ನಮ್ಮ ಶಾಸ್ತ್ರಗಳಲ್ಲಿ ದಾನ ಮಾಡುವುದಕ್ಕೆ ಒಂದು ಪದ್ಧತಿ ಇದೆ. ಯಾವ ವಸ್ತುಗಳನ್ನು ಯಾರು ದಾನ ಮಾಡಬೇಕು, ಯಾರಿಂದ ಯಾರು ದಾನ ತೆಗೆದುಕೊಳ್ಳಬೇಕು, ಯಾವುದನ್ನು ದಾನ ಮಾಡಬಾರದು, ಯಾವ ಸಮಯದಲ್ಲಿ ದಾನ ಮಾಡಬೇಕು, ಮಾಡಬಾರದು ಎನ್ನುವುದಕ್ಕೆಲ್ಲ ಒಂದು ವ್ಯವಸ್ಥೆ ಇದೆ ಅದನ್ನು ಮೀರಿ ನಡೆದಾಗ ಕ’ಷ್ಟ’ಗಳು ತಪ್ಪುವುದಿಲ್ಲ.
ಅದರಲ್ಲೂ ಕೆಲವು ವಸ್ತುಗಳನ್ನು ದಾನ ಕೊಡುವುದರಿಂದ ಹಾಗೂ ತೆಗೆದುಕೊಳ್ಳುವುದರಿಂದ ದರಿದ್ರ ಬರುತ್ತದೆ. ಈ ಸೂಕ್ಷ್ಮ ವಿಚಾರಗಳು ಅನೇಕರಿಗೆ ತಿಳಿಯದೆ ಇರುವ ಕಾರಣ ಬದುಕಿನಲ್ಲಿ ಅನೇಕ ಸಂ’ಕ’ಷ್ಟಗಳಿಗೆ ಸಿಲುಕುತ್ತಾರೆ. ಹಾಗಾಗಿ ಈ ಅಂಕಣದಲ್ಲಿ ಇದರ ಬಗ್ಗೆ ಕೆಲ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇವುಗಳು ಹಿರಿಯರು ನೀಡಿರುವ ಸಲಹೆಗಳಾಗಿದ್ದು, ಪ್ರತಿಯೊಬ್ಬರೂ ಕೂಡ ಪಾಲಿಸಬಹುದಾದಷ್ಟು ಸರಳವಾಗಿದೆ. ಸಾಧ್ಯವಾದರೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ.
* ಯಾವುದೇ ಕಾರಣಕ್ಕೂ ನೀವು ಹಾಕಿರುವ ಬಟ್ಟೆಗಳನ್ನು ಬೇರೆಯವರಿಗೆ ದಾನ ಮಾಡಬೇಡಿ. ಒಂದು ವೇಳೆ ಬೇರೆಯವರಿಗೆ ಬಟ್ಟೆ ಅವಶ್ಯಕತೆ ಇದ್ದರೆ ನಿಮ್ಮ ಶಕ್ತಿಯನುಸಾರ ಹೊಸ ಬಟ್ಟೆ ಕೊಡಿಸಿಬಿಡಿ. ಆದರೆ ನೀವು ಉಟ್ಟಿರುವ ಬಟ್ಟೆಯನ್ನು ಇನ್ನೊಬ್ಬರಿಗೆ ಕೊಡಬೇಡಿ
* ಬಟ್ಟೆಗಳಂತೆ ಚಪ್ಪಲಿಗಳು ಕೂಡ ವೈಯಕ್ತಿಕ ಸಾಧನೆಗಳಾಗಿವೆ. ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಶಾಸ್ತ್ರಗಳು ಹೇಳುವ ಪ್ರಕಾರ ನಾವು ಹಾಕಿರುವ ಚಪ್ಪಲಿಯನ್ನು ಬೇರೆಯವರಿಗೆ ದಾನ ಕೊಡಬಾರದು. ಒಂದು ವೇಳೆ ನಮ್ಮ ಚಪ್ಪಲಿಗಳನ್ನು ಬೇರೆಯವರು ಕದ್ದು ಹಾಕಿಕೊಂಡು ಹೋದಾಗ ದೋ’ಷಗಳಿರುವುದಿಲ್ಲ, ಕರ್ಮ ಕಳೆಯಿತು ಎಂದು ನೆಮ್ಮದಿಯಾಗಿರಬಹುದು.
