ಪ್ರತಿಯೊಬ್ಬ ಪುರುಷನೂ ಕೂಡ ತನ್ನ ಪತ್ನಿಗೆ ಇಷ್ಟವಾಗುವಂತಹ ಕೆಲವೊಂದಷ್ಟು ವಸ್ತುಗಳಾಗಿರಬಹುದು ಅವಳಿಗೆ ಇಷ್ಟವಾಗುವ ಕೆಲವು ಪದಾರ್ಥಗಳನ್ನು ಗಿಫ್ಟ್ ರೂಪವಾಗಿ ಕೊಡುತ್ತಿರುತ್ತಾರೆ. ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪತಿಯಾದವನು ಪತ್ನಿಗೆ ಕೆಲವೊಂದಷ್ಟು ವಸ್ತುಗಳನ್ನು ಈ ದಿನದಂದು ಕೊಟ್ಟರೆ ಅವನು ಸದಾ ಕಾಲ ಲಕ್ಷ್ಮೀದೇವಿಯ ಕೃಪೆಗೆ ಪಾತ್ರನಾಗಿರುತ್ತಾನೆ ಎಂದೇ ಹೇಳಬಹುದು.
ಹೌದು ಕೆಲವೊಂದಷ್ಟು ಜನ ನಾವು ಎಷ್ಟೇ ಹಣ ಸಂಪಾದನೆ ಮಾಡಿದರು ಹಣಕಾಸು ನಮ್ಮ ಕೈಯಲ್ಲಿ ಉಳಿಯುತ್ತಿಲ್ಲ ಎನ್ನುವಂತಹ ಮಾತನ್ನು ಹೇಳುತ್ತಿರುತ್ತಾರೆ. ಆದರೆ ನಿಮ್ಮ ಬಳಿಯೇ ಇದಕ್ಕೆ ಒಂದು ಪರಿಹಾರ ಮಾರ್ಗ ಇದ್ದು ಇದನ್ನು ನೀವು ಅನುಸರಿಸುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು.
ಹಾಗಾದರೆ ಪತಿಯಾದವನು ಪತ್ನಿಗೆ ಯಾವ ವಿಶೇಷವಾದಂತಹ ದಿನ ಗಳಲ್ಲಿ ಯಾವ ವಸ್ತುಗಳನ್ನು ಕೊಡುವುದರಿಂದ ನಿಮ್ಮ ಮನೆಯಲ್ಲಿರುವ ನಿಮ್ಮ ಪತ್ನಿ ಹೆಚ್ಚು ಸಂತೋಷಗೊಳ್ಳುತ್ತಾಳೆ. ಆ ವಸ್ತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.
* ಮನೆಯಲ್ಲಿರುವಂತಹ ಹೆಣ್ಣು ಮಕ್ಕಳೇ ನಮ್ಮ ಮನೆಗೆ ಲಕ್ಷ್ಮಿ ಎಂದೇ ಹೇಳಬಹುದು. ಹೌದು ಮನೆಯಲ್ಲಿ ಏನೇ ಕಷ್ಟ ಸುಖ ದುಃಖ ಬಂದರು ಅವೆಲ್ಲವನ್ನು ಸಹ ಸರಿಪಡಿಸಿಕೊಂಡು ಎಲ್ಲವನ್ನು ಕೂಡ ಸಮನಾಗಿ ಸ್ವೀಕರಿಸುವವಳು ಹೆಣ್ಣು, ಆದ್ದರಿಂದ ಮನೆಯ ಹೆಣ್ಣೇ ನಮ್ಮ ಮನೆಗೆ ಮಹಾಲಕ್ಷ್ಮಿ ಎಂದೇ ಹೆಚ್ಚಿನ ಜನ ನಂಬಿದ್ದಾರೆ ಹಾಗೂ ಶಾಸ್ತ್ರಪುರಾಣ ಗಳಲ್ಲಿಯೂ ಸಹ ಇದರ ಬಗ್ಗೆ ಉಲ್ಲೇಖಗಳು ಕೂಡ ಇದೆ.
