ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!

ಟೆಕ್ನಾಲಜಿ ಮುಂದುವರಿದಂತೆ ಕಷ್ಟದ ಕೆಲಸಗಳೂ ಸುಲಿದ ಬಾಳೆಹಣ್ಣು ತಿಂದಷ್ಟು ಸುಲಭವಾಗುತ್ತಿದೆ. ಸದ್ಯ ಡಿಜಿಟಲ್ ಪಾವತಿ ಮತ್ತು ರೀಚಾರ್ಜ್ ಆಪ್‌ಗಳು ಬಳಿಕೆದಾರರಿಗೆ ಸಮಯ ಉಳಿಕೆಯ ಜೊತೆಗೆ ಉಪಯುಕ್ತ ಸೇವೆ ನೀಡುತ್ತಿವೆ. ಮುಖ್ಯವಾಗಿ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲ್ ರೀಚಾರ್ಜ್‌, ಡಿ2ಹೆಚ್‌ ರೀಚಾರ್ಜ್‌, ವಿದ್ಯುತ್ ಬಿಲ್ ಪಾವತಿ, ಇನ್ಶೂರೆನ್ಸ್‍ ಪ್ರೀಮಿಯಂ ಪಾವತಿ, ಗ್ಯಾಸ್ ಬಿಲ್‌ ಸೇರಿದಂತೆ ಇನ್ನು ಹಲವು ಪಾವತಿ ಸೇವೆಗಳು ಗ್ರಾಹಕರ ಕೈ ಬೆರಳ ತುದಿಗೆ ಲಭ್ಯವಾಗಿವೆ.

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!

ಬಳಕೆದಾರರು ಡಿಜಿಟಲ್‌ ಪಾವತಿ ಆಪ್‌ಗಳ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ಪೇಮೆಂಟ್ ಪಾವತಿಸಬಹುದಾಗಿದೆ. ಹಾಗೆಯೇ ಇಂತಹ ಆನ್‌ಲೈನ್‌ ಪಾವತಿ ಆಪ್‌ಗಳು ಪ್ರತಿ ರೀಚಾರ್ಜ್‌ ಮಾಡಿದಾಗ ಏನಾದರೂ ರಿಯಾಯಿತಿ ನೀಡುತ್ತವೆ. ಇಲ್ಲವೇ ಕ್ಯಾಶ್‌ಬ್ಯಾಕ್‌, ಕೂಪನ್‌ ಮತ್ತು ಡೀಲ್‌ಗಳನ್ನು ನೀಡುತ್ತವೆ. ಇವು ಗ್ರಾಹಕರಿಗೆ ಉಪಯುಕ್ತ ಎನಿಸುತ್ತವೆ. ಹಾಗಾದರೇ ಅಂತಹ ಕೆಲವು ಅಪ್ಲಿಕೇಶನ್‌ಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ…

* ಟಾಟಾ NEU ಅಪ್ಲಿಕೇಶನ್

ಟಾಟಾ ನ್ಯೂ ಇತ್ತೀಚಿನ ಹೊಸ ಪಾವತಿ ಮತ್ತು ಶಾಪಿಂಗ್ ಅಪ್ಲಿಕೇಶನ್ ಆಗಿದೆ. ಈ ಆಪ್‌ ಗ್ರಾಹಕರಿಗೆ ಬಟ್ಟೆ, ಎಲೆಕ್ಟ್ರಾನಿಕ್ಸ್, ಆರ್ಡರ್ ದಿನಸಿ, ಔಷಧ ಸೇರಿದಂತೆ ಹಲವು ಉತ್ಪನ್ನಗಳನ್ನು ಶಾಪಿಂಗ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಈ ಆಪ್‌ ಅಗತ್ಯ ಬಿಲ್ ಪಾವತಿ ಸೇವೆಯ ಆಯ್ಕೆ ಪಡೆದಿದೆ. ಗ್ರಾಹಕರು ಈ ಆಪ್‌ ಮೂಲಕ ಸುಲಭವಾಗಿ ಹಣ ವರ್ಗಾವಣೆ/ ಪಾವತಿ ಮಾಡಬಹುದು. ಈ ಆಪ್‌ನಲ್ಲಿ ಪ್ರತಿ ಖರೀದಿಯಲ್ಲಿ ಕನಿಷ್ಠ 5% NeuCoins ಅನ್ನು ಸ್ವೀಕರಿಸಬಹುದಾಗಿದೆ.

* ಫೋನ್‌ಪೇ (PhonePe) ಅಪ್ಲಿಕೇಶನ್

ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿ ಸೇವೆಗೆ ಫೋನ್‌ಪೇ ಆಪ್‌ ಅನುಕೂಲಕರ ಆಪ್‌ ಆಗಿದೆ. ಇದು ಯುಪಿಐ ಸಕ್ರಿಯಗೊಳಿಸಿದ ಆಪ್‌ ಆಗಿದ್ದು, ವಹಿವಾಟುಗಳಿಗಾಗಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಲಿಂಕ್ ಮಾಡಬಹುದು. ಹಾಗೆಯೇ ಈ ಆಪ್‌ ಬಿಲ್‌ ಪಾವತಿ, ಮೊಬೈಲ್ ರೀಚಾರ್ಜ್, ಹಣ ವರ್ಗಾವಣೆ ಸೇರಿದಂತೆ ಹಲವು ಅಗತ್ಯ ದೈನಂದಿನ ಪಾವತಿ ಸೇವೆಗಳನ್ನು ಸಪೋರ್ಟ್ ಮಾಡುತ್ತದೆ. ಇದರ ಬಳಕೆ ಸಹ ತುಂಬಾ ಸುಲಭವಾಗಿದೆ. ಇದರಲ್ಲಿ ವಾಲೆಟ್‌ ಆಯ್ಕೆ ಇದೆ ಜೊತೆಗೆ ಕ್ಯಾಶ್ ಬ್ಯಾಕ್, ರಿಯಾಯಿತಿ ಕೊಡುಗೆಗಳು ಸಹ ದೊರೆಯುತ್ತವೆ.

