ಹಸಿರೇ ಉಸಿರು ಈ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ಹಸಿರು ಎಂದು ಕರೆಸಿಕೊಳ್ಳುವ ಈ ವನ್ಯಸಂಪತ್ತು ಇರದೇ ಇದ್ದರೆ ಮನುಷ್ಯನ ಜೀವನ ಅಸ್ತವ್ಯಸ್ತವಾಗುತ್ತದೆ. ಈ ಭೂಮಿ ಮೇಲೆ ಎಲ್ಲಾ ಜೀವರಾಶಿಗಳು ಜೀವಂತವಾಗಿರುವುದಕ್ಕೆ ಪ್ರಮುಖ ಕಾರಣವೇ ಈ ಹಸಿರು.
ಪ್ರಾಣ ವಾಯುವಾದ ಆಮ್ಲಜನಕವನ್ನು ನೀಡುವುದು ಮಾತ್ರವಲ್ಲದೆ ಇಳೆಯಲ್ಲಿ ಬೆಳೆ ತೆಗೆಯಲು ಮಳೆ ಬೀಳಲು ಹಾಗೂ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ನಾವು ಪಡೆಯಲು, ಆಹಾರ ಸರಪಳಿ ಸರಿದೂಗಿಗೊಂಡು ಸಾಗಲು ಇವೇ ಕಾರಣ. ಗಿಡ ಮರ ಬಳ್ಳಿ ಹೀಗೆ ಈ ಪ್ರಕೃತಿಯಲ್ಲಿ ಸಾಕಷ್ಟು ವನ್ಯ ಸಂಪತ್ತಿದೆ. ಒಂದೊಂದು ವಿಧದಲ್ಲಿ ಒಂದೊಂದು ತರಹದ ಉಪಯೋಗವನ್ನು ಮನುಷ್ಯ ಕಂಡುಕೊಂಡಿದ್ದಾನೆ.
ಕೆಲವು ಗಿಡಗಳು ಪರಿಮಳಯುಕ್ತವಾದ ಹೂವನ್ನು ನೀಡಿದರೆ ಕೆಲ ಆಕರ್ಷಣೀಯ ಪುಷ್ಪಗಳು ಅಲಂಕಾರಕ್ಕೆ ಮಾತ್ರ ಬಳಕೆ ಆಗುತ್ತವೆ. ಇನ್ನು ಕೆಲವು ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿವೆ, ಇವುಗಳು ಅನೇಕ ಕಾಯಿಲೆಗಳಿಗೆ ಮದ್ದಾಗಿ ಮನುಷ್ಯನ ಆರೋಗ್ಯವನ್ನು ಕಾಪಾಡುತ್ತವೆ ಮತ್ತು ಆಹಾರ ಉದ್ದೇಶಕ್ಕಾಗಿ ಇರುವ ಗಿಡ ಮರಗಳನ್ನು ಕಾಣಬಹುದು.
ಪೀಠೋಪಕರಣ ತಯಾರಿಕೆಗೆ ಹಾಗೂ ಮತ್ತಿತರ ಕೆಲಸಗಳಿಗೆ ಬಾಕಿ ಆಗುವಂತಹ ಮರಗಳು ಹೀಗೆ ಇವುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತವೆ. ಆದರೆ ಕೆಲವೊಂದು ವಿಶೇಷವಾದ ವೃಕ್ಷಗಳಿಗೆ ಮಾತ್ರ ದೈವಿಕ ಸ್ವಭಾವವು ಇರುತ್ತದೆ. ಇವುಗಳನ್ನು ಮನುಷ್ಯರು ದೇವರ ಸ್ವರೂಪದಂತೆ ಕಂಡು ಭಕ್ತಿಯಿಂದ ಪೂಜಿಸುತ್ತಾರೆ.
ಅವುಗಳ ಪೈಕಿ ಅಶ್ವತ್ಥರಳೀ ಮರ, ಹತ್ತಿ ಮರ, ಎಕ್ಕ, ಬೇವಿನ ಮರ ಇತ್ಯಾದಿಗಳನ್ನು ಹೆಸರಿಸಬಹುದು. ಇದರಲ್ಲಿ ಎಕ್ಕದ ಗಿಡದ ವಿಶೇಷತೆ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಎಕ್ಕದ ಗಿಡಕ್ಕೆ (Ekka) ಅದರದ್ದೇ ಆದ ಅಪರೂಪವಾದ ಶಕ್ತಿ ಇದೆ ಇದನ್ನು ಧನಾಕರ್ಷಣೆಯ ಗಿಡ ಎಂದು ಕೂಡ ಕರೆಯುತ್ತಾರೆ.