ಆದ್ದರಿಂದ ನೀವು ಬೇರೆಯವರನ್ನು ಖುಷಿ ಪಡಿಸುವುದರ ಬದಲು ನಿಮ್ಮ ಮನೆಯ ಲ್ಲಿರುವನಿಮ್ಮ ಪತ್ನಿ ಖುಷಿಯಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗೆಂದ ಮಾತ್ರಕ್ಕೆ ನಿಮ್ಮ ಪತ್ನಿ ಖುಷಿಯಾಗಿರಬೇಕು ಎಂದು ಹೆಚ್ಚಿನ ಬೆಲೆಬಾಳುವ ಚಿನ್ನ ವಜ್ರ ಇವುಗಳನ್ನು ಕೊಡುವ ಅವಶ್ಯಕತೆ ಇಲ್ಲ. ಬದಲಿಗೆ ಅವಳಿಗೆ ಸಣ್ಣ ವಸ್ತು ಕೊಟ್ಟರು ಕೂಡ ಅವಳು ಅದರಲ್ಲಿ ಸಂತೃಪ್ತಿಗೊಳ್ಳುತ್ತಾಳೆ ಹಾಗೂ ಅದನ್ನು ತುಂಬಾ ಪ್ರೀತಿ ವಿಶ್ವಾಸದಿಂದ ಪಡೆದುಕೊಳ್ಳುತ್ತಾರೆ ಹೌದು.
ಅದರಿಂದ ಅವಳು ಎಷ್ಟು ಸಂತೋಷ ಪಡುತ್ತಾಳೋ ಅಷ್ಟೇ ವಿಧವಾಗಿ ನೀವು ಹೆಚ್ಚು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ ಎಂದೇ ಹೇಳಬಹುದು. ಹಾಗಾದರೆ ಯಾವ ವಸ್ತುಗಳನ್ನು ಯಾವ ವಾರ ಕೊಡುವುದರಿಂದ ನಿಮಗೆ ಹೆಚ್ಚು ಅದೃಷ್ಟ ಹೆಚ್ಚಾಗುತ್ತದೆ ಎಂದು ನೋಡುವುದಾದರೆ ಬುಧವಾರ ಮತ್ತು ಶುಕ್ರವಾರದ ದಿನ ನಿಮಗೆ ಯಾವಾಗ ಸಾಧ್ಯವಾಗುತ್ತದೆಯೋ ಅವಾಗ ಬಟ್ಟೆಯನ್ನು ಅವಳಿಗೆ ಕೊಡುವುದರಿಂದ ಅವಳು ತುಂಬಾ ಖುಷಿ ಪಡುತ್ತಾಳೆ ಹಾಗೂ ಅವಳ ಖುಷಿ ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ.
* ಅದೇ ರೀತಿಯಾಗಿ ನಿಮ್ಮ ಪತ್ನಿಗೆ ಬಹಳ ಮುಖ್ಯವಾಗಿ ಅವಳ ಸೌಭಾಗ್ಯದ ಸಂಕೇತವಾಗಿರುವಂತಹ ಹಣೆ ಬೊಟ್ಟು ಹೂವು ಕುಂಕುಮ ಇಂತವುಗಳನ್ನು ನೀವು ಅವಳಿಗೆ ಕೊಡಿಸುವುದರಿಂದಲೂ ಕೂಡ ಅವಳು ಹೆಚ್ಚು ಖುಷಿ ಪಡುತ್ತಾಳೆ ಹಾಗೂ ಅದು ನಿಮಗೆ ಲಾಭದಾಯ ಕವೂ ಕೂಡ ಆಗುತ್ತದೆ.
* 15 ದಿನಗಳಿಗೊಮ್ಮೆ ಅಥವಾ 1 ತಿಂಗಳಿಗೊಮ್ಮೆ ನಿಮ್ಮ ಪತ್ನಿಯನ್ನು ಹೊರಗಡೆ ಎಲ್ಲಾದರೂ ಕರೆದುಕೊಂಡು ಹೋಗಿ ಅವಳಿಗೆ ಇಷ್ಟವಾಗುವ ತಿನಿಸುಗಳನ್ನು ತಿನ್ನಿಸಿ ಬರುವುದರಿಂದಲೂ ಕೂಡ ನೀವು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.
* ಇದರ ಜೊತೆ ನೀವೇನಾದರೂ ಸುಗಂಧ ದ್ರವ್ಯಗಳನ್ನು ನಿಮ್ಮ ಪತ್ನಿಗೆ ಕೊಡಬೇಕು ಎಂದೆನಿಸಿದ್ದರೆ ಶುಕ್ರವಾರದ ದಿನ ಅದನ್ನು ಕೊಡಿ ಶುಕ್ರವಾರ ಶುಕ್ರನ ವಿಶೇಷವಾದ ದಿನವಾಗಿದ್ದು. ಈ ದಿನ ನೀವು ನಿಮ್ಮ ಪತ್ನಿಗೆ ಇದನ್ನು ಕೊಡುವುದರಿಂದ ಅವಳು ಖುಷಿ ಪಡುತ್ತಾಳೆ ಹಾಗೂ ಲಕ್ಷ್ಮೀದೇವಿಯು ನಿಮ್ಮ ಬಳಿ ಸದಾ ಕಾಲ ನೆಲೆಸಿರುತ್ತಾಳೆ.