ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಹಲ ವಾರು ಸಮಸ್ಯೆಗಳಿಂದ ಅವರು ತಮ್ಮ ಗರ್ಭಕೋಶವನ್ನು ತೆಗೆಸಿಕೊಳ್ಳು ವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಆದರೆ ಅವರು ತಕ್ಷಣದಲ್ಲಿ ಆ ಸಮಸ್ಯೆ ಯಿಂದ ಸಂಪೂರ್ಣವಾಗಿ ಮುಕ್ತಿಯನ್ನು ಹೊಂದಬಹುದು ಎಂದು ಈ ರೀತಿಯ ನಿರ್ಧಾರವನ್ನು ಮಾಡುತ್ತಾರೆ.
ಆದರೆ ಗರ್ಭಕೋಶವನ್ನು ತೆಗೆಸಿದ ನಂತರ ಯಾವ ಕೆಲವು ಸಮಸ್ಯೆಗಳು ಎದುರಾಗುತ್ತದೆ ಎನ್ನುವ ಆಲೋಚನೆಯನ್ನು ಸಹ ಮಾಡುವುದಿಲ್ಲ. ಆದರೆ ಗರ್ಭಕೋಶ ತೆಗೆಸಿದ ನಂತರ ಅವರಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದು ರಾಗುತ್ತದೆ. ಹಾಗಾದರೆ ಈ ದಿನ ಮಹಿಳೆಯರಲ್ಲಿ ಗರ್ಭಕೋಶ ತೆಗೆದ ನಂತರ ಯಾವ ರೀತಿಯ ಕೆಲವು ಬದಲಾವಣೆಗಳು ಉಂಟಾಗುತ್ತದೆ.
ಹಾಗೂ ಈ ಸಮಸ್ಯೆಯನ್ನು ಸರಿಪಡಿಸಬಹುದಾ ಹಾಗೂ ಯಾವ ವಿಧಾನ ಅನುಸರಿಸುವುದರಿಂದ. ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ನೋಡೋಣ. ಮೊದಲನೆಯದಾಗಿ ಗರ್ಭಕೋಶ ತೆಗೆಸಿದ ನಂತರ ಯಾವ ಸಮಸ್ಯೆಗಳು ಉಂಟಾಗುತ್ತದೆ ಎಂದು ನೋಡುವುದಾದರೆ.
* ಮೊದಲನೆಯದಾಗಿ ಅವರ ದೇಹದಲ್ಲಿರುವಂತಹ ಹಾರ್ಮೋನ್ ಗಳು ಇಂಬ್ಯಾಲೆನ್ಸ್ ಆಗಲು ಪ್ರಾರಂಭವಾಗುತ್ತದೆ.
* ಗರ್ಭಕೋಶ ತೆಗೆಸುವುದರಿಂದ ಅವರಲ್ಲಿ ಈಸ್ಟ್ರೋಜನ್ ಕೊರತೆ ಉಂಟಾಗುತ್ತದೆ ಅಂದರೆ ಅವರಲ್ಲಿ ಆರ್ಥರೈಟಿಸ್, ಕೈಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಹಾಗೂ ಅವರ ಮನಸ್ಥಿತಿ ಬದಲಾಗುತ್ತಾ ಇರುವುದು ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ.
* ಮೊದಲೇ ಹೇಳಿದಂತೆ ಈಸ್ಟ್ರೋಜನ್ ಕೊರತೆ ಉಂಟಾಗುತ್ತದೆ ಅಂದರೆ ಇದರಿಂದ ಬರುವಂತಹ ಎಲ್ಲಾ ಪೌಷ್ಟಿಕಾಂಶ ನಮ್ಮ ದೇಹಕ್ಕೆ ಸೇರುವುದಿಲ್ಲ. ಆಗ ನಮಗೆ ಕ್ಯಾಲ್ಸಿಯಂ ಗಳ ಕೊರತೆ ಉಂಟಾಗಿ ಈ ರೀತಿಯ ನೋವುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
* ಅದರಲ್ಲೂ ಇನ್ನು ಕೆಲವೊಂದಷ್ಟು ಜನರಿಗೆ ನಮ್ಮ ಚರ್ಮದಲ್ಲಿ ಯಾ ವುದೇ ರೀತಿಯ ತೇವಾಂಶ ಇಲ್ಲದೆ ಇರುವುದು ಅದರಲ್ಲೂ ಪ್ರೈವೇಟ್ ಪಾರ್ಟ್ ಗಳಲ್ಲಿ ಚರ್ಮ ಒಣಗಿದ ರೀತಿ ಅನುಭವ ಉಂಟಾಗುತ್ತದೆ.