ಅಮೆಜಾನ್ ಪೇ ಅಪ್ಲಿಕೇಶನ್

ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್‌ ಸಂಸ್ಥೆಯ ಅಮೆಜಾನ್‌ ಪೇ ಡಿಜಿಟಲ್ ಪಾವತಿ ಸೇವೆ ಆಗಿದೆ. ಅಮೆಜಾನ್ ಪೇ ಮೂಲಕ ಗ್ರಾಹಕರು ಡಿಜಿಟಲ್ ಪಾವತಿ, ಬಿಲ್ ಪಾವತಿ, ಹಣ ವರ್ಗಾವಣೆ, ರೀಚಾರ್ಜ್‌ ಮಾಡಬಹುದಾಗಿದೆ. ಈ ಆಪ್‌ನಲ್ಲಿಯೂ ಗ್ರಾಹಕರಿಗೆ ಕೆಲವು ಕೊಡುಗೆಗಳು ಲಭ್ಯ ಆಗಲಿವೆ.

* ಪೇಟಿಎಮ್‌ ಅಪ್ಲಿಕೇಶನ್

ಪೇಟಿಎಮ್‌ (Paytm) ಮೂಲಕವು ಸಹ ಗ್ರಾಹಕರು ಆನ್‌ಲೈನ್ ರೀಚಾರ್ಜ್ ಮತ್ತು ಬಿಲ್ ಪಾವತಿಗಳಿಗಾಗಿ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ಅಪ್ಲಿಕೇಶನ್ ಆಗಿದೆ. ಡೈನಾಮಿಕ್ ಇ-ವ್ಯಾಲೆಟ್ ಮತ್ತು UPI ಅಪ್ಲಿಕೇಶನ್ ಪಾವತಿಗಳು, ಹಣ ವರ್ಗಾವಣೆ, ಶಾಪಿಂಗ್, ರೀಚಾರ್ಜ್ ಸೌಲಭ್ಯಗಳು, ಬಿಲ್ ಪಾವತಿಗಳು, ಬಸ್ ಮತ್ತು ವಿಮಾನ ಟಿಕೆಟ್‌ಗಳನ್ನು ಒಳಗೊಂಡಂತೆ ಇತರೆ ಹಲವು ಸೇವೆಗಳನ್ನು ಒಳಗೊಂಡಿದೆ. ಈ ಆಪ್‌ನಲ್ಲಿಯೂ ರಿಯಾಯಿತಿ ಸಿಗುತ್ತದೆ.

* ಗೂಗಲ್‌ ಪೇ (Google Pay) ಅಪ್ಲಿಕೇಶನ್‌

ಮೊಬೈಲ್ ರೀಚಾರ್ಜ್ ಮತ್ತು ಆನ್‌ಲೈನ್ ಪಾವತಿಗಾಗಿ ಒಂದು ವೇಳೆ ನೀವೇನಾದರೂ ಅಧಿಕ ರಿಯಾಯಿತಿಗಳು ಮತ್ತು ಆಫರ್‌ ನೀಡುವ ಅಪ್ಲಿಕೇಶನ್‌ ಸರ್ಚ್‌ ಮಾಡುತ್ತಿದ್ದರೆ, ಅದಕ್ಕೆ ಗೂಗಲ್‌ ಪೇ ಉತ್ತಮ ಆಯ್ಕೆ ಎಂದು ಹೇಳಬಹುದು. ಇದು ಆಲ್ ಇನ್ ಒನ್ ಆಪ್‌ ಆಗಿದ್ದು, ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್‌ ಮೊಬೈಲ್ ಮತ್ತು ಡಿಟಿಹೆಚ್‌ ರೀಚಾರ್ಜ್‌, ವಿದ್ಯುತ್ ಬಿಲ್ ಸೇರಿದಂತೆ ಹಲವು ಪಾವತಿ ಸೇವೆಗಳನ್ನು ಒಳಗೊಂಡಿದೆ.

ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

ಗೂಗಲ್‌ ಪೇ ಆಪ್‌ ಗೂಗಲ್‌ ಸಂಸ್ಥೆಯ ಸಪೋರ್ಟ್‌ನೊಂದಿಗೆ ಕೆಲಸನಿರ್ವಹಿಸುತಲಿದ್ದು, ಇದು ಒಂದು ಅಥವಾ ಇನ್ನೊಂದು ವಹಿವಾಟಿನ ಮೇಲೆ ಲಾಭದಾಯಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಒದಗಿಸುತ್ತದೆ. ಕ್ಯಾಬ್‌ಗಳು/ ಟ್ಯಾಕ್ಸಿಗಳು, ಆಟೋಗಳು, ಫ್ಲೈಟ್‌ಗಳು, ಹೋಟೆಲ್‌ಗಳು ಮತ್ತು ಬಸ್‌ ಟಿಕೆಟ್ ಸೇವೆಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಗೂಗಲ್‌ ಪೇ ಆಪ್‌ ಮೂಲಕ ಫಾಸ್ಟ್ ಟ್ಯಾಗ್ ರೀಚಾರ್ಜ್ ಸಹ ಮಾಡಬಹುದು.

Leave a Comment