ಈಗಿನ ಕಾಲದಲ್ಲಿ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಹಣಕಾಸಿನ ಸಮಸ್ಯೆಗಳು ವೃತ್ತಿ ಜೀವನಕ್ಕೆ ಸಂಬಂಧಪಟ್ಟ ಹಾಗೆ ಒತ್ತಡಗಳು. ಈ ರೀತಿ ಬದುಕಿನ ಸಂಘರ್ಷಗಳು ಮಾತ್ರವಲ್ಲದೆ ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಆರೋಗ್ಯದ ಸಮಸ್ಯೆಗಳು, ದೈಹಿಕ ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳಾದ ಮೈ ಕೈ ನೋವು, ಮುಂತಾದ ನೋವುಗಳು ಕೂಡ ನಮ್ಮನ್ನು ವಿಪರೀತವಾಗಿ ಕಾಡಿ ಜೀವದ ಮೇಲೆ ಉತ್ಸಾಹ ಕಳೆದುಕೊಳ್ಳುವ ರೀತಿ ಮಾಡಿ ಬಿಡುತ್ತವೆ.
ನಾವು ನಮ್ಮ ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಇಟ್ಟುಕೊಂಡರೆ ಆಗ ಕುಟುಂಬದ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಈ ಮೂಲಕ ಮಾನಸಿಕ ಸಮಸ್ಯೆಗಳು ಕಡಿಮೆ ಆಗುತ್ತದೆ ಹಾಗೂ ಕೆಲವೊಂದು ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಇದರ ಮೂಲಕವೇ ಪರಿಹಾರ ಸಿಗುತ್ತದೆ. ಆಗ ಹೊರಗಿನ ಸಮಸ್ಯೆಗಳನ್ನು ಜಯಿಸಲು ಶಕ್ತಿ ಮತ್ತು ಉತ್ಸಾಹ ಕೂಡ ಬರುತ್ತದೆ.
ಇಂತಹ ವಿಚಾರದಲ್ಲಿ ಗಂಡಸರು ಹೊರಗೆ ದುಡಿಯಲು ಹೋಗುತ್ತಾರೆ. ಮನೆಯಲ್ಲಿರುವ ಗೃಹಿಣಿಯು ಇಂತಹ ಜವಾಬ್ದಾರಿಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ತನ್ನ ಪತಿ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಅವರ ಏಳಿಗೆಗಾಗಿ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿ ಹೆಣ್ಣುಮಕ್ಕಳು ಕೆಲವೊಂದು ಅಗತ್ಯ ಕ್ರಮಗಳನ್ನು ಮನೆಗಳಲ್ಲಿ ಕೈಗೊಳ್ಳಬೇಕು.
ಪ್ರತಿನಿತ್ಯ ಕೂಡ ಮನೆಯಲ್ಲಿ ದೇವರ ಪೂಜೆ ಮಾಡುತ್ತೇವೆ ಇಂತಹ ಸಮಯದಲ್ಲಿ ಇದರೊಂದಿಗೆ ಕೆಲವೊಂದು ಆಚರಣೆಗಳನ್ನು ಸೇರಿಸಿಕೊಂಡರೆ ಸಾಕು. ಯಾವುದೇ ಅಡ್ಡ ಪರಿಣಾಮವು ಇಲ್ಲದೆ ಆರ್ಥಿಕ ಹೊರೆಯು ಆಗದಂತೆ ಇರುವ ಸಮಯದಲ್ಲಿ ಸರಳವಾಗಿ ಇಂತಹ ಆಚರಣೆಗಳನ್ನು ಮಾಡಬಹುದು. ಇದು ಸರಳ ಆಚರಣೆ ಆದರೂ ಇದು ಕೊಡುವ ಪರಿಹಾರವೂ ಬಹಳ ದೊಡ್ಡ ಮಟ್ಟದಲ್ಲಿ ಇರುತ್ತದೆ. ಇಂದು ನಾವು ಈ ಅಂಕಣದಲ್ಲಿ ಹೇಳಿರುವ ಈ ಸರಳ ಪರಿಹಾರವನ್ನು ಇಂದಿನಿಂದ ಪಾಲಿಸಿ ನೋಡಿ.
