ಕೊಟ್ಟಿಗೆ ಗೊಬ್ಬರವನ್ನು ಹೊಲದಲ್ಲಿ ಹಾಕುವ ಸರಿಯಾದ ವಿಧಾನ ಯಾವುದು ಇಲ್ಲಿದೆ ನೋಡಿ.! ರೈತರಿಗೆ ಬಹಳ ಉಪಯುಕ್ತ ಮಾಹಿತಿ ಇದು.!

 

ಸಾವಯವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರವನ್ನು ರೈತನ ಬಂಗಾರ ಎಂದು ಹೇಳಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತನಿಗೆ ಇದು ಕೊಡುವ ಅನುಕೂಲತೆಯ ಲೆಕ್ಕದಲ್ಲಿ ಹೇಳುವುದಾದರೆ ಬಂಗಾರಕ್ಕಿಂತಲೂ ಕೂಡ ರೈತನಿಗೆ ಇದು ಹೆಚ್ಚು ಎಂದು ಹೇಳಬಹುದು. ಯಾಕೆಂದರೆ ಈ ರೀತಿ ಕೊಟ್ಟಿಗೆ ಗೊಬ್ಬರ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ಇಳುವರಿ ಯನ್ನು ಕೊಡುವುದು ಮಾತ್ರವಲ್ಲದೆ ಯಾವುದೇ ಅಡ್ಡ ಪರಿಣಾಮ ಇಲ್ಲದ ಉತ್ತಮ ಆಹಾರವನ್ನು ತಯಾರಿಸುತ್ತದೆ.

ಇಂದು ರಾಸಾಯನಿಕ ಗೊಬ್ಬರ ಹಾಕಿದ ಬೆಳೆಗಳಿಗಿಂತಲೂ ಕೂಡ ಸಾವಯವ ಗೊಬ್ಬರ ಹಾಕಿದ ಬೆಳೆಗಳಿಗೆ ಎಷ್ಟು ಬೆಲೆ ಇದೆ ಬೇಡಿಕೆ ಇದೆ ಇದನ್ನು ನೋಡಿದರೆ ನಮಗೆ ಇದರ ಬೆಲೆ ತಿಳಿಯುತ್ತದೆ. ಆದರೆ ಅನೇಕ ರೈತರು ತಾವು ಕೊಟ್ಟಿಗೆ ಗೊಬ್ಬರ ಹಾಕಿದ್ದರೂ ಕೂಡ ಸರಿಯಾದ ಇಳುವರಿ ಬಂದಿಲ್ಲ ಎಂದು ದೂರುವುದನ್ನು ನಾವು ಕೇಳಿದ್ದೇವೆ ಆದರೆ ಇದಕ್ಕೆ ಒಂದು ಬಲವಾದ ಕಾರಣ ಇದೆ.

ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!

ಯಾಕೆಂದರೆ ರೈತರಿಗೆ ಯಾವ ರೀತಿಯಾಗಿ ಕೊಟ್ಟಿಗೆ ಗೊಬ್ಬರವನ್ನು ಹೊಲದಲ್ಲಿ ಸೇರಿಸಬೇಕು ಎನ್ನುವುದರ ಸರಿಯಾದ ಕ್ರಮ ತಿಳಿಯದೆ ಇರುವುದು. ವೈಜ್ಞಾನಿಕವಾದ ರೀತಿಯಲ್ಲಿ ಇದನ್ನು ಅರ್ಥೈಸಿಕೊಂಡು ಅದೇ ಕ್ರಮಗಳ ಪ್ರಕಾರ ರೈತನು ತನ್ನ ಕೃಷಿ ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕಿದ್ದಲ್ಲಿ ಬಂಗಾರದಂತ ಬೆಳೆಯು ಪ್ರತಿ ವರ್ಷ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಹೆಚ್ಚಿನ ರೈತರು ಟ್ರಾಕ್ಟರ್ ಅಥವಾ ಗಾಡಿಗಳಲ್ಲಿ ಕೊಟ್ಟಿಗೆ ಗೊಬ್ಬರವನ್ನು ಹೊಡೆದುಕೊಂಡು ಹೋಗಿ ಜಮೀನಿನಲ್ಲಿ ಸುರಿದು ಬರುತ್ತಾರೆ ಅಥವಾ ಅಲ್ಲಲ್ಲಿ ರಾಶಿ ಹಾಕಿ ಬರುತ್ತಾರೆ. ವಾರವಾದರೂ ಕೂಡ ಆ ಕಡೆ ತಿರುಗಿ ನೋಡಿರುವುದಿಲ್ಲ ಮತ್ತೆ ಯಾವಾಗಲೂ ಬಿಡುವಾಗ ಅದನ್ನು ಹೋಗಿ ಸ್ಪ್ರೆಡ್ ಮಾಡುತ್ತಾರೆ ಇದೆ ಮೊದಲ ತಪ್ಪು, ಈ ವಿಧಾನದಿಂದ ಸಾಕಷ್ಟು ನಷ್ಟಗಳು ಉಂಟಾಗುತ್ತವೆ.

