ನೋಡು ನೋಡುತ್ತಿದ್ದಂತೆ 2023 ಕಣ್ಣ ಮುಂದೆ ಕರಗಿ ಹೋಯಿತು. ನಾವು ವರ್ಷದ ಅಂತ್ಯದಲ್ಲಿದ್ದೇವೆ ಈ ವರ್ಷದಲ್ಲಿ ಇನ್ನು ಬೆರಳಿಕೆಯಷ್ಟು ದಿನಗಳು ಮಾತ್ರ ಉಳಿದಿವೆ. ಹೊಸ ವರ್ಷದ ಆರಂಭದ ಸಂತಸ ಒಂದು ಕಡೆ ಆದರೆ ಒಂದು ವರ್ಷದಿಂದ ನಾವು ಮಾಡಿದ ಕೆಲಸಗಳು ಹಾಗೂ ನಮಗಾದ ಕ’ಷ್ಟ ನಷ್ಟಗಳು ಎಲ್ಲವೂ ಜೊತೆಗೆ ನೆನಪಾಗುತ್ತವೆ.
ಆಗಿದ್ದನ್ನು ಮರೆತು ಮುಂದಿನದ್ದನ್ನು ಎದುರಿಸುವ ಸಮಯ ಹೀಗೆ ಪ್ರತಿ ವರ್ಷ ಹೊಸ ವರ್ಷ ಆರಂಭವಾಗುವಾಗ ನಾವು ಹಲವಾರು ಲೆಕ್ಕಾಚಾರಗಳನ್ನು ಹಾಕಿಕೊಂಡು ಪ್ಲಾನ್ ಮಾಡುತ್ತೇವೆ, ಕೆಲವರು ಹೊಸ ವರ್ಷದಲ್ಲಿ ರೆಸಲ್ಯೂಷನ್ ಗಳನ್ನು ಕೂಡ ಮಾಡುತ್ತಾರೆ, ಆದರೆ ಇವುಗಳಲ್ಲಿ ಎಷ್ಟನ್ನು ಸಾಧಿಸುತ್ತೇವೆ ಎನ್ನುವುದು ಯಕ್ಷಪ್ರಶ್ನೆ. ನಿಮ್ಮ ನೂತನ ವರ್ಷದ ಪ್ಲಾನಿಂಗ್ ಏನೇ ಇರಲಿ ನಿಮ್ಮ ಮನೆಯ ಐಶ್ವರ್ಯ ಹೆಚ್ಚಬೇಕು.
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿ ಸಮೃದ್ಧಿ ಆಗಿರಬೇಕು ಎಂದರೆ ಈ ವರ್ಷ ಮನೆಗೆ ಈಗ ನಾವು ಹೇಳುವ ಈ ವಸ್ತುಗಳನ್ನು ತಪ್ಪದೇ ತೆಗೆದುಕೊಂಡು ಬನ್ನಿ. ಸಾಮಾನ್ಯವಾಗಿ ಹೊಸ ವರ್ಷಕ್ಕೆ ನಾವು ಹೊಸ ಕ್ಯಾಲೆಂಡರ್ ತರುತ್ತೇವೆ ಬಹುಶಃ ಅದೊಂದೇ ಬದಲಾವಣೆ ಎನಿಸುತ್ತದೆ. ಆದರೆ ಇದೊಂದು ವಸ್ತು ಮಾತ್ರ ಅಲ್ಲದೆ ಮನೆಯಲ್ಲಿ ಇನ್ನು ಅನೇಕ ವಸ್ತುಗಳ ಆಗಮನ ಆಗಬೇಕು.
ಮನೆಗೆ ಮಾತ್ರವಲ್ಲದೆ ಮನಸ್ಸಿನಲ್ಲೂ ಕೆಲವು ಬದಲಾವಣೆಗಳಾದರೆ ಇನ್ನೂ ಒಳ್ಳೆಯದು ಈ ರೀತಿ ಮನಸ್ಸಿನ ನೆಗೆಟಿವಿಟಿ ತೆಗೆದುಹಾಕಿ ಸಕಾರಾತ್ಮಕತೆಯನ್ನು ಉಂಟು ಮಾಡಬೇಕು ಮತ್ತು ಮನೆಯಲ್ಲಿರುವ ನೆಗೆಟಿವ್ ವೈಬ್ರೇಶನ್ ಹೊರ ಹಾಕಿ ದೈವಾನುಗ್ರಹ ಹಾಗೂ ಧನಾಕರ್ಷಣೆ ಆಗಬೇಕು ಎಂದರೆ ಹೊಸ ವರ್ಷದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ.
