ನಿದ್ರೆಯಿಂದ ಎದ್ದ ಮೇಲೆ ಇದನ್ನು ಮಾಡಿದರೆ ಕಾಲು ನೋವು ಬರುವುದಿಲ್ಲ, ಪಾದ ಮತ್ತು ಹಿಮ್ಮಡಿ ನೋವಿಗೆ ಬೆಸ್ಟ್ ಪರಿಹಾರ.!

ಈಗಿನ ಕಾಲದಲ್ಲಿ ಪಾದ ಮತ್ತು ಹಿಮ್ಮಡಿ ನೋವು ಎನ್ನುವುದನ್ನು ಹೆಚ್ಚಾಗಿ ಕೇಳುತ್ತಿದ್ದೇವೆ. ಚಿಕ್ಕ ವಯಸ್ಸಲ್ಲಿಯೇ ಜನರು ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಾನಾ ಕಾರಣಗಳಿಂದ ಪಾದ ಮತ್ತು ಹಿಮ್ಮಡಿಯ ನೋವು ಕಾಣಿಸಿಕೊಳ್ಳುತ್ತದೆ. ಇದು ಎಷ್ಟು ನೋವು ತರುತ್ತದೆ ಎಂದರೆ ಬೆಳಿಗ್ಗೆ ಎದ್ದ ತಕ್ಷಣ ನೆಲದ ಮೇಲೆ ಕಾಲು ಇಡಲು ಬಿಡುವುದಿಲ್ಲ, ಪಾದಗಳಲ್ಲಿ ಊತ, ಜೋಮು ಹಿಡಿಯುವುದು, ವಿಪರೀತವಾದ ಉರಿ ಅಥವಾ ತಡೆಯಲಾಗದಷ್ಟು ನೋ’ವಿರುತ್ತದೆ.

ಈಗಾಗಲೇ ಯಾರಾದರೂ ಇಂತಹ ಸಮಸ್ಯೆಯಿಂದ ಬಳಸುತ್ತಿದ್ದರೆ ತಪ್ಪದೆ ಇಂದು ನಾವು ಈ ಅಂಕಣದಲ್ಲಿ ಹೇಳುತ್ತಿರುವ ಮಾಹಿತಿಯನ್ನು ಫಾಲೋ ಮಾಡಿ ಅಥವಾ ಮುಂದೆ ನಿಮಗೆ ಈ ರೀತಿ ಪಾದ ಹಾಗೂ ಇಮ್ಮಡಿಯ ಸಮಸ್ಯೆಗಳು ಕಾಣಿಸಿಕೊಳ್ಳಬಾರದು ಎಂದರು ಈಗ ನಾವು ಹೇಳುತ್ತಿರುವ ಈ ಟಿಪ್ ಗಳನ್ನು ಫಾಲೋ ಮಾಡಿ.

ಮೊದಲಿಗೆ ಯಾವ ಕಾರಣಗಳಿಂದ ಪಾದ ಮತ್ತು ಹಿಮ್ಮಡಿಯ ನೋವು ಬರುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಕೆಲವರಿಗೆ ಪಾದ ಅಥವಾ ಹಿಮ್ಮಡಿಯ ಭಾಗಕ್ಕೆ ಹೊರಗಿನಿಂದ ಡ್ಯಾಮೇಜ್ ಆಗಿರುತ್ತದೆ, ಅಪಘಾತ ಆದಾಗ ಅಥವಾ ದೇಹದ ತೂಕ ಒಮ್ಮೆಲೇ ಹೆಚ್ಚಾದಾಗಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ವಯಸ್ಸಾಗುತ್ತಿದ್ದಂತೆ ಮೂಳೆಗಳ ಸವೆತ ಉಂಟಾಗುವುದರಿಂದ ಕೂಡ ಪಾದ ಮತ್ತು ಹಿಮ್ಮಡಿಯನ್ನು ನೋ’ವು ಬರುತ್ತದೆ. ಇದನ್ನು ಹೊರತುಪಡಿಸಿ ಸ್ಪೋರ್ಟ್ಸ್ ಪರ್ಸನ್ ಗಳಿಗೆ ಖಡಾಕಂಡಿತವಾಗಿ ಪಾದ ಮತ್ತು ಹಿಮ್ಮಡಿಯ ನೋವು ಇದ್ದೇ ಇರುತ್ತದೆ. ಮೊದಲಿಂದಲೂ ಕೂಡ ಪಾದ ಮತ್ತು ಹಿಮ್ಮಡಿಯ ಭಾಗಕ್ಕೆ ವ್ಯಾಯಾಮ ಕೊಡದೆ ಇರುವುದು ಕೂಡ ಇದರಲ್ಲೊಂದು ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗ ನಿಮ್ಮ ನೋವು ಯಾವ ಹಂತದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನೀವಿನ್ನು ಅದರ ನೋವನ್ನು ಪಡುತ್ತಿದ್ದೀರ ಎಂದರೆ ಮೊದಲು Paracentomol ಅಥವಾ ವೈದ್ಯರು ಸೂಚಿಸು ಪೇನ್ ಕಿಲ್ಲರ್ ಎರಡು ಬಾರಿ ತೆಗೆದುಕೊಳ್ಳಿ ಅದರಿಂದ ನೋವು ಕಡಿಮೆ ಆಗುತ್ತಿದ್ದರೆ ಅದನ್ನು ಅನುಸರಿಸಬಹುದು

