ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಆಯುರ್ವೇದದ ಸಸ್ಯ. ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದ ಕೆಲಸವನ್ನು ಮಾಡುತ್ತದೆ ಎಂದು ಹೇಳಬಹುದು. ಹೌದು ಇದರ ಹೆಸರು ಅತಿಬಲ. ಇದರ ಹೆಸರೇ ತಿಳಿಸುವಂತೆ ಈ ಒಂದು ಸಸ್ಯದ ಗಿಡ ಹೂವು ಕಾಂಡ ಬೇರು ಪ್ರತಿಯೊಂದು ಕೂಡ ಆಯುರ್ವೇದದ ಔಷಧೀಯ ಗುಣವನ್ನು ಹೊಂದಿದೆ.
ಹಾಗಾಗಿ ಇದನ್ನು ಪ್ರತಿಯೊಬ್ಬರೂ ಕೂಡ ಉಪಯೋಗ ಮಾಡುವುದು ಬಹಳ ಒಳ್ಳೆಯದು.ಹಾಗಾದರೆ ಈ ದಿನ ಈ ಒಂದು ಸಸ್ಯವನ್ನು ಯಾವ ರೀತಿಯಾಗಿ ಔಷಧಿಯಾಗಿ ಉಪಯೋಗಿಸಿದರೆ. ನಮಗೆ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಹಾಗೂ ಯಾವ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಪ್ರಾಚೀನ ಕಾಲದಿಂದಲೂ ಕೂಡ ಇದನ್ನು ಆಯುರ್ವೇದದ ಔಷಧಿಯಲ್ಲಿ ಉಪಯೋಗ ಮಾಡುತ್ತಿದ್ದರು. ಅದೇ ರೀತಿಯಾಗಿ ಇಂದಿಗೂ ಕೂಡ ಇದರ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು ರಾಮಾಯಣ ಮಹಾಭಾರತದಲ್ಲಿಯೂ ಕೂಡ ಈ ಒಂದು ಸಸ್ಯದ ಒಂದು ಮಹತ್ವ ಇದೆ ಹೌದು ಅದೇನೆಂದರೆ ಗಾಂಧಾರಿ ತನ್ನ ಮಗ ದುರ್ಯೋಧನ ಅತಿ ಹೆಚ್ಚು ಬುದ್ಧಿವಂತ ಶಕ್ತಿಶಾಲಿಯಾಗಬೇಕು ಎನ್ನುವ ಉದ್ದೇಶದಿಂದ ಅವಳು ಅವನಿಗೆ ಈ ಒಂದು ಸಸ್ಯದ ಎಲೆಯ ರಸವನ್ನು ಕೊಡುತ್ತಿದ್ದಳು ಎಂಬ ಉಲ್ಲೇಖ ಇದೆ.
ಇಷ್ಟೆಲ್ಲಾ ಔಷಧಿಯ ಗುಣ ಹೊಂದಿರುವಂತಹ ಈ ಒಂದು ಸಸ್ಯ ನಮ್ಮ ದೇಶದ ಹಲವಾರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಹೆಚ್ಚಿನ ಜನಕ್ಕೆ ಇದರ ಒಂದು ಔಷಧಿಯ ಗುಣದ ರಹಸ್ಯ ತಿಳಿದಿಲ್ಲ. ಬದಲಿಗೆ ಕೆಲವೊಂದಷ್ಟು ಜನ ಇದನ್ನು ಕಳೆ ಗಿಡ ಎಂದು ಕಿತ್ತು ಹಾಕುತ್ತಾರೆ. ಆದರೆ ಈಗ ನಾವು ಹೇಳುವಂತಹ ಇದರ ಒಂದು ಔಷಧೀ ಯ ಗುಣ ನಿಮಗೆ ತಿಳಿದರೆ ಖಂಡಿತವಾಗಿಯೂ ನೀವು ಅದನ್ನು ಕಿತ್ತು ಹಾಕುವುದಿಲ್ಲ.
ಬದಲಿಗೆ ಎಲ್ಲೇ ಇದ್ದರೂ ಅದನ್ನು ತಂದು ನಿಮ್ಮ ಮನೆಯ ಸುತ್ತಮುತ್ತ ನೆಟ್ಟು ಅದರ ಒಂದು ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ. ಹಾಗಾದರೆ ಇದನ್ನು ಯಾವ ರೀತಿಯಾಗಿ ಸೇವನೆ ಮಾಡುವುದರಿಂದ ಯಾವ ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳ ಬಹುದು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಎಲ್ಲಾದರೂ ಬಿದ್ದು ನಿಮಗೆ ಗಾಯವಾಗಿದ್ದರೆ ಆ ಜಾಗಕ್ಕೆ ಅತಿಬಲ ಸಸ್ಯದ ಎಲೆಯ ರಸವನ್ನು ಹಚ್ಚುತ್ತಾ ಬರುವುದರಿಂದ ಆ ಗಾಯ ಸಂಪೂರ್ಣವಾಗಿ ಗುಣವಾಗುತ್ತದೆ.
* ಅದೇ ರೀತಿಯಾಗಿ ಯಾರಿಗೆ ಲಕ್ವಾ ಅಂದರೆ ಪಾಶ್ವ ವಾಯು ಆಗಿರು ತ್ತದೆಯೋ ಅಂತವರು ಈ ಒಂದು ಎಲೆಯನ್ನು ಎಳ್ಳೆಣ್ಣೆಯಲ್ಲಿ ಚೆನ್ನಾಗಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಬೇಕು ಆನಂತರ ಈ ಒಂದು ಎಣ್ಣೆ ಯನ್ನು ಪ್ರತಿನಿತ್ಯ ಪಾಶ್ವ ವಾಯು ಆಗಿರುವಂತಹ ಸ್ಥಳಕ್ಕೆ ಹಾಕಿ ಮಸಾಜ್ ಮಾಡುತ್ತಾ ಬರುವುದರಿಂದ ಆ ಒಂದು ಸಮಸ್ಯೆಯೂ ಕೂಡ ದೂರವಾಗುತ್ತದೆ.
ಅದೇ ರೀತಿಯಾಗಿ ಅದರ ಎಲೆಯನ್ನು ಕೂಡ ಚೆನ್ನಾಗಿ ಕುದಿಸಿ ಆ ನೀರನ್ನು ಕೂಡ ಕಷಾಯದ ರೂಪದಲ್ಲಿ ಸೇವನೆ ಮಾಡುತ್ತಾ ಬರುವು ದರಿಂದ ಅವರ ರಕ್ತನಾಳಗಳಲ್ಲಿ ರಕ್ತ ಸರಾಗವಾಗಿ ಸಂಚಾರವಾಗುತ್ತದೆ ಇದರಿಂದ ಆ ಒಂದು ಸಮಸ್ಯೆ ಗುಣಮುಖವಾಗುತ್ತದೆ.
* ಅದೇ ರೀತಿಯಾಗಿ ಈ ಸಸ್ಯದ ಎಲೆಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಉಗುರು ಬೆಚ್ಚಗಿನ ನೀರಿನಲ್ಲಿ ಈ ಪುಡಿಯನ್ನು ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳಲ್ಲಿ ಏನಾದರೂ ಹುಳು ಇದ್ದರೆ ಅವೆಲ್ಲವೂ ಕೂಡ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.