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!

ಈ ರೀತಿ ಬಿಸಿಲಿನಲ್ಲಿ ಗೊಬ್ಬರವನ್ನು ಹಾಕಿ ಅದನ್ನು ಮಣ್ಣಿಗೆ ಮಿಕ್ಸ್ ಮಾಡದೆ ಬಂದಾಗ ಆ ಗೊಬ್ಬರದಲ್ಲಿರುವ ರೈತ ಮಿತ್ರನಾಗಿರುವ ಬ್ಯಾಕ್ಟೀರಿಯಗಳು ಕ್ರಿಮಿಗಳು ನಶಿಸಿ ಹೋಗುತ್ತವೆ, ಹಾನಿ ಆಗುತ್ತದೆ. ಮಣ್ಣಿನೊಳಗೆ ಸೇರಿದಾಗ ಮಾತ್ರ ಬೆಳೆ ಬೆಳೆಯಲು ಬೇಕಾದ ಅನುಕೂಲಕರ ಪೋಷಕಾಂಶಗಳು ಮಣ್ಣಿನಲ್ಲಿ ಉತ್ಪತ್ತಿ ಆಗುವುದು ಅದರ ಮೂಲಕವೇ ಆರೋಗ್ಯಕರವಾದ ಉತ್ತಮ ಇಳುವರಿಯ ಬೆಳೆ ಬರುವುದು.

ಇವುಗಳನ್ನು ಬಿಸಿಲಿನಲ್ಲಿ ಹಾಗೆ ಬಿಟ್ಟಾಗ ಕೊಟ್ಟಿಗೆ ಗೊಬ್ಬರಗಳಲ್ಲಿ ಹೇರಳವಾಗಿ ಇರುವ ನೈಟ್ರೋಜನ್ ಅಂಶವು ಅಮೋನಿಯಂ ನೈಟ್ರೇಟ್ ಆಗಿ ಆವಿಯಾಗುತ್ತದೆ ಆಗ ಉಳಿದ ಗೊಬ್ಬರದಲ್ಲಿ ಯಾವ ಪೋಷಕಾಂಶವು ಕೂಡ ಉಳಿದಿರುವುದಿಲ್ಲ. ಆದ್ದರಿಂದ ಇವುಗಳನ್ನು ಬಿಸಿಲಿನಲ್ಲಿ ಹಾಗೆ ಬಿಡುವುದು ತಪ್ಪು, ಕೊಟ್ಟಿಗೆ ಗೊಬ್ಬರಗಳ ಸಂಪೂರ್ಣ ಪ್ರಯೋಜನ ಕೃಷಿ ಭೂಮಿಗೆ ಸಿಗಬೇಕು ಎಂದರೆ ಇನ್ನು ಮುಂದೆ ಈ ರೀತಿಯಲ್ಲಿ ಇದನ್ನು ಸ್ಪ್ರೆಡ್ ಮಾಡಿ.

ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

ಮಳೆ ಬಂದಾಗ ಭೂಮಿ ಒದ್ದೆಯಾಗಿದ್ದರೆ ಅಥವಾ ನೀರಾವರಿ ಭೂಮಿಯಾಗಿದ್ದರೆ ನೀರು ಹರಿಸಿ ಅದು ಒದ್ದೆಯಾಗಿದ್ದಾಗ ಗೊಬ್ಬರವನ್ನು ತೆಗೆದುಕೊಂಡು ಹೋಗಿ ಸಣ್ಣ ಸಣ್ಣ ರಾಶಿ ಮಾಡಿ ನಂತರ ಮಣ್ಣಿನ ಒಳಗಡೆ ಬೆರೆಸಿಬಿಡಿ. ಈ ರೀತಿ ಮಾಡಿದಾಗ ಮಣ್ಣಿನ ಜೊತೆ ಗೊಬ್ಬರದಲ್ಲಿದ್ದ ರೈತನ ಮಿತ್ರರಾಗಿರುವ ಕ್ರಿಮಿಗಳು, ಬ್ಯಾಕ್ಟೀರಿಗಳು ಸೇರಿಕೊಳ್ಳುತ್ತವೆ ಅವು ಜೀವಂತ ಇರುತ್ತವೆ.

ಜೊತೆಗೆ ಗೊಬ್ಬರದಲ್ಲಿರುವ ಎಲ್ಲಾ ಪೋಷಕಾಂಶವು ಕೂಡ ಮಣ್ಣಿನ ಜೊತೆ ಸೇರುತ್ತದೆ. ಆಗ ರೈತನಿಗೆ ನಿರೀಕ್ಷೆಯ ಫಲಿತಾಂಶ ಸಿಗುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ತಲುಪಿಸುವ ಉದ್ದೇಶದಿಂದ ಎಲ್ಲರ ಜೊತೆಗೂ ಕೂಡ ಶೇರ್ ಮಾಡಿ.

 

Leave a Comment