* ನವಿಲುಗರಿ:- ಪ್ರತಿಯೊಂದು ಮನೆಯಲ್ಲೂ ಕೂಡ ನವಿಲುಗರಿ ಇರಬೇಕು. ನವಿಲು ಗರಿಯನ್ನು ಎಲ್ಲರೂ ಇಟ್ಟುಕೊಳ್ಳುತ್ತಾರೆ. ವಿದ್ಯಾರ್ಥಿಗಳು ನವಿಲುಗರಿ ಪುಸ್ತಕದಲ್ಲಿ ಇಟ್ಟುಕೊಳ್ಳುವುದರಿಂದ ಓದಿನಲ್ಲಿ ಏಕಾಗ್ರತೆ ಬರುತ್ತದೆ ಎಂದು ಇಟ್ಟುಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರ ಮಾಡುವವರು ತಮ್ಮ ವ್ಯಾಪಾರ ಚೆನ್ನಾಗಿ ಅಭಿವೃದ್ಧಿಯಾಗಲಿ ಎನ್ನುವ ಕಾರಣಕ್ಕಾಗಿ ನವಿಲುಗರಿಯನ್ನು ಗಲ್ಲಾಪೆಟ್ಟಿಗೆಯಲ್ಲಿ ಅಥವಾ ಅಂಗಡಿ ಮುಂಗಟ್ಟುಗಳಲ್ಲಿ ಇಟ್ಟುಕೊಳ್ಳುತ್ತಾರೆ.
ಇನ್ನು ಮನೆಯಲ್ಲಿ ನವಿಲುಗರಿ ಇಟ್ಟರೆ ಶ್ರೀ ಮಹಾವಿಷ್ಣುವಿನ ಜೊತೆಗೆ ತಾಯಿ ಮಹಾಲಕ್ಷ್ಮಿಯು ಕೂಡ ಪ್ರಸನ್ನರಾಗಿ ನಿಮ್ಮ ಮನೆಯ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುತ್ತಾರೆ. ಹಾಗಾಗಿ ನಿಮ್ಮ ಮನೆಯಲ್ಲಿ ನವಿಲುಗರಿ ಇಲ್ಲ ಎಂದರೆ ಹೊಸ ವರ್ಷದಲ್ಲಿ ಖರೀದಿಸಿ ತನ್ನಿ.
ಧರ್ಮ ಗ್ರಂಥಗಳು:- ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ರಾಮಾಯಣ ಮಹಾಭಾರತ ಧರ್ಮ ಗ್ರಂಥಗಳಾಗಿವೆ. ಅದೇ ರೀತಿ ಭಗವದ್ಗೀತೆಗೂ ಕೂಡ ನಾವು ಇಷ್ಟೇ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಪ್ರತಿಯೊಂದು ಮನೆಗಳಲ್ಲೂ ಕೂಡ ಹೊಸ ವರ್ಷದ ರೆಸಲ್ಯೂಶನ್ ಆಗಿ ಸಾಧ್ಯವಾದರೆ ಹಿಂದುಗಳು ಈ ಧರ್ಮ ಗ್ರಂಥಗಳನ್ನು ಅಥವಾ ನೀವು ಅನ್ಯ ಧರ್ಮದವರಾಗಿದ್ದರೆ ನಿಮ್ಮ ಧರ್ಮದ ಧರ್ಮ ಗ್ರಂಥಗಳನ್ನು ಖರೀದಿಸಿ ಮನೆಯಲ್ಲಿ ಇಟ್ಟುಕೊಂಡು ಪ್ರತಿದಿನ ಸಂಜೆ ಸಮಯ ನಿಮ್ಮ ಮನೆಯ ಮಕ್ಕಳ ಜೊತೆ ಕೂತು ಓದಲು ಆರಂಭಿಸಿ.
