ಲಿವರ್ ಎನ್ನುವುದು ನಮ್ಮ ದೇಹದ ಒಂದು ಪ್ರಮುಖವಾದ ಅಂಗ. ಜೀರ್ಣಕ್ರಿಯೆ, ರಕ್ತ ಶುದ್ಧಿ ಸೇರಿದಂತೆ ಮಾನವನ ದೇಹದ ಐನೂರಕ್ಕೂ ಹೆಚ್ಚು ಕಾರ್ಯಗಳು ಲಿವರ್ ಜವಾಬ್ದಾರಿ ಆಗಿದೆ. ಇಷ್ಟು ಮುಖ್ಯವಾದ ಈ ಅಂಗದ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಕೂಡ ಹೌದು.
ಆದರೆ ಈ ವಿಚಾರದಲ್ಲಿ ನಮಗಿರುವ ಒಂದು ವರ ಏನೆಂದರೆ ಲಿವರ್ ಆರೋಗ್ಯ ಹಾದಗೆಟ್ಟಿರುವುದು ಲಕ್ಷಣಗಳ ಮೂಲಕ ತಿಳಿದು ಬಂದರೆ ನಾವು ಅದಕ್ಕೆ ಬೇಕಾದ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಾಗ ನಮ್ಮಲಿವರ್ ಮೊದಲಿನಂತೆ ಸಂಪೂರ್ಣವಾಗಿ ಗುಣವಾಗಿ ಕಾಯೋನ್ಮುಖವಾಗುತ್ತದೆ.
ಹಾಗಾಗಿ ಲಿವರ್ ಸಮಸ್ಯೆಗಳನ್ನು ಆರಂಭಿಕ ಹಂತಗಳಲ್ಲಿ ಗುರುತಿಸುವುದು ಮುಖ್ಯ ಇಲ್ಲವಾದಲ್ಲಿ ನಂತರ ಇದು ಹೆಪಟೈಟಿಸ್ ಬಿ, ಸೋರಿಯಾಸಿಸ್, ಲಿವರ್ ಫೇಲ್ಯೂರ್ ಹಂತವನ್ನು ಕೂಡ ನಂತರ ತಲುಪಬಹುದು. ಲಿವರ್ ಆರೋಗ್ಯದ ವಿಚಾರದಲ್ಲಿ ನಮ್ಮ ಯಾವ ತಪ್ಪುಗಳಿಂದ ಲಿವರ್ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಅತಿ ಹೆಚ್ಚಾಗಿ ಜಂಕ್ ಫುಡ್, ಫಾಸ್ಟ್ ಫುಡ್ ಗಳ ಸೇವನೆ ಮಾಡುವುದು ಮತ್ತು ಅತಿ ಹೆಚ್ಚು ಸಕ್ಕರೆಯ ಅಂಶಗಳನ್ನು ಸೇವನೆ ಮಾಡುವುದು, ಮಧ್ಯಪಾನದ ಧೂಮಪಾನದ ಅತಿಯಾದ ಚಟಗಳು ನಮ್ಮಲಿವರ್ ಆರೋಗ್ಯವನ್ನು ಹಾಳು ಮಾಡುತ್ತವೆ. ಈ ರೀತಿ ಲಿವರ್ ಹಾಳಾದ ತಕ್ಷಣವೇ ಕೆಲ ಲಕ್ಷಣಗಳನ್ನು ಕಾಣಿಸಿಕೊಳ್ಳುತ್ತವೆ.
ಇವುಗಳಲ್ಲಿ ಮುಖ್ಯವಾಗಿ ಕೆಲವರಿಗೆ ಜಾಂಡೀಸ್ ಬರುತ್ತದೆ, ಕಣ್ಣು ಹಳದಿಯಾಗುವುದು ಚರ್ಮ ಹಳದಿ ಆಗುವುದು ಇದು ಲಿವರ್ ಹಾಳಾಗಿರುವ ಲಕ್ಷಣ ಆಗಿದೆ. ಹೆಪಟೈಟಿಸ್ ಇನ್ಫೆಕ್ಷನ್ ಆಗಿದೆ ಎಂದರೆ ಲಿವರ್ಗೂ ಕೂಡ ಕೆಲ ವೈರಸ್ ಇನ್ಫೆಕ್ಷನ್ ಆಗಿರಬಹುದು. ಆಗ ವೈದ್ಯರು ಅದನ್ನು ಚೆಕ್ ಮಾಡಿ ನೋಡಿ ಧೃಡೀಕರಿಸುತ್ತಾರೆ. ಕೆಲವರಿಗೆ ಮೂತ್ರದ ಬಣ್ಣವೂ ಕೂಡ ಗಾಢವಾಗಿರುತ್ತದೆ, ಇದು ಕೂಡ ಲಿವರ್ ಹಾಳಾಗಿರುವ ಲಕ್ಷಣವಾಗಿದೆ.
