LIC ಜೀವನ್ ಕಿರಣ್ ಹೆಸರಿನಲ್ಲಿ ಹೊಸ ಟರ್ಮ್ ಪ್ಲಾನ್ ತಂದಿದೆ. ಮೆಚ್ಯೂರಿಟಿ ಬಳಿಕ ಪ್ರೀಮಿಯಂ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಇದರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.. ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿ LIC ಹೊಸ ಟರ್ಮ್ ಪಾಲಿಸಿ ಪ್ರಾರಂಭಿಸಿದೆ. ಇದನ್ನು ಜೀವನ್ ಕಿರಣ್ (ಯೋಜನೆ 870) ಹೆಸರಿನಲ್ಲಿ ತರಲಾಗಿದೆ. ಇದು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ವೈಯಕ್ತಿಕ ಉಳಿತಾಯ ಮತ್ತು ಜೀವ ವಿಮಾ ಯೋಜನೆ (LIC ಯೋಜನೆ) ಆಗಿದೆ.
ಮೆಚ್ಯೂರಿಟಿ ಪೂರ್ಣಗೊಂಡ ನಂತರ, ಪ್ರೀಮಿಯಂ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಪಾಲಿಸಿ ಅವಧಿಯಲ್ಲಿ ಏನಾದರೂ ಸಂಭವಿಸಿದರೆ, ಕುಟುಂಬ ಸದಸ್ಯರಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತಾರೆ. ಸಾಮಾನ್ಯವಾಗಿ, ಟರ್ಮ್ ಪಾಲಿಸಿಗಳು ಪ್ರೀಮಿಯಂ ಮೊತ್ತವನ್ನು ಮರುಪಾವತಿಸುವುದಿಲ್ಲ. ಈ ಯೋಜನೆಯಲ್ಲಿ, ಪಾಲಿಸಿಯ ಅವಧಿಯಲ್ಲಿ ವಿಮೆ ಖಾತರಿಪಡಿಸಲಾಗುತ್ತದೆ ಮತ್ತು ಪ್ರೀಮಿಯಂ ಮೊತ್ತವನ್ನು ಮುಕ್ತಾಯದ ಸಮಯದಲ್ಲಿ ಹಿಂತಿರುಗಿಸಲಾಗುತ್ತದೆ.
ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…
ಭಾರತೀಯ ಜೀವ ವಿಮಾ ನಿಗಮ (LIC) ಆಗಾಗ್ಗೆ ಹೊಸ ಸ್ಕೀಮ್ಗಳನ್ನ ಪ್ರಕಟಿಸುತ್ತಿರುತ್ತದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ವಿಮಾ ಪಾಲಿಸಿಗಳನ್ನು ಎಲ್ಐಸಿ ಹೊಂದಿದೆ. ಇದೀಗ ಎಲ್ಐಸಿ ಜೀವನ್ ಕಿರಣ್ (Jeevan Kiran) ಎಂಬ ಹೊಸ ಲೈಫ್ ಇನ್ಷೂರೆನ್ಸ್ ಪಾಲಿಸಿ ಬಿಡುಗಡೆ ಮಾಡಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದ್ದು, ಜೀವ ವಿಮೆಗೆ (Life Risk Coverage) ಹೇಳಿ ಮಾಡಿಸಿದ್ದಾಗಿದೆ. 18 ವರ್ಷದಿಂದ 65 ವರ್ಷದ ವಯೋಮಾನದ ಜನರು ಎಲ್ಐಸಿ ಜೀವನ್ ಕಿರಣ್ ಪಾಲಿಸಿ ಮಾಡಿಸಬಹುದು.
ಎಲ್ಐಸಿ ಜೀವನ್ ಕಿರಣ್ ಪಾಲಿಸಿಯ ಅವಧಿ 10 ವರ್ಷದಿಂದ ಆರಂಭವಾಗಿ 40 ವರ್ಷಗಳವರೆಗೂ ಇದೆ. ಕನಿಷ್ಠ ಭರವಸೆ ಮೊತ್ತ (ಬೇಸಿಕ್ ಸಮ್ ಅಶೂರ್ಡ್) 15 ಲಕ್ಷ ರೂ ಇದೆ. ಅದಕ್ಕೂ ಮೇಲ್ಪಟ್ಟ ಮೊತ್ತವನ್ನೂ ಆಯ್ಕೆ ಮಾಡಿಕೊಳ್ಳಬಹುದು. ವಯಸ್ಸು, ಪಾಲಿಸಿ ಅವಧಿಯ ಮೇಲೆ ಪ್ರೀಮಿಯಮ್ ಹಣ ನಿಗದಿಯಾಗುತ್ತದೆ. ಕನಿಷ್ಠ ಪ್ರೀಮಿಯಮ್ ತಿಂಗಳಿಗೆ 3,000 ರೂ ಇದೆ. ಇದರಲ್ಲಿ ಸಿಂಗಲ್ ಪ್ರೀಮಿಯಮ್ ಪಾಲಿಸಿಯೂ ಇದೆ. ಇದರಲ್ಲಿ ಕನಿಷ್ಠ ಪ್ರೀಮಿಯಮ್ 30,000 ರೂಪಾಯಿಯದ್ದಾಗಿದೆ.
ಅರ್ಹತೆಗಳೇನು?
ಜೀವನ್ ಕಿರಣ್ ಯೋಜನೆಯನ್ನು ಖರೀದಿಸಲು ಕನಿಷ್ಠ ವಯಸ್ಸು 18 ವರ್ಷಗಳು. ಗರಿಷ್ಠ ವಯೋಮಿತಿ 65 ವರ್ಷಕ್ಕೆ ನಿಗದಿಪಡಿಸಲಾಗಿದೆ. ಮೆಚ್ಯೂರಿಟಿಗೆ ಕನಿಷ್ಠ ವಯಸ್ಸು 28 ವರ್ಷಗಳು ಮತ್ತು ಗರಿಷ್ಠ ವಯಸ್ಸು 80 ವರ್ಷಗಳು. ಈ ಯೋಜನೆಯು 10 ವರ್ಷಗಳಿಂದ 40 ವರ್ಷಗಳವರೆಗೆ ಪಾಲಿಸಿ ಅವಧಿಯೊಂದಿಗೆ ಲಭ್ಯವಿದೆ. ಈ ಪಾಲಿಸಿಯನ್ನು ಕನಿಷ್ಠ 15 ಲಕ್ಷ ವಿಮಾ ಮೊತ್ತದೊಂದಿಗೆ ಖರೀದಿಸಬಹುದು. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಕನಿಷ್ಠ ಪ್ರೀಮಿಯಂ ಮೊತ್ತ ರೂ.3 ಸಾವಿರವಾಗಿದ್ದರೆ, ಸಿಂಗಲ್ ಪ್ರೀಮಿಯಂ ರೂ. 30 ಸಾವಿರಕ್ಕೆ ನಿಗದಿಯಾಗಿದೆ. ಪ್ರೀಮಿಯಂ ಮೊತ್ತವನ್ನು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಪಾವತಿಸಬಹುದಾಗಿದೆ.
ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.
ಇನ್ನು ರೆಗ್ಯುಲರ್ ಪ್ರೀಮಿಯಮ್ನ ಪಾಲಿಸಿಯಲ್ಲಿ 20 ಲಕ್ಷ ಬೇಸಿಕ್ ಸಮ್ ಅಶೂರ್ಡ್ ಮೊತ್ತವನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ ವಯಸ್ಸು 40 ವರ್ಷವಾಗಿದ್ದು, 10 ವರ್ಷದ ಪಾಲಿಸಿ ಪಡೆದರೆ ನೀವು ವರ್ಷಕ್ಕೆ 22,500 ರೂ ಕಟ್ಟಬೇಕಾಗುತ್ತದೆ.
ಎಲ್ಐಸಿ ಜೀವನ್ ಕಿರಣ್ ಪಾಲಿಸಿ ಮಧ್ಯದಲ್ಲಿ ಮೃ.ತ ಪಟ್ಟರೆ ಹೇಗೆ?
ಜೀವನ್ ಕಿರಣ್ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮೃ.ತ ಪಟ್ಟಾಗ 3 ಅಂಶಗಳನ್ನು ಪರಿಗಣಿಸಲಾಗುತ್ತದೆ.
ಬೇಸಿಕ್ ಸಮ್ ಅಶೂರ್ಡ್
ಆವರೆಗೂ ಕಟ್ಟಲಾದ ಒಟ್ಟು ಪ್ರೀಮಿಯಮ್ನ ಶೇ. 105ರಷ್ಟು ಮೊತ್ತ
ವರ್ಷದ ಪ್ರೀಮಿಯಮ್ ಮೊತ್ತದ ಏಳು ಪಟ್ಟು ಮೊತ್ತ
ಈ ಮೂರರಲ್ಲಿ ಯಾವುದು ಹೆಚ್ಚಿರುತ್ತದೋ ಅದನ್ನು ವಾರಸುದಾರರಿಗೆ ಕೊಡಲಾಗುತ್ತದೆ. ಒಂದು ವೇಳೆ ಸಿಂಗಲ್ ಪ್ರೀಮಿಯಮ್ ಪಾಲಿಸಿಯಾದರೆ ಪ್ರೀಮಿಯಮ್ ಮೊತ್ತದ ಶೇ. 125ರಷ್ಟು ಹಣವನ್ನು ನೀಡಲಾಗುತ್ತದೆ. ಅಥವಾ ಬೇಸಿಕ್ ಸಮ್ ಅಶೂರ್ಡ್ ಮೊತ್ತ ಕೊಡಲಾಗುತ್ತದೆ.
ಧೂಮಪಾನಿಗಳಿಗೆ ಹೆಚ್ಚು ಪ್ರೀಮಿಯಮ್
ಧೂಮಪಾನಿಗಳಲ್ಲದ ಸಾಮಾನ್ಯ ಗ್ರಾಹಕರಿಗೆ ಪ್ರೀಮಿಯಮ್ ಕಡಿಮೆ ಇರುತ್ತದೆ. ಧೂಮಪಾನಿಗಳಿಗೆ ಹೆಚ್ಚಿನ ಪ್ರೀಮಿಯಮ್ ಇರುತ್ತದೆ. ಹಾಗೆಯೇ, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳದವರಿಗೂ ಧೂಮಪಾನಿಗಳಷ್ಟೇ ಹೆಚ್ಚಿನ ಪ್ರೀಮಿಯಮ್ ನಿಗದಿ ಮಾಡಲಾಗುತ್ತದೆ.
ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!
ಒಂದು ವೇಳೆ, ಪಾಲಿಸಿದಾರ ಪಾಲಿಸಿ ಮೆಚ್ಯೂರ್ ಆಗುವುದರೊಳಗೆ ಸಾ.ಯದಿದ್ದರೆ ಆಗ ಮೆಚ್ಯೂರಿಟಿ ಬಳಿಕ ಒಟ್ಟು ಪ್ರೀಮಿಯಮ್ ಮೊತ್ತವನ್ನು ಮರಳಿಸಲಾಗುತ್ತದೆ. ಈ ಪಾಲಿಸಿಯಿಂದ ಬಡ್ಡಿ ಬರುವುದಿಲ್ಲವಾದರೂ ಡೆ.ತ್ ಕವರೇಜ್ ಇರುವುದರಿಂದ ಉಪಯುಕ್ತ ಹೂಡಿಕೆ ಎನಿಸಬಹುದು.