ನಮ್ಮ ದೇಹವೇ ಒಂದು ವಿಸ್ಮಯ, ಇಂತಹ ಒಂದು ದೇಹವನ್ನು ಸೃಷ್ಟಿ ಮಾಡಿದಂತಹ ಪ್ರಕೃತಿಗೆ ಧನ್ಯವಾದ ಹೇಳುತ್ತಾ ನಮ್ಮ ದೇಹದ ಕೆಲವು ರಹಸ್ಯಮಯ ವಿಷಯಗಳನ್ನು ನಿಮ್ಮ ಜೊತೆ ಹೇಳಿಕೊಳ್ಳುತ್ತಿದ್ದೇವೆ. ಇವುಗಳನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಂಡಿರಬೇಕು. ಇದನ್ನು ಅರಿತವರು ನೂರಾರು ವರ್ಷ ಆರೋಗ್ಯವಾಗಿ ಬದುಕುತ್ತಾರೆ ಮತ್ತು ದೇಹದ ಆರೋಗ್ಯವು ಅವರ ಕಂಟ್ರೋಲ್ ನಲ್ಲಿ ಇರುತ್ತದೆ. ಅಂತಹ ಕೆಲವೊಂದು ಲೋಕ ರೂಢಿಯಾಗಿ ಬಂದ ರಹಸ್ಯಗಳನ್ನು ಹಿರಿಯರು ತಿಳಿಸಿಕೊಟ್ಟಿದ್ದಾರೆ, ಅವು ಹೀಗಿವೆ ನೋಡಿ…
* ಗಂಟಲಲ್ಲಿ ಕೆರೆತ ಬಂದಾಗ ಕಿವಿಗಳನ್ನು ಕೆರೆದುಕೊಂಡರೆ ಅದು ಸರಿ ಹೋಗುತ್ತದೆ, ಗಂಟಲಿನ ಕೆರೆತ ಉಂಟು ಮಾಡಿದ ನರಗಳು ಸಡಿಲಗೊಳ್ಳುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ.
* ಯಾರಾದರೂ ಮಾತನಾಡುವಾಗ ಸರಿಯಾಗಿ ಕೇಳಿಸುತ್ತಿಲ್ಲ ಎಂದರೆ ನಿಮ್ಮ ಬಲ ಕಿವಿಯನ್ನು ಕೊಟ್ಟು ಕೇಳಿ, ನೀವೇನಾದರೂ ಸಂಗೀತವನ್ನು ಆಲಿಸುತ್ತಿದ್ದರೆ ಅದು ಸರಿಯಾಗಿ ಕೇಳುತ್ತಿಲ್ಲ ಎಂದರೆ ಎಡ ಕಿವಿ ಕೊಟ್ಟು ಕೇಳಿ. ಬಲ ಭಾಗದ ಕಿವಿಗೆ ಶಬ್ದ ಹಾಗು ವಾಕ್ಯಗಳನ್ನು ಗ್ರಹಿಸುವ ಶಕ್ತಿ ಹೆಚ್ಚಾಗಿದ್ದರೆ, ಎಡಭಾಗದಲ್ಲಿರುವ ಕಿವಿ ಸಂಗೀತ, ಲಯ, ತಾಳ ಇವುಗಳನ್ನು ಚೆನ್ನಾಗಿ ಗುರುತಿಸುತ್ತವೆ.