ನಿಮ್ಮ ಮನೆಯ ವಾತಾವರಣವೂ ಎಷ್ಟು ಉತ್ತಮವಾಗಿ ಬದಲಾವಣೆ ಆಗುತ್ತದೆ ಎನ್ನುವುದನ್ನು ನೀವೇ ನೋಡಿ, ಇದೇ ನಿಮ್ಮ ಹೊಸ ವರ್ಷದ ರೆಸಲ್ಯೂಶನ್ ಆಗಲಿ ಎನ್ನುವುದು ನಮ್ಮ ಇಚ್ಛೆ. ಒಂದು ವೇಳೆ ನಿಮಗೆ ಈ ರೀತಿ ಮಾಡಲು ಇಷ್ಟ ಇಲ್ಲ ಎನ್ನುವುದಾದರೆ ನೀವು ನಾಸ್ತಿಕರಾಗಿದ್ದರೆ ಕೆಲವು ಒಳ್ಳೆಯ ಪುಸ್ತಕಗಳು ಇವೆ ಆ ಪುಸ್ತಕಗಳನ್ನಾದರೂ ಓದಲು ಶುರು ಮಾಡಿ, ಅದರಲ್ಲಿರುವ ಒಳ್ಳೆಯ ವಿಚಾರಗಳನ್ನು ಮನೆಯಲ್ಲಿ ಕಿರಿಯರ ಜೊತೆ ಹಂಚಿಕೊಳ್ಳಲು ಪ್ರಯತ್ನಿಸಿ.
* ಲಾಫಿಂಗ್ ಬುದ್ಧ:- ಲಾಫಿಂಗ್ ಬುದ್ಧ ಮನೆಯವ್ಲಿದ್ದರೆ ಸಕಾರಾತ್ಮಕ ವಾತಾವರಣ ತುಂಬುತ್ತದೆ. ಇದನ್ನು ನೋಡಿದ ತಕ್ಷಣ ನಮ್ಮ ಮಾನಸಿಕ ಒತ್ತಡಗಳು ಸ್ವಲ್ಪ ಕಡಿಮೆ ಆಗುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಇಲ್ಲ ಎಂದರೆ ಹೊಸ ವರ್ಷದಲ್ಲಿ ಖರೀದಿಸಿ. ಕೆಲವರು ಇದನ್ನು ತಾವೇ ತೆಗೆದುಕೊಳ್ಳಬಾರದು ಬೇರೆಯವರು ಉಡುಗೊರೆಯಾಗಿ ಕೊಡಬೇಕು ಎನ್ನುತ್ತಾರೆ. ನಿಮ್ಮ ಆತ್ಮೀಯರು ಹೊಸ ವರ್ಷಕ್ಕೆ ಏನನ್ನಾದರೂ ಕೊಡಲು ಇಚ್ಚಿಸಿದ್ದರೆ ಅವರು ನಿಮ್ಮ ಬಳಿ ಕೇಳಿದರೆ ಲಾಫಿಂಗ್ ಬುದ್ಧ ಕೊಡುವಂತೆ ಕೇಳಿ.
* ತೆಂಗಿನ ಮರ:- ಹೊಸ ವರ್ಷದಲ್ಲಿ ಪರಿಪೂರ್ಣ ಫಲ ಎಂದು ಕರೆಸಿಕೊಳ್ಳುವ ತೆಂಗಿನ ಮರವನ್ನು ಬೆಳೆಸಿ. ಸಾಕುವ ಪ್ರಯತ್ನ ಮಾಡಿ. ಒಂದು ವೇಳೆ ನಿಮಗೆ ನೀವಿರುವ ಸ್ಥಳದಲ್ಲಿ ಮರಗಳನ್ನು ಹಾಕಲು ಸಮಸ್ಯೆ ಆಗುತ್ತಿದ್ದರೆ ತೆಂಗಿನ ಮರದ ಬದಲು ನಿಮಗೆ ಅನುಕೂಲ ಆಗುವಂತೆ ಯಾವುದಾದರೂ ಚಿಕ್ಕ ಪುಟ್ಟ ಸಸಿ ಗಿಡಗಳನ್ನಾದರೂ ಹೊಸ ವರ್ಷದಿಂದ ಬೆಳೆಸಲು ಆರಂಭಿಸಿ.