ದಿನಪೂರ್ತಿ ಸುಸ್ತಾಗಿರುವುದು, ಎಷ್ಟು ನಿದ್ದೆ ಮಾಡಿದರು ಕೂಡ ಮೈಂಡ್ ಫ್ರೆಶ್ ಆಗದೆ ಇರುವುದು, ಕೆಲಸ ಮಾಡಲು ಮನಸ್ಸಿಲ್ಲದೆ ಇರುವುದು, ಯಾವಾಗಲೂ ಮಲಗಿರಬೇಕು ಎನಿಸುವುದು ಕೂಡ ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವ ಕಾರಣದಿಂದ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ ಸಾಮಾನ್ಯವಾಗಿ ಸುಸ್ತಾದಾಗ ಈ ರೀತಿ ಆದರೆ ರೆಸ್ಟ್ ತೆಗೆದುಕೊಂಡಾಗ ಹುಷಾರಾಗುತ್ತಾರೆ.
ಆದರೆ ಲಿವರ್ ಹಾಳಾಗಿದ್ದರೆ ಅವರು ಯಾವಾಗಲೂ ಮಂಕಾಗಿರುತ್ತಾರೆ. ಉಗುರುಗಳು ಓದಿಕೊಂಡಿರುತ್ತದೆ, ಅವುಗಳ ಶೇಪ್ ಬದಲಾಗಿರುತ್ತದೆ. ಕಣ್ಣ ರೆಪ್ಪೆಗಳ ಸುತ್ತ ಫ್ಯಾಟ್ ಶೇಖರಣೆಯಾಗಿ ಗಂಟು ಗಂಟುಗಳಾಗುತ್ತವೆ ಮತ್ತು ಚರ್ಮದ ಮೇಲೆ ಬಿಳಿ ಬಣ್ಣದ ಪ್ಯಾಚಸ್ ಗಳು ಕೂಡ ಉಂಟಾಗುತ್ತದೆ.
ಕೆಲವೊಮ್ಮೆ ರಕ್ತನಾಳಗಳು ಜೇಡರ ಬಳೆ ರೀತಿ ಚರ್ಮದ ಕೆಳಗೆ ಕಟ್ಟಿಕೊಂಡಿರುತ್ತದೆ ಇದು ಕೂಡ ಲಿವರ್ ಹಾಳಾಗಿದೆ ಎನ್ನುವುದನ್ನು ತೋರಿಸುವ ಲಕ್ಷಣವಾಗಿದೆ. ಇವುಗಳಲ್ಲಿ ಕೆಲವು ಲಕ್ಷಣಗಳು ಬೇರೆ ಕಾಯಿಲೆ ಕಾರಣದಿಂದ ಕೂಡ ಕಾಣಿಸಿಕೊಂಡಿರಬಹುದು ಆದರೆ ಲಿವರ್ ಹಾಳಾಗಿರುವ ಲಕ್ಷಣ ಕೂಡ ಆಗಿರುವುದರಿಂದ ಇವುಗಳ ಬಗ್ಗೆ ವೈದ್ಯರಿಗೆ ತಿಳಿಸಿ ಪರೀಕ್ಷೆಗೆ ಒಳಪಟ್ಟಾಗ ಪರಿಸ್ಥಿತಿ ತಿಳಿಯುತ್ತದೆ.
ಕೆಲವರಿಗೆ ಕಾಲಿನ ಕೆಳಗಡೆ ರಕ್ತ ಸಂಚಾರಗಳು ಕಡಿಮೆ ಆಗಿ ರಕ್ತನಾಳಗಳು ಊದುಕೊಂಡು ನೋವುಂಟು ಮಾಡುವ ಪರಿಣಾಮ ಉಂಟಾಗಿರಬಹುದು. ಲಿವರ್ ಹಾಳಾದಾಗ ನಮ್ಮ ಡೈಜೆಸ್ಟಿವ್ ಸಿಸ್ಟಮ್ ಕೂಡ ಕೆಡು ತ್ತದೆ ಆಗ ನಮಗೆ ಹಸಿವು ಆಗದೇ ಇರುವುದು ಅಥವಾ ಊಟ ನೋಡಿದರೆ ವಾಂತಿ ಬಂದ ರೀತಿ ಆಗುವುದು ಹೀಗಾಗುತ್ತದೆ.
ಇದಕ್ಕೆ ಕಾರಣ ನಮ್ಮ ದೇಹವನ್ನು ಡಿ ಟಾಕ್ಸಿನ್ ಮಾಡುವ ಲಿವರ್ ಹಾಳಾಗಿರುವುದು ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಪದೇಪದೇ ಆರೋಗ್ಯ ಹದಗೆಡುತ್ತಿದ್ದರೆ ಅದು ಕೂಡ ಲಿವರ್ ಕೆಟ್ಟಿರುವ ಲಕ್ಷಣ ಆಗಿರುತ್ತದೆ. ಹಾಗಾಗಿ ಇದರಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷಣಗಳು ದೀರ್ಘಕಾಲದಿಂದ ಕಾಡುತ್ತಿದ್ದರೆ ತಪ್ಪದೆ ಒಮ್ಮೆ ವೈದ್ಯರ ಬಳಿ ಹೋಗಿ ಅವುಗಳ ತಿಳಿಸಿ ಪರೀಕ್ಷೆಗೆ ಒಳಪಟ್ಟು ಆರಂಭಿಕ ಹಂತಗಳಲ್ಲಿ ಗುರ್ತಿಸಿಕೊಂಡು ಗುಣಪಡಿಸಿಕೊಳ್ಳಿ.