ಇತ್ತೀಚಿನ ದಿನದಲ್ಲಿ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೂ ಕೂಡ ಮಂಡಿ ನೋವಿನ ಸಮಸ್ಯೆ ಎನ್ನುವುದು ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ ನಮ್ಮ ಜಾಯಿಂಟ್ ಗಳಲ್ಲಿಯೂ ಲ್ಯೂಬ್ರಿಕೆಷನ್ ಫ್ಲೂಯಿಡ್ ಕಡಿಮೆಯಾದ ಸಂದರ್ಭದಲ್ಲಿ ನಾವು ಮಂಡಿಯನ್ನು ಬಗ್ಗಿಸುವುದು ಕಾಲನ್ನು ಮಡಿಸುವುದು ಇಂತಹ ಒಂದು ಸಂದರ್ಭದಲ್ಲಿ ಆ ಒಂದು ಸ್ಥಳದಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
ಇದನ್ನೇ ನಾವು ಮಂಡಿ ನೋವು ಎಂದು ಕರೆಯುತ್ತೇವೆ. ಹಾಗಾಗಿ ನಮ್ಮ ಮಂಡಿ ನೋವಿನ ಸಮಸ್ಯೆ ಯನ್ನು ಕೆಲವೊಂದಷ್ಟು ಯೋಗವನ್ನು ಮಾಡುವುದರ ಮೂಲಕ ಈ ಒಂದು ಸಮಸ್ಯೆಗೆ ಪರಿಹಾರವನ್ನು ನಾವು ಕಂಡುಕೊಳ್ಳಬಹುದು. ನಮ್ಮ ಮಂಡಿಗೆ ಅತಿ ಹೆಚ್ಚಿನ ಆಸರೆಯನ್ನು ಕೊಡುತ್ತಿರುವಂತಹ ಜಾಗ ಯಾವುದು ಎಂದರೆ ನಮ್ಮ ತೊಡೆಯ ಭಾಗ ಹಾಗೂ ನಮ್ಮ ಮಂಡಿಯ ಕೆಳಭಾಗ.
ಹಾಗಾಗಿ ಈ ಒಂದು ಭಾಗವನ್ನು ನಾವು ಹೆಚ್ಚು ಶಕ್ತಿಯುತವಾಗಿ ಇಟ್ಟುಕೊಂಡರೆ ನಮಗೆ ಯಾವುದೇ ಕಾರಣಕ್ಕೂ ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ಈ ಒಂದು ಜಾಗವನ್ನು ನಾವು ಶಕ್ತಿಯುತವಾಗಿ ಆರೋಗ್ಯಯುತವಾಗಿ ಇಟ್ಟುಕೊಳ್ಳಬೇಕು ಎಂದರೆ ನಮ್ಮ ಎರಡು ಕಾಲುಗಳನ್ನು ಜೋಡಿಸಿ ಎರಡು ಹಿಮ್ಮಡಿಗಳನ್ನು ಹತ್ತಿರದಲ್ಲಿ ಇಟ್ಟು ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ನಲ್ಲಿ ಸುತ್ತಿಸಬೇಕು.
ಈ ರೀತಿ ಮಾಡುವುದರಿಂದ ಈ ಎರಡು ಜಾಗಕ್ಕೂ ಕೂಡ ಹೆಚ್ಚಿನ ಶಕ್ತಿ ಎನ್ನುವುದು ಉಂಟಾಗುತ್ತದೆ. ಇದರಿಂದ ಮಂಡಿ ನೋವಿನ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಸ್ವಲ್ಪ ಪ್ರಮಾಣದ ಆಸರೆ ಎನ್ನುವುದು ಸಿಕ್ಕಂತೆ ಆಗುತ್ತದೆ. ಈ ಒಂದು ಯೋಗವನ್ನು ಪ್ರತಿಯೊಬ್ಬರೂ ಕೂಡ ಮಾಡಬಹುದು.
