ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ರಾತ್ರಿ ಮಲಗಿದ್ದಾಗ ಕನಸು ಕಂಡಿರುತ್ತಾರೆ. ಕೆಲವು ಕನಸುಗಳು ಬೆಳಿಗ್ಗೆ ಆಗುವಷ್ಟರಲ್ಲಿ ಮರೆತು ಹೋಗಿರುತ್ತವೆ, ಇನ್ನು ಕೆಲವು ಕನಸುಗಳು ಕನಸೇ ಎನ್ನುವಂತೆ ಆಶ್ಚರ್ಯ ಪಡುವ ರೀತಿ ಮನಸ್ಸಿನಲ್ಲಿ ಉಳಿದುಬಿಡುತ್ತದೆ, ಇನ್ನು ಕೆಲವು ಕನಸುಗಳು ಗೊಂದಲವನ್ನು ಸೃಷ್ಟಿಸುತ್ತವೆ.
ಆದರೆ ಸ್ವಪ್ನ ಫಲ ಎನ್ನುವುದು ಇದೆ ಇದನ್ನು ಬಹಳ ಅನಾಧಿಕಾಲದಿಂದಲೂ ನಂಬಿಕೊಂಡು ಬರಲಾಗುತ್ತಿದೆ. ರಾಜರುಗಳು ಕೂಡ ತಮ್ಮ ಕನಸಿನಲ್ಲಿ ವಿಶೇಷವಾಗಿ ಏನನ್ನಾದರೂ ಕಂಡಾಗ ಅದಕ್ಕೆ ಸಂಬಂಧಿಸಿದ ಹಾಗೆ ಪರಿಹಾರಗಳನ್ನು ಕೈಗೊಂಡ ಕಥೆಗಳನ್ನು ಕೇಳಿರುತ್ತೇವೆ.
ಪುರಾಣಗಳಲ್ಲಿ ದೇವತೆಗಳು ಬಂದು ಕನಸಿನಲ್ಲಿ ಹೇಳಿದ್ದನ್ನು ಪಾಲಿಸಿದವರ ಕಥೆಯನ್ನು ಕೇಳಿದ್ದೇವೆ ಹಾಗಾಗಿ ಸಂಪೂರ್ಣವಾಗಿ ಕನಸುಗಳನ್ನು ಭ್ರಮೆಯೆಂದು ನಿರ್ಲಕ್ಷಿಸಲು ಆಗುವುದಿಲ್ಲ ತಮ್ಮ ಕನಸಿನಲ್ಲಿ ಬಿದ್ದ ವಿಷಯಗಳಿಗೆ ಅರ್ಥ ಹುಡುಕುವವರು ಇದ್ದಾರೆ, ಹಾಗಾದರೆ ಕನಸಿನಲ್ಲಿ ಯಾವ ವಸ್ತು ಬಂದರೆ ಏನು ಅರ್ಥ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಸಂತಾನ ಭಾಗ್ಯ ಇಲ್ಲದವರು ಈ ಪೂಜೆ ಮಾಡಿದರೆ ಫಲ ಕಂಡಿತ…
* ನೀವೇನಾದರೂ ಕನಸಿನಲ್ಲಿ ಹುಲಿ ಸಿಂಹ ಆನೆ ಇಂತಹ ಕಾಡು ಪ್ರಾಣಿಗಳನ್ನು ಕಂಡರೆ ಅದು ನಿಮಗೆ ಧರ್ಮ ಮಾರ್ಗದಲ್ಲಿ ನಡೆಯಿರಿ ಎಂದು ಎಚ್ಚರಿಸುತ್ತಿರುವುದು. ಹಾಗೆಯೇ ಶೀಘ್ರದಲ್ಲೇ ನಿಮ್ಮ ಕಡೆಯಿಂದ ಈ ರೀತಿ ಒಳ್ಳೆ ಕಾರ್ಯ ನಡೆಯುತ್ತದೆ ಎನ್ನುವುದನ್ನು ಸೂಚಿಸಲು ಬಂದಿರುವ ಎಚ್ಚರಿಕೆ ಆಗಿರುತ್ತದೆ ಇವುಗಳು ದೇವರ ವಾಹನವೂ ಕೂಡ ಆಗಿರುವುದರಿಂದ ಹೆದರಬೇಕಿಲ್ಲ.
* ನಿಮ್ಮ ಕನಸಿನಲ್ಲಿ ಹೆ’ಣವನ್ನು ಕಂಡರೆ ಅಥವಾ ನಿಮ್ಮ ಆತ್ಮೀಯರನ್ನು ಕಳೆದುಕೊಂಡ ರೀತಿ ಅಥವಾ ನೀವೇ ಸಾ’ವನ್ನಪ್ಪಿದ ರೀತಿ ಕನಸು ಬಿದ್ದರೆ ಅದು ಕೂಡ ಕೆಟ್ಟದ್ದಲ್ಲ ನಿಮ್ಮ ಆಯಸ್ಸು ವೃದ್ಧಿ ಆಗುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ ಯಾವುದೇ ಸಮಸ್ಯೆ ಇಲ್ಲ.
* ನೀವೇನಾದರೂ ಕನಸಿನಲ್ಲಿ ಹಣ್ಣುಗಳನ್ನು ತಿನ್ನುತ್ತಿರುವ ರೀತಿ ಅಥವಾ ಫಲ ತುಂಬಿದ ವೃಕ್ಷಗಳ ಬಳಿ ನಿಂತಿರುವ ರೀತಿ ಕನಸು ಕಂಡರೆ ಶೀಘ್ರದಲ್ಲಿಯೇ ಸಂತಾನ ಫಲಗಳನ್ನು ಕಾಣುತ್ತಿರಿ, ಅದರಲ್ಲೂ ಗಂಡು ಸಂತಾನವನ್ನು ಪಡೆಯುತ್ತಿರಿ ಎನ್ನುವುದನ್ನು ತಿಳಿಸುವ ಸೂಚನೆ ಆಗಿರುತ್ತದೆ.
