ಕೆಲವರಿಗೆ ಶಬ್ದ ಇಲ್ಲದೆ ಇದ್ದರೂ ನಿಶಬ್ದ ವಾತಾವರಣದಲ್ಲೂ ಯಾವುದೋ ಮ್ಯೂಸಿಕ್ ಕಿವಿಯಲ್ಲಿ ಕೇಳಿಸುತ್ತಿರುತ್ತದೆ, ಇಲ್ಲವಾದರೆ ಗುಂಯ್ ಅಥವಾ ಸ್ಸ್ ಎನ್ನುವ ಶಬ್ದ ಕಿವಿಗೆ ಕೇಳಿಸುತ್ತಿರುತ್ತದೆ, ಯಾವುದೇ ಶಬ್ದ ಇಲ್ಲದಿದ್ದಾಗಲೂ ಹೃದಯದ ಬಡಿತದ ರೀತಿ ಲಬ್ ಡಬ್ ಶಬ್ದ ಕೇಳಿಸುವ ರೀತಿ ಆಗುತ್ತಿರುತ್ತದೆ ಇದು ಒಂದು ಕಿವಿ ಅಥವಾ ಎರಡು ಕಿವಿಯಲ್ಲಿ ಕೇಳಿಸಬಹುದು.
ಇದನ್ನು ಆಯುರ್ವೇದದಲ್ಲಿ ಕರ್ಣಛೇದ ಸಮಸ್ಯೆ ಎನ್ನುತ್ತಾರೆ ಅಥವಾ ಕರ್ಣನಾದ ಮೆಡಿಕಲ್ ಭಾಷೆಯಲ್ಲಿ ಇದನ್ನು ಟಿನೈಟಸ್ (Tinnitus) ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ ನಿಮಗೂ ಕೂಡ ಈ ರೀತಿ ಆಗುತ್ತಿದೆ ಎಂದರೆ ಇದನ್ನು ಆರಂಭದ ದಿನಗಳಲ್ಲಿ ಗುರುತಿಸುವುದು ಒಳ್ಳೆಯದು ಇಲ್ಲವಾದಲ್ಲಿ ಮುಂದೆ ಅ’ಪಾ’ಯ ತಪ್ಪಿದ್ದಲ್ಲ ಹಾಗಾಗಿ ಈ ಅಂಕಣದಲ್ಲಿ ಇದರ ಬಗ್ಗೆ ಕೆಲ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಬಿಳಿ ದಾಸವಾಳದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಇದನ್ನು ಹೇಗೆ ಬಳಸಬೇಕು ನೋಡಿ.!
ಕೊರೆಯುವ ನೀರಿನಲ್ಲಿ ತಲೆ ಸ್ನಾನ ಮಾಡುವುದು, ಮೂರು ನಾಲ್ಕು ಗಂಟೆ ಸ್ವಿಮ್ಮಿಂಗ್ ಪೂಲ್ ಒಳಗೆ ಇರುವುದು, ಇಯರ್ ವ್ಯಾಕ್ಸ್ ಕಿವಿಯಲ್ಲಿ ಹೆಚ್ಚು ಡೆಪಾಸಿಟ್ ಆಗಿ ಅದು ಗಟ್ಟಿಯಾಗಿರುವುದು ಅಥವಾ ಇಯರ್ ವ್ಯಾಕ್ಸ್ ತೆಗೆಯಲು ಇಲ್ಲ ಕಿವಿಯನ್ನು ಕ್ಲೀನ್ ಮಾಡಲು ನೀವು ಶಾರ್ಪ್ ಆದ ವಸ್ತುಗಳನ್ನು ಬಳಸಿ ಅದರ ಮೂಲಕ ಕಿವಿಗೆ ಡ್ಯಾಮೇಜ್ ಆಗಿರುವುದು ಅಥವಾ ನಿಮ್ಮ ಕಿವಿಯ ಭಾಗಕ್ಕೆ ಏನಾದರೂ ಬಲವಾದ ಪೆಟ್ಟು ಬಿದ್ದು ಆ ಭಾಗದ ನರಗಳ ಕನೆಕ್ಷನ್ ಕಟ್ ಆಗಿದ್ದರೆ ಇನ್ನು ಮುಂತಾದ ಅನೇಕ ಕಾರಣದಿಂದಾಗಿ ಈ ರೀತಿ ಸಮಸ್ಯೆ ಉಂಟಾಗುತ್ತದೆ.
ಆಡಿಯೋಗ್ರಾಂ (Audiogram) ಅಥವಾ ಆಟೋಸ್ಕೋಪ್ ಎಕ್ಸಾಮಿನೇಷನ್ (Autoscope examination) ಮುಂತಾದ ಚಿಕಿತ್ಸಾ ವಿಧಾನಗಳಿಂದ ಈ ಸಮಸ್ಯೆಯನ್ನು ಪರೀಕ್ಷಿಸಿ ನಂತರ ಚಿಕಿತ್ಸೆ ನೀಡಲಾಗುತ್ತದೆ.
ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್ ನಾ ಲಕ್ಷಣಗಳು ಇವೇ ನೋಡಿ, ಎಲ್ಲಾ ಮಹಿಳೆಯರು ಇದನ್ನು ತಿಳಿದುಕೊಂಡಿರಲೇಬೇಕು.!
ಟಿನೈಟಸ್ ಗೆ ಪರಿಹಾರ:-
● ಒಂದು ಕಪ್ ನಲ್ಲಿ ಅರ್ಧ ಚಮಚ ತುಪ್ಪವನ್ನು ತೆಗೆದುಕೊಂಡು ಅದನ್ನು ನೀರು ತುಂಬಿದ ಪಾತ್ರೆಗೆ ಇಟ್ಟು ಬಿಸಿ ಮಾಡಿ ಕರಗಿದ ತುಪ್ಪವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ 5-10 ನಿಮಿಷಕ್ಕೊಮ್ಮೆ ಬಿಸಿನೀರನ್ನು ಸ್ವಲ್ಪ ಸ್ವಲ್ಪ ಸೇವನೆ ಮಾಡುತ್ತಾ ಬಂದಾಗ ತುಪ್ಪವು ಜೀರ್ಣವಾಗುತ್ತದೆ ಇದು ಕೂಡ ಟಿನೈಟಸ್ ಸಮಸ್ಯೆಗೆ ಪರಿಹಾರ.
● ನೀವೇನಾದರೂ ಚೂಪಾದ ವಸ್ತುಗಳಿಂದ ಕಿವಿಯನ್ನು ಕ್ಲೀನ್ ಮಾಡುತ್ತಿದ್ದರೆ ಈಗಲೇ ಆ ಅಭ್ಯಾಸವನ್ನು ಬಿಟ್ಟುಬಿಡಿ.
● ಕೆಲವರು ಫೇಸ್ ಗೆ ಸ್ಟೀಮ್ ತೆಗೆದುಕೊಳ್ಳುತ್ತಾರೆ ಅದೇ ರೀತಿ ಸ್ಟೀಮ್ ನ್ನು ನೀವು ಕಿವಿಗೆ ತೆಗೆದುಕೊಳ್ಳುವುದರಿಂದ ಅಥವಾ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಕುದಿಸುತ್ತಾ ಆ ಆವಿಯನ್ನ ಕಿವಿಗೆ ತೆಗೆದುಕೊಳ್ಳುವುದರಿಂದ ಕೂಡ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.
● ಅತಿ ತಣ್ಣಗಿನ ನೀರನ್ನು ಕುಡಿಯುವುದು, ಅತಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಈ ಎರಡು ಅಭ್ಯಾಸವನ್ನು ಕೂಡ ತಪ್ಪಿಸಿ.
● ಪ್ರತಿದಿನ ರಾತ್ರಿ ಮಲಗುವ ಮುನ್ನ ಮೂಗಿನ ಹೊಳ್ಳೆಗಳಿಗೆ ಎರಡು ಹನಿ ಬೆಚ್ಚಗೆ ಮಾಡಿದ ಎಳ್ಳೆಣ್ಣೆ, ಸಾಸಿವೆ ಎಣ್ಣೆಯನ್ನು ಹಾಕುವುದರಿಂದ ಕೂಡ ಈ ಸಮಸ್ಯೆಯನ್ನು ಕಂಟ್ರೋಲ್ ಮಾಡಬಹುದು.
● ಅತಿಯಾದ ಒತ್ತಡದಲ್ಲಿದ್ದರೆ ಕೋಪ ಹಾಗೂ ಡಿಪ್ರೆಶನ್ ನಲ್ಲಿ ಇದ್ದರೂ ಕೂಡ ಹೀಗಾಗುವ ಸಾಧ್ಯತೆ ಇರುತ್ತದೆ ಇದನ್ನು ಕಂಟ್ರೋಲ್ ಮಾಡಲು ನೀವು ಯೋಗಾ, ಪ್ರಾಣಯಾಮ ಇವುಗಳಿಗೆ ಸಮಯ ಮೀಸಲಿಡಿ.
● ಈ ಮೇಲೆ ತಿಳಿಸಿದಂತೆ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಸೂಕ್ತ ವೈದ್ಯರನ್ನು ಒಮ್ಮೆ ಭೇಟಿ ಮಾಡಿ ಅವರ ಸಲಹೆಯನ್ನು ಕೂಡ ಪಡೆದುಕೊಳ್ಳಿ.