* ಇಂಜೆಕ್ಷನ್ ಭಯ ಇರುವವರು ಸೂಜಿ ಚುಚ್ಚಿಸಿಕೊಳ್ಳುವಾಗ ಕೆಮ್ಮಿ. ಈ ರೀತಿ ಕೆಮ್ಮುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಆಗ ಬೆನ್ನು ಹುರಿಯಲ್ಲಿರುವ ನರಗಳಿಗೆ ಇಂಜೆಕ್ಷನ್ ಚುಚ್ಚಿದ ನೋವು ಗೊತ್ತಾಗುವುದಿಲ್ಲ
* ಮೂಗು ಕಟ್ಟಿದಾಗ ನಾಲಿಗೆಯನ್ನು ನಾಲಿಗೆ ಮೇಲ್ಬಾಗದಲ್ಲಿ ಮುಟ್ಟಿಸಿ, ಮತ್ತು ಎರಡು ಹಬ್ಬಗಳ ಮಧ್ಯ ಪ್ರೆಸ್ ಮಾಡಿ. ಈ ರೀತಿ ಒಂದಾದರ ಮೇಲೆ ಒಂದರಂತೆ ಮಾಡುತ್ತಿದ್ದರೆ ಒಂದು ನಿಮಿಷದ ಒಳಗಡೆ ನಿಮಗೆ ರಿಲಾಕ್ಸ್ ಆದ ಅನುಭವ ಆಗುತ್ತದೆ
* ಮಲಗುವ ಸಮಯದಲ್ಲಿ ಊಟ ಮಾಡಿ ಅದು ಜೀರ್ಣ ಆಗಿಲ್ಲ ಎಂದರೆ ಎಡ ಭಾಗದಲ್ಲಿ ತಿರುಗಿ ಮಲಗಿ, ಆಗ ಹೊಟ್ಟೆಯಲ್ಲಿ ಹೆಚ್ಚು ಆಸಿಡ್ ಉತ್ಪತ್ತಿಯಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
* ಹಲ್ಲು ನೋವನ್ನು ಕಡಿಮೆ ಮಾಡಲು ಹೆಬ್ಬೆರಳು ಹಾಗೂ ತೋರುಬೆರಳಿನ ಮಧ್ಯೆ ಐಸ್ ಕ್ಯೂಬ್ ನಿಂದ ಉಜ್ಜಿ. ನಿಮಗೆ ಹಲ್ಲು ನೋವು ಹೆಚ್ಚಾಗಿದ್ದಾಗ ತಕ್ಷಣಕ್ಕೆ ಹಲ್ಲಿನ ಡಾಕ್ಟರ್ ಸಿಗದೇ ಇದ್ದರೆ ಅಥವಾ ರಾತ್ರಿ ಹೊತ್ತು ಹಲ್ಲಿನ ನೋವು ಬಂದಾಗ ಈ ರೀತಿ ಮಾಡಿ ನೋವು ಅರ್ಧ ಕಡಿಮೆ ಆಗುತ್ತದೆ.
* ನಿಮ್ಮ ಮೂಗಿನಿಂದ ರಕ್ತ ಬರುತ್ತಿದ್ದರೆ, ಮೂಗು ಹಾಗು ತುಟಿ ಸೇರುವ ಸ್ಥಳದಲ್ಲಿ ಗಟ್ಟಿಯಾಗಿ ಒತ್ತಿ ಹಿಡಿದುಕೊಳ್ಳಿ. ಆಗ ರಕ್ತನಾಳಗಳನ್ನು ತಡೆಗಟ್ಟಿದ ರೀತಿ ಆಗುವುದರಿಂದ ರಕ್ತಸ್ರಾವ ನಿಲ್ಲುತ್ತದೆ
* ಸುಟ್ಟ ಗಾಯಕ್ಕೆ ತಕ್ಷಣವೇ ನೀರನ್ನು ಹಾಕುವುದು ಉತ್ತಮ ಔಷಧಿಯಾಗಿದೆ, ಕೈ ಸುಟ್ಟ ತಕ್ಷಣ ಉಪ್ಪನ್ನು ಸವರುವುದರಿಂದ ಅದು ಬೊಬ್ಬೆ ಬರುವುದಿಲ್ಲ
* ನಿಮಗೆ ತುಂಬಾ ಭಯವಾಗುತ್ತಿದ್ದಾಗ ಹೆಬ್ಬೆಟ್ಟನ್ನು ಒತ್ತಿ ಹಿಡಿದುಕೊಳ್ಳಿ. ಹೀಗೆ ಮಾಡುವುದರಿಂದ ರಕ್ತದ ಒತ್ತಡ ಕಡಿಮೆ ಹಾಕಿ ಭಯ ಹೋಗುತ್ತದೆ.
* ತಣ್ಣಗಿರುವ ಜ್ಯೂಸ್ ಅಥವಾ ಐಸ್ ಕ್ರೀಮ್ ತಿಂದಾಗ ತಲೆ ಹಿಡಿದುಕೊಳ್ಳುತ್ತದೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಹೀಗಾಗುತ್ತದೆ ಇದನ್ನು ವಾಸಿ ಮಾಡಲು ನಾಲಿಗೆಯಿಂದ ಬಾಯಿಯ ಮೇಲ್ಭಾಗವನ್ನು ಒತ್ತಿಟ್ಟುಕೊಳ್ಳಿ.
* ನಿಮ್ಮ ಕೈಗಳು ಸೋತಿದ್ದರೆ ಕುತ್ತಿಗೆಯನ್ನು ನಿಧಾನವಾಗಿ ಆಡಿಸಿ ಆಗ ಕೈಗಳಿಗೆ ಸಂಪರ್ಕ ಹೊಂದಿರುವ ನರಗಳು ಸಡಿಲವಾಗುವುದರಿಂದ ಸಮಸ್ಯೆ ಸರಿ ಹೋಗುತ್ತದೆ.
* ಬೆಳಗ್ಗೆ ಹಾಸಿಗೆಯಿಂದ ಎದ್ದ ನಂತರ ಮತ್ತೆ ಹಾಸಿಗೆಗೆ ತಲೆ ಕೊಡಬೇಡಿ ಈ ರೀತಿ ಮಾಡುವುದರಿಂದ ರಾತ್ರಿ ಮಲಗಿದ ತಕ್ಷಣ ನಿದ್ರೆ ಬರುತ್ತದೆ
* ಯಾವುದಾದರೂ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರೆ ರಾತ್ರಿ ಮಲಗುವಾಗ ಅದನ್ನು ಯೋಚಿಸಿ. ಬಹಳ ದಿನಗಳವರೆಗೆ ನೆನಪಿನಲ್ಲಿ ಇರುತ್ತದೆ.
* ಓಡುವಾಗ ಎಡಗಾಲು ಮುಂದೆ ಇಟ್ಟಾಗ ಉಸಿರು ಹೊರಗೆ ಬಿಡಬೇಕು ಇದರಿಂದ ಎಡಭಾಗಕ್ಕೆ ನೋವಾಗುವುದಿಲ್ಲ ಹಾಗೂ ಲಿವರ್ ಮೇಲೆ ಒತ್ತಡ ಬೀಳುವುದಿಲ್ಲ. ಈ ತಪ್ಪು ಮಾಡುವುದರಿಂದಲೇ ಅನೇಕರಿಗೆ ನೋವಾಗುತ್ತದೆ.
* ಈಜುವಾಗ ನೀರಿನ ಆಳಕ್ಕೆ ಇಳಿಯಬೇಕು ಎಂದರೆ ಮೊದಲೇ ಚೆನ್ನಾಗಿ ಸ್ವಲ್ಪ ಹೊತ್ತು ಉಸಿರಾಡಿ. ಈ ರೀತಿ ಮಾಡಿ ನೀರಿಗೆ ಇಳಿಯುವುದರಿಂದ ಆಳಕ್ಕೆ ತಲುಪಿದಾಗ ಹೆಚ್ಚು ಹೊತ್ತು ಉಸಿರು ಹಿಡಿದಿಟ್ಟುಕೊಳ್ಳಲು ಸಹಾಯ ಆಗುತ್ತದೆ.