* ಸಂಜೆ ಮನೆಯಲ್ಲಿ ದೀಪ ಹಚ್ಚಿದ ನಂತರ ಯಾವುದೇ ತರಹದ ಧಾನ್ಯಗಳನ್ನು ಬೇರೆ ಅವರಿಗೆ ಕೊಡಬಾರದು. ಇನ್ನೊಬ್ಬರ ಬಳಿ ನೀವು ಕೂಡ ಯಾವುದೇ ದವಸ ಧಾನ್ಯಗಳನ್ನು ಸಾಲ ಕೇಳಬೇಡಿ. ಇದೆಲ್ಲವೂ ಕೂಡ ದರಿದ್ರದ ಲಕ್ಷಣವಾಗಿದೆ. ಯಾವಾಗಲೂ ಮನೆಯಲ್ಲಿ ಆಹಾರ ಪದಾರ್ಥಗಳಿಗೆ ಕೊರತೆ ಇರಬಾರದು. ಹಾಗೆಯೇ ಮೊಸರು, ಟಮೋಟೋ, ನಿಂಬೆಹಣ್ಣು ಇಂತಹ ಹುಳಿ ಪದಾರ್ಥಗಳನ್ನು ಕೂಡ ಕೊಡಬಾರದು ಒಂದು ವೇಳೆ ಈ ರೀತಿ ಮಾಡಿದರೆ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟು ಸಂಬಂಧ ಕೂಡ ಒಡೆಯುತ್ತದೆ ಎಂದು ಹೇಳಲಾಗುತ್ತದೆ
* ತವರು ಮನೆಯವರು ಹೆಣ್ಣು ಮಕ್ಕಳಿಗೆ ಎಮ್ಮೆ, ಕರು, ಹಸು ಎತ್ತು ಇವುಗಳನ್ನು ದಾನ ಕೊಡಬಾರದು.
* ಯಾವುದೇ ಸಮಯದಲ್ಲಿ ಭಿಕ್ಷುಕರು ಊಟ ಕೇಳಿಕೊಂಡು ಬಂದರು ಅವರನ್ನು ಹಾಗೆ ಕಳುಹಿಸಬೇಡಿ ಮತ್ತು ಅವರಿಗೆ ಹಳಸಿದ ಅಥವಾ ಕೆ’ಟ್ಟು ಹೋಗಿರುವ ಆಹಾರ ಪದಾರ್ಥಗಳನ್ನು ದಾನ ಮಾಡಬೇಡಿ. ನಿಮ್ಮ ಶಕ್ತಿಯನುಸಾರ ಏನನ್ನಾದರೂ ತಿನ್ನಲು ಕೊಟ್ಟು ಅವರ ಹಸಿವನ್ನು ತಣಿಸಿ.
* ಮಂಗಳವಾರ ಮತ್ತು ಶುಕ್ರವಾರ ಯಾರಿಗೂ ಹಣವನ್ನು ಕೊಡಬೇಡಿ ಮತ್ತು ಪ್ರತಿದಿನ ಸಂಜೆ ದೀಪ ಹಚ್ಚಿದ ನಂತರ ಯಾವುದೇ ಕಾರಣಕ್ಕೂ ಮನೆಯಿಂದ ಹಣವನ್ನು ಆಚೆ ತೆಗೆದುಕೊಂಡು ಹೋಗಿ ಖರ್ಚು ಮಾಡಬೇಡಿ ಯಾರಿಗೂ ಸಾಲವನ್ನು ಕೂಡ ಕೊಡಬೇಡಿ
* ಯಾರಿಗಾದರೂ ಕರ್ಚಿಫ್ ಗಿಫ್ಟ್ ಕೊಡುವುದು ದಾನ ಕೊಡುವುದು ಅಥವಾ ನೀವು ಬಳಸಿರುವ ಕರ್ಚಿಫ್ ನ್ನು ಕೊಡುವುದು ಮಾಡಬೇಡಿ. ಈ ರೀತಿ ಕೊಡುವುದರಿಂದ ಅವರ ನಂತರದ ದಿನಗಳಲ್ಲಿ ಅವರು ನಿಮ್ಮೊಂದಿಗೆ ಶ’ತ್ರು’ತ್ವ ಬೆಳೆಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಮತ್ತು ಆ ಮೂಲಕ ಇಬ್ಬರು ಕಣ್ಣೀರಿಡುವಂತೆ ಆಗುತ್ತದೆ ಎಂದು ಹೇಳುತ್ತಾರೆ
* ಮನೆಗೆ ಬಂದವರಿಗೆ ತಲೆಗೆ ಎಣ್ಣೆಯನ್ನು ಕೊಡಬಾರದು ಹಾಗೂ ಅವರ ತಲೆಗೆ ಎಣ್ಣೆ ಹಚ್ಚಬಾರದು.
* ಹೆಣ್ಣುಮಕ್ಕಳು ತವರು ಮನೆಯಿಂದ ಪೊರಕೆ ಹಾಗೂ ಬೆಂಕಿಪೊಟ್ಟಣವನ್ನು ಉಚಿತವಾಗಿ ತರಬಾರದು.
* ಕುಂಬಳಕಾಯಿಯನ್ನು ಯಾರಿಂದಲೂ ದಾನ ತೆಗೆದುಕೊಳ್ಳಬಾರದು