ಈ ಸುದ್ದಿ ಓದಿ:- ಬೆಳಗ್ಗೆ ಎದ್ದ ಕೂಡಲೇ ಈ ಕೆಲಸಗಳನ್ನು ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.!
* ಕನಸಿನಲ್ಲಿ ಕನ್ನಡಿ ಕಾಣುವುದು ಬಹಳ ಅಪರೂಪ, ಎಲ್ಲರ ಕನಸಿನಲ್ಲಿಯೂ ಈ ರೀತಿ ಬರುವುದಿಲ್ಲ ಒಂದು ವೇಳೆ ನೀವೇನಾದರೂ ನಿಮ್ಮ ಕನಸಿನಲ್ಲಿ ಈ ರೀತಿ ಕನ್ನಡಿ ಕಂಡಿದ್ದೀರಿ ಎಂದರೆ ನಿಮಗೆ ತಾಯಿ ಮಹಾಲಕ್ಷ್ಮಿ ಅನುಗ್ರಹ ಆಗುತ್ತದೆ ನೀವು ಚಿನ್ನಾಭರಣಗಳನ್ನು ಪಡೆಯುತ್ತೀರಿ ಎನ್ನುವುದನ್ನು ಈ ಕನಸು ಹೇಳುತ್ತಿದ್ದೆ ಎಂದು ಅರ್ಥ.
* ಹೆಣ್ಣು ಮಕ್ಕಳು ಸ್ನೇಹಿತರಾದ ರೀತಿ ಕನಸು ಕಂಡರೆ ನಿಮಗೆ ಮೃಷ್ಟಾನ್ನ ಭೋಜನ ಯೋಗ ಇದೆ ಎಂದು ಅರ್ಥ
* ದೈವಿಕ ಕಳೆ ಹೊಂದಿರುವ ಅಲಂಕೃತಗೊಂಡಿರುವ ಸ್ತ್ರೀಯು ಕನಸಿನಲ್ಲಿ ಕಂಡರೆ ಅದು ಕೂಡ ನಿಮ್ಮ ಜೀವನಕ್ಕೆ ಒಳ್ಳೆಯದಾಗುತ್ತದೆ ಶೀಘ್ರದಲ್ಲಿ ನೀವು ಹಣಕಾಸಿನ ಏಳಿಗೆಯನ್ನು ಕಾಣುತ್ತೀರಿ ಶ್ರೀಮಂತರಾಗುತ್ತೀರಿ ಎನ್ನುವುದನ್ನು ಸೂಚಿಸುವ ಕನಸಾಗಿದೆ. ತಾಯಿ ಮಹಾಲಕ್ಷ್ಮಿಯು ನಿಮ್ಮ ಜೀವನಕ್ಕೆ ಬರುವ ಮುನ್ನ ಇಂತಹದೊಂದು ಸೂಚನೆ ನೀಡಿ ಬರುತ್ತಾರೆ
* ನೀವೇನಾದರೂ ಕನಸಿನಲ್ಲಿ ನಗುತ್ತಿರುವ ರೀತಿ ಕಂಡರೆ ಬಹಳ ಹತ್ತಿರದಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗುತ್ತೀರಿ ಎಂದು ಅರ್ಥ.
* ಕನಸಿನಲ್ಲಿ ನೀವು ದೇವರಿಗೆ ಪೂಜೆ ಮಾಡುತ್ತಿರುವ ರೀತಿ ಕಂಡರೆ ಋಣಮುಕ್ತರಾಗುತ್ತೀರಿ. ಸಾಲಗಳನ್ನು ತಿಳಿಸಿಕೊಳ್ಳಲು ನಿಮಗೆ ಒಂದು ಒಳ್ಳೆಯ ಮಾರ್ಗವನ್ನು ಭಗವಂತ ತೋರಿಸುತ್ತಾನೆ ಎನ್ನುವ ಸೂಚನೆ ಕೊಡುವ ಕನಸಾಗಿರುತ್ತದೆ.
ಈ ಸುದ್ದಿ ಓದಿ:- ಸಾಲ ಬಾಧೆಯಿಂದ ನರಳುತ್ತಿರುವವರು ಮಂಗಳವಾರ ಈ ಉಪಾಯವನ್ನು ಮಾಡಿದರೆ ಸಾಕು, ಕೋಟಿ ಸಾಲ ಇದ್ದರೂ ತೀರುತ್ತದೆ.
* ಕನಸಿನಲ್ಲಿ ಹಾಲು, ಮೊಸರು, ಜೇನುತುಪ್ಪ, ಹಸುವಿನ ತುಪ್ಪ, ಅರಿಶಿಣ ಕುಂಕುಮ, ಅಡಿಕೆ, ವೀಳ್ಯದೆಲೆ ಈ ರೀತಿ ಮಂಗಳ ದ್ರವ್ಯಗಳನ್ನು ಕಂಡರೂ ಕೂಡ ಅದು ಸಹ ತಾಯಿ ಮಹಾಲಕ್ಷ್ಮಿಯು ನಿಮ್ಮ ಬದುಕಿಗೆ ಆಶೀರ್ವದಿಸುತ್ತಿದ್ದಾರೆ ಎನ್ನುವುದನ್ನು ತಿಳಿಸುವ ಸೂಚನೆಯಾಗಿದೆ.