ಎಕ್ಕ ಗಿಡದಲ್ಲಿ ಎರಡು ವಿಧ ಬಿಳಿ ಎಕ್ಕ ಹಾಗೂ ನೀಲಿ ಎಕ್ಕ. ಎಕ್ಕ, ಎಕ್ಕದ, ಅರ್ಕ ಹೀಗೆ ನಾನಾ ಹೆಸರಿನಿಂದ ಇದನ್ನು ಕರೆಯುತ್ತಾರೆ. ಇದರಲ್ಲಿ ಬಿಳಿ ಎಕ್ಕವನ್ನು ವ್ಯಾಪಾರಿಗಳು ತಮ್ಮ ವ್ಯಾಪಾರ ಚೆನ್ನಾಗಿ ಆಗಲಿ ಎನ್ನುವ ಕಾರಣಕ್ಕೆ ವ್ಯಾಪಾರ ಆರಂಭಿಸುವ ಮುನ್ನ ಇಟ್ಟುಕೊಳ್ಳುತ್ತಾರೆ. ಅಲ್ಲದೆ ಗಣಪತಿಗೆ ಪ್ರಿಯವಾದ ಹೂವು ಎಕ್ಕದ ಹೂವು ಆಗಿದೆ. ಇದರಲ್ಲಿ ಹಾರ ಮಾಡಿ ಗಣಪತಿಗೆ ಅರ್ಪಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಸಂಕಷ್ಟ ಹರ ಗಣಪತಿಗೆ ಕೇಳಿಕೊಳ್ಳುತ್ತಾರೆ.
ಮೊಬೈಲ್ ಕಳೆದು ಹೋದ್ರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!
ಈಗ ಇದೆ ಎಕ್ಕದ ಗಿಡದಿಂದ ನೀವು ಇನ್ನೊಂದು ಉಪಾಯ ಮಾಡಿದರೆ ನಿಮ್ಮ ಹಣಕಾಸಿನ ಎಲ್ಲಾ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಿಕೊಂಡು ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಕಾಣಬಹುದು. ಇದನ್ನು ಮಾಡುವುದು ಬಹಳ ಸರಳ ಆದರೆ ಇದಕ್ಕೆ ಬಿಳಿ ಎಕ್ಕದ ಆಗಬೇಕು.
ಒಂದು ಸೋಮವಾರ ಅಥವಾ ಶುಕ್ರವಾರದಂದು ಮುಂಜಾನೆ ಆರು ಗಂಟೆಗೆ ಹೋಗಿ ಬಿಳಿ ಎಕ್ಕದ ಗಿಡದಲ್ಲಿ ಮೂರು ಎಲೆ ಹಾಗೂ ಹೂಗಳನ್ನು ತೆಗೆದುಕೊಂಡು ಬರಬೇಕು. ಸಂಜೆ ಹೊತ್ತು ಮನೆಯಲ್ಲಿ ಪೂಜೆ ಮಾಡಿ ಬಳಿಕ ಎಲೆಗಳನ್ನು ಕೂಡ ಸ್ವಚ್ಛ ಮಾಡಿ ಅವುಗಳ ಮೇಲೆ ಅಕ್ಷತೆಯನ್ನು ಇಟ್ಟು ನಂತರ ಎಕ್ಕದ ಹೂವು ಇಟ್ಟು ದೂಪ ದೀಪದ ದಿಂದ ಬೆಳಗಿ ಭಕ್ತಿಯಿಂದ ಪ್ರಾರ್ಥಿಸಬೇಕು.
ಮುಖ್ಯವಾಗಿ ನಿಮ್ಮ ಹಣಕಾಸಿನ ಸಮಸ್ಯೆ ಯಾವ ರೀತಿ ಪರಿಹಾರ ಆಗಬೇಕು ಅದನ್ನು ಕೇಳಿಕೊಂಡು ಆ ಮೂರು ಎಲೆಗಳನ್ನೂ ದಾರರ ಸಹಾಯದಿಂದ ಕಟ್ಟಿ ಹಣ ಇಡುವ ಜಾಗದಲ್ಲಿ ಇಡಬೇಕು. ಮೂರು ವಾರಗಳು ಈ ರೀತಿ ಮಾಡಿದರೆ ಖಂಡಿತವಾಗಿಯೂ ನಿಮ್ಮ ಸಮಸ್ಯೆ ಪರಿಹಾರ ಆಗುವುದರಲ್ಲಿ ಅನುಮಾನವಿಲ್ಲ.