪೂಜೆ ಮಾಡುವಾಗ ಮೊದಲು ನಿಮ್ಮ ಮನೆದೇವರು ಇಷ್ಟ ದೇವರು ಎಲ್ಲರನ್ನು ಪ್ರಾರ್ಥಿಸಿ, ಮೊದಲಿಗೆ ಗಣಪತಿ ನಂತರ ತಾಯಿ ಮಹಾಲಕ್ಷ್ಮಿ ಅಮ್ಮನವರು ಹಾಗೂ ಶಾರದೆಯನ್ನು ನೆನೆದು ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಈ ರೀತಿಯಾಗಿ ಮಾಡಿ.
ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!
ಮೊದಲಿಗೆ ಎರಡು ಕೈಯಲ್ಲಿ ಕಲ್ಲುಪ್ಪನ್ನು ಹಿಡಿದುಕೊಂಡು ಆ ಕಲ್ಲುಪ್ಪನ್ನು ಒಂದು ಹಿತ್ತಾಳೆಯ ತಟ್ಟೆಯ ಮೇಲೆ ಹಾಕಬೇಕು, ಈ ರೀತಿ ಹಾಕಿದ ನಂತರ ನಿಮಗೆ ಎಷ್ಟು ಸಾಲ ಇದೆ ಆ ಸಾಲದ ಮೊತ್ತವನ್ನು ಉಪ್ಪಿನ ಮೇಲೆ ತೋರು ಬೆರಳನ್ನು ಉಪಯೋಗಿಸಿ ಬರೆಯಬೇಕು. ಮನಸ್ಸಿನಲ್ಲಿ ದೇವರನ್ನು ನೆನೆದು ಭಕ್ತಿಯಿಂದ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಕೊಡಿ ಎಂದು ಕೇಳಿಕೊಳ್ಳಬೇಕು.
ಇದಾದ ನಂತರ ಕಲ್ಲುಪ್ಪಿನ ಮೇಲೆ ಅರಿಶಿನದ ಕೊಂಬನ್ನು ಇಡಬೇಕು ಈ ರೀತಿ ಪೂಜೆಯನ್ನು ಮಾಡಿದ ನಂತರ ಎರಡು ದಿನಗಳ ಕಾಲ ತಟ್ಟೆಯನ್ನು ದೇವರಕೋಣೆಯಲ್ಲಿಯೇ ಬಿಡಬೇಕು. ಎರಡು ದಿನಗಳು ಆದ ಮೇಲೆ ಅರಿಶಿನದ ಕೊಂಬನ್ನು ದೇವರಕೋಣೆಯಲ್ಲಿ ಇಟ್ಟು ಪ್ರತಿನಿತ್ಯವೂ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಮಾಡಬೇಕು.
ಹಾಗೂ ಕಲ್ಲುಪ್ಪನ್ನು ನೀರಿನಲ್ಲಿ ಹಾಕಿ ಕರಗಿದ ನಂತರ ಆ ನೀರನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಚೆಲ್ಲಬೇಕು ಅಥವಾ ತೆಂಗಿನ ಮರದ ಬುಡಕ್ಕೆ ಹಾಕಬೇಕು. ಈ ಸರಳ ಉಪಾಯ ಫಾಲೋ ಮಾಡಿದರೆ ಶೀಘ್ರವಾಗಿ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.