ಇದರ ಜೊತೆಗೆ ತಪ್ಪದೆ ಬೆಳಗ್ಗೆ ಎದ್ದ ಕೂಡಲೇ ಪಾದ ಮತ್ತು ಹಿಮ್ಮಡಿ ಭಾಗಕ್ಕೂ ಕೂಡ ವ್ಯಾಯಾಮ ಮಾಡುವುದು ಮುಖ್ಯ ಇದನ್ನು ಹೇಗೆ ಮಾಡಬಹುದು ಎಂದರೆ ಒಂದು ಚೆಂಡನ್ನು ಪಾದದ ಕೆಳಗೆ ಇಟ್ಟುಕೊಂಡು ಅದನ್ನು ಆ ಕಡೆ ಈ ಕಡೆ ಹೊರಡಿಸುವುದು. ಈ ರೀತಿ ಮಾಡುವುದರಿಂದ ಪಾದದ ಭಾಗಕ್ಕೆ ಮತ್ತು ಹಿಮ್ಮಡಿ ಭಾಗಕ್ಕೆ ಪೂರ್ತಿ ಎಕ್ಸರ್ಸೈಜ್ ಆಗುತ್ತದೆ. ಆ ಭಾಗದ ನರಗಳು ಕ್ರಿಯಾಶೀಲಗೊಳ್ಳುತ್ತದೆ ಈ ಮೂಲಕ ಸಣ್ಣಪುಟ್ಟ ಡಿಸ್ ಲೊಕೇಟ್ ಆಗಿದ್ದರು ಸರಿ ಹೋಗಲು ಅವಕಾಶ ಸಿಗುತ್ತದೆ.

ಜೊತೆಗೆ ಪಾದವನ್ನು ಹೊಂದುವಂತಹ ಚಪ್ಪಲಿ ಧರಿಸುವುದು ಉತ್ತಮ ಪರಿಹಾರ. ಕೆಲವರಿಗೆ ಹಿಮ್ಮಡಿಯ ಭಾಗ ತಗ್ಗಿರುತ್ತದೆ ಅಥವಾ ಉಬ್ಬಿರುತ್ತದೆ ಅವರ ಪಾದಕ್ಕೆ ಅನುಗುಣವಾದ ಚಪ್ಪಲಿ ಧರಿಸಿದಾಗ ಅನೇಕರಿಗೆ ಈ ಸಮಸ್ಯೆ ಗುಣವಾಗಿದೆ ಒಂದು ವೇಳೆ ಈ ಹಂತ ದಾಟಿ ವಿಪರೀತವಾದ ನೋವಾಗಿದೆ ಎಂದಾಗ ಅದನ್ನು ಆರಾಥರೈಟಿಸ್ ಎಂದು ಪರಿಗಣಿಸಲಾಗುತ್ತದೆ ಇದಕ್ಕೆ ಸ್ಟೆಮ್ ಸೆಲ್ ಥೆರಪಿ ಎಂದು ಮಾಡುತ್ತಾರೆ,

ಇದರಲ್ಲಿ ರೋಗಿಯ ರಕ್ತದ ಕಣಗಳಿಂದಲೇ ಇದನ್ನು ಗುಣಪಡಿಸುವ ಅಂಶಗಳನ್ನು ತೆಗೆದುಕೊಂಡು ಕಾಯಿಲೆ ಸರಿಪಡಿಸಲಾಗುತ್ತದೆ. ಕೇವಲ ಸೂಜಿಯ ಮುಖಾಂತರವಾಗಿ ಈ ಚಿಕಿತ್ಸೆ ನಡೆಯುತ್ತದೆ. ಇದಕ್ಕೂ ಕೂಡ ಸರಿಹೋಗದೆ ಇದ್ದಾಗ ಶಸ್ತ ಚಿಕಿತ್ಸೆ ಮಾಡದೆ ಬೇರೆ ಪರಿಹಾರ ಇರುವುದಿಲ್ಲ ಇದನ್ನು ತಪ್ಪಿಸಬೇಕು ಎಂದರೆ ನಾವು ಈ ಮೊದಲೇ ಹೇಳಿದಂತೆ ನಿಮ್ಮ ಪಾದಕ್ಕೆ ಸರಿಹೊಂದುವ ಚಪ್ಪಲಿ ಧರಿಸುವುದು.

ಹಿಮ್ಮಡಿ ಹಾಗೂ ಪಾದದ ಭಾಗಕ್ಕೆ ವ್ಯಾಯಾಮ ಮಾಡುವುದು ಹಾಗೂ ಒಂದೇ ಬಾರಿ ದೇಹದ ತೂಕ ವಿಪರೀತ ಹೆಚ್ಚಾಗದಂತೆ ಬ್ಯಾಲೆನ್ಸ್ ಮಾಡುವುದು ಇವುಗಳನ್ನು ಪಾಲಿಸಿ ಯಾವುದಾದರೂ ಸಣ್ಣ ಪುಟ್ಟ ಇಂಜುರಿ ಆಗಿದ್ದರೆ ಹಳೆ ನೋವಾಗುವವರೆಗೂ ಬಿಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

Leave a Comment

WhatsApp Group Join Now
Telegram Group Join Now