ಶ್ರೀ ಕೃಷ್ಣನ ಫೋಟೋ ಅಥವಾ ವಿಗ್ರಹವನ್ನು ನೋಡಿದರೆ ಅಲ್ಲಿ ನವಿಲುಗರಿ ರಾರಾಜಿಸುತ್ತಿರುತ್ತದೆ. ಶ್ರೀ ಕೃಷ್ಣನಿಗೂ ನವಿಲುಗರಿಗು ಏನೋ ಅವಿನಾ ಭಾವ ಸಂಬಂಧ. ಇದೇ ಕಾರಣಕ್ಕೆ ನವಿಲುಗರಿಗೆ ಪೂಜ್ಯನೀಯ ಸ್ಥಾನವಿದೆ. ವಾಸ್ತು ಶಾಸ್ತ್ರದ ಪ್ರಕಾರ ನವಿಲುಗರಿ ಮನೆಯಲ್ಲಿ ಇದ್ದರೆ ಅದರಿಂದ ಆಗುವಂತಹ ಚಮತ್ಕಾರಗಳ ಬಗ್ಗೆ ಪುಟಗಟ್ಟಲೆ ವಿವರಣೆಗಳು ದೊರೆಯುತ್ತದೆ.
ನವಿಲುಗರಿಯನ್ನು ಮನೆಯ ಈ ಸ್ಥಳದಲ್ಲಿ ಇಟ್ಟು ನೋಡಿ ನೀವು ಊಹಿಸದ ರೀತಿ ಹಣ ಬರುತ್ತದೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ. ನವಿಲುಗರಿಯನ್ನು ನಮ್ಮ ಮನೆ ಹಾಗೂ ವ್ಯಾಪಾರದ ಸ್ಥಳಗಳಲ್ಲಿ ಬಳಸಿದರೆ ವಾಸ್ತುದೋಷ ನಿವಾರಣೆಯಾಗುತ್ತದೆ. ಹಣಕಾಸಿನ ಸಮಸ್ಯೆಗಳು ಕುಟುಂಬದಲ್ಲಿರುವ ಸಮಸ್ಯೆಗಳು ಹೀಗೆ ನೂರಾರು ಕಷ್ಟಗಳು ಮಂಜಿನಂತೆ ಕರಗುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದ.
ಈ ಸುದ್ದಿ ಓದಿ:- ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!
ಶ್ರೀ ಕೃಷ್ಣ ಹೇಳಿದ ಸಾಕಷ್ಟು ರಹಸ್ಯಗಳನ್ನು ಮತ್ತು ಉಪಾಯಗಳನ್ನು ಒಂದೊಂದಾಗಿ ತಿಳಿಯೋಣ. ನವಿಲುಗರಿಯಲ್ಲಿ ನಾನಾ ಬಣ್ಣಗಳು ಇರುತ್ತದೆ ನವಿಲುಗರಿಯಲ್ಲಿರು ವಂತಹ ಗಾಢಬಣ್ಣ ಜೀವನದಲ್ಲಿನ ಕಠಿಣ ಪರಿಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. ಅದೇ ರೀತಿಯಾಗಿ ತಿಳಿ ಬಣ್ಣಗಳು ತಿಳಿಯಾದ ಜೀವನದ ಪ್ರತೀಕ ಸುಖ ಶಾಂತಿ ನೆಮ್ಮದಿ ಸಮೃದ್ಧಿಯ ಪ್ರತೀಕವಾಗಿದೆ ಅಂತ ಶ್ರೀಕೃಷ್ಣ ಹೇಳಿದ್ದ.
ಜೀವನದಲ್ಲಿ ಮನುಷ್ಯ ಸುಖ ಮತ್ತು ದುಃಖ ಎರಡನ್ನು ಒಟ್ಟಿಗೆ ಸಮನಾಗಿ ಸ್ವೀಕಾರ ಮಾಡಬೇಕಾಗುತ್ತದೆ. ಇದರ ಹೊರತಾಗಿ ನವಿಲುಗರಿ ಪರಿಶುದ್ಧ ಪ್ರೇಮದ ಸಂಕೇತ ಹಾಗಾಗಿ ಶ್ರೀ ಕೃಷ್ಣನಿಗೆ ನವಿಲುಗರಿ ಎಂದರೆ ತುಂಬಾ ಇಷ್ಟ. ಅಚ್ಚರಿಯ ವಿಷಯ ಏನು ಎಂದರೆ ನವಿಲುಗರಿ ಕೇವಲ ಶ್ರೀ ಕೃಷ್ಣನಿಗೆ ಮಾತ್ರವಲ್ಲದೆ ಶ್ರೀರಾಮನಿಗೂ ಪ್ರಿಯವಾಗಿತ್ತು.
ಈ ಸುದ್ದಿ ಓದಿ:- ಇಂತಹ ಹೆಸರುಗಳನ್ನು ನಿಮ್ಮ ಮಕ್ಕಳಿಗಿಡಿ ತುಂಬಾ ಒಳ್ಳೆಯದು……..||
ಶ್ರೀರಾಮ ವನವಾಸದ ದಿಕ್ಷೆಯನ್ನು ಪಡೆದುಕೊಂಡು ಹೊರಟಾಗ ಲಕ್ಷ್ಮಣ ಸೀತಾಮಾತೆ ಕೂಡ ಶ್ರೀರಾಮ ನೊಂದಿಗೆ ಹೊರಡುತ್ತಾರೆ. ಕಾಡಿನಲ್ಲಿ ಕಲ್ಲು ಮುಳ್ಳಿನ ದಾರಿಯಲ್ಲಿ ಹಾದು ಹೋಗಬೇಕು ನಿನ್ನ ಕೋಮಲ ಚರಣಗಳಿಗೆ ಅದನ್ನು ಸಹಿಸಲಾಗುವುದಿಲ್ಲ ನೀನು ಬರಬೇಡ ಅಂತ ಶ್ರೀರಾಮ ಸೀತಾಮಾತೆಗೆ ಹೇಳಿದ್ದ. ಆಗ ಸೀತಾಮಾತೆ ಪ್ರಾಣನಾಥ ನೀನಿದ್ದಲ್ಲಿಯೇ ನಾನಿರುವುದು ನನ್ನನ್ನು ಬಿಟ್ಟು ಹೋಗಬೇಡ ಅಂತ ಹೇಳುತ್ತಾಳೆ.
ಶ್ರೀರಾಮ ಲಕ್ಷ್ಮಣ ಸೀತಾಮಾತೆ ವನವಾಸಕ್ಕೆಂದು ಕಾಡಿಗೆ ಹೊರಡುತ್ತಾರೆ. ಬಿಸಿಲು ಮತ್ತು ಕಲ್ಲು ಮುಳ್ಳುಗಳ ದಾರಿಯಿಂದ ಸೀತೆಗೆ ದಣಿವಾಯಿತು ಅವಳು ರಾಮನಿಗೆ ಎಲ್ಲಿಯಾದರೂ ನೀರು ಇದೆಯಾ ನೋಡಿ ನನಗೆ ತುಂಬಾ ಬಾಯಾರಿಕೆಯಾಗಿದೆ ಅಂತ ಕೇಳಿ ಒಂದು ಮರದ ಕೆಳಗೆ ಕುಳಿತುಕೊಳ್ಳುತ್ತಾಳೆ. ರಾಮ ಮತ್ತು ಲಕ್ಷ್ಮಣ ನೀರು ಎಲ್ಲಿ ಸಿಗುತ್ತದೆ ಎಂದು ಹುಡುಕಲು ಹೊರಡುತ್ತಾರೆ.
ತುಂಬಾ ದೂರದವರೆಗೆ ಹುಡುಕಿದರೂ ಕೂಡ ಎಲ್ಲಿಯೂ ಕೂಡ ನದಿ ಕೆರೆಗಳು ಕಾಣಿಸುವುದಿಲ್ಲ. ಅವರು ಮತ್ತೆ ಸೀತೆ ಇರುವಲ್ಲಿ ಹಿಂದಿರುಗು ತ್ತಾರೆ. ಶ್ರೀ ರಾಮನು ಸುತ್ತಲೂ ನೋಡಿದಾಗ ಅವನಿಗೆ ದೂರದಲ್ಲಿ ಒಂದು ದೊಡ್ಡ ಕಾಡು ಕಾಣಿಸುತ್ತದೆ.
ಈ ಸುದ್ದಿ ಓದಿ:- ದಾರಿದ್ರ್ಯ ದೇವತೆ ಮನೆಗೆ ದರಿದ್ರ ಬರಲು ಈ 55 ಅಂಶಗಳೇ ಕಾರಣ.!
ಆಗ ಶ್ರೀರಾಮ ಪ್ರಕೃತಿಯನ್ನು ಪ್ರಾರ್ಥಿಸುತ್ತಾ ಓ ವನದೇವ ಇಲ್ಲಿ ಸುತ್ತಮುತ್ತ ಎಲ್ಲಿ ನೀರಿದೆಯೋ ಆ ಸ್ಥಳವನ್ನು ತಲುಪಲು ನಮಗೆ ಸರಳವಾದ ಮಾರ್ಗವನ್ನು ತೋರಿಸು ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿಗೆ ಬಂದ ನವಿಲು ಸ್ವಲ್ಪ ದೂರದಲ್ಲಿ ಜಲಾಶಯವಿದೆ ಎಂದು ಶ್ರೀರಾಮನಿಗೆ ಹೇಳಿತು.
ನಾನು ನಿಮಗೆ ದಾರಿ ತೋರಿಸುತ್ತೇನೆ ನನ್ನಿಂದ ಏನಾದರೂ ತಪ್ಪಾದರೆ ದಯವಿಟ್ಟು ಕ್ಷಮಿಸಬೇಕು ಎಂದು ಬೇಡಿಕೊಳ್ಳುತ್ತದೆ ನೀನೇಕೆ ಹೀಗೆ ಹೇಳುತ್ತಿ ರುವೆ ಎಂದು ಶ್ರೀರಾಮ ನವಿಲಿಗೆ ಕೇಳುತ್ತಾನೆ. ಆಗ ನವಿಲು ನಾನು ಕೆಲವೊಮ್ಮೆ ಹಾರಿಕೊಂಡು ಹೋಗುತ್ತೇನೆ ನೀವು ನಡೆದುಕೊಂಡು ಬರುತ್ತೀರಿ ನಾನು ಹಾರುವಾಗ ನನ್ನ ರೆಕ್ಕೆಗಳು ನೀವು ನಡೆದುಕೊಂಡು ಬರುವಂತಹ ಹಾದಿಯಲ್ಲಿ ಬೀಳಬಹುದು ಇದು ನಿಮಗೆ ತೊಂದರೆ ನೀಡಬಹುದು ಅಂತ ಉತ್ತರ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.