* ಪ್ರತಿದಿನ ಗೃಹಣಿಯರು ಸ್ಥಾನ ಮಾಡಿ ದೇವರಿಗೆ ದೀಪ ಹಚ್ಚುತ್ತಾರೆ, ಕೆಲಸಕ್ಕೆ ಹೋಗುವವರು ಶಾಲೆಗೆ ಹೋಗುವವರು ಎಲ್ಲರೂ ಕೂಡ ಸ್ನಾನ ಮಾಡುತ್ತೇವೆ. ಈ ರೀತಿ ಸ್ನಾನ ಮಾಡುವಾಗ ಕೊನೆಯ ಒಂದು ಬಕೆಟ್ ನೀರಿನಲ್ಲಿ ಒಂದು ಚೂರು ಹರಳು ಉಪ್ಪನ್ನು ಹಾಕಿ ಅದು ಸಂಪೂರ್ಣವಾಗಿ ಕರಗಿದ ಮೇಲೆ ಅದನ್ನು ಹಾಕಿಕೊಂಡು ಸ್ನಾನ ಮಾಡಿ ಬರುವುದರಿಂದ ಮೈ ಕೈ ನೋವು ದೃಷ್ಟಿ ದೋಷದಿಂದ ಉಂಟಾಗಿದ್ದರೆ ಆ ದೃಷ್ಟಿ ದೋಷವೆಲ್ಲ ಕಳೆಯುತ್ತದೆ.
ಮತ್ತು ನಕರಾತ್ಮಕ ಎನರ್ಜಿ ನಿಮ್ಮನ್ನು ಕಾಡುತ್ತಿದ್ದರೆ ಅದು ಕೂಡ ಪರಿಹಾರ ಆಗುತ್ತದೆ. ಇದರಿಂದ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ, ಅದೇ ರೀತಿ ಮನೆಯನ್ನು ಸ್ವಚ್ಛಗೊಳಿಸುವಾಗ ಹಿರಿಯರು ಮನೆ ಸ್ವಚ್ಛಗೊಳಿಸುವ ನೀರಿಗೆ ಚಿಟಿಕೆ ಅರಿಶಿಣ ಹಾಗೂ ಸ್ವಲ್ಪ ಗೋಮೂತ್ರದ ಜೊತೆ ಸ್ವಲ್ಪ ಹರಳುಪ್ಪು ಕೂಡ ಹಾಕಿ ಶುದ್ಧಗೊಳಿಸಬೇಕು ಇದರಿಂದ ಕೂಡ ಮನೆಯ ವಾತಾವರಣ ಶುದ್ಧಿಯಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.
* ಮತ್ತೊಂದು ಸರಳವಾದ ಉಪಾಯ ಏನೆಂದರೆ ನೀವು ಮನೆ ಸ್ವಚ್ಛಗೊಳಿಸಿ ತಲೆ ಸ್ನಾನ ಮಾಡಿ. ದೇವರ ಪೂಜೆ ಮಾಡುವಾಗ ನಿಮ್ಮ ಮಕ್ಕಳ ಜೊತೆ ಹೋಗಿ ಹತ್ತಿರದಲ್ಲಿರುವ ಬಿಳಿ ಎಕ್ಕದ ಗಿಡಕ್ಕೆ 12 ಪ್ರದಕ್ಷಿಣೆ ಹಾಕಿ ಪೂಜೆ ಮಾಡಿ ಮತ್ತು ಬರುವಾಗ ಮಕ್ಕಳಿಗೆ ಎರಡು ಹೂವನ್ನು ತರಲು ಹೇಳಿ ತಂದ ಆ ಹೂವನ್ನು ದೇವರ ಕೋಣೆಯಲ್ಲಿಟ್ಟು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳಿ.
ನಿಮ್ಮ ಮನೆಯ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ನಿಮ್ಮ ಮನೆದೇವರು ಕುಲ ದೇವರನ್ನು ಮತ್ತು ಬಿಳಿ ಎಕ್ಕದ ಗಿಡವು ಗಣೇಶನ ರೂಪವಾಗಿರುವುದರಿಂದ ಗಣೇಶನನ್ನು ಕೂಡ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳಿ ನಿಮ್ಮ ಸಮಸ್ಯೆಗೆ ಪರಿಹಾರ ಗ್ಯಾರಂಟಿ ಆದರೆ ನಂಬಿಕೆಯಿಂದ ಈ ಕೆಲಸವನ್ನು ಮಾಡಬೇಕು.
* ಆಗಾಗ ತಪ್ಪದೆ ಮನೆ ದೇವರ ಹಾಗೂ ಗ್ರಾಮ ದೇವತೆಗಳ ದರ್ಶನ ಮಾಡಿ, ಸೇವೆ ಸಲ್ಲಿಸಬೇಕು ಮತ್ತು ನಿಮ್ಮ ಕೈಲಾದಷ್ಟು ಪ್ರಾಣಿ ಪಕ್ಷಿಗಳಿಗೆ ಆಹಾರ ನೀರು ನೀಡುವುದು, ಅಸಹಾಯಕರಿಕರಿಗೆ ಆಹಾರ ನೀಡುವುದು ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರೆ ತನ್ನಿಂದ ತಾನೇ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.