ಕೆಲವೊಂದಷ್ಟು ಜನ ಏನೋ ಸಮಸ್ಯೆ ಉಂಟಾಗಿದೆ ಎಂದು ಆಂಟಿ ಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.
ಆದರೆ ಈ ರೀತಿ ತೆಗೆದು ಕೊಳ್ಳುವುದರಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಹಾಗೂ ಗರ್ಭಕೋಶ ತೆಗೆಸಿದಂತಹ ಮಹಿಳೆಯರ ತಲೆ ಕೂದಲು ಯಥೇಚ್ಛವಾಗಿ ಉದುರಲು ಪ್ರಾರಂಭವಾಗುತ್ತದೆ.
ನಮ್ಮ ದೇಹದಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶ ಉತ್ಪತ್ತಿಯಾಗದೆ ಇರುವುದರಿಂದ ನಮ್ಮ ಕೂದಲಿಗೆ ಬೇಕಾದ ಪೌಷ್ಟಿಕಾಂಶ ಸಿಗದೇ ಕೂದಲು ಉದುರಲು ಪ್ರಾರಂಭವಾಗುತ್ತದೆ. ಗರ್ಭ ಕೋಶ ತೆಗಿಸಿದಂತಹ ಅನೇಕ ಮಹಿಳೆಯರಲ್ಲಿ ಈ ಒಂದು ನಿದ್ರಾಹೀನತೆಯ ಸಮಸ್ಯೆ ಸರ್ವೇಸಾಮಾನ್ಯ ಎಂದೇ ಹೇಳಬಹುದು. ಎಲ್ಲರಿಗೂ ತಿಳಿದಿರುವಂತೆ ಒಬ್ಬ ಮನುಷ್ಯ ಸರಿ ಸುಮಾರು 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಹಾಗೇನಾದರೂ ಸರಿಯಾಗಿ ನಿದ್ರೆ ಮಾಡಿಲ್ಲ ಎಂದರೆ ಅವನ ಮನಸ್ಸಿನ ಮೇಲೆ ಅದು ನೇರವಾಗಿ ಪರಿ ಣಾಮ ಬೀರುತ್ತದೆ. ಹಾಗಾಗಿ ಗರ್ಭಕೋಶ ತೆಗೆಸುವ ಮುನ್ನ ಹಲವಾರು ಆಲೋಚನೆಯನ್ನು ಮಾಡುವುದು ಉತ್ತಮ ಹಾಗಾದರೆ ಈಸ್ಟ್ರೋಜನ್ ಅನ್ನು ಹೇಗೆ ನಾವು ಸರಿಯಾದ ರೀತಿಯಲ್ಲಿ ಮಾಡಬಹುದು ಎಂದು ನೋಡುವುದಾದರೆ.
ಅಗಸೆ ಬೀಜವನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿಟ್ಟುಕೊಂಡು ಅದನ್ನು ಮಜ್ಜಿಗೆಯ ಜೊತೆ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಈಸ್ಟ್ರೋಜನ್ ಅನ್ನು ಉತ್ಪತ್ತಿ ಮಾಡುವುದಕ್ಕೆ ಅಂದರೆ ಉತ್ತೇಜಿಸುವುದಕ್ಕೆ ಸಹಕಾರಿಯಾಗುತ್ತದೆ. ಆನಂತರ ನಾವು ಈ ರೀತಿ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.