ಯಾವ ಸಮಯದಲ್ಲಿ ಬೇಕಾದರೂ ಸಹ ನೀವು ಮಾಡಬಹುದು. ಅದ ರಲ್ಲೂ ಮುಂಜಾನೆಯ ಸಮಯ ಇಂತಹ ಕೆಲವೊಂದಷ್ಟು ಯೋಗಾ ಭ್ಯಾಸಗಳನ್ನು ಮಾಡುವುದರಿಂದ ಮತ್ತಷ್ಟು ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದು ನಮ್ಮ ಉತ್ತಮ ಆರೋಗ್ಯಕ್ಕೆ ಉತ್ತಮವಾದ ವಿಧಾನ ಎಂದು ಹೇಳಿದರೆ ತಪ್ಪಾಗುವುದಿಲ್ಲ.
* ಈಗಾಗಲೇ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಈಗ ನಾವು ಹೇಳುವಂತಹ ಈ ಒಂದು ಯೋಗವನ್ನು ಮಾಡುವುದರಿಂದ ಮಂಡಿ ನೋವಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅದು ಹೇಗೆ ಎಂದರೆ ನಿಮ್ಮ ಒಂದು ಕಾಲನ್ನು ಮೇಲಕ್ಕೆ ಎತ್ತಿ ನಿಮ್ಮ ಎರಡು ಕೈಗಳ ಸಹಾಯದಿಂದ ನಿಮ್ಮ ತೊಡೆಯ ಭಾಗಗಳನ್ನು ಹಿಡಿದುಕೊಳ್ಳ ಬೇಕು. ಈ ರೀತಿ ಹಿಡಿದುಕೊಂಡು ಮೇಲೆ ಹೇಳಿದಂತೆ ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ತಿರುಗಿಸಬೇಕು.
ಎರಡು ಕಾಲುಗಳನ್ನು ಸಹ ನೀವು ಈ ರೀತಿ ಮಾಡುವುದರಿಂದ ಹಾಗೂ ಸ್ವಲ್ಪ ಸಮಯ ವಿಶ್ರಾಂತಿಯನ್ನು ಪಡೆದು ಮತ್ತೆ ಮಾಡುವುದರಿಂದ ನೀವು ಮಂಡಿ ನೋವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳ ಬಹುದು. ಇದನ್ನು ಸಹ ಪ್ರತಿಯೊಬ್ಬರು ಮಾಡಬಹುದಾಗಿದ್ದು ಅತಿ ಹೆಚ್ಚು ವಯಸ್ಸಾಗಿರುವವರು ಇದನ್ನು ಮಾಡಲು ಸಾಧ್ಯವಿಲ್ಲ ಎನ್ನುವವರು ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದು ಉತ್ತಮ.
* ಮೇಲೆ ಹೇಳಿದ ಈ ಎರಡು ವಿಧಾನಗಳನ್ನು ಅನುಸರಿಸಲು ಸಾಧ್ಯವಾಗಲಿಲ್ಲ ಎನ್ನುವವರು ಈಗ ನಾವು ಹೇಳುವ ಈ ವಿಧಾನ ಅನುಸರಿಸು ವುದು ಉತ್ತಮ. ಮೊದಲು ನೇರವಾಗಿ ನಿಂತುಕೊಳ್ಳಬೇಕು ಆನಂತರ ಉಸಿರನ್ನು ತೆಗೆದುಕೊಳ್ಳುತ್ತಾ ನಿಮ್ಮ ಹಿಮ್ಮಡಿಯ ಭಾಗವನ್ನು ಮೇಲಕ್ಕೆ ಎತ್ತಬೇಕು
ಹಾಗೂ ಉಸಿರನ್ನು ಬಿಡುತ್ತ ನಿಮ್ಮ ಹಿಮ್ಮಡಿಯನ್ನು ನೆಲಕ್ಕೆ ತಾಕಿಸಬೇಕು ಈ ರೀತಿಯಾಗಿ ಐದರಿಂದ ಹತ್ತು ನಿಮಿಷ ಮಾಡುತ್ತಾ ಬರುವುದರಿಂದ ಮಂಡಿ ನೋವಿಗೆ ಪರಿಹಾರವನ್ನು ಕಂಡುಕೊಳ್ಳ ಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.