ಬೆಳಗಿನ ಜಾವ ಬೀಳುವ ಕನಸು ನಿಜ ಆಗುತ್ತದೆ ಎಂದು ಎಲ್ಲರೂ ಮಾತನಾಡುವುದನ್ನು ನಾವು ಕೇಳಿರುತ್ತೇವೆ ಹಾಗೂ ಸ್ವಪ್ನ ಶಾಸ್ತ್ರ ಹೇಳುವ ಪ್ರಕಾರ ಯಾವುದೇ ಕನಸು ಬಿದ್ದರೂ ಕೂಡ ಅದು ನಮ್ಮ ಭವಿಷ್ಯದ ಬಗ್ಗೆ ಸೂಚನೆ ನೀಡಲು ಬಂದಿರುತ್ತದೆ. ಇದನ್ನು ಸ್ವಪ್ನ ಶಕುನ ಎಂದು ಕೂಡ ಹೇಳುತ್ತಾರೆ.
ಕೆಲವೊಮ್ಮೆ ನಮಗೆ ಬೀಳುವ ಕನಸುಗಳು ಎದುರಾಗುವ ಕ’ಷ್ಟಗಳು, ಕೆ’ಟ್ಟ ಸುದ್ದಿ ಕೇಳುವುದರ ಸುಳಿವನ್ನು ಕೊಟ್ಟಿರುತ್ತದೆ. ಇದರ ಅನುಭವ ಅನೇಕರಿಗೆ ಆಗಿರುವುದನ್ನು ಮಾತನಾಡುವಾಗಲೂ ಕೇಳಿರುತ್ತೇವೆ. ಇದು ಮಾತ್ರವಲ್ಲದೆ ನಮಗೆ ಶ್ರೀಮಂತರಾಗುವ ನಮ್ಮ ಜೀವನದಲ್ಲಿ ಬಹಳ ದೊಡ್ಡ ಅದೃಷ್ಟ ಬರುವ ಸೂಚನೆಗಳು ಕೂಡ ಕನಸಿನಲ್ಲಿ ಸಿಕ್ಕಿರುತ್ತವೆ ಹಾಗೂ ಈ ಕನಸುಗಳು ಬೆಳಗಿನ ಜಾವದಲ್ಲಿ ಬೀಳುತ್ತವೆ ಎಂದು ಹೇಳಲಾಗುತ್ತದೆ.
ವೈದಿಕ ಶಾಸ್ತ್ರದ ಪ್ರಕಾರ ರಾಹು ಕನಸುಗಳ ಒಡೆಯ, ಈತ ಚಂದ್ರನ ಜೊತೆ ಸಂಪರ್ಕಕ್ಕೆ ಬಂದಾಗ ಹೆಚ್ಚು ಕನಸುಗಳು ಬೀಳುತ್ತವೆ. ವಿಜ್ಞಾನ ಹೇಳುವ ಪ್ರಕಾರವಾಗಿ ಸಬ್ ಕಾನ್ಶಿಯಸ್ ಮೆಮೊರಿ ನಲ್ಲಿ ರೆಕಾರ್ಡ್ ಆಗಿರುವ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಕನಸುಗಳು ಬಿಡುತ್ತವೆ ಎನ್ನುವ ವಾದವು ಇದೆ.
ಕನಸು ಬಹಳ ವಿಚಿತ್ರ ಮನಸ್ಸಿನಲ್ಲಿರುವ ಭಾಷೆಗೆ ಕನಸಾಗಿ ಬರುತ್ತದೆ ಎನ್ನುವುದು ಇದೆ. ಕೆಲವರಿಗೆ ಹಿಂದಿನ ದಿನ ತಾವು ಆಡಿದ ಮಾತು, ನೋಡಿದ ಚಿತ್ರ ಯೋಚಿಸಿದ ವಿಚಾರಗಳು ಕನಸಿನಲ್ಲಿ ಬಂದರೆ ಕೆಲವರಿಗೆ ಬಹಳ ದಿನಗಳಿಂದ ಒಂದೇ ಕನಸು ಪದೇ ಪದೇ ಬೀಳುತ್ತಿರುತ್ತದೆ. ಆ ಪ್ರಕಾರವಾಗಿ ಯಾವ ಕನಸು ಬಿದ್ದರೆ ಏನು ಫಲ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಕನಸಿನಲ್ಲಿ ದೇವರನ್ನು ನೋಡುವುದು ಬಹಳ ಶುಭದ ಸಂಕೇತವಾಗಿದೆ ನೀವು ಬಹಳ ಕಷ್ಟದಲ್ಲಿದ್ದಾಗ ಅಥವಾ ಹೇಳಿಕೊಳ್ಳಲಾಗದ ಧರ್ಮ ಸಂಕಟ ಅನುಭವಿಸುತ್ತಿದ್ದಾಗ ಈ ರೀತಿ ಭಗವಂತ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಪ್ರಾರ್ಥನೆ ಅವರಿಗೆ ಸಲ್ಲಿಕೆಯಾಗಿದೆ, ನಿಮ್ಮ ಸಮಸ್ಯೆ ಶೀಘ್ರವೇ ಬಗೆಹರಿಯುತ್ತದೆ ಎಂದು ಸೂಚನೆ ಕೊಡುತ್ತಿದ್ದಾರೆ ಎಂದರ್ಥ.
* ನಿಮ್ಮ ಕನಸಿನಲ್ಲಿ ನೀವೇನಾದರೂ ಹಾವನ್ನು ಕಂಡರೆ ಅದು ಹೆಡೆ ಬಿಚ್ಚಿದ ರೀತಿ ಅಥವಾ ಬಿಲದ ಬಳಿ ಹಾವು ಇರುವ ರೀತಿ ಕಂಡರೆ ಯಾವುದೇ ರೀತಿ ಭ’ಯ ಬೀಳುವ ಅಗತ್ಯ ಇಲ್ಲ. ಅನೇಕರು ಇದನ್ನು ತಪ್ಪು ತಿಳಿದುಕೊಂಡಿದ್ದಾರೆ ಈ ಸಂಕೇತವು ಕೂಡ ಶುಭ ಸಂಕೇತವೇ ಆಗಿದ್ದು ನಿಮ್ಮ ಕ’ಷ್ಟಗಳಿಂದ ಹೊರಬಂದು ಹೊಸ ಜೀವನ ಆರಂಭಿಸುವ ಅದೃಷ್ಟ ಹೊಂದಿದ್ದಾರೆ ಎನ್ನುವ ಸೂಚನೆ ಕೊಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು.
* ಮುಂಜಾನೆ ಕನಸಿನಲ್ಲಿ ಶವ ಕಂಡರೆ ಒಂದು ವೇಳೆ ಬದುಕಿರುವ ವ್ಯಕ್ತಿಯೇ ಸ’ತ್ತಿರುವ ರೀತಿ ಕಂಡರೆ ಆಗಲೂ ಆತಂಕ ಬೇಡ ಆ ವ್ಯಕ್ತಿಯ ಆಯುಷ್ಯ ಹೆಚ್ಚಾಗುತ್ತದೆ ಮತ್ತು ಅವರ ಅನಾರೋಗ್ಯ ಸಮಸ್ಯೆ ಪರಿಹಾರ ಆಗುತ್ತದೆ ಎನ್ನುವುದರ ಸೂಚನೆ ಆಗಿರುತ್ತದೆ.
* ಮುಂಜಾನೆ ಕನಸಿನಲ್ಲಿ ಕಳಶ, ಮಂಗಳ ದ್ರವ್ಯ, ಮೃಷ್ಟಾನ್ನ ಭೋಜನ, ಸಿಹಿ ಪದಾರ್ಥಗಳು, ಫಲ ತುಂಬಿದ ವೃಕ್ಷಗಳು ಕಾಮಧೇನು ಮುಂತಾದ ವಸ್ತುಗಳನ ಕಂಡರೆ ನಿಮ್ಮ ಅದೃಷ್ಟ ಕುಲಾಯಿಸುತ್ತಿದೆ ನಿಮಗೆ ಶೀಘ್ರವೇ ರಾಜಯೋಗ ಬರುತ್ತದೆ ಎಂದು ಅರ್ಥ.
* ಕನಸಿನಲ್ಲಿ ಗತಿಸಿ ಹೋದ ನಿಮ್ಮ ಕುಟುಂಬದ ಹಿರಿಯರನ್ನು ಅಥವಾ ದೂರದ ಊರುಗಳಲ್ಲಿ ಇರುವ ಪೋಷಕರನ್ನು ಕಂಡರೆ ಅವರ ಆಶೀರ್ವಾದದಿಂದ ನಿಮ್ಮ ಸಮಸ್ಯೆಯೊಂದು ಬಗೆಹರಿಯದೆ ನಿಮ್ಮ ಕೋರಿಕೆ ನೆರವೇರಲಿದೆ ಎಂದು